Just In
- 1 hr ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 15 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 16 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
- 17 hrs ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
Don't Miss!
- News
ಕಬ್ಬನ್ ಪಾರ್ಕ್ನಲ್ಲಿ ನಾಯಿಗಳ ವಾಯುವಿಹಾರಕ್ಕೆ ನಿಷೇಧ ಹೇರಿದ ಸರ್ಕಾರ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Finance
ಜೂನ್ 26: ಕಚ್ಚಾತೈಲ ದರ ಚೇತರಿಕೆ, ಭಾರತದಲ್ಲಿ ಇಂಧನ ದರ ಆಗಿಲ್ಲ ಏರಿಕೆ!
- Sports
Ind vs Eng: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಕೊರೊನಾ ವೈರಸ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಏಪ್ರಿಲ್ ತಿಂಗಳ ಟಿವಿಎಸ್ ವಾಹನ ಮಾರಾಟ ವರದಿ: ರಫ್ತಿನಲ್ಲಿ ದಾಖಲೆ ನಿರ್ಮಾಣ
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ TVS ಮೋಟಾರ್ ತನ್ನ ಏಪ್ರಿಲ್ ತಿಂಗಳ ಮಾರಾಟ ವರದಿಯನ್ನು ಬಿಡುಗಡೆ ಮಾಡಿದೆ. ಅದರಂತೆ ಕಳೆದ ಏಪ್ರಿಲ್ ಒಂದರಲ್ಲೇ ಕಂಪನಿ 2,78,376 ವಾಹನಗಳನ್ನು ಮಾರಾಟ ಮಾಡಿದೆ. ಇದರಲ್ಲಿ 1,80,533 ವಾಹನಗಳು ಭಾರತದಲ್ಲಿ ಮಾರಾಟವಾಗಿದ್ದು, 97,843 ವಾಹನಗಳನ್ನು ರಫ್ತು ಮಾಡಲಾಗಿದೆ.

ಇದು ಕಳೆದ ವರ್ಷ ಇದೇ ಏಪ್ರಿಲ್ಗೆ ಹೋಲಿಸಿದರೆ ಶೇ.37.83ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಕಂಪನಿಯು ಭಾರತದಲ್ಲಿ ಕೇವಲ 1,30,981 ಬೈಕ್ಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಂಪನಿಯ ಎಲ್ಲಾ ಮಾದರಿಗಳ ಮಾರಾಟದಲ್ಲಿ ಉತ್ತಮ ಬೆಳೆವಣಿಗೆ ಕಂಡಿದೆ. ಆದರೆ ಅಪಾಚೆ ಮತ್ತು ಪೆಪ್ + ಮಾದರಿಗಳ ಮಾರಾಟ ಮಾತ್ರ ಕುಸಿದಿವೆ.

ಕಳೆದ ಮಾರ್ಚ್ಗೆ ಹೋಲಿಸಿದರೆ ಏಪ್ರಿಲ್ನಲ್ಲಿ ಮಾರಾಟವು ಶೇಕಡಾ 8.34 ರಷ್ಟು ಕಡಿಮೆಯಾಗಿದೆ. ಕಳೆದ ಮಾರ್ಚ್ ನಲ್ಲಿ ಭಾರತದಲ್ಲಿ ಒಟ್ಟು 1,96,956 ವಾಹನಗಳು ಮಾರಾಟವಾಗಿವೆ. ಕಂಪನಿಯ 5 ಮಾಡೆಲ್ ಬೈಕ್ಗಳ ಮಾರಾಟ ಮಾರ್ಚ್ನಲ್ಲಿ ಕುಸಿದಿದೆ. ಪ್ರತಿ ಮಾದರಿಯ ಮಾರಾಟದ ಅಂಕಿಅಂಶವನ್ನು ಕೆಳಗೆ ನೋಡಬಹುದು.

ಟಿವಿಎಸ್ ಕಂಪನಿಯಲ್ಲಿ ಟಿವಿಎಸ್ ಜೂಪಿಟರ್ ಹೆಚ್ಚು ಮಾರಾಟವಾಗುವ ವಾಹನವಾಗಿದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 60,957 ವಾಹನಗಳು ಮಾರಾಟವಾಗಿವೆ. ಈ ಮೂಲಕ ಒಂದೇ ವರ್ಷದಲ್ಲಿ ಮಾರಾಟ 35,387 ಏರಿಕೆಯಾಗಿದೆ. ಕಳೆದ ಮಾರ್ಚ್ ನಲ್ಲಿ 55,813 ವಾಹನಗಳು ಮಾರಾಟವಾಗಿವೆ. ಇದು ಏಪ್ರಿಲ್ನಲ್ಲಿ ಶೇಕಡಾ 9.22 ಕ್ಕೆ ಹೋಲಿಸಿದರೆ. ಈ ಸ್ಕೂಟರ್ ಮಾರುಕಟ್ಟೆಯಲ್ಲಿ 37% ಮಾರುಕಟ್ಟೆ ಪಾಲನ್ನು ಹೊಂದಿದೆ.

