ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಬಾಡಿಗೆ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಯುಲು ಕಂಪನಿಯು ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಕ್ಕಾಗಿ ಹೊಸ ಡೆಎಕ್ಸ್ ಸ್ಕೂಟರ್ ಬಿಡುಗಡೆ ಮಾಡಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ಕಂಪನಿಯಾಗಿರುವ ಯುಲು ಸದ್ಯ ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿಯಲ್ಲಿ ತನ್ನ ವಾಣಿಜ್ಯ ಕಾರ್ಯಾಚರಣೆ ಹೊಂದಿದ್ದು, ಕಂಪನಿಯು ಇದೀಗ ಬಿಟುಬಿ ಉದ್ದೇಶಗಳಿಗಾಗಿ ಉತ್ತಮ ಹ್ಯಾಂಡ್ಲಿಂಗ್ ಹೊಂದಿರುವ ಡೆಎಕ್ಸ್ ಇವಿ ಸ್ಕೂಟರ್ ಪರಿಚಯಿಸಿದೆ. ಹೊಸ ಸ್ಕೂಟರ್ ವಾಣಿಜ್ಯ ಬಳಕೆಯ ಮಾದರಿಯಾಗಿರುವದಿಂದ ವ್ಯಯಕ್ತಿಕ ಬಳಕೆಗೆ ಮಾರಾಟಕ್ಕ ಲಭ್ಯವಿರುವುದಿಲ್ಲ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಫುಡ್ ಡೆಲಿವರಿ, ಇ-ಕಾಮರ್ಸ್, ಮೆಡಿಷನ್ ಪೂರೈಕೆ ಸೇರಿದಂತೆ ವಿವಿಧ ಮಾದರಿಯ ಸಣ್ಣ ಪ್ರಮಾಣದ ಸರಕುಸಾಗಿಲು ಅನುಕೂಲವಾಗಲಿದ್ದು, ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ ಸುಮಾರು 10 ಸಾವಿರ ಯುಲು ಡೆಎಕ್ಸ್ ಸ್ಕೂಟರ್‌ಗಳನ್ನು ವಿವಿಧ ಕಂಪನಿಗಳ ಸರಕು ಸಾಗಾಣಿಕೆಗೆ ಮತ್ತು ಹೋಟೆಲ್ ಉದ್ಯಮದಲ್ಲಿನ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಇ-ಕಾಮರ್ಸ್ ಕಂಪನಿಗಳು ಇ-ಸ್ಕೂಟರ್‌ಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಪಾರ್ಕಿಂಗ್ ಸ್ಥಳಗಳಲ್ಲಿಯೇ ಚಾರ್ಜಿಂಗ್ ನಿಲ್ದಾಣಗಳನ್ನು ವಾಹನ ಉತ್ಪಾದನಾ ಕಂಪನಿಗಳೇ ನಿರ್ಮಾಣ ಮಡಲಿದ್ದು, ಯುಲು ಕಂಪನಿಯ ಡೆಎಕ್ಸ್ ಸ್ಕೂಟರ್ ಕೂಡಾ ಹಲವಾರು ಹೊಸ ಫೀಚರ್ಸ್‌ಗಳನ್ನು ಹೊಂದಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಯುಲು ಹೊಸ ಡೆಎಕ್ಸ್ ಇವಿ ಸ್ಕೂಟರ್ ಮಾದರಿಯು ಲೋ ಸ್ಪೀಡ್ ಮಾದರಿಯಾಗಿದ್ದು, ಪ್ರತಿ ಗಂಟೆಗೆ 25 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ 60 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಡೆಎಕ್ಸ್ ಇವಿ ಸ್ಕೂಟರ್‌ನಲ್ಲಿ ಯುಲು ಕಂಪನಿಯು ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆ ಮಾಡಿದ್ದು, ಉತ್ತಮವಾದ ಆಸನದೊಂದಿಗೆ 12 ಕೆ.ಜಿ ಸರಕು ಸಾಗಿಸಲು ಅನುಕೂಲಕರವಾದ ಲಗೇಜ್ ರಾಕ್ ಹೊಂದಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಚಾಲನೆಗೆ ಆರ್‌ಸಿ, ಡಿಎಲ್ ಬೇಕಿಲ್ಲ..

