350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

350 ಸಿಸಿಗಿಂತ ಹೆಚ್ಚಿನ ಸಿಸಿ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ದೇಶದಲ್ಲಿ ಅನೇಕರು ಈ ಬೈಕುಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಉತ್ತಮ ಪರ್ಫಾಮೆನ್ಸ್ ಮತ್ತು ಲುಕ್ ನೋಡುವ ಬೈಕ್ ಪ್ರಿಯರಿಗೆ ಈ ವಿಭಾಗದಲ್ಲಿ ಸಾಕಷ್ಟು ಮಾದರಿಗಳಿವೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಭಾರತದಲ್ಲಿ 350 ಸಿಸಿ ಬೈಕ್ ಎಂದಾಕ್ಷಣ ಎಲ್ಲರ ಮೆದುಳಿಗೆ ಹೊಳೆಯುವುದು ರಾಯಲ್‌ ಎನ್ಫೀಲ್ಡ್, ಈ ಕಂಪನಿಯು ದೇಶದಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದುವ ಮೂಲಕ ಗುರ್ತಿಸಿಕೊಂಡಿದೆ. ಈ ವಿಭಾಗದಲ್ಲಿ ಗ್ರಾಹಕರಿಗೆ ಸಮಾಧಾನಕರ ಮಾದರಿಗಳನ್ನು ನೀಡುತ್ತಾ ಹಲವು ವರ್ಷಗಳಿಂದ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಲೇ ಬಂದಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

350 ಸಿಸಿ ಹಾಗೂ ಅದಕ್ಕಿಂತ ಹೆಚ್ಚು ಸಿಸಿ ಹೊಂದಿರುವ ವಿಭಾಗದಲ್ಲಿ ಕಳೆದ ಏಪ್ರಿಲ್‌ ಮಾರಾಟದಲ್ಲಿ ಟಾಪ್‌ 4 ನಲ್ಲಿ ರಾಯಲ್‌ ಎನ್ಫೀಲ್ಡ್‌ ಮಾದರಿಗಳಿದ್ದು, ಉಳಿದಂತೆ ಇತರ ಬ್ರಾಂಡ್‌ಗಳು 5-6 ಸ್ಥಾನಗಳನ್ನು ಗಳಿಸಿವೆ. ಒಟ್ಟಾರೆ ಎಷ್ಟು ಬೈಕ್‌ಗಳು ಮಾರಾಟವಾಗಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಈ ವಿಭಾಗದಲ್ಲಿ ಏಪ್ರಿಲ್ ತಿಂಗಳವೊಂದರಲ್ಲೇ ಒಟ್ಟು 51,827 ಬೈಕ್‌ಗಳು ಮಾರಾಟವಾಗಿದ್ದು, ಇದೇ ತಿಂಗಳ 2021ರಲ್ಲಿ ಒಟ್ಟು 47,650 ವಾಹನಗಳು ಮಾರಾಟವಾಗಿವೆ. ಒಂದೇ ವರ್ಷದಲ್ಲಿ ಶೇ.8.77ರಷ್ಟು ಹೆಚ್ಚಳವಾಗಿದೆ. ಕಳೆದ ಮಾರ್ಚ್ ನಲ್ಲಿ ಈ ವಿಭಾಗದಲ್ಲಿ 55,432 ಬೈಕ್‌ಗಳು ಮಾರಾಟವಾಗಿವೆ. ಕಳೆದ ತಿಂಗಳಿಗೆ ಹೋಸಿಕೊಂಡರೆ ಶೇ.6.5ರಷ್ಟು ಇಳಿಕೆಯಾಗಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಬೈಕ್ ಈ ವಿಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಮಾರುಕಟ್ಟೆಯನ್ನು ವಶಪಡಿಸಿಕೊಂಡಿದೆ. ಕಳೆದ ಏಪ್ರಿಲ್‌ನಲ್ಲಿ ನಿರ್ದಿಷ್ಟ ವಿಭಾಗದಲ್ಲಿ ಬೈಕ್ ಶೇ.62.85 ಪಾಲನ್ನು ಹೊಂದಿತ್ತು. ಕಳೆದ ತಿಂಗಳೊಂದರಲ್ಲೇ 32,575 ಬೈಕ್‌ಗಳು ಮಾರಾಟವಾಗಿವೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಕಳೆದ ವರ್ಷ ಏಪ್ರಿಲ್‌ನಲ್ಲಿ 23,298 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ 39.82ರಷ್ಟು ಹೆಚ್ಚಳವಾಗಿದೆ. ಆದರೆ ಏಪ್ರಿಲ್ ಮಾರಾಟವು ಮಾರ್ಚ್ ಮಾರಾಟಕ್ಕಿಂತ ಶೇಕಡಾ 0.36 ರಷ್ಟು ಕಡಿಮೆಯಾಗಿದೆ. ಈ ಬೈಕ್ ಮಾರುಕಟ್ಟೆಯಲ್ಲಿ 1.90 ಲಕ್ಷದಿಂದ 2.20 ಲಕ್ಷ ರೂ.ವರೆಗೆ ಮಾರಾಟವಾಗುತ್ತಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಇದೇ ರಾಯಲ್ ಎನ್‌ಫೀಲ್ಡ್ ಕಂಪನಿಯ ಬುಲೆಟ್ 350 ಬೈಕ್ ಇದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 7,513 ಬೈಕ್ ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್‌ನಲ್ಲಿ 9,908 ಬೈಕ್‌ಗಳನ್ನು ಮಾರಾಟ ಮಾಡಿತ್ತು. ಪ್ರಸ್ತುತ ಮಾರಾಟದಲ್ಲಿ ಶೇ.24.17ರಷ್ಟು ಇಳಿಕೆಯಾಗಿದೆ. ಈ ವರ್ಷಾಂತ್ಯದಲ್ಲಿ ಹೊಸ ಬುಲೆಟ್ ಬೈಕ್ ಬಿಡುಗಡೆಯಾಗುತ್ತಿದ್ದಂತೆ ಮಾರಾಟದಲ್ಲಿ ಕುಸಿತ ಉಂಟಾಗಿದೆ ಎನ್ನಲಾಗಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ರಾಯಲ್ ಎನ್‌ಫೀಲ್ಡ್‌ನ ಮೀಟಿಯರ್ ಬೈಕ್ ಕೂಡ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ತಿಂಗಳ ಏಪ್ರಿಲ್ ನಲ್ಲಿ ಒಟ್ಟು 4,617 ಬೈಕ್ ಗಳು ಮಾರಾಟವಾಗಿವೆ. ಇದೇ ಬೈಕ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಒಟ್ಟು 7,844 ಬೈಕ್‌ಗಳ ಮಾರಾಟವನ್ನು ಹೊಂದಿದ್ದು, ಅದೇ ವರ್ಷದಲ್ಲಿ ಶೇಕಡಾ 41.14 ರಷ್ಟು ಕಡಿಮೆಯಾಗಿದೆ. ಈ ಬೈಕ್ ಅನ್ನು ಇತ್ತೀಚೆಗೆ ನವೀಕರಿಸಲಾಗಿದ್ದು ಬೆಲೆಯು 5,000 ರೂ.ಗೆ ಇಳಿಕೆಯಾಗಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಎಲೆಕ್ಟ್ರಾ 350 ಬೈಕ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇದು ಒಟ್ಟು 3,918 ಬೈಕ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಇದು 3,631 ಮಾರಾಟ ಮಾಡಿದ್ದು ಈ ಮೂಲಕ 7.90 ರಷ್ಟು ಬೆಳವಣಿಗೆಯಾಗಿದೆ. ಪಟ್ಟಿಯ ಕೆಳಭಾಗದಲ್ಲಿ ಹೋಂಡಾದ CB350 ಬೈಕ್ ಇದೆ. ಇದು ಒಟ್ಟು 3,204 ಬೈಕ್‌ಗಳು ಮಾರಾಟವಾಗಿವೆ. ಕಳೆದ ವರ್ಷ ಏಪ್ರಿಲ್ ನಲ್ಲಿ 2,969 ಬೈಕ್ ಗಳು ಮಾತ್ರ ಮಾರಾಟವಾಗಿದ್ದವು. ಈ ಮೂಲಕ ಶೇ 7.92 ರಷ್ಟು ಬೆಳವಣಿಗೆಯಾಗಿದೆ.

