ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಹೊಸ 450ಎಕ್ಸ್ ಮತ್ತು 450 ಪ್ಲಸ್ ಮಾದರಿಗಳೊಂದಿಗೆ ಮುಂಚೂಣಿ ಸಾಧಿಸುತ್ತಿದ್ದು, ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಮತ್ತೊಂದು ಹೊಸ ಶೋರೂಂ ಆರಂಭಿಸಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ವಿನೂತನ ತಾಂತ್ರಿಕ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಶೋರೂಂಗಳ ಮೂಲಕ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ತನ್ನ ಮೊದಲ ಇವಿ ಸ್ಕೂಟರ್ ಮಾರಾಟ ಮಳಿಗೆ ಆರಂಭಿಸಿತು. ರಾಜಧಾನಿ ಕೋಲ್ಕತ್ತಾದಲ್ಲಿ ಹೊಸ ಮಾರಾಟ ಮಳಿಗೆ ಆರಂಭಿಸಿದ ಎಥರ್ ಕಂಪನಿಯು ಹೆಚ್ಚಿನ ಮಟ್ಟದ ಬೇಡಿಕೆಯ ನೀರಿಕ್ಷೆಯಲ್ಲಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಉತ್ಪಾದನೆ ಮತ್ತು ಬೇಡಿಕೆ ಆಧರಿಸಿ ಎಥರ್ ಕಂಪನಿಯು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಈಗಾಗಲೇ ಹೊಸ ಮಾರಾಟ ಮಳಿಗೆಗಳನ್ನು ಹೊಂದಿದ್ದು, ಇದೀಗ ಕಂಪನಿಯು ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

2022ರ ಇವಿ ಸ್ಕೂಟರ್ ಮಾದರಿಗಳೊಂದಿಗೆ ಎಥರ್ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ತಿಂಗಳು ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಇವಿ ಸ್ಕೂಟರ್ ಮಾರಾಟದಲ್ಲಿ ಮೊದಲ ಬಾರಿಗೆ ಎಥರ್ ಕಂಪನಿಯು ತಿಂಗಳ ಮಾರಾಟ ಪಟ್ಟಿಯಲ್ಲಿ 6 ಸಾವಿರ ಯುನಿಟ್ ಮಾರಾಟ ದಾಖಲೆ ಕಂಡಿದ್ದು, ಅತ್ಯಧಿಕ ಮೈಲೇಜ್ ಹೊಂದಿರುವ ಹೊಸ 450ಎಕ್ಸ್ ಮತ್ತು 450 ಪ್ಲಸ್ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡಿವೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಅಗಸ್ಟ್ ತಿಂಗಳ ಇವಿ ಸ್ಕೂಟರ್ ಮಾರಾಟದಲ್ಲಿ ಟಾಪ್ 3 ಪಟ್ಟಿಯಲ್ಲಿರುವ ಎಥರ್ ಕಂಪನಿಯು ಮೊದಲ ಬಾರಿಗೆ 6,410 ಯುನಿಟ್ ಮಾರಾಟ ಮಾಡಿದ್ದು, ಇದು ಕಳೆದ ವರ್ಷದ ಅಗಸ್ಟ್ ಅವಧಿಯಲ್ಲಿನ ಇವಿ ಸ್ಕೂಟರ್ ಮಾರಾಟ ಪ್ರಮಾಣಕ್ಕಿಂತ ಶೇ. 297 ರಷ್ಟು ಹೆಚ್ಚಳವಾಗಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಇವಿ ಸ್ಕೂಟರ್ ಆರಂಭ ನಂತರ ಎಥರ್ ಕಂಪನಿಯು ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡಿದ್ದು, ಹೊಸ ಮಾರಾಟ ದಾಖಲೆಯೊಂದಿಗೆ ಕಂಪನಿಯು ಹೊಸೂರಿನಲ್ಲಿರುವ ಹೊಸ ಇವಿ ಸ್ಕೂಟರ್ ಉತ್ಪಾದನಾ ಘಟಕದಲ್ಲಿ 50 ಸಾವಿರ ಯುನಿಟ್ ಉತ್ಪಾದನೆಯ ಗುರಿಯನ್ನು ತಲುಪಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

