ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಆಸ್ಟ್ರಿಯಾದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆ‍ಟಿಎಂ ತನ್ನ ಡ್ಯೂಕ್ 790 ಬೈಕ್ ಅನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮರುಬಿಡುಗಡೆಗೊಳಿಸಿದೆ. ಮೂಲತಃ ಕೆಟಿಎಂ ಡ್ಯೂಕ್ 790 ಬೈಕ್ ಅನ್ನು 2017 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಅದರ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮಿತು.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಕೆಟಿಎಂ 790 ಡ್ಯೂಕ್ ಅನ್ನು 2021 ರಲ್ಲಿ 890 ಡ್ಯೂಕ್‌ನಿಂದ ಬದಲಾಯಿಸಲಾಯಿತು. ಕೆಟಿಎಂ 790 ಡ್ಯೂಕ್ 2022ರ ಮಾದರಿಯು ಮೊದಲಿನಂತೆಯೇ ಇರುತ್ತದೆ. ಹೊಸ ಗ್ರೇ-ಕಪ್ಪು ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಸ್ಟೈಲಿಂಗ್ ವಿಷಯದಲ್ಲಿ ಯಾವುದೇ ಪ್ರಮುಖ ನವೀಕರಣಗಳಿಲ್ಲ. ಇದು ಸಿಗ್ನೇಚರ್ ಆರೆಂಜ್ ಬಣ್ಣದ ಥೀಮ್‌ಗೆ ಹೆಚ್ಚುವರಿಯಾಗಿದೆ. ಈ ಹೊಸ ಕೆ‍ಟಿಎಂ ಡ್ಯೂಕ್ 790 ಬೈಕ್ ತನ್ನ ಸ್ಪೋರ್ಟಿ ಪ್ರೊಫೈಲ್ ಅನ್ನು ಸಂಯೋಜಿತ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಅಗ್ರೇಸಿವ್, ಎಲ್ಇಡಿ, ಸ್ಕಲ್ಪ್ಟೆಡ್ ಇಂಧನ ಟ್ಯಾಂಕ್, ಕಡಿಮೆ-ಸೆಟ್ ಹ್ಯಾಂಡಲ್ಬಾರ್, ಸ್ಟೆಪ್-ಅಪ್ ಸೀಟ್, ಸ್ಟೇನ್ಲೆಸ್ ಸ್ಟೀಲ್ ಫಿನಿಶ್ ಮತ್ತು ಕಾಂಪ್ಯಾಕ್ಟ್ ಟೈಲ್ ವಿಭಾಗದಲ್ಲಿ ಸೀಟ್ ಎಕ್ಸಾಸ್ಟ್ನಂತಹ ವೈಶಿಷ್ಟ್ಯಗಳೊಂದಿಗೆ ಉಳಿಸಿಕೊಂಡಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಇದು ಒಟ್ಟಾರೆ ಸವಾರಿಯ ಅನುಭವವನ್ನು ಹೆಚ್ಚಿಸುತ್ತದೆ. 2022 KTM ಡ್ಯೂಕ್ 790 ಪೂರ್ಣ ಬಣ್ಣದ TFT ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದ್ದು, ಅದು ಮಾಹಿತಿಯ ಶ್ರೇಣಿಯನ್ನು ಪ್ರದರ್ಶಿಸುತ್ತದೆ. ಡಿಸ್ ಪ್ಲೇ ಹೆಚ್ಚು, ಥ್ರೊಟಲ್ ಮತ್ತು ಇತರ ರೀತಿಯ ಕ್ರಿಯೆಗಳಲ್ಲಿ ಹೆಚ್ಚಳ/ಕಡಿಮೆಯೊಂದಿಗೆ ಬಣ್ಣವನ್ನು ಬದಲಾಯಿಸುತ್ತದೆ. ಡಿಸ್ ಪ್ಲೇ ಆಟೋಮ್ಯಾಟಿಕ್ ಆಗಿ ಸುತ್ತುವರಿದ ಬೆಳಕಿಗೆ ಸರಿಹೊಂದಿಸುತ್ತದೆ, ಎಲ್ಲಾ ಸಮಯದಲ್ಲೂ ಅತ್ಯುತ್ತಮ ಗೋಚರತೆಯನ್ನು ಕಾಣುತ್ತದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಹೊಸ ಕೆ‍‍ಟಿಎಂ 790 ಡ್ಯೂಕ್ ಬೈಕಿನಲ್ಲಿ 799 ಸಿಸಿ ಲಿಕ್ವಿಡ್ ಕೂಲ್ಡ್ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 104 ಬಿಎಚ್‍ಪಿ ಪವರ್ ಮತ್ತು 87 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ. 169 ಕೆಜಿ ಡ್ರೈ ತೂಕದೊಂದಿಗೆ, ಡ್ಯೂಕ್ 790 ತನ್ನ ವಿಭಾಗದಲ್ಲಿ ಹಗುರವಾದ ಬೈಕ್‍‍ಗಳಲ್ಲಿ ಒಂದಾಗಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಈ ಬೈಕಿನ ಮುಂಭಾಗದಲ್ಲಿ 43 ಎಂಎಂ ಅಪ್ ಸೈಡ್ ಡೌನ್ ನಾನ್ ಅಡ್ಜಸ್ಟಬಲ್ ಫೋರ್ಕ್‍‍ಗಳನ್ನು ಹಾಗೂ ಹಿಂಭಾಗದಲ್ಲಿ ಮೊನೊಶಾಕ್‍ ಸಸ್ಪೆಂಷನ್‍‍ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್ ಸಿಸ್ಟಂನಲ್ಲಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 240 ಎಂಎಂ ಡಿಸ್ಕ್ ಅನ್ನು ಅಳವಡಿಸಿದ್ದಾರೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಈ ಹೊಸ ಬೈಕಿನಲ್ಲಿ 790 ಡ್ಯೂಕ್ ಬೈಕಿ‍ನಲ್ಲಿ ಎಲೆಕ್ಟ್ರಾನಿಕ್ಸ್ ರೈಡರ್ ನಾಲ್ಕು ರೈಡಿಂಗ್‍ ಮೋಡ್‍‍ಗಳನ್ನು ಹೊಂದಿದೆ. ಅವುಗಳಲ್ಲಿ ರೈನ್, ಸ್ಟ್ರೀಟ್ಸ್, ಸ್ಪೋರ್ಟ್ಸ್, ಮತ್ತು ಟ್ರ್ಯಾಕ್ ಮೋಡ್‍‍ಗಳಾಗಿವೆ. ಈ ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಎಬಿಎಸ್(ಆಂಟಿ ಲಾಕ್ ಬ್ರೇಕ್ ಸಿಸ್ಟಂ) ಮತ್ತು ಲೀನ್ ಆ್ಯಂಗಲ್ ಸೆನೆಸ್ಟಿವ್ ಅನ್ನು ಹೊಂದಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಇದರೊಂದಿಗೆ ಮೋಟಾರ್ ಸ್ಲಿಪ್ ರೆಗ್ಯೋಲೇಶನ್, ಸ್ಟೇಬಿಲಿಟಿ ಕಂಟ್ರೋಲ್, ಸ್ಲಿಪ್ಲರ್ ಕ್ಲಚ್ ಮತ್ತು ಕ್ಲಚ್‍‍ಲೆಸ್ ಆಪ್‍‍ಶಿಫ್ಟ್ ಮತ್ತು ಡೌನ್‍ಶಿಫ್ಟ್ ಮತ್ತು ಕ್ವಿಕ್ ಶಿಪ್ಟರ್ ಅನ್ನು ಸಹ ಒಳಗೊಂಡಿದೆ. ಕೆ‍ಟಿಎಂ ಡ್ಯೂಕ್ 790 ಸಂಪೂರ್ಣ ಡಿಜೆಟಲ್ ಟಿಎಫ್ಟಿ ಇನ್ಸ್ ಟ್ರೂಮೆಂಟ್ ಡಿ‍‍ಸ್‍‍ಪ್ಲೇಯನ್ನು ಹೊಂದಿದ್ದು, ಸವಾರನಿಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ ಮತ್ತು ಸುತ್ತಲೂ ಎಲ್‍ಇಡಿ ಲೈ‍ಟಿಂಗ್ ಅನ್ನು ಒಳಗೊಂಡಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಕೆಟಿಎಂ ಭಾರತೀಯ ಮಾರುಕಟ್ಟೆಯಲ್ಲಿ 790 ಡ್ಯೂಕ್ ಅನ್ನು ಮರುಪರಿಚಯಿಸುತ್ತದೆಯೇ ಎಂಬುದು ಖಚಿತವಾಗಿಲ್ಲ. ಇದು ಮೊದಲು ಇಲ್ಲಿ ಲಭ್ಯವಿತ್ತು, ಆದರೆ 2020 ರಲ್ಲಿ ಕಟ್ಟುನಿಟ್ಟಾದ ಬಿಎಸ್‍6 ಮಾನದಂಡಗಳ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಕೆಟಿಎಂ 790 ಡ್ಯೂಕ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ಸುಜುಕಿ ಜಿಎಸ್ಎಕ್ಸ್-ಎಸ್ 750, ಡುಕಾಟಿ ಮಾನ್ಸ್ಟರ್ 797, ಟ್ರಯಂಫ್ ಸ್ಟ್ರೀಟ್ ಟ್ರಿಪಲ್, ಯಮಹಾ ಎಂಟಿ -09 ಮತ್ತು ಕವಾಸಕಿ 9 ಝಡ್900 ಬೈಕ್‍‍ಗಳಿಗೆ ಪೈಪೋಟಿ ನೀಡುತ್ತಿತ್ತು.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಕಂಪನಿಯು ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ ಆರ್‌ಸಿ 390 ಬೈಕ್ ಹಲವಾರು ಹೊಸ ನವೀಕರಣಗಳನು ಪಡೆದುಕೊಂಡಿವೆ. ಕೆಟಿಎಂ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ 2022ರ ಆರ್‌ಸಿ 390 ಬೈಕ್ ಬಿಡುಗಡೆಗೆ ಮುಂಚಿತವಾಗಿ ಪಟ್ಟಿ ಮಾಡಿದೆ. ಇಂಡಿಯಾ-ಸ್ಪೆಕ್ ಮಾಡೆಲ್ ಸ್ವೀಕರಿಸುವ ಎಲ್ಲಾ ವೈಶಿಷ್ಟ್ಯಗಳನ್ನು ಕಂಪನಿಯು ಪಟ್ಟಿ ಮಾಡಿದೆ. ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಈ ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಈ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹೊಸ ಕೆಟಿಎಂ ಆರ್‌ಸಿ 390 ಬೈಕ್ ಕಳೆದ ವರ್ಷ ಅಂತರರಾಷ್ತ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಭಾರತದಲ್ಲಿನ ಅಭಿಮಾನಿಗಳು ಈ ಬೈಕ್ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಮಾರುಕಟ್ಟೆಗೆ ಮರಳಿ ಬಂದ ಜನಪ್ರಿಯ ಕೆ‍ಟಿಎಂ ಡ್ಯೂಕ್ 790 ಬೈಕ್

ಇನ್ನು ಹೊಸ ವಿನ್ಯಾಸದ ನ್ಯೂ ಜನರೇಷನ್ ಆರ್‌ಸಿ ಬೈಕ್‌ಗಳು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು. ಇದರೊಂದಿಗೆ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಬೈಕ್ ಕೂಡ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಶೀಘ್ರದಲ್ಲೆ ಪ್ರವೇಶಿಸಲಿದೆ.

Most Read Articles

Kannada
Read more on ಕೆಟಿಎಂ ktm
English summary
2022 ktm 790 duke debuts in international market features details
Story first published: Wednesday, March 16, 2022, 15:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X