ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಹೀರೋ ಮೋಟೋಕಾರ್ಪ್ ಭಾರತದಲ್ಲಿ ತನ್ನ ಬಹುನಿರೀಕ್ಷಿತ Vida V1 Plus ಮತ್ತು V1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ಇವು ಮೊದಲಿಗೆ ಆಯ್ದ ಕೆಲವು ನಗರಗಳಲ್ಲಿ ಖರೀದಿಗೆ ಲಭ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ ದೇಶದ ಹಲವೆಡೆ ತನ್ನ ಡೀಲರ್‌ಶಿಪ್‌ಗಳನ್ನು ತೆರೆಯುವುದಾಗಿ ಕಂಪನಿ ಹೇಳಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

V1 Plus ಮತ್ತು Pro ಮಾದರಿಗಳು ಆರಂಭದಲ್ಲಿ ದೆಹಲಿ, ಜೈಪುರ ಮತ್ತು ಬೆಂಗಳೂರು ನಗರಗಳಲ್ಲಿ ಮಾರಾಟವಾಗುತ್ತವೆ. ಇವುಗಳ ಬೆಲೆಗಳನ್ನು ನೋಡುವುದಾದರೆ ಹೀರೋ ವಿಡಾ V1 Plus ಬೆಲೆ 1.45 ಲಕ್ಷ ರೂ.ಗಳಾಗಿದ್ದು, V1 Pro ಬೆಲೆ 1.59 ಲಕ್ಷ ರೂ. (ಎಲ್ಲಾ ಬೆಲೆಗಳು ಎಕ್ಸ್ ಶೋರೂಂ) ಇದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ನಿರೀಕ್ಷಿತ ವಿಡಾ ಖರೀದಿದಾರರು ಮೇಲೆ ತಿಳಿಸಲಾದ ನಗರಗಳಲ್ಲಿ ತಮ್ಮ V1 ಪ್ಲಸ್ ಅಥವಾ V1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅಕ್ಟೋಬರ್ 10 ರಂದು ಬುಕ್ ಮಾಡಿಕೊಳ್ಳಬಹುದು. ವಿತರಣೆಗಳು ಡಿಸೆಂಬರ್ ಎರಡನೇ ವಾರದಲ್ಲಿ ಪ್ರಾರಂಭವಾಗಲಿವೆ. ಇದೇ ಡಿಸೆಂಬರ್‌ನಲ್ಲಿ ದೇಶದ ಇತರ ಹೆಚ್ಚಿನ ನಗರಗಳಲ್ಲಿ ಬುಕಿಂಗ್ ಕೂಡ ಪ್ರಾರಂಭವಾಗಲಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಹೀರೋ ವಿಡಾ V1 Plus ನಲ್ಲಿನ ಬ್ಯಾಟರಿ ಪ್ಯಾಕ್ ಒಂದೇ ಚಾರ್ಜ್‌ನಲ್ಲಿ 143 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ. ಮತ್ತೊಂದೆಡೆ ವಿಡಾ V1 Pro ಒಂದೇ ಚಾರ್ಜ್‌ನಲ್ಲಿ 165 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

V1 ಪ್ಲಸ್ ಮತ್ತು V1 ಪ್ರೋ ಎರಡು ಮಾದರಿಗಳ ಚಾರ್ಜ್ ಕುರಿತು ಮಾತನಾಡುವುದಾದರೆ 1.2km/min ( ಒಂದು ನಿಮಿಷ ಚಾರ್ಜ್ ಮಾಡಿದರೆ 1.2km ಮೈಲೇಜ್) ಚಾರ್ಜಿಂಗ್ ವೇಗವನ್ನು ನೀಡುತ್ತದೆ. ಮಾಲೀಕರು ಬ್ಯಾಟರಿ ಪ್ಯಾಕ್‌ಗಳನ್ನು ತೆಗೆದು ಮತ್ತೆ ಹಾಕಬಹುದು, ತಮ್ಮ ಅನುಕೂಲಕ್ಕೆ ತಕ್ಕಂತೆ ಚಾರ್ಜ್ ಮಾಡಬಹುದು.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ವಿಡಾನಿಂದ V1 Plus ಮತ್ತು V1 Pro ಎರಡೂ ಬ್ಯಾಟರಿ ಮಟ್ಟಗಳು ಕಡಿಮೆಯಾದಾಗ ಚಾಲಕರು ಲಿಂಪ್ ಹೋಮ್ ಮೋಡ್ ಆಯ್ಕೆಯನ್ನು ಮಾಡಿಕೊಳ್ಳಬಹುದು. ಲಿಂಪ್ ಮೋಡ್‌ನಲ್ಲಿ ಗರಿಷ್ಠ ವೇಗವು ಕೇವಲ 10km/h ಗೆ ಸೀಮಿತವಾಗಿರುತ್ತದೆ. ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚಿನ 8 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ವಿಡಾ V1 Plus ಮತ್ತು V1 Pro ಎರಡೂ 80km/h ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ ಎಂದು Hero ಹೇಳಿಕೊಂಡಿದೆ. V1 Pro ಕೇವಲ 3.2 ಸೆಕೆಂಡುಗಳಲ್ಲಿ 0-40km/h ವೇಗದಲ್ಲಿ ಚಲಿಸಬಲ್ಲದು. ಹಾಗೆಯೇ V1 ಪ್ಲಸ್ ಒಂದು ಸೆಕೆಂಡಿನ ಹತ್ತನೇ ಎರಡು ಭಾಗದಷ್ಟು ನಿಧಾನವಾಗಿದ್ದು 40km/h ವೇಗವನ್ನು ಹೊಂದಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಇನ್ನು ಈ ಸ್ಕೂಟರ್‌ಗಳಲ್ಲಿ ಪ್ರಮುಖವಾಗಿ ಹೇಳುವ ವಿಷಯವೆಂದರೆ, ಇದು 3.4 ಸೆಕೆಂಡುಗಳಲ್ಲಿ ಸ್ಪ್ರಿಂಟ್ ಅನ್ನು ಮಾಡುತ್ತದೆ. ಥ್ರೊಟಲ್, ರೀಜೆನ್ ಮತ್ತು ಹೆಚ್ಚಿನವುಗಳಿಗಾಗಿ 100 ಕ್ಕೂ ಹೆಚ್ಚು ಸಂಯೋಜನೆಗಳನ್ನು ಅನುಮತಿಸುವ 'ಕಸ್ಟಮ್' ಮೋಡ್ ಸೇರಿದಂತೆ ಅನೇಕ ರೈಡಿಂಗ್ ಮೋಡ್‌ಗಳಿವೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಹೀರೋ ವಿಡಾ V1 Plus ಮತ್ತು Pro ಎರಡೂ ಮಾದರಿಗಳು ಒರಟು ರಸ್ತೆಗಳಲ್ಲಿ ಸಂಚರಿಸಲು ಒಂದೇ ರೀತಿಯ ಸಸ್ಪೆನ್ಷನ್ ಸೆಟಪ್ ಅನ್ನು ಹೊಂದಿವೆ. ಈ ಸೆಟಪ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅನ್ನು ಒಳಗೊಂಡಿದೆ. ಬ್ರೇಕಿಂಗ್ ವಿಷಯಕ್ಕೆ ಬಂದರೆ ಮುಂಭಾಗದಲ್ಲಿ ಡಿಸ್ಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಮೂಲಕ ನಿರ್ವಹಿಸಲಾಗುತ್ತದೆ, ಜೊತೆಗೆ ರೀಜೆನ್ ಸಿಸ್ಟಮ್ ಮೂಲಕ ಸಹಾಯ ಮಾಡುತ್ತದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ವಿನ್ಯಾಸ ಮತ್ತು ವೈಶಿಷ್ಟ್ಯಗಳು

