Just In
- 14 min ago
ದೇಶದಲ್ಲಿಯೇ ಮೊದಲ ಬಾರಿಗೆ ಇವಿ ಸ್ಕೂಟರ್ ಮೂಲಕ ಕೆ2ಕೆ ರೈಡ್ ಸಾಧಿಸಿದ ಮಂಗಳೂರಿನ ಬೈಕ್ ರೈಡರ್
- 1 hr ago
ಯಾವುದೇ ಏರ್ಪೋರ್ಟ್ಗೂ ಕಮ್ಮಿಯಿಲ್ಲ ಬೆಂಗಳೂರಿನ ಈ ರೈಲು ನಿಲ್ದಾಣ: ಹೇಗಿದೆ ಒಮ್ಮೆ ನೋಡಿ
- 1 hr ago
ಹೊಸ ಫೀಚರ್ಸ್ಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- 2 hrs ago
ಮನಕಲುಕುವ ಘಟನೆ: ಮೃತ ತಾಯಿಯನ್ನು 80 ಕಿ.ಮೀ ಬೈಕ್ನಲ್ಲೇ ಸಾಗಿಸಿದ ಮಗ
Don't Miss!
- Sports
ಏಷ್ಯಾ ಕಪ್ 2022: ಭಾರತದ ಸಂಭಾವ್ಯ ಸ್ಕ್ವಾಡ್ ಪ್ರಕಟಿಸಿದ ಆಕಾಶ್ ಚೋಪ್ರಾ
- News
ಕರ್ನಾಟಕದ ಪ್ರಮುಖ ಡ್ಯಾಂಗಳ ಒಳ, ಹೊರ ಹರಿವು ಅಧಿಕ
- Finance
ಕೇರಳ ಲಾಟರಿ: 'ವಿನ್ ವಿನ್ W-680' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Technology
ಸೋನಿ ಸಂಸ್ಥೆಯಿಂದ ಹೊಸ ಸ್ಮಾರ್ಟ್ಟಿವಿ ಲಾಂಚ್! ಫೀಚರ್ಸ್ ಹೇಗಿದೆ ಗೊತ್ತಾ?
- Movies
ವಿಡಿಯೋ: ಜಗ್ಗೇಶ್ ಮನೆ ನಾಯಿಗೂ ಹಾಡು ಬರುತ್ತೆ!
- Lifestyle
ನಿಶ್ಚಿತಾರ್ಥ ಆದ ಮೇಲೆ ಈ ರೀತಿ ಅನಿಸಿದರೆ ಮದುವೆಯಾಗದಿರುವುದೇ ಬೆಸ್ಟ್
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಜಾಜ್ ಪಲ್ಸರ್ ಎನ್250 ಮತ್ತು ಎಫ್250 ಮಾದರಿಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ವರ್ಷನ್ ಬಿಡುಗಡೆ
ಪಲ್ಸರ್ ಸರಣಿ ಮಾರಾಟದಲ್ಲಿ ಕಳೆದ ಎರಡು ದಶಕಗಳ ಯಶಸ್ವಿ ಹೆಜ್ಜೆಯಿರಿಸಿರುವ ಬಜಾಜ್ ಕಂಪನಿಯು ಪಲ್ಸರ್ ಸರಣಿಯಲ್ಲಿಯೇ ಉನ್ನತ ಮಟ್ಟದ ಪಲ್ಸರ್ ಎಫ್250 ಮತ್ತು ಎನ್250 ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಬೈಕ್ ಮಾದರಿಗಳು ಉತ್ತಮ ಕಾರ್ಯಕ್ಷಮತೆ, ಎಂಜಿನ್ ದಕ್ಷತೆ, ತಂತ್ರಜ್ಞಾನ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಬಜಾಜ್ ಕಂಪನಿಯು ಈ ಮೊದಲು ಪಲ್ಸರ್ ಎಫ್250 ಮತ್ತು ಎನ್250 ಮಾದರಿಗಳಲ್ಲಿ ಸಿಂಗಲ್ ಚಾನೆಲ್ ಎಬಿಎಸ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಕಂಪನಿಯು ಎರಡು ಮಾದರಿಗಳಲ್ಲೂ ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಮಾದರಿಗಳು ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.49 ಲಕ್ಷ ಬೆಲೆ ಹೊಂದಿದೆ.