2022ರ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್ ಮಾದರಿಗಳನ್ನು ಮೂರನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಉನ್ನತೀಕರಿಸಿ ಬಿಡುಗಡೆ ಮಾಡಲಾಗಿದ್ದು,ನವೀಕೃತ ಬ್ಯಾಟರಿ ಪ್ಯಾಕ್ ಜೊತೆ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಜೊತೆಗೆ ಹೊಸ ಮಾದರಿಗಳಲ್ಲಿ ಹಲವು ಸುಧಾರಿತ ತಾಂತ್ರಿಕ ಸೌಲಭ್ಯಗಳನ್ನು ಇದೀಗ ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಹೊಸ ಫೀಚರ್ಸ್‌ಗಳ ಹೊರತಾಗಿಯೂ ಸುಧಾರಿತ ತಂತ್ರಜ್ಞಾನ ಪ್ರೇರಿತ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಈ ಹಿಂದಿನ ಮಾದರಿಯಲ್ಲಿನ ಹಲವು ಫೀಚರ್ಸ್‌ಗಳನ್ನು ಮುಂದುವರಿಸಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಆದರೆ ವಿಸ್ತರಿತ ಬ್ಯಾಟರಿ ಪ್ಯಾಕ್ ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದ್ದು, ನವೀಕೃತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌‌ಗಳಲ್ಲಿ ಎಥರ್ ಕಂಪನಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ 3.7kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

