ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಉತ್ಪಾದನೆ ಮತ್ತು ಮರಾಟದಲ್ಲಿ ಭಾರೀ ಬೆಳವಣಿಗೆ ಕಂಡುಬರುತ್ತಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಸಬ್ಸಡಿ ಪ್ರೋತ್ಸಾಹ ಯೋಜನೆಗಳಿಂದ ಹಲವಾರು ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮ ಪ್ರವೇಶಿಸುತ್ತಿವೆ. ದೆಹಲಿ ಮೂಲದ ಜೈಪ್ ಸ್ಮಾರ್ಟ್ ಇವಿ ಕಂಪನಿಯು ಹೊಸ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದ್ದು, ಹೊಸ ಸ್ಕೂಟರ್ ಮಾದರಿಯನ್ನು ವಿಶೇಷವಾಗಿ ಬಿಟುಬಿ ಉದ್ದೇಶಗಳಿಗಾಗಿ ಅಭಿವೃದ್ದಿಗೊಳಿಸಲಾಗಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಬ್ಯುಸಿನೆಸ್ ಟು ಬ್ಯುಸಿನೆಸ್ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಪೆಟ್ರೋಲ್ ಸ್ಕೂಟರ್‌ಗಳ ನಿರ್ವಹಣಾ ವೆಚ್ಚವು ಕಳೆದ ಕೆಲ ತಿಂಗಳಿನಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ಜೈಪ್ ಕಂಪನಿಯು ಹೊಸ ವಾಣಿಜ್ಯ ಬಳಕೆಯ ಇವಿ ಸ್ಕೂಟರ್ ಒಂದನ್ನು ಸಿದ್ದಪಡಿಸಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗೂಡ್ಸ್ ಡೆಲಿವರಿಗಾಗಿ ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನೇ ಬಳಕೆ ಮಾಡುತ್ತಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಆರಂಭದಲ್ಲಿ ವಿವಿಧ ಕಂಪನಿಗಳ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದ ಜೈಪ್ ಕಂಪನಿಯು ಇದೀಗ ತನ್ನದೆ ಆದ ವಾಹನ ಉತ್ಪಾದನಾ ವಿಭಾಗವನ್ನು ತೆರೆದಿದ್ದು, ಡೆಲಿವರಿ ಉದ್ದೇಶಗಳು ಮತ್ತು ಬೇಡಿಕೆ ಅನುಸಾರವಾಗಿ ಹೊಸ ಇವಿ ಸ್ಕೂಟರ್ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೈಪ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸಂಪೂರ್ಣವಾಗಿ ವಾಣಿಜ್ಯ ಬಳಕೆಯ ಸ್ಕೂಟರ್ ಮಾದರಿಯಾಗಿದ್ದು, ಕೆಟರಿಂಗ್, ಸಿಲಿಂಡರ್ ಸಾಗಾಟ, ಇ-ಕಾರ್ಮಸ್ ಗೂಡ್ಸ್ ಸೇರಿದಂತೆ ವಿವಿಧ ಮಾದರಿಯ ಸಣ್ಣ ಪ್ರಮಾಣದ ಸರಕು ಸಾಗಾಣಿಕೆ ಅನುಕೂಲಕವಾಗಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

40 ಎಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಗರಿಷ್ಠ 250 ಕೆ.ಜಿ ಲೋಡಿಂಗ್ ಸಾಮರ್ಥ್ಯ ಹೊಂದಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಜೊತೆಗೆ ಹೊಸ ಸ್ಕೂಟರಿನಲ್ಲಿ ಕಂಪನಿಯು ಹೆಚ್ಚುವರಿ ಬ್ಯಾಟರಿ ಪ್ಯಾಕ್ ನೀಡಿದ್ದು, ಒಂದು ಬ್ಯಾಟರಿ ಕಾರ್ಯನಿರ್ವಹಣೆಯಲ್ಲಿರುವಾಗ ಮತ್ತೊಂದು ಬ್ಯಾಟರಿಯನ್ನು ಪ್ಯಾಕ್ ಬ್ಯಾಕ್ಅಪ್ ಆಗಿ ಬಳಕೆ ಮಾಡಬಹುದಾಗಿದೆ.

ಬಿಟುಬಿ ಉದ್ದೇಶಕ್ಕಾಗಿ ಹೆವಿ ಡ್ಯೂಟಿ ಸಾಮರ್ಥ್ಯದ ಜೈಪ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಮೆಟಲ್ ಬಾಡಿ ಪ್ಯಾನೆಲ್ ಹೊಂದಿರುವ ಹೊಸ ಇವಿ ಸ್ಕೂಟರ್‌ನಲ್ಲಿ ಆರ್ಟಿಫಿಷಲ್ ಟೆಕ್ನಾಲಜಿ ಮತ್ತು ವೆಹಿಕಲ್ ಟ್ರ್ಯಾಕ್ ಸೌಲಭ್ಯಕ್ಕಾಗಿ ಡಿಜಿಟಲ್ ಪ್ಯಾನೆಲ್ ಜೋಡಿಸಲಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ತಕ್ಕಂತೆ ಲಗೇಜ್ ರಾಕ್ ಜೋಡಣೆ ಆಧಾರದ ಮೇಲೆ ಸ್ಕೂಟರ್ ಬೆಲೆಯು ಆರಂಭಿಕವಾಗಿ ರೂ.59 ಸಾವಿರ ನಿಗದಿಪಡಿಸಲಾಗಿದೆ.

Most Read Articles

Kannada
English summary
Zypp first B2B heavy duty IoT enabled electric scooter launched. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X