ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ತನ್ನದೆ ಆದ ಜನಪ್ರಿಯ ಗಳಿಸಿರುವ ಎಥರ್ ಎನರ್ಜಿ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಗಳೊಂದಿಗೆ ಉತ್ತಮ ಮಾರುಕಟ್ಟೆ ಹೊಂದಿದ್ದು, ಕಂಪನಿಯು ಇದೀಗ ತನ್ನ ಪ್ರೀಮಿಯಂ ಇವಿ ಸ್ಕೂಟರ್ ಮಾದರಿಯಲ್ಲಿ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ ಮಾದರಿಯ ಬಿಡುಗಡೆಗಾಗಿ ಸಿದ್ದವಾಗುತ್ತಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಥರ್ ಕಂಪನಿಗೆ ದಿನದಿಂದ ದಿನಕ್ಕೆ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದ್ದು, ಕಂಪನಿಯು ಹೊಸ ಮಾರಾಟ ಮಳಿಗೆ ವಿಸ್ತರಣೆಯೊಂದಿಗೆ ಮುಂಬರುವ ಕೆಲ ತಿಂಗಳಿನಲ್ಲಿ ಮತ್ತೆರಡು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಲ್ಲಿ ಒಂದು ಹೊಸ ಮಾದರಿಯು ಮಾರುಕಟ್ಟೆಗೆ ಲಗ್ಗೆಯಿಲಿದ್ದರೆ ಮತ್ತೊಂದು ವಿಸ್ತರಿತ ಮೈಲೇಜ್ ರೇಂಜ್ ಆಯ್ಕೆ ಪಡೆದುಕೊಳ್ಳಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಸಬ್ಸಡಿ ಯೋಜನೆಯೊಂದಿಗೆ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಮಾರಾಟಗೊಳಿಸುತ್ತಿದ್ದು, ಇದರಲ್ಲಿ ಹೈ ಎಂಡ್ ಮಾದರಿಯಾಗಿರುವ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಹೆಚ್ಚಿನ ಮೈಲೇಜ್ ರೇಂಜ್ ಹೊಸ ಬ್ಯಾಟರಿ ಪ್ಯಾಕ್ ನೀಡುವ ಸುಳಿವು ನೀಡಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ 2.9kWh ಬ್ಯಾಟರಿ ಪ್ಯಾಕ್‌ ಮತ್ತು 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಪ್ರತಿ ಚಾರ್ಜ್‌ಗೆ 146 ಕಿ.ಮೀ ಮೈಲೇಜ್ ಹೊಂದಿರಲಿದೆ ಎನ್ನಲಾಗಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ವರದಿಗಳ ಪ್ರಕಾರ, ಎಥರ್ ಕಂಪನಿಯು ವಿಸ್ತರಿತ ಮೈಲೇಜ್ ಹೊಂದಿರುವ ಹೊಸ 450ಎಕ್ಸ್ ಇ-ಸ್ಕೂಟರ್ ಉತ್ಪಾದನೆ ಆರಂಭಕ್ಕೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ​​ಆಫ್ ಇಂಡಿಯಾದಿಂದಲೂ(ARAI) ಅನುಮತಿಯನ್ನು ಸಹ ತೆಗೆದುಕೊಂಡಿದೆ ಎನ್ನಲಾಗಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೊಸ ಎಥರ್ 450ಎಕ್ಸ್ ಮಾದರಿಯಲ್ಲಿ ಕಂಪನಿಯು ಸುಮಾರು ನಾಲ್ಕು ವಿಭಿನ್ನವಾದ ರೈಡಿಂಗ್ ಮೋಡ್‌ಗಳನ್ನು ನೀಡಲಾಗುವುದು ಎಂದು ಹೇಳಲಾಗಿದ್ದು, ಕಂಪನಿಯು ಹೊಸ ಮಾದರಿಯ ಕುರಿತಾಗಿ ಶೀಘ್ರದಲ್ಲಿಯೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಎಥರ್ ಇವಿ ಸ್ಕೂಟರ್‌ಗಳ ಪ್ರಮುಖ ಸ್ಪರ್ಧಿ ಮಾದರಿಗಳು ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದರಿಂದ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯಂತೆ ವಿಸ್ತರಿತ ಮೈಲೇಜ್ ಪ್ರೇರಿತ ಬ್ಯಾಟರಿ ಆಯ್ಕೆ ನೀಡಲು ಮುಂದಾಗಿದ್ದು, ಹೊಸ ಮಾದರಿಯೊಂದಿಗೆ ಹಳೆಯ ಮಾದರಿಯ ಮಾರಾಟವು ಸಹ ಮುಂದುವರಿಯಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೀಗಾಗಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಕಡಿಮೆ ಮೈಲೇಜ್ ಮಾದರಿ ಇಲ್ಲದೇ ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯನ್ನು ಆಯ್ಕೆ ಮಾಡಬಹುದಾಗಿದ್ದು, ವಿಸ್ತರಿತ ಮೈಲೇಜ್ ಪ್ರೇರಿತ ಮಾದರಿಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ರೂ. 