ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಜಾಜ್ ಆಟೋ ಕಂಪನಿಯು ಹೊಸ ಚೇತಕ್ ಎಲೆಕ್ಟ್ರಿಕ್ ಮಾದರಿಯ ಮೂಲಕ ಇವಿ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಕಂಪನಿಯು ಇದೀಗ ಹೊಸ ಇವಿ ಸ್ಕೂಟರ್ ಮಾದರಿಯ ಬೆಲೆಯಲ್ಲಿ ಹೆಚ್ಚಳ ಮಾಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಚೇತಕ್ ಹೊಸ ಇವಿ ಸ್ಕೂಟರ್ ಮಾದರಿಯು ಪೆಟ್ರೋಲ್ ಬೆಲೆ ಹೆಚ್ಚಳದ ನಂತರ ಸಾಕಷ್ಟು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಂಪನಿಯು ಹೊಸ ಇವಿ ಸ್ಕೂಟರ್ ಬೆಲೆಯಲ್ಲಿ ಸಾಕಷ್ಟು ಹೆಚ್ಚಳ ಮಾಡಿದೆ. ಹೊಸ ಇವಿ ಸ್ಕೂಟರ್ ಆರಂಭದಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಹಲವಾರು ಬಾರಿ ಬೆಲೆ ಏರಿಕೆ ಪಡೆದುಕೊಂಡಿದ್ದು, ಇದೀಗ ಮತ್ತೊಮ್ಮೆ ದುಬಾರಿ ಬೆಲೆ ಪಡೆದುಕೊಂಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಹೊಸ ದರ ಪಟ್ಟಿಯಲ್ಲಿ ಚೇತಕ್ ಇವಿ ಬೆಲೆಯನ್ನು ಕಂಪನಿಯು ಶೇಕಡಾ 9.01 ಹೆಚ್ಚಳ ಮಾಡಿದ್ದು, ಹೊಸ ಮಾದರಿಯು ಇದೀಗ ರೂ. 1,41,440 ದಿಂದ ರೂ. 1,54,189ಕ್ಕೆ ಏರಿಕೆಯಾಗಿದೆ. ಈ ಮೂಲಕ ಹೊಸ ಮಾದರಿಯಲ್ಲಿ ಇದೀಗ ರೂ. 12,749 ಬೆಲೆ ಹೆಚ್ಚಳವಾಗಿದ್ದು, ವೆರಿಯೆಂಟ್‌ನಲ್ಲೂ ಹೊಸ ಮಾದರಿಯು ಕೆಲವು ಬದಲಾವಣೆಗಳನ್ನು ಪಡೆದುಕೊಂಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಈ ಮೊದಲ ಚೇತಕ್ ಇವಿ ಮಾದರಿಯನ್ನು ಅರ್ಬನ್ ಮತ್ತು ಪ್ರೀಮಿಯಂ ವೆರಿಯೆಂಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದ ಕಂಪನಿಯು ಇದೀಗ ಪ್ರೀಮಿಯಂ ವೆರಿಯೆಂಟ್ ಮಾತ್ರ ಮಾರಾಟ ಮಾಡುತ್ತಿದ್ದು, ಬೆಲೆ ಏರಿಕೆಯು ಚೇತಕ್ ಇವಿ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಹೊರೆಯಾಗಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಆದರೆ ಹೊಸ ಚೇತಕ್ ಇವಿ ಮಾದರಿಯು ತನ್ನದೇ ಆದ ಕೆಲವು ವೈಶಿಷ್ಟ್ಯತೆಗಳೊಂದಿಗೆ ಬಜೆಟ್ ಬೆಲೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಭಿನ್ನವಾಗಿ ಗುರುತಿಸಿಕೊಂಡಿದ್ದು, ದುಬಾರಿ ಬೆಲೆ ನಡುವೆಯೂ ಗ್ರಾಹಕರ ಬೇಡಿಕೆಯಲ್ಲಿ ಮುಂಚೂಣಿ ಸಾಧಿಸುತ್ತಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಚೇತಕ್ ಇವಿ ಮಾದರಿಯು ಇದುವರೆಗೆ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 10 ಸಾವಿರಕ್ಕೂ ಯುನಿಟ್ ಮಾರಾಟಗೊಂಡಿದ್ದು, ಕಂಪನಿಯು ಶೀಘ್ರದಲ್ಲೇ ದೇಶಾದ್ಯಂತ ಹೊಸ ಸ್ಕೂಟರ್ ಲಭ್ಯವಾಗುವಂತೆ ಪ್ರಮುಖ 75 ನಗರಗಳಲ್ಲಿ ಮಾರಾಟ ಪ್ರಾರಂಭಿಸುವ ಸಿದ್ದತೆಯಲ್ಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಚೇತಕ್ ಇವಿ ಸ್ಕೂಟರ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಕಂಪನಿಯು ಹೊಸ ನಗರಗಳಿಗೆ ವೇಗವಾಗಿ ವಿಸ್ತರಿಸಲು ಯೋಜಿಸಿದ್ದು, ಹೊಸ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕಂಪನಿಯು ಬೆಂಗಳೂರು ಮತ್ತು ಪುಣೆಯಲ್ಲಿ ಚೇತಕ್ ಬುಕ್ಕಿಂಗ್ ಅನ್ನು ಪ್ರಾರಂಭಿಸಿತ್ತು. ತದನಂತರ ಚೇತಕ್ ಇವಿ ಮಾರಾಟವನ್ನು ಪ್ರಮುಖ ನಗರಗಳಿಗೆ ವಿಸ್ತರಿಸಿದ್ದು, 2022-23ರ ಹಣಕಾಸು ವರ್ಷದ ಅಂತ್ಯಕ್ಕೆ ಕಂಪನಿಯು 75 ಪ್ರಮುಖ ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದುವ ಭರವಸೆ ನೀಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಜಾಜ್ ಕಂಪನಿಯು ಸದ್ಯ ದೇಶದ ಪ್ರಮುಖ 20 ನಗರಗಳಲ್ಲಿ ಚೇತಕ್ ಇವಿ ಮಾರಾಟ ಹೊಂದಿದ್ದು, ಹೊಸ ಉತ್ಪಾದನಾ ಘಟಕ ಆರಂಭದೊಂದಿಗೆ ಕಂಪನಿಯು ಮಾರಾಟ ಸೌಲಭ್ಯವನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಮಾರಾಟ ವಿಸ್ತರಣೆ ಜೊತೆಗೆ ಕಂಪನಿಯು ಮತ್ತಷ್ಟು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮಾರ್ಥ್ಯ ಹೆಚ್ಚಿಸಲು ಪ್ರತ್ಯೇಕ ಉತ್ಪಾದನಾ ಘಟಕವನ್ನು ಸಹ ಆರಂಭಿಸಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಪುಣೆ ಹೊರವಲಯದಲ್ಲಿರುವ ಅಕುರ್ಡಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಇವಿ ಸ್ಕೂಟರ್ ಉತ್ಪಾದನಾ ಘಟಕ ಮತ್ತು ಸಂಶೋಧನಾ ವಿಭಾಗವನ್ನು ತೆರೆದಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಅಧಿಕೃತವಾಗಿ ಉತ್ಪಾದನಾ ಪ್ರಕ್ರಿಯೆಗೂ ಚಾಲನೆ ನೀಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಇವಿ ವಾಹನ ಉತ್ಪಾದನೆಗಾಗಿಯೇ ಕಂಪನಿಯು ಚೇತಕ್ ಟೆಕ್ನಾಲಜಿ ಲಿಮಿಟೆಡ್ ಹೆಸರಿನಲ್ಲಿ ಹೊಸ ಉದ್ಯಮ ಕಾರ್ಯಾಚರಣೆ ಆರಂಭಿಸಿದ್ದು, ಕಂಪನಿಯ ನಿರ್ಮಾತೃ ದಿವಂಗತ ರಾಹುಲ್ ಬಜಾಜ್ ಅವರ 84ನೇ ಜನ್ಮ ವಾರ್ಷಿಕೋತ್ಸವ ದಿನದಂದೆ ಹೊಸ ಘಟಕದಲ್ಲಿನ ಉತ್ಪಾದನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿತು.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಭವಿಷ್ಯದಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಲಿರುವ ಎಲೆಕ್ಟ್ರಿಕ್ ವಾಹನ ವಿಭಾಗದ ಮೇಲೆ ಕೇಂದ್ರೀಕರಿಸಲು ಕಂಪನಿಯು ಹೊಸ ಉತ್ಪಾದನಾ ಘಟಕವನ್ನು ಬಳಸಿಕೊಳ್ಳಲಿದ್ದು, ಹೊಸ ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 5 ಲಕ್ಷ ಯುನಿಟ್ ದ್ವಿಚಕ್ರ ಉತ್ಪಾದಿಸಬಹುದಾಗಿ ಕಂಪನಿಯು ಹೇಳಿಕೊಂಡಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪ್ರತಿ ತಿಂಗಳು ಗರಿಷ್ಠ 5 ಸಾವಿರ ಯುನಿಟ್ ಉತ್ಪಾದನೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಉತ್ಪಾದನಾ ಪ್ರಯಾಣವನ್ನು ಹೆಚ್ಚಿಸಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಬಜಾಜ್ ಕಂಪನಿಯು ಹೊಸ ಉದ್ಯಮ ಮೇಲೆ ಹೆಚ್ಚಿನ ನೀರಿಕ್ಷೆಯೊಂದಿಗೆ ಆರಂಭಿಕವಾಗಿ ರೂ. 700 ಕೋಟಿ ಹೂಡಿಕೆ ಮಾಡಿದ್ದು, ಸದ್ಯ ಚೇತಕ್ ಇವಿ ಮಾದರಿಯನ್ನು ಮಾತ್ರ ಮಾರಾಟ ಮಾಡುತ್ತಿರುವ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ಮಾದರಿಗಳನ್ನು ರಸ್ತೆಗಿಳಿಸಲಿದೆ.

ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಹೆಚ್ಚಿಸಿದ ಬಜಾಜ್ ಆಟೋ

ಹೊಸ ಇವಿ ದ್ವಿಚಕ್ರ ವಾಹನಗಳೊಂದಿಗೆ ಕಂಪನಿಯು ಸಹಭಾಗಿತ್ವದ ಕಂಪನಿಗಳಾದ ಕೆಟಿಎಂ ಮತ್ತು ಹಸ್ಕವರ್ನಾ ಬ್ರಾಂಡ್ ಅಡಿಯಲ್ಲೂ ಪ್ರಮುಖ ಇವಿ ಮಾದರಿಗಳನ್ನು ಬಿಡುಗಡೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಇವಿ ಮಾದರಿಗಳನ್ನು ಬಿಡುಗಡೆ ಮಾಡಲಿದ್ದಾರೆ.

Most Read Articles

Kannada
English summary
Bajaj chetak electric scooter price hiked details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X