ಇತ್ತೀಚೆಗೆ ಬಿಡುಗಡೆ ಮಾಡಲಾದ 160 ಸಿಸಿ ಎಂಜಿನ್ ಪ್ರೇರಿತ ಎನ್160 ಮಾದರಿಯಲ್ಲೂ ಡ್ಯುಯಲ್ ಚಾನೆಲ್ ಎಬಿಎಸ್ ಆಯ್ಕೆ ನೀಡಿದ್ದರಿಂದ ಕಂಪನಿಯು ಪಲ್ಸರ್ ಸರಣಿಯ ಅತ್ಯುನ್ನತ ಮಾದರಿಗಳಲ್ಲೂ ಇದೀಗ ಡ್ಯುಯಲ್ ಚಾನೆಲ್ ಎಬಿಎಸ್ ಆಯ್ಕೆ ನೀಡಿದೆ.

ಹೊಸ ಪಲ್ಸರ್ ಎನ್250 ಮತ್ತು ಎಫ್250 ಡ್ಯುಯಲ್ ಚಾನೆಲ್ ಎಬಿಎಸ್ ಮಾದರಿಗಳು ವಿಶೇಷವಾಗಿ ಆಲ್ ಬ್ಲ್ಯಾಕ್ ಬಣ್ಣದ ಆಯ್ಕೆ ಹೊಂದಿದ್ದು, ಡ್ಯುಯಲ್ ಚಾನೆಲ್ ಮಾದರಿಗಳು ಹೊಸ ಸೌಲಭ್ಯವನ್ನು ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಲ್ಲಿನ ತಾಂತ್ರಿಕ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿರಲಿದೆ.

ಇನ್ನು ಹೊಸ ಪಲ್ಸರ್ ಸರಣಿಗಳ ವಿನ್ಯಾಸ ಬಜಾಜ್ ಕಂಪನಿಯ ಇತರೆ ಪಲ್ಸರ್ ಮಾದರಿಗಳಿಂತಲೂ ಉತ್ತಮವಾಗಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೊಸ ಬೈಕ್ ಉತ್ಪನ್ನವನ್ನು ಅತ್ಯುತ್ತಮವಾಗಿ ಸಿದ್ದಗೊಳಿಸುವಲ್ಲಿ ಬಜಾಜ್ ವಿನ್ಯಾಸ ತಂಡವು ಸಾಕಷ್ಟು ಸವಾಲುಗಳನ್ನು ಎದುರಿಸಿದೆ.

ಈ ಬೈಕ್ ಅನ್ನು ಟ್ಯೂಬ್ಲೆಸ್ ಫ್ರೇಮ್ ಚಾಸಿಸ್ನಲ್ಲಿ ನಿರ್ಮಿಸಲಾಗಿದ್ದು, ಕಂಪನಿಯು ಈಗಾಗಲೇ ಇದನ್ನು ಏರೋ ಡೈನಾಮಿಕ್ ಮಾಡಿದೆ. ಇವುಗಳಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲೈಟ್, ಆಕರ್ಷಕ ವಿನ್ಯಾಸವಾದ ಎಲ್ಇಡಿ ಡಿಆರ್ಎಲ್ ಗಳನ್ನು ನೀಡಲಾಗಿದೆ. ಇವುಗಳ ಮುಂಭಾಗದ ಭಾಗಕ್ಕೆ ಆಕ್ರಮಣಕಾರಿ ನೋಟವನ್ನು ನೀಡಲಾಗಿದೆ. ಮುಖ್ಯ ಹೆಡ್ಲೈಟ್ನ ಎರಡೂ ಬದಿಗಳಲ್ಲಿ ಲೈಟ್ ಗಳನ್ನು ನೀಡಲಾಗಿದೆ.