ಮುಂದಿನ ಸಾಲಿನಲ್ಲಿ TVS XL100 ಮೊಪೆಡ್ ಇದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 36,780 ವಾಹನಗಳು ಮಾರಾಟವಾಗಿವೆ. ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ ಒಟ್ಟು 25,977 ವಾಹನಗಳಿಗಿಂತ ಹೆಚ್ಚಾಗಿದೆ. ಅದೇ ವರ್ಷದಲ್ಲಿ 12,803 ವಾಹನಗಳ ಮಾರಾಟ ಹೆಚ್ಚಾಗಿದೆ. ಕಳೆದ ಮಾರ್ಚ್ ನಲ್ಲಿ ಒಟ್ಟು 37,649 ವಾಹನಗಳು ಮಾರಾಟವಾಗಿವೆ. ಇದು ಏಪ್ರಿಲ್ ಮಾರಾಟದಲ್ಲಿ ಶೇ21.48 ರಷ್ಟು ಹೆಚ್ಚಳವಾಗಿದೆ.

ಎನ್ಟಾರ್ಕ್ ಸ್ಕೂಟರ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 25,267 ವಾಹನಗಳು ಮಾರಾಟವಾಗಿವೆ. ಏಪ್ರಿಲ್ 2021 ರಲ್ಲಿ ಮಾರಾಟವಾದ 19,959 ವಾಹನಗಳಿಗೆ ಹೋಲಿಸಿದರೆ ಇದು 26.59 ಶೇಕಡಾ ಹೆಚ್ಚಳವಾಗಿದೆ. ಮಾರ್ಚ್ನಲ್ಲಿ ಮಾರಾಟವಾದ 23,824 ವಾಹನಗಳಿಗೆ ಹೋಲಿಸಿದರೆ ಏಪ್ರಿಲ್ನಲ್ಲಿ ಮಾರಾಟವು 6.06 ಶೇಕಡಾ ಹೆಚ್ಚಾಗಿದೆ.

ಕಂಪನಿಯು ಇತ್ತೀಚೆಗೆ ಈ ಸ್ಕೂಟರ್ನ ಎನ್ಟಾರ್ಕ್ 125XT ರೂಪಾಂತರವನ್ನು ನಿಯಾನ್ ಹಸಿರು ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 1.02 ಲಕ್ಷ ರೂ. ಇದೆ. ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಸ್ಪೋರ್ಟ್ ಬೈಕ್ ಇದೆ. ಕಳೆದ ಏಪ್ರಿಲ್ ನಲ್ಲಿ ಒಟ್ಟು 12,995 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕೇವಲ 6,870 ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ 89.16 ರಷ್ಟು ಹೆಚ್ಚಾಗಿದೆ.

ಮುಂದಿನ ರೇಡಿಯನ್ ಬೈಕ್ ಕಳೆದ ಏಪ್ರಿಲ್ನಲ್ಲಿ ಒಟ್ಟು 11,630 ಯುನಿಟ್ಗಳನ್ನು ಮಾರಾಟ ಮಾಡಿದೆ. ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ ಕೇವಲ 5,600 ಯುನಿಟ್ಗಳಿಗಿಂತ ಭಾರೀ ಅಂತರದಲ್ಲಿ ಹೆಚ್ಚಳವನ್ನು ಪಡೆದುಕೊಂಡಿದೆ. ಒಂದೇ ವರ್ಷದಲ್ಲಿ ಶೇಕಡಾ 107.68 ರಷ್ಟು ಬೆಳವಣಿಗೆ ಸಾಧಿಸಿದೆ.

ಮುಂದೆ ಟಿವಿಎಸ್ ಅಪಾಚೆ ಬೈಕ್ ಕಳೆದ ಏಪ್ರಿಲ್ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಒಟ್ಟಾರೆಯಾಗಿ, ಕೇವಲ 7,342 ಬೈಕ್ಗಳು ಮಾರಾಟವಾಗಿವೆ. ಇದು ಏಪ್ರಿಲ್ 2021 ರಲ್ಲಿ ಮಾರಾಟವಾದ 29,438 ಬೈಕ್ಗಳಿಗೆ ಹೋಲಿಸಿಕೊಂಡಿರೆ ಭಾರೀ ಕಡಿಮೆ ಮಾರಾಟವೆಂದೇ ಹೇಳಬಹುದು. ಮಾರಾಟವು ಶೇಕಡಾ 75.08 ರಷ್ಟು ಕುಸಿದಿದೆ. ಮಾರ್ಚ್ನಲ್ಲಿ 27,439 ಬೈಕ್ಗಳು ಮಾರಾಟವಾಗಿವೆ. ಒಂದೇ ತಿಂಗಳಲ್ಲಿ ಶೇ.73.24ರಷ್ಟು ಕುಸಿತ ಕಂಡಿದೆ.

