ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಎಲೆಕ್ಟ್ರಿಕ್ ವಾಹನ ಮಾರಾಟವು ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಮತ್ತಷ್ಟು ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಇಂಧನ ಆಧರಿತ ವಾಹನಗಳ ಬಳಕೆ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತಿದ್ದು, ಹೊಸ ವಾಹನ ಖರೀದಿದಾರರು ಸದ್ಯ ಇವಿ ಮಾದರಿಗಳತ್ತ ಮುಖ ಮಾಡುತ್ತಿದ್ದಾರೆ. ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಕೂಡಾ ಚಾರ್ಜಿಂಗ್ ನಿಲ್ದಾಣಗಳನ್ನು ಹೆಚ್ಚಿಸುವುದರ ಜೊತೆಗೆ ಸಬ್ಸಡಿ ಯೋಜನೆಗಳನ್ನು ಘೋಷಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಕಾರಣವಾಗಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಮುಂಬರುವ ದಿನಗಳಲ್ಲಿ ಇಂಧನ ಬೆಲೆಗಳು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿರುವುದರಿಂದ ಇವಿ ವಾಹನ ಉತ್ಪಾದನಾ ಕಂಪನಿಗಳು ಗ್ರಾಹಕರ ಆದ್ಯತೆಗೆ ತಕ್ಕಂತೆ ಹೊಸ ಇವಿ ಮಾದರಿಗಳನ್ನು ರಸ್ತೆಗಿಳಿಸುತ್ತಿವೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಇತ್ತೀಚೆಗೆ ನಡೆದ ಇವಿ ಬ್ಯಾಟರಿ ಸ್ಪೋಟ ಪ್ರಕರಣಗಳಿಂದ ಹೊಸ ತಂತ್ರಜ್ಞಾನ ಬಳಕೆಗೆ ಒತ್ತು ನೀಡಲಾಗುತ್ತಿದ್ದು, ಹೊಸ ಮಾನದಂಡಗಳನ್ನು ಪಾಲನೆ ಮಾಡಿರುವ ಇವಿ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸುತ್ತಿರುವ ಬೇಡಿಕೆ ಹೆಚ್ಚಳವಾಗುವ ನೀರಿಕ್ಷೆಗಳಿವೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಈ ಕುರಿತಾಗಿ ಮಾತನಾಡಿರುವ ಪ್ರೀಮಿಯಂ ಸ್ಕೂಟರ್ ಉತ್ಪಾದನಾ ಕಂಪನಿಯಾಗಿರುವ ಎಥರ್ ಎನರ್ಜಿ ಸಂಸ್ಥಾಪಕ ತರುಣ್ ಮೆಹ್ತಾ ಅವರು ಮುಂದಿನ 12 ತಿಂಗಳಿನಲ್ಲಿ ನಮ್ಮ ಇವಿ ವಾಹನ ಮಾರಾಟವು ಹೊಸ ಬೆಳವಣಿಗೆ ಕಾರಣವಾಗಲಿದೆ ಎಂದಿದ್ದಾರೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಇವಿ ವಾಹನಗಳ ಸುರಕ್ಷತೆಗಾಗಿ ಸರ್ಕಾರದ ಹೊಸ ಮಾನದಂಡಗಳು ಗ್ರಾಹಕರಲ್ಲಿ ವಿಶ್ವಾಸ ಹೆಚ್ಚಿಸುವ ಭರವಸೆ ನೀಡಿರುವ ತರುಣ್ ಮೆಹ್ತಾ ಅವರು ಮುಂದಿನ ಒಂದು ವರ್ಷದೊಳಗಾಗಿ ನಮ್ಮ ಇವಿ ಸ್ಕೂಟರ್ ಮಾರಾಟವು ಪ್ರತಿ ತಿಂಗಳು 1 ಲಕ್ಷಕ್ಕೆ ತಲುಪುವ ಗುರಿಹೊಂದಿದ್ದೆವೆ ಎಂದಿದ್ದಾರೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯ ಗಳಿಸಿರುವ ಎಥರ್ ಎನರ್ಜಿ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳೊಂದಿಗೆ ಉತ್ತಮ ಮಾರುಕಟ್ಟೆ ಹೊಂದಿದ್ದು, ಕಂಪನಿಯು ಇದೀಗ ತನ್ನ ಪ್ರೀಮಿಯಂ ಇವಿ ಸ್ಕೂಟರ್ ಮಾದರಿಯಲ್ಲಿ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ ಮಾದರಿಯ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಮಾರಾಟ ಮಳಿಗೆ ವಿಸ್ತರಣೆಯೊಂದಿಗೆ ಮುಂಬರುವ ಕೆಲ ತಿಂಗಳಿನಲ್ಲಿ ಮತ್ತೆರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಲ್ಲಿ ಒಂದು ಹೊಸ ಮಾದರಿಯು ಮಾರುಕಟ್ಟೆಗೆ ಲಗ್ಗೆಯಿಲಿದ್ದರೆ ಮತ್ತೊಂದು ವಿಸ್ತರಿತ ಮೈಲೇಜ್ ರೇಂಜ್ ಆಯ್ಕೆ ಪಡೆದುಕೊಳ್ಳಲಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳಿಸುತ್ತಿದ್ದು, ಇದರಲ್ಲಿ ಹೈ ಎಂಡ್ ಮಾದರಿಯಾಗಿರುವ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಹೆಚ್ಚಿನ ಮೈಲೇಜ್ ರೇಂಜ್ ಹೊಸ ಬ್ಯಾಟರಿ ಪ್ಯಾಕ್ ನೀಡುವ ಸುಳಿವು ನೀಡಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ 2.9kWh ಬ್ಯಾಟರಿ ಪ್ಯಾಕ್‌ ಮತ್ತು 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ಹೊಂದಿರಲಿದೆ ಎನ್ನಲಾಗಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ವರದಿಗಳ ಪ್ರಕಾರ, ಎಥರ್ ಕಂಪನಿಯು ವಿಸ್ತರಿತ ಮೈಲೇಜ್ ಹೊಂದಿರುವ ಹೊಸ 450ಎಕ್ಸ್ ಇ-ಸ್ಕೂಟರ್ ಉತ್ಪಾದನೆ ಆರಂಭಕ್ಕೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದಲೂ(ARAI) ಅನುಮತಿಯನ್ನು ಸಹ ತೆಗೆದುಕೊಂಡಿದೆ ಎನ್ನಲಾಗಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಹೊಸ ಎಥರ್ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಸುಮಾರು ನಾಲ್ಕು ವಿಭಿನ್ನವಾದ ರೈಡಿಂಗ್ ಮೋಡ್‌ಗಳನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಕಂಪನಿಯು ಹೊಸ ಮಾದರಿಯ ಕುರಿತಾಗಿ ಶೀಘ್ರದಲ್ಲಿಯೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಇವಿ ಸ್ಕೂಟರ್‌ಗಳ ಪ್ರಮುಖ ಸ್ಪರ್ಧಿ ಮಾದರಿಗಳು ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದರಿಂದ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯಂತೆ ವಿಸ್ತರಿತ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ನೀಡಲು ಮುಂದಾಗಿದ್ದು, ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯ ಮಾರಾಟವು ಸಹ ಮುಂದುವರಿಯಲಿದೆ.

ಮುಂದಿನ ಒಂದು ವರ್ಷದೊಳಗೆ ಇವಿ ಸ್ಕೂಟರ್ ಮಾರಾಟ 1 ಲಕ್ಷಕ್ಕೆ ತಲುಪಲಿದೆ- ಎಥರ್ ಸಿಇಒ

ಹೀಗಾಗಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಮೈಲೇಜ್ ಮಾದರಿ ಇಲ್ಲದೇ ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Ather electric scooters sales will touch 1 lakh by 2023 says ceo tarun mehta
Story first published: Friday, July 15, 2022, 22:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X