ಹೊಸ ಬೈಕ್ ಫೀಚರ್ಸ್ಗಳ ಬಗೆಗೆ ಹೇಳುವುದಾದರೆ ಟ್ಯಾಕೋಮೀಟರ್ ನೀಡಲ್ ಅನ್ನು ಹಳೆಯ ಮಾದರಿಯಿಂದ ತೆಗೆದುಕೊಳ್ಳಲಾಗಿದೆ. ಅದರಲ್ಲಿ ಡಿಜಿಟಲ್ ಪರದೆಯನ್ನು ಸಹ ಕಾಣಬಹುದು. ಈ ಪರದೆಯು ರೇಂಜ್, ಗೇರ್ ಪೊಸಿಷನ್, ಡಿಸ್ಟೆನ್ಸ್ ಟು ಎಂಪ್ಟಿ ಮಾಹಿತಿಯನ್ನು ಒದಗಿಸುತ್ತದೆ. ಈ ಬೈಕಿನಲ್ಲಿ ಮೊಬೈಲ್ ಚಾರ್ಜಿಂಗ್ ಗಾಗಿ ಯುಎಸ್ಬಿ ಚಾರ್ಜಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

ಹೊಸ ಬೈಕ್ ಮಾದರಿಗಳು 14 ಲೀಟರ್ ಫ್ಯೂಯಲ್ ಟ್ಯಾಂಕ್ ಜೊತೆ 795 ಎಂಎಂ ಎತ್ತರದ ಸೀಟ್ ಹೊಂದಿದ್ದು, ಬಜಾಜ್ ಕಂಪನಿಯು ಈ ಬೈಕ್ನಲ್ಲಿ 250 ಸಿಸಿ ಆಯಿಲ್ ಕೂಲ್ಡ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 24.5 ಬಿಹೆಚ್ಪಿ ಪವರ್ ಹಾಗೂ 21.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಹೊಸ ಬೈಕ್ ಆರಂಭದ 3,000 ಆರ್ಪಿಎಂಗಿಂತಲೂ ಕಡಿಮೆ ಥ್ರೊಟಲ್ನಲ್ಲಿ ಎಂಜಿನ್ ತುಸು ನಿಧಾನವಾಗಿದ್ದರೂ 3,000 ಆರ್ಪಿಎಂ ನಂತರ ಬೈಕ್ ಕಾರ್ಯಕ್ಷತೆಯೇ ಬದಲಾಗುತ್ತದೆ. ಇದು ಎಲ್ಲಾ ಗೇರ್ಗಳಲ್ಲಿ ಸಾಕಷ್ಟು ಟಾರ್ಕ್ ನೀಡಿದರೂ ಮಧ್ಯಶ್ರೇಣಿಯಲ್ಲಿ ಅದು ಪ್ರಬಲವಾಗಿದೆ ಎನ್ನಬಹುದು. ನೀವು 5,000 ರಿಂದ 8,000ಆರ್ಪಿ ನಡುವೆ ಇರಿಸಿದಾಗ ಈ ಎಂಜಿನ್ ಅತ್ಯುತ್ತಮ ರೈಡಿಂಗ್ ಅನುಭವ ನೀಡುತ್ತದೆ.

ಹೊಸ ಬೈಕ್ ಮಾದರಿಯು ಆರಂಭದಲ್ಲಿ ತುಸು ನಿಧಾನ ಎನ್ನಿಸಿದರೂ ನಂತರ ಅತ್ಯುತ್ತಮ ಥ್ರೊಟಲ್ ಹೊಂದಿದ್ದು, ಇದರ ಎಕ್ಸಾಸ್ಟ್ ನೋಟ್ 220ಎಫ್ ಮಾದರಿಗಿಂತ ತುಸು ಸುಧಾರಣೆಗೊಂಡಿದೆ ಎನ್ನಬಹುದು.

ಆದರೆ ಪ್ರತಿ ಗಂಟೆ 100 ಕಿ.ಮೀ ಗಿಂತಲೂ ಹೆಚ್ಚು ವೇಗದಲ್ಲಿ ರೈಡಿಂಗ್ ಬಯಸಿದರೆ 6ನೇ ಗೇರ್ ಅಗತ್ಯ ಎನ್ನಿಸಲಿದ್ದು, ನಿರ್ವಹಣೆಯ ವಿಷಯದಲ್ಲಿ ಪಲ್ಸರ್ ಎಫ್250 ಸೇರಿ ಇತರೆ ಮಾದರಿಗಳು ಪ್ರತಿಸ್ಪರ್ಧಿ ಮಾದರಿಗಳಿಂತ ಉತ್ತಮವಾಗಿವೆ.

