ಇವಿ ಸ್ಕೂಟರ್‌ನಲ್ಲಿ ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್

ಎಥರ್ ಎನರ್ಜಿ ಕಂಪನಿಯು ಪ್ರೀಮಿಯಂ ಸ್ಕೂಟರ್ ಸವಾರಿಯನ್ನು ಮತ್ತಷ್ಟು ಸರಳಗೊಳಿಸುವತ್ತ ಹಲವಾರು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದ್ದು, ಕಂಪನಿಯು ಇತ್ತೀಚೆಗೆ ಇವಿ ಸ್ಕೂಟರ್ ಮಾದರಿಗಳಿಗಾಗಿ ಡಿಜಿಟಲ್ ರೂಪದಲ್ಲಿರುವ ವಾಹನ ದಾಖಲೆಗಳನ್ನು ಸಂಗ್ರಹಿಸಲು ಹೊಸ ನವೀಕರಣಗಳನ್ನು ಪರಿಚಯಿಸಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ 450ಎಕ್ಸ್ ಮಾದರಿಗಾಗಿ ಎಥರ್ ಕಂಪನಿಯು ಇನ್ಫೋಟೈನ್‌ಮೆಂಟ್ ಸಿಸ್ಟಂನಲ್ಲಿ ಡ್ರೈವಿಂಗ್ ಲೈಸೆನ್ಸ್‌ನಂತಹ ಪ್ರಮುಖ ವಾಹನ ದಾಖಲೆಗಳನ್ನು ಸಂಗ್ರಹಿಸಲು ಸ್ಟೋರೇಜ್ ಸ್ಪೇಸ್ ನೀಡಿದ್ದು, ಹೊಸ ಸೌಲಭ್ಯದೊಂದಿಗೆ ಸ್ಕೂಟರ್ ಮಾಲೀಕರಿಗೆ ವಾಹನ ದಾಖಲೆಗಳನ್ನು ಮರೆತುಹೊಗಿ ಪೊಲೀಸರಿಗೆ ಸಿಕ್ಕಿಬಿಳುವ ಸಂದರ್ಭಗಳನ್ನು ದೂರಮಾಡಲಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಡ್ಯಾಕುಮೆಂಟ್ ಸ್ಟೋರೇಜ್ ಸ್ಪೇಸ್ ಅನ್ನು ಹೊಸದಾಗಿ ನವೀಕರಿಸಿದ್ದು, ಟ್ರಾಫಿಕ್ ಪೊಲೀಸರು ವಾಹನ ದಾಖಲೆಗಳನ್ನು ಕೇಳಿದಾಗ ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಡಿಜಿಟಲ್ ರೂಪದಲ್ಲಿರುವ ವಾಹನ ದಾಖಲೆಗಳು ಮಾನ್ಯ ಮಾಡಿರುವುದರಿಂದ ಸ್ಟೋರೇಜ್ ಸ್ಪೇಸ್‌ನಲ್ಲಿ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀವು ಸ್ಮಾರ್ಟ್‌ಫೋನ್ ಕನೆಕ್ಟ್ ಮೂಲಕ ಅಪ್‌ಲೋಡ್ ಮಾಡಬಹುದಾಗಿದ್ದು, ಸ್ಕ್ಯಾನರ್‌ಗಳು ಮತ್ತು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಪೊಲೀಸರು ಇವುಗಳನ್ನು ಪರಿಶೀಲಿಸಬಹುದಾಗಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಹೊಸ ಸೌಲಭ್ಯದ ಪ್ರಯೋಜನ ಕುರಿತಂತೆ ಕಂಪನಿಯು ಟಿವಿ ಜಾಹೀರಾತು ಸಹ ಪ್ರಕಟಿಸಿದ್ದು, ಜಾಹೀರಾತಿನಲ್ಲಿ ವಾಹನ ದಾಖಲೆಗಳನ್ನು ಪೊಲೀಸರಿಗೆ ತೋರಿಸಲು ಇಬ್ಬರು ಸ್ಕೂಟರ್ ಸವಾರರು ಹೇಗೆಲ್ಲಾ ಪ್ರಯತ್ನಿಸುತ್ತಾರೆ ಮತ್ತು ಇದರಲ್ಲಿ ಓಲಾ ಸ್ಕೂಟರ್ ಮಾಲೀಕರ ಯಾವ ಮಾರ್ಗದಲ್ಲಿ ವಾಹನ ದಾಖಲೆಗಳನ್ನು ಪ್ರದರ್ಶಿಸುತ್ತಾನೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಡಿಜಿಟಲ್ ರೂಪದಲ್ಲಿರುವ ವಾಹನಗಳ ದಾಖಲೆಗಳು ಸ್ಕೂಟರ್ ಮಾಲೀಕರಿಗೆ ಯಾವುದೇ ಸಂದರ್ಭದಲ್ಲೂ ನೆರವಿಗೆ ಬರಲಿದ್ದು, ದಾಖಲೆಗಳು ಕಳೆದುಹೊಗುವ ಅಥವಾ ಹಾನಿಗೆ ಒಳಗಾಗುವ ಯಾವುದೇ ಪ್ರಮೇಯ ಇದರಲ್ಲಿ ಇರುವುದಿಲ್ಲ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಇದರ ಹೊರತಾಗಿ ಎಥರ್ ಎನರ್ಜಿ ಕಂಪನಿಯು ತನ್ನ ಇವಿ ವಾಹನ ಉತ್ಪನ್ನಗಳಲ್ಲಿ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಫೀಚರ್ಸ್ ಪರಿಚಯಿಸಿದ್ದು, ಕಂಪನಿಯು ಇದೀಗ ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಜೋಡಣೆ ಮಾಡುತ್ತಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ವಾಹನಗಳಲ್ಲಿ ಏರ್ ಸಿಸ್ಟಂ ಅನ್ನು ಸರಿಯಾದ ಮಾರ್ಗದಲ್ಲಿ ನಿರ್ವಹಣೆ ಮಾಡಲು ಇತ್ತೀಚೆಗೆ ಪ್ರಮುಖ ಕಾರು ಮತ್ತು ಬೈಕ್ ತಯಾರಕ ಕಂಪನಿಗಳು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಣೆ ಮಾಡುತ್ತಿದ್ದು, ಮೊದಲ ಬಾರಿಗೆ ಎಥರ್ ಎನರ್ಜಿ ಕಂಪನಿಯು ಸಹ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲೂ ಹೊಸ ಸುರಕ್ಷಾ ಸೌಲಭ್ಯವನ್ನು ಪರಿಚಯಿಸಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಹೊಸ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಅನ್ನು ಎಥರ್ ಕಂಪನಿಯು ಸ್ಟ್ಯಾಂಡರ್ಡ್ ಆಗಿ ನೀಡದೆ ಆಕ್ಸೆಸರಿಸ್ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ಆಸಕ್ತ ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ಹೊಸ ಸುರಕ್ಷಾ ಸೌಲಭ್ಯವನ್ನು ಹೆಚ್ಚುವರಿ ಪಾವತಿಯೊಂದಿಗೆ ಖರೀದಿಸಬಹುದು.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಹೀಗಾಗಿ ಹೊಸದಾಗಿ ಇವಿ ಸ್ಕೂಟರ್ ಖರೀದಿಸುವ ಮತ್ತು ಈಗಾಗಲೇ ಮಾಲೀಕತ್ವ ಹೊಂದಿರುವ ಗ್ರಾಹಕರು ಕೂಡಾ ಹೊಸ ಸುರಕ್ಷಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ಹೊಸ ಸುರಕ್ಷಾ ಸೌಲಭ್ಯಕ್ಕಾಗಿ ಕಂಪನಿಯು ರೂ. 5 ಸಾವಿರ ನಿಗದಿಪಡಿಸಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೌಲಭ್ಯವು ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ಚಕ್ರಗಳಲ್ಲಿ ಏರ್ ಪ್ರೆಷರ್ ಲಭ್ಯತೆಯ ನಿಖರ ಮಾಹಿತಿ ನೀಡಲಿದ್ದು, ಏರ್ ಪ್ರೆಷರ್ ಸರಿಯಾದ ಪ್ರಮಾಣದಲ್ಲಿ ಇದ್ದಾಗ ಗ್ರಿನ್ ಇಂಡಿಕೇಟರ್ ಮಾಡಿದರೆ ಕಡಿಮೆ ಮತ್ತು ಹೆಚ್ಚಿನ ಪ್ರೆಷರ್ ಇದ್ದಲ್ಲಿ ಯೆಲ್ಲೊ ಇಂಡಿಕೇಟರ್ ತೋರಿಸುತ್ತದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಒಂದು ವೇಳೆ ಏರ್ ಪ್ರೆಷರ್ ಪ್ರಮಾಣವು ಅಗತ್ಯಕ್ಕಿಂತ ಕಡಿಮೆಯಾದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚಿನ ಒತ್ತಡವಿದ್ದಲ್ಲಿ ರೆಡ್ ಇಂಡಿಕೇಟರ್ ತೋರಿಸಲಿದ್ದು, ಈ ಮೂಲಕ ಸುರಕ್ಷಿತ ಸ್ಕೂಟರ್ ಚಾಲನೆಗೆ ಇದು ಸಹಕಾರಿಯಾಗಲಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಇನ್ನು ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಹೊಸ ಉತ್ಪನ್ನಗಳ ಹೊಸ ಯೋಜನೆಯ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯುತ್ತಿದೆ.

ಡಿಎಲ್, ಇನ್ಸುರೆನ್ಸ್ ದಾಖಲೆಗಳನ್ನು ಸಂಗ್ರಹಿಸಿಡಲು ಡಿಜಿಟಲ್ ಸ್ಟೋರೇಜ್ ಸ್ಪೇಸ್ ನೀಡಿದ ಎಥರ್

ಮುಂದಿನ ಎರಡು ವರ್ಷಗಳಲ್ಲಿ ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, 2025ರ ವೇಳೆಗೆ ಮತ್ತಷ್ಟು ಹೂಡಿಕೆಯೊಂದಿಗೆ ವಾರ್ಷಿಕವಾಗಿ ಒಟ್ಟು 10 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುತ್ತಿದೆ.

Most Read Articles

Kannada
English summary
Ather 450x gets new feature update documents storeage details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X