6.2kW ಮೋಟಾರ್ ಮೂಲಕ ಹೊಸ ಬ್ಯಾಟರಿ ಪ್ಯಾಕ್ ಮೂಲಕ ಇದೀಗ ಹೊಸ ಸ್ಕೂಟರ್‌ಗಳು ARAI ಸಂಸ್ಥೆಯು ಪ್ರಮಾಣೀಕರಿಸಿದಂತೆ ಪ್ರತಿ ಚಾರ್ಜ್‌ಗೆ ಗರಿಷ್ಠ 146 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ನಮ್ಮ ಬೆಂಗಳೂರಿನಲ್ಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯಾದ 450 ಪ್ಲಸ್ ಮಾದರಿಯು ರೂ. 1,34,147 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯಾದ 450ಎಕ್ಸ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 1,55,657 ಬೆಲೆ ಹೊಂದಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಸುಧಾರಿತ ಬ್ಯಾಟರಿ ಜೋಡಣೆ ನಂತರ ಹೊಸ ಸ್ಕೂಟರ್‌ಗಳ ತೂಕದಲ್ಲಿ ಈ ಮೊದಲಿಗಿಂತಲೂ ಇದೀಗ 4 ಕೆ.ಜಿಯಷ್ಟು ಹೆಚ್ಚಳವಾಗಿದ್ದು, ಪ್ರಮುಖ ನಾಲ್ಕು ರೈಡ್ ಮೋಡ್‌ಗಳೊಂದಿಗೆ ಇಕೋ ಮೋಡ್‌ನಲ್ಲಿ ಕನಿಷ್ಠ 105 ಕಿ.ಮೀ ರಿಯಲ್ ವರ್ಲ್ಡ್ ಮೈಲೇಜ್ ಪಡೆದುಕೊಳ್ಳಬಹುದಾಗಿ ಕಂಪನಿಯು ಭರವಸೆ ನೀಡಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಎಥರ್ ಕಂಪನಿಯು ಹೊಸ ಸ್ಕೂಟರ್‌ಗಳಲ್ಲಿ ಈ ಬಾರಿ ಎಂಆರ್‌ಎಫ್ ಜೊತೆಗೆ ನಿರ್ಮಾಣ ಮಾಡಲಾದ ಹೊಸ ತಂತ್ರಜ್ಞಾನ ಪ್ರೇರಿತ ಟೈರ್ ಜೋಡಣೆ ಮಾಡಿದ್ದು, ಹೊಸ ಎಂಆರ್‌ಎಫ್ ಟೈರ್‌ನಿಂದ ಹೊಸ ಸ್ಕೂಟರ್‌ಗಳ ಶೇ.22ರಷ್ಟು ಆಕ್ಸಿಲೇಷನ್, ಕಾರ್ನರ್ ರೈಡ್ ಮತ್ತು ಬ್ರೇಕಿಂಗ್ ಫರ್ಪಾಮೆನ್ಸ್ ಸಾಕಷ್ಟು ಸುಧಾರಣೆಗೊಂಡಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಜೊತೆಗೆ ಹೊಸ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಏರ್ ಪ್ರೆಷರ್ ಮಾಹಿತಿಯನ್ನು ತಿಳಿಯಲು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ(ಟಿಪಿಎಂಎಸ್) ನೊಂದಿಗೆ ಕ್ಯಾಸ್ಟ್ ಅಲ್ಯೂನಿಯಂನಿಂದ ನಿರ್ಮಿಸಲಾದ ವಿಸ್ತರಿತ ಸೈಡ್ ಸ್ಟೆಪ್ ಮತ್ತು ಹೊಸ ವಿನ್ಯಾಸದ ರಿಯರ್ ವ್ಯೂ ಮಿರರ್ ಜೋಡಣೆ ಮಾಡಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ಹೊಸ ಇವಿ ಸ್ಕೂಟರ್ ಮಾದರಿಗಳಲ್ಲಿನ ಕನೆಕ್ಟೆಡ್ ಸೌಲಭ್ಯಗಳನ್ನು ಮತ್ತಷ್ಟು ಸುಧಾರಣೆಗೊಳಿಸಲು ಎಥರ್ ಕಂಪನಿಯು ಹೆಚ್ಚುವರಿ ಸ್ಟೋರೆಜ್ ನೀಡಲು 2 ಜಿಬಿ ರ‍್ಯಾಮ್ ಜೋಡಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯು ಹೊಸ ಮಾದರಿಗಳಲ್ಲಿನ ಹಲವಾರು ಹೊಸ ಫೀಚರ್ಸ್‌ಗಳನ್ನು ಓವರ್-ದ-ಏರ್ ಅಪ್‌ಡೇಟ್ ಮೂಲಕ ಒಂದೊಂದಾಗಿ ಅನ್‌ಲಾಕ್ ಮಾಡಲಿದೆ.

ಮತ್ತೊಂದು ಹೊಸ ಇವಿ ಸ್ಕೂಟರ್ ಮಾರಾಟ ಮಳಿಗೆಗೆ ಚಾಲನೆ ನೀಡಿದ ಎಥರ್ ಎನರ್ಜಿ

ವಿಸ್ತರಿತ ಮೈಲೇಜ್ ಪ್ರೇರಿತ 450ಎಕ್ಸ್ ಮತ್ತು 450 ಪ್ಲಸ್ ಇವಿ ಸ್ಕೂಟರ್‌ ಮಾದರಿಗಳು ಪ್ರಸ್ತುತ ಮಾದರಿಗಿಂತ ರೂ. 4 ಸಾವಿರದಿಂದ ರೂ. 5,500 ರಷ್ಟು ದುಬಾರಿಯಾಗಲಿದ್ದು, ಬೆಲೆ ದುಬಾರಿಯಾದರೂ ಹೊಸ ಮಾದರಿಗಳಲ್ಲಿ ಹಲವಾರು ಹೊಸ ಫೀಚರ್ಸ್ ನೀಡುತ್ತಿರುವುದು ಖರೀದಿ ಮೌಲ್ಯ ಹೆಚ್ಚಿಸಿದೆ.

Most Read Articles

Kannada
English summary
Ather energy opens first dealership in kolkata
Story first published: Tuesday, September 27, 2022, 21:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X