ಮುಂದಿನ ಸ್ಟಾರ್ಸಿಟಿ ಈ ತಿಂಗಳು 6,895 ವಾಹನಗಳನ್ನು ಮಾರಾಟ ಮಾಡಿದೆ, ಪೆಪ್ + 6,329, ಚೆಸ್ಟ್ 5,123, ರೈಡರ್ 3,392, ಐಕ್ಯೂಬ್ 1,420 ಮತ್ತು ಆರ್ಆರ್ 310 ಒಟ್ಟು 403 ವಾಹನಗಳನ್ನು ಮಾರಾಟ ಮಾಡಿದೆ. ಏಪ್ರಿಲ್ನಲ್ಲಿ ರೈಡರ್ ಮತ್ತು IQ RR310 ಮಾರಾಟವು ಮಾರ್ಚ್ಗಿಂತ ಕಡಿಮೆಯಾಗಿದೆ. ಕಳೆದ ಏಪ್ರಿಲ್ 2021ರ ಮಾರಾಟಕ್ಕೆ ಹೋಲಿಸಿದರೆ ಪೆಪ್ + ಹೊರತುಪಡಿಸಿ ಇತರ ವಾಹನಗಳು ಮಾರಾಟವನ್ನು ಹೆಚ್ಚಿಸಿವೆ.

ಅದೇ ರೀತಿ ಟಿವಿಎಸ್ ಮೋಟಾರ್ ಕಂಪನಿಯ ರಫ್ತು ಏಪ್ರಿಲ್ ನಲ್ಲಿ ಬೆಳವಣಿಗೆ ಕಂಡಿದೆ. ಒಟ್ಟು 97,843 ವಾಹನಗಳನ್ನು ರಫ್ತು ಮಾಡಲಾಗಿದೆ. ಇದು ಏಪ್ರಿಲ್ 2021 ರಲ್ಲಿ 94,807 ವಾಹನಗಳನ್ನು ರಫ್ತು ಮಾಡಿದೆ. ಈ ಮೂಲಕ ರಫ್ತಿನಲ್ಲಿ ಶೇ 3.02ರಷ್ಟು ಹೆಚ್ಚಳವಾಗಿದೆ. ಕಳೆದ ಮಾರ್ಚ್ ನಲ್ಲಿ 93,854 ವಾಹನಗಳು ಮಾರಾಟವಾಗಿವೆ. ಒಂದು ತಿಂಗಳ ಮಾರಾಟವನ್ನು ಹೋಲಿಸಿದಾಗ ಶೇ4.05 ರಷ್ಟು ಮಾರಾಟ ಬೆಳವಣಿಗೆಯಾಗಿದೆ.

TVS ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಟಾರ್ಸಿಟಿ 125 ಬೈಕ್ಗಳ ಅತಿ ದೊಡ್ಡ ರಫ್ತುದಾರನಾಗಿದ್ದು, ಒಂದೇ ತಿಂಗಳಲ್ಲಿ 37,919 ವಾಹನಗಳನ್ನು ರಫ್ತು ಮಾಡಲಾಗಿದೆ. ಮುಂದೆ ಸ್ಟಾರ್ಸಿಟಿಯಲ್ಲಿ ಒಟ್ಟು 28,860 ಬೈಕ್ಗಳು, ಅಪಾಚೆಯಲ್ಲಿ 11,771 ಬೈಕ್ಗಳು, ರೈಡರ್ನಲ್ಲಿ 9141 ಬೈಕ್ಗಳು, ಸ್ಪೋರ್ಟ್ನಲ್ಲಿ 6,003 ಬೈಕ್ಗಳು, ಎನ್ಟಾರ್ಕ್ನಲ್ಲಿ 2,627 ಸ್ಕೂಟರ್ಗಳು, 423 ವಿಗೊ ಸ್ಕೂಟರ್ಗಳು ರಫ್ತಾಗಿವೆ.

ಸ್ಟಾರ್ಸಿಟಿ 125, ಸ್ಟಾರ್ಸಿಟಿ ಮತ್ತು ವಿಗೊ ಸ್ಕೂಟರ್ಗಳು ಮಾತ್ರ ಒಂದು ವರ್ಷದ ಮಾರಾಟದಲ್ಲಿ ಸುಧಾರಣೆ ಕಂಡಿವೆ. ಸ್ಟಾರ್ಸಿಟಿ, ರೇಡಿಯನ್ ಮತ್ತು ಆರ್ಆರ್ 310 ಬೈಕ್ಗಳು ಮಾಸಿಕ ಮಾರಾಟದಲ್ಲಿ ಕುಸಿತ ಕಂಡಿದೆ.