ಇನ್ನು ಈ ಬೈಕಿನಲ್ಲಿ ಅಳವಡಿಸಿರುವ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹೊಸ ಮೊನೊಶಾಕ್ ಸಸ್ಪೆಂಷನ್ ಗಳು ಆರಾಮದಾಯಕ ಸವಾರಿಯನ್ನು ಒದಗಿಸುತ್ತವೆ. ಹೊಸ ಬೈಕಿನಲ್ಲಿ ಬೈಕ್ ಅಸಿಸ್ಟ್, ಸ್ಲೀಪರ್ ಕ್ಲಚ್ಗಳನ್ನು ನೀಡಲಾಗಿದೆ. ಇವುಗಳು ವೇಗವಾದ ಗೇರ್ಶಿಫ್ಟ್ಗಳಿಗೆ ನೆರವಾಗುತ್ತವೆ. ಬ್ರೇಕಿಂಗ್ಗಳಿಗಾಗಿ ಈ ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್ ಚಾನೆಲ್ ಎಬಿಎಸ್ ಮತ್ತು ಇದೀಗ ಹೊಸದಾಗಿ ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದೆ. ಈ ಬೈಕ್ 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಬಜಾಜ್ 250 ಬೈಕಿನ ಮುಂಭಾಗದಲ್ಲಿ 100/80 ಪ್ರೊಫೈಲ್ ಟಯರ್ ಹಾಗೂ 17 ಇಂಚಿನ ವ್ಹೀಲ್ ಹೊಂದಿರುವ 130/70 ಟಯರ್ ಗಳನ್ನು ನೀಡಲಾಗಿದೆ. ಕಂಪನಿಯು ಈ ಬೈಕ್ ಅನ್ನು ಟೆಕ್ನೋ ಗ್ರೇ ಹಾಗೂ ರೇಸಿಂಗ್ ರೆಡ್ ಎಂಬ ಎರಡು ಆಕರ್ಷಕ ಬಣ್ಣಗಳಲ್ಲಿ ಮಾರಾಟ ಮಾಡುತ್ತದೆ.

ಎಫ್250 ಮಾದರಿಯಲ್ಲಿನ ಟ್ವಿನ್ ಎಕ್ಸಾಸ್ಟ್ ಘಟಕವು ಮೋಟಾರ್ಸೈಕಲ್ನ ಒಟ್ಟಾರೆ ವಿನ್ಯಾಸಕ್ಕೆ ಹೆಚ್ಚಿನ ಆಕರ್ಷಣೆ ನೀಡಿದ್ದು, ಟ್ವಿನ್-ಪೋರ್ಟ್ ಎಕ್ಸಾಸ್ಟ್ ಅನ್ನು ಸಿಲ್ವರ್-ಬಣ್ಣದ ಕವರ್ ಪಡೆಯುತ್ತದೆ.

ಸೆಮಿ-ಫೇರ್ಡ್ ಮೋಟಾರ್ಸೈಕಲ್ಗಳು ನಿಮ್ಮ ಆಯ್ಕೆಯಾಗಿದ್ದರೆ ಹೊಸ ಪಲ್ಸರ್ ಎಫ್250 ಆವೃತ್ತಿಯು ನಿಮ್ಮ ಆಯ್ಕೆಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದಾಗಿದ್ದು, ಆದರೆ ಆಧುನಿಕ ಬೈಕ್ಗಳಲ್ಲಿ ಅಗತ್ಯವಾಗಿರುವ ಸ್ಮಾರ್ಟ್ಫೋನ್ ಸಂಪರ್ಕಿತ ಬ್ಲೂಟೂಥ್ ಸಂಪರ್ಕವು ಎಫ್250 ಮಾದರಿಯಲ್ಲಿ ನೀಡದಿರುವುದು ಇನ್ನು ಕೂಡಾ ಕೆಲವು ಗ್ರಾಹಕರಿಗೆ ಅಸಮಾಧಾನವಿದೆ.