350 ಸಿಸಿ ವಿಭಾಗದ ಎಪ್ರಿಲ್ ಮಾರಾಟದಲ್ಲಿ ಟಾಪ್ 4 ಸ್ಥಾನಗಳನ್ನು ವಶಪಡಿಸಿಕೊಂಡ ರಾಯಲ್ ಎನ್ಫೀಲ್ಡ್

ಆದರೆ ವಿದೇಶಿ ರಫ್ತು ಮಾರುಕಟ್ಟೆಯಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಹೋಂಡಾ CB350 ಬೈಕ್ ರಫ್ತಿನಲ್ಲಿ ನಂಬರ್ 1 ಬೈಕ್ ಆಗಿದೆ. CB350 ಒಟ್ಟು 2,221 ಬೈಕ್‌ಗಳು, ಕ್ಲಾಸಿಕ್ 350 ಒಟ್ಟು 1797 ಬೈಕ್‌ಗಳು, ಮೀಟಿಯರ್ 350 ಒಟ್ಟು 1,138 ಬೈಕ್‌ಗಳು ಮತ್ತು ಬುಲೆಟ್ 350 7 ಬೈಕ್‌ಗಳನ್ನು ಈ ವಿಭಾಗದಲ್ಲಿ ರಫ್ತು ಮಾಡಿದೆ.

Most Read Articles

Kannada
English summary
350cc motorcycle sales april 2022 classic bullet meteor electra cb 350
Story first published: Friday, May 20, 2022, 12:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X