1,50,657ಕ್ಕೆ ಮಾರಾಟಗೊಳಿಸುತ್ತಿರುವ 450 ಎಕ್ಸ್ ಹಳೆಯ ಮಾದರಿಯು ಹೊಸ ಮಾದರಿಯಲ್ಲಿ ಪ್ರಸ್ತುತ ಮಾದರಿಗಿಂತ ರೂ. 10 ಸಾವಿರದಿಂದ ರೂ. 15 ಸಾವಿರದಿಂದ ದುಬಾರಿಯಾಗಲಿದ್ದು, ಮುಂಬರುವ ಜುಲೈ ಮಧ್ಯಂತರದಲ್ಲಿ ಬಿಡುಗಡೆ ಮಾಡಬಹುದಾಗಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಎಥರ್ ಕಂಪನಿಯು ಇತರೆ ಇವಿ ಮಾದರಿಗಿಂತಲೂ ತುಸು ದುಬಾರಿಯಾಗಿದ್ದರೂ ಕೂಡಾ ಅತ್ಯುತ್ತಮ ಫೀಚರ್ಸ್ ಮತ್ತು ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳವಲ್ಲಿ ಯಶಸ್ವಿಯಾಗಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೀಗಾಗಿ ಬಿಡುಗಡೆಯಾಗಲಿರುವ ಹೊಸ ಮಾದರಿಯು ಓಲಾ ಎಸ್1 ಪ್ರೊ ಮಾದರಿಗೆ ಉತ್ತಮ ಪೈಪೋಟಿಯಾಗಿದ್ದು, ಹೊಸ ಮಾದರಿಯು ವಿಸ್ತರಿತ ಬ್ಯಾಟರಿ ಪ್ಯಾಕ್ ಇನ್ನು ಕೆಲವು ಹೊಸ ಫೀಚರ್ಸ್ ಹೊಂದಿರಲಿದೆ ಎನ್ನಲಾಗಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೆಚ್ಚಿನ ಬೇಡಿಕೆಯೊಂದಿಗೆ ಎಥರ್ ಕಂಪನಿಯು ಕಳೆದ ಕೆಲ ತಿಂಗಳಿನಲ್ಲಿ ವಾರ್ಷಿಕವಾಗಿ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೊಸ ಯೋಜನೆಗಳಿಗಾಗಿ ಪೂರಕವಾಗಿ ಎಥರ್ ಎನರ್ಜಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಯು ಶೀಘ್ರದಲ್ಲಿಯೇ ಮೂರನೇ ಉತ್ಪಾದನಾ ಘಟಕ ನಿರ್ಮಾಣ ಯೋಜನೆಯನ್ನು ಆರಂಭಿಸುವ ಸಿದ್ದತೆಯಲ್ಲಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಹೊಸ ಉತ್ಪನ್ನಗಳ ಬಿಡುಗಡೆಗೂ ಮುನ್ನ ಕಂಪನಿಯು ಉತ್ಪಾದನಾ ಪ್ರಮಾಣವನ್ನು ಹೆಚ್ಚಳ ಮಾಡಲು ಉತ್ಪಾದನಾ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದು, ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಈ ವರ್ಷಾಂತ್ಯಕ್ಕೆ ಕಂಪನಿಯು ಹೊಸೂರಿನಲ್ಲಿಯೇ ಎರಡನೇ ಘಟಕವನ್ನು ಸಹ ತೆರೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಶೀಘ್ರದಲ್ಲಿಯೇ ವಿಸ್ತರಿತ ಮೈಲೇಜ್ ರೇಂಜ್ ಪ್ರೇರಿತ 450ಎಕ್ಸ್ ಹೊಸ ವರ್ಷನ್ ಬಿಡುಗಡೆಗೆ ಸಿದ್ದವಾದ ಎಥರ್

ಇದರೊಂದಿಗೆ ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಈ ಎರಡು ಘಟಕದಲ್ಲಿ ಮಾತ್ರವಲ್ಲದೇ ಕಂಪನಿಯು ಇನ್ನು ಹೆಚ್ಚಿನ ಮಟ್ಟದ ಉತ್ಪಾದನಾ ಸಾಮರ್ಥ್ಯಕ್ಕಾಗಿ ಮೂರನೇ ಘಟಕವನ್ನು ಸಹ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ.

Most Read Articles

Kannada
English summary
Ather new 450x comes with extended battery pack soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X