ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಪಿಯಾಜಿಯೊ ಇಂಡಿಯಾ ತನ್ನ ಸರಣಿಯಲ್ಲಿರುವ ಎಪ್ರಿಲಿಯಾ ಎಸ್ಆರ್‌ಎಕ್ಸ್ 125 ಮತ್ತು ಎಸ್ಆರ್‌ಎಕ್ಸ್ 160 ಬೆಲೆಗಳನ್ನು ಹೆಚ್ಚಿಸಿದೆ. ಇದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಎಪ್ರಿಲಿಯಾ ಎಸ್ಆರ್‌ಎಕ್ಸ್ 125 ಮತ್ತು ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಎಪ್ರಿಲಿಯಾ ಎಸ್ಆರ್‌ಎಕ್ಸ್ 125 ಮತ್ತು ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳ ಬೆಲೆಗಳು ಕ್ರಮವಾಗಿ ರೂ.4,458 ಮತ್ತು ರೂ.4,319 ಗಳವರೆಗೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ, ಎಪ್ರಿಲಿಯಾ ಎಸ್ಆರ್‌ಎಕ್ಸ್ 125 ಸ್ಕೂಟರ್ ಬೆಲೆಯು ರೂ.1,31,664 ಆಗಿದ್ದರೆ, ಎಪ್ರಿಲಿಯಾ ಎಸ್ಆರ್‌ಎಕ್ಸ್ 160 ಬೆಲೆಯು ರೂ.1,42,802 ಗಳಾಗಿದೆ. ಈ ಹೊಸ ಎಪ್ರಿಲಿಯಾ ಎಸ್ಆರ್‌ಎಕ್ಸ್ 125 ಮತ್ತು ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳ ಬೆಲೆಗಳ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಮೊದಲಿಗೆ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಬಗ್ಗೆ ಹೇಳುವುದಾದರೆ, ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ವಿನ್ಯಾಸವು ಅದರ ಹಿರಿಯ ಸಹೋದರ ಎಸ್‌ಎಕ್ಸ್‌ಆರ್ 160 ನಂತಯೇ ಇದೆ. ಅಲ್ಲದೇ ಫೀಚರ್ ಗಳನ್ನು ಈ ಎರಡು ಸ್ಖೂಟರ್ ಗಳು ಪರಸ್ಪರ ಹಂಚಿಕೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಈ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಮುಂಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ರಿಪಲ್ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ. ಇದರೊಂದಿಗೆ ಮುಂಭಾಗದ ಏಪ್ರನ್, ಬಣ್ಣದ ವಿಸರ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಮ್ಯಾಕ್ಸಿ-ಸ್ಕೂಟರ್ ಮಸ್ಕಲರ್ ಲುಕ್ ಅನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಇನ್ನು ಈ ಸ್ಕೂಟರ್‌ನಲ್ಲಿ ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ರೈಡರ್ ಮತ್ತು ಪಿಲಿಯನ್‌ಗಾಗಿ ವಿಶಾಲ ಸೀಟುಗಳು, ಮುಂಭಾಗದ ಏಪ್ರನ್‌ನ ಎರಡೂ ಬದಿಯಲ್ಲಿ ಗ್ಲೋವ್‌ಬಾಕ್ಸ್, ಒಂದು ಬದಿಯಲ್ಲಿ ಯುಎಸ್‌ಬಿ ಚಾರ್ಜರ್, ಪ್ರಕಾಶದೊಂದಿಗೆ ದೊಡ್ಡ ಅಂಡರ್-ಸೀಟ್ ಸ್ಟೋರೆಂಜ್ ಸ್ಪೆಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಈ ಹೊಸ ಮ್ಯಾಕ್ಸಿ-ಸ್ಕೂಟರ್‌ನಲ್ಲಿ 125 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ,600 ಆರ್‌ಪಿಎಂನಲ್ಲಿ 9.3 ಬಿಹೆಚ್‌ಪಿ ಮತ್ತು 6250 ಆರ್‌ಪಿಎಂನಲ್ಲಿ ಟಾರ್ಕ್ 9.2 ಎನ್ಎಂ ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಹೊಸ ಮ್ಯಾಕ್ಸಿ-ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ಮೂಲಕ ಹೆಚ್ಚುವರಿ ಸುರಕ್ಷತೆಗಾಗಿ ಸಂಯೋಜಿತ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಈ ಮ್ಯಾಕ್ಸಿ-ಸ್ಕೂಟರ್ ಟ್ಯೂಬ್‌ಲೆಸ್ ಟೈರ್‌ಗಳೊಂದಿಗೆ 12 ಇಂಚಿನ ಅಲಾಯ್ ವ್ಹೀಲ್ ಶಾಡ್ ಅನ್ನು ಹೊಂದಿರುತ್ತದೆ. ಈ ಸ್ಕೂಟರ್ 7 