ಯಲು ಸ್ಕೂಟರ್ ಲೋ ಸ್ಪೀಡ್ ಇವಿ ಸ್ಕೂಟರ್ ಮಾದರಿಯಾಗಿರುವುದರಿಂದ ನೋಂದಣಿ ಮಾಡಬೇಕಿಲ್ಲ. ಜೊತೆಗೆ ಚಾಲನಾ ಪರವಾನಿಗೆ ಇಲ್ಲದೆಯೇ ಈ ಸ್ಕೂಟರ್ ಚಾಲನೆ ಮಾಡಬಹುದಾಗಿದ್ದು, ಆನ್‌ಲೈನ್ ಪುಡ್ ಡೆಲಿವರಿ ಮತ್ತು ಇ-ಕಾಮರ್ಸ್ ಕಂಪನಿಗಳಿಗೆ ಇದು ಸೂಕ್ತವಾಗಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಿಂದಾಗಿ ಸರಕು ಪೊರೈಕೆಯ ವೆಚ್ಚವು ಸಾಮಾನ್ಯ ಸ್ಕೂಟರ್‌ಗಳಿಂತಲೂ ಶೇ.40 ರಷ್ಟು ಖರ್ಚು ಉಳಿತಾಯವಾಗಲಿದ್ದು, ಹೆಚ್ಚುವರಿ ಮಾಲಿನ್ಯಕ್ಕೂ ಕಡಿವಾಣ ಹಾಕಲು ಇವಿ ಸ್ಕೂಟರ್ ಸೂಕ್ತವಾಗಿವೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಇನ್ನು ಯುಲು ಕಂಪನಿಯು ಸದ್ಯ ಮಿರಾಕಲ್ ಇವಿ ಸ್ಕೂಟರ್ ಮೂಲಕ ಪ್ರತಿ ಗಂಟೆಯ ಆಧಾರದ ಮೇಲೆ ಬಾಡಿಗೆ ನೀಡುತ್ತಿದ್ದು, ಡೆಎಕ್ಸ್ ನಂತರ ಇನ್ನು ಮೂರು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರ ಬೇಡಿಕೆಯೆಂತೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಹೊಸ ಯೋಜನೆಗಾಗಿ ಯುಲು ಕಂಪನಿಯು ಬಜಾಜ್ ಆಟೋ ಕಂಪನಿಯೊಂದಿಗೆ ಹೊಸ ಒಡಂಬಡಿಕೆ ಮಾಡಿಕೊಂಡಿದ್ದು, ಬಜಾಜ್ ಕಂಪನಿಯು ಯುಲು ಕಂಪನಿಗಾಗಿ ಪ್ರತ್ಯೇಕ ಇವಿ ಸ್ಕೂಟರ್‌ಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡಲಿದೆ.

ವಾಣಿಜ್ಯ ಬಳಕೆಗಾಗಿ ಹೊಸ ಲೋ ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಯುಲು

ಬಜಾಜ್ ಆಟೋ ಕಂಪನಿಯು ಉತ್ಪಾದನೆ ಮಾಡುವ ಇವಿ ಸ್ಕೂಟರ್‌ಗಳು ಯುಲು ಕಂಪನಿಗೆ ಮಾತ್ರ ಸೀಮಿತವಾಗಿರಲಿದ್ದು, ಹೊಸ ಸ್ಕೂಟರ್‌ಗಳು ಯುಲು ಕಂಪನಿಯ ವಾಣಿಜ್ಯ ಕಾರ್ಯಾಚರಣೆಯ ಬೇಡಿಕೆಯೆಂತೆ ಹಲವಾರು ಹೊಸ ವೈಶಿಷ್ಯತೆಗಳನ್ನು ಪಡೆದುಕೊಳ್ಳಲಿವೆ.

Most Read Articles

Kannada
English summary
Yulu Dex Launched For Last-Mile Delivery. Read in Kannada.
Story first published: Saturday, July 31, 2021, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X