ಹೀರೋ ವಿಡಾ V1 Plus ಮತ್ತು Pro ವಿನ್ಯಾಸವು ಫ್ಯೂಚರಿಸ್ಟಿಕ್ ಮತ್ತು ರೆಟ್ರೊ ಥೀಮ್‌ಗಳ ಮಿಶ್ರಣವಾಗಿದೆ. ಮುಂಭಾಗದ ತುದಿಯು ಸ್ಕೂಟರ್‌ನ ಫ್ಯೂಚರಿಸ್ಟಿಕ್ ಡಿಸೈನ್ ಅನ್ನು ತೋರುತ್ತದೆ. ಅದರ ಕಡಿಮೆ ಮೌಂಟೆಡ್ LED ಹೆಡ್‌ಲೈಟ್ ಮತ್ತು ಷಾರ್ಪ್ & ಸ್ಟ್ರೈಟ್ ಲೈನ್‌ಗಳೊಂದಿಗೆ ಬರುತ್ತದೆ. ಇನ್ನು 7-ಇಂಚಿನ ಟಚ್‌ಸ್ಕ್ರೀನ್ ಇನ್‌ಸ್ಟ್ರೂಮೆಂಟಲ್ ಪ್ಯಾನಲ್‌ಗೆ ರಕ್ಷಣೆಯಾಗಿ ಸಣ್ಣ ವಿಂಡ್‌ಸ್ಕ್ರೀನ್ ಬಂದಿದ್ದು, ಇದರ ಪಕ್ಕದಲ್ಲೇ ಹ್ಯಾಂಡಲ್‌ಬಾರ್‌ನ ಮೇಲೆ ಇಂಡಿಕೇಟರ್‌ಗಳನ್ನು ನೀಡಲಾಗಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ವಿಡಾ V1 ಸ್ಕೂಟರ್‌ನ ಹಿಂಭಾಗದ ವಿಭಾಗವು ಅದರ ಕರ್ವಿ ಪ್ರೊಫೈಲ್‌ನೊಂದಿಗೆ ರೆಟ್ರೊ ಡಿಸೈನ್‌ನೊಂದಿಗೆ ನೀಡಲಾಗಿದೆ. ಹಾಗಯೇ ವಿಭಜಿತ ಸೀಟ್ ವಿನ್ಯಾಸವನ್ನು ಸಹ ಕಾಣಬಹುದು. ಹೀರೋ ವಿಡಾ V1 ಲೈನ್‌ಅಪ್‌ನಲ್ಲಿನ ಇತರ ವೈಶಿಷ್ಟ್ಯಗಳು ಮತ್ತು SOS ವಾರ್ನಿಂಗ್, ಕೀಲೆಸ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಆನ್-ಸೈಟ್ ರಿಪೇರಿ, ಟು-ವೇ ಥ್ರೊಟಲ್ ಸೇರಿದಂತೆ ಹೆಚ್ಚಿನವುಗಳನ್ನು ಒಳಗೊಂಡಿದೆ.

ಸಿಂಗಲ್ ಚಾರ್ಜ್‌ನಲ್ಲಿ 165 ಕಿ.ಮೀ ಮೈಲೇಜ್ ನೀಡುವ ಹೀರೋ ವಿಡಾ ಇವಿ ಸ್ಕೂಟರ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

V1 ಪ್ಲಸ್ & V1 ಪ್ರೋಗಳು ಹೀರೋ ಮೋಟೋಕಾರ್ಪ್‌ನ Vida V1 ಶ್ರೇಣಿಯು ದೇಶದ ಅತಿದೊಡ್ಡ ದ್ವಿಚಕ್ರ ವಾಹನದ ದೈತ್ಯ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲು ಹೊರಟಿದೆ. Vida V1 ತಂಡವು ತನ್ನ ವಿನ್ಯಾಸ ಹಾಗೂ ಫೀಚರ್ಸ್‌ಗಳಿಂದ ವಿಶ್ವಾಸಾರ್ಹತೆಯನ್ನು ಪಡೆದುಕೊಂಡರೆ, ಹೀರೋ ವಿಡಾ ಪ್ರತಿಸ್ಪರ್ಧಿಗಳಾದ ಓಲಾ ಮತ್ತು ಎಥರ್‌ಗಿಂತ ಹೆಚ್ಚು ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ.

Most Read Articles

Kannada
English summary
165 km mileage on a single charge Hero Vida EV launched in the domestic market
Story first published: Friday, October 7, 2022, 16:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X