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿರುತ್ತದೆ, ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮಾದರಿ ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಬರ್ಗ್‌ಮನ್ 125 ಸ್ಕೂಟರ್‌ಗೆ ಪೈಪೋಟಿ ನೀಡುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ಇಂಡಿಯಾ-ಸ್ಪೆಕ್ ಮಾದರಿಯಂತೆಯೇ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್, ಡ್ಯುಯಲ್ ಎಲ್‌ಇಡಿ ಟೇಲ್ ಲೈಟ್ ಕ್ಲಸ್ಟರ್‌ಗಳಿವೆ. ಇನ್ನು ಇದರಲ್ಲಿ ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗಿರಿಸಲಾಗಿದೆ. ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ತಂತ್ರಜ್ಙಾನವನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಸ್ಕೂಟರ್ ಸವಾರ ಹಾಗೂ ಹಿಂಬದಿಯ ಪ್ರಯಾಣಿಕರಿಗೆ ಆರಾಮದಾಯಕವಾಗಿರುವ ಸೀಟುಗಳನ್ನು ನೀಡಲಾಗಿದೆ. ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍‍ಗಳು ಸಹ ಈ ಮ್ಯಾಕ್ಸಿ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಇನ್ನು ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ನಲ್ಲಿ ಓವರ್‌ಸೈಜ್ ಸ್ಯಾಡಲ್ ಮತ್ತು ಐದು-ಸ್ಪೋಕ್ ಅಲಾಯ್ ವ್ಹೀಲ್‌ಗಳಿವೆ. ಇನ್ನು ನೇಪಾಳದಲ್ಲಿ ಬಿಡುಗಡೆಗೊಂಡ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಎರಡು ಎಂಜಿನ್ ಆಯ್ಕೆಗಳಲ್ಲಿ ಬಿಡುಗಡೆಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಇದರಲ್ಲಿ 160 ಸಿಸಿ ಮತ್ತು 125 ಸಿಸಿಗಳ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ 160 ಸಿಸಿ, ಸಿಂಗಲ್-ಸಿಲಿಂಡರ್ ಮೋಟರ್ 7,600 ಆರ್‌ಪಿಎಂನಲ್ಲಿ 10.84 ಬಿಹೆಚ್‌ಪಿ ಪವರ್ ಮತ್ತು 6,000 ಆರ್‌ಪಿಎಂನಲ್ಲಿ 11.6 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು 125 ಸಿಸಿ ರೂಪಾಂತರವನ್ನು 9.4 ಬಿಹೆಚ್‌ಪಿ ಮತ್ತು 8.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಂತೆ ಟ್ಯೂನ್ ಮಾಡಲಾಗಿದೆ. ಆದರ್ ಭಾರತದಲ್ಲಿ 160 ಸಿಸಿ ಎಂಜಿನ್ ಅನ್ನು ಮಾತ್ರ ನೀಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಎಪ್ರಿಲಿಯಾ ಎಸ್ಆರ್‌ಎಕ್ಸ್ 125, ಎಸ್ಆರ್‌ಎಕ್ಸ್ 160 ಸ್ಕೂಟರ್‌ಗಳು

ಈ ಮ್ಯಾಕ್ಸಿ ಸ್ಕೂಟರ್ ನಲ್ಲಿ ಪೂರ್ಣ ಗಾತ್ರದ ಹೆಲ್ಮೆಟ್ ಮತ್ತು 7 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್‌ಗಾಗಿ ಅಂಡರ್-ಸೀಟ್ ಸ್ಟೋರೇಜ್ ಸ್ಪೇಸ್ ಅನ್ನು ನೀಡಿದೆ. ಇನ್ನು ಈ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಗ್ಲೋಸಿ ರೆಡ್, ಮ್ಯಾಟ್ ಬ್ಲೂ, ಗ್ಲೋಸಿ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್‌ ಎಂಬ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

Most Read Articles

Kannada
English summary
Aprilia hiked sxr 125 and sxr 160 prices find here all details
Story first published: Wednesday, June 15, 2022, 19:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X