ಬಜಾಜ್ ಪಲ್ಸರ್ 150 Vs ಪಲ್ಸರ್ P150: ಯಾವುದು ಬೆಸ್ಟ್?

ಬಜಾಜ್ ಪಲ್ಸರ್ ಬೈಕ್‌ಗಳು ದೇಶದ ಯುವಕರ ಹಾಟ್ ಫೆವರೇಟ್ ಆಗಿವೆ. ಪ್ರತಿಯೊಬ್ಬರು ಈ ಬೈಕ್ ಖರೀದಿಸಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಹೊಸ ಬಜಾಜ್ ಪಲ್ಸರ್ P150, ಇತರೆ ಕಂಪನಿಯ ಟಿವಿಎಸ್ Apache RTR 160 2V, ಯಮಹಾ FZ ಮತ್ತು ಹೀರೋ Xtreme 160Rನಂತಹ ಬೈಕ್‌ಗಳಿಗೆ ತೀವ್ರ ಪೈಪೂಟಿಯನ್ನು ನೀಡುತ್ತಿದೆ.

'ಪಲ್ಸರ್ 150' ಭಾರತದಲ್ಲಿ VFM (ಹಣಕ್ಕೆ ತಕ್ಕ ಉತ್ಪನ್ನ) ಬೈಕ್‌ಗಳಲ್ಲಿ ಒಂದಾಗಿದೆ. ಬಜಾಜ್ ಬ್ರ್ಯಾಂಡ್ ಇತ್ತೀಚೆಗೆ ತನ್ನ 150ಸಿಸಿ ವಿಭಾಗದಲ್ಲಿ ಮತ್ತೊಂದು ಬೈಕ್ ಅನ್ನು ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಹೊಸ ಬಜಾಜ್ ಪಲ್ಸರ್ P150 ಬೈಕ್ ಹೆಚ್ಚು ಅಗ್ರೆಸಿವ್ ಡಿಸೈನ್ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಬಜಾಜ್ ಪಲ್ಸರ್ 150, ಪಲ್ಸರ್ P150 ಬೈಕ್‌ಗಳೆರಡು ತನ್ನದೇ ಆದ ಗ್ರಾಹಕರನ್ನು ಹೊಂದಿದ್ದು, ಬೆಲೆ, ಡಿಸೈನ್ ಹಾಗೂ ಎಂಜಿನ್ ಸಾಮರ್ಥ್ಯದಲ್ಲಿ ಯಾವುದು ಉತ್ತಮ ಎಂಬುದರ ಬಗ್ಗೆ ಹೋಲಿಕೆ ಇಲ್ಲಿದೆ.

ಬಜಾಜ್ ಪಲ್ಸರ್ 150 Vs ಪಲ್ಸರ್ P150: ಯಾವುದು ಬೆಸ್ಟ್?

ಡಿಸೈನ್
ಪ್ರತಿಯೊಂದು ಬೈಕ್ ತನ್ನದೇ ಡಿಸೈನ್ ಮೂಲಕ ಸವಾರರನ್ನು ಹೆಚ್ಚಿಗೆ ಆಕರ್ಷಿಸುತ್ತದೆ. ಹೊಸ ಪಲ್ಸರ್ P150 ಬೈಕ್ ವಿನ್ಯಾಸ ಬಗ್ಗೆ ಹೇಳುವುದಾದರೆ ಬೈ-ಫಂಕ್ಷನಲ್ ಎಲ್ಇಡಿ ಪ್ರೊಜೆಕ್ಟರ್‌ಗಳು, ಎಲ್ಇಡಿ DRLಗಳು, ತೀಕ್ಷ್ಣವಾದ ಟ್ಯಾಂಕ್ ಶ್ರೌಡ್‌ಗಳು ಜೊತೆಗೆ ಅಗ್ರೆಸಿವ್ ಸ್ಟೈಲ್ ನಲ್ಲಿ ಮುಂಭಾಗದ ಫಾಸ್ಸಿಯಾವನ್ನು ಹೊಂದಿದೆ. ಮತ್ತೊಂದೆಡೆ ಗ್ರಾಹಕ ಸ್ನೇಹಿಯಾಗಿರುವ ಪಲ್ಸರ್ 150 ಸ್ಟ್ರಾಂಗ್ ಆದ ಸ್ಟೈಲಿಂಗ್ ಹೊಂದಿದ್ದು, ಇದರಿಂದ ಈ ಬೈಕ್ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಎಂಜಿನ್
ಬಜಾಜ್ ಪಲ್ಸರ್ P150 ಎಲ್ಲಾ-ಹೊಸ 149.68ಸಿಸಿ ಎಂಜಿನ್‌ ಹೊಂದಿದ್ದು, ಇದು 14.5bhp ಗರಿಷ್ಠ ಪವರ್ ಹಾಗೂ 13.5 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್‌ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಪಲ್ಸರ್ 150, 149.50ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ಹೊಂದಿದ್ದು, 14 bhp ಗರಿಷ್ಠ ಪವರ್ ಹಾಗೂ 13.25Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.

ಬಜಾಜ್ ಪಲ್ಸರ್ 150 Vs ಪಲ್ಸರ್ P150: ಯಾವುದು ಬೆಸ್ಟ್?

ಮೆಕ್ಯಾನಿಕಲ್ ಹಾರ್ಡ್‌ವೇರ್ ಮತ್ತು ವೈಶಿಷ್ಟ್ಯಗಳು

ಬಜಾಜ್ ಪಲ್ಸರ್ 150, ಪಲ್ಸರ್ P150 ವೈಶಿಷ್ಟ್ಯಗಳ ಬಗ್ಗೆ ಹೇಳುವುದರೇ ಈ ಎರಡು ಬೈಕ್‌ಗಳನ್ನು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್‌ನೊಂದಿಗೆ ನೀಡಲಾಗಿದ್ದರೂ, ಹೊಸ ಪಲ್ಸರ್ P150, ಪಲ್ಸರ್ 150ಯಲ್ಲಿನ ಟ್ವಿನ್ ರಿಯರ್ ಶಾಕ್ ಸೆಟಪ್‌ನಂತೆ ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ. ಈ ಎರಡು ಬೈಕ್‌ಗಳಲ್ಲಿ ಡ್ಯುಯಲ್-ಡಿಸ್ಕ್ ಬ್ರೇಕಿಂಗ್ ಸೆಟಪ್ ಅನ್ನು ಸಹ ನೀಡಲಾಗಿದ್ದು, ಇದು ABSನಂತಹ ವೈಶಿಷ್ಟ್ಯಗಳೊಂದಿಗೆ ಖರೀದಿಗೆ ಸಿಗಲಿದೆ.

ಇಷ್ಟೇ ಅಲ್ಲದೆ, ಹೊಸ ಬಜಾಜ್ ಪಲ್ಸರ್ P150 ಬೈಕಿನ ಮುಂಭಾದಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಇನ್ಫಿನಿಟಿ ಸ್ಕ್ರೀನ್‌ನೊಂದಿಗೆ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದು ಸವಾರರನ್ನು ಆಕರ್ಷಿಸುತ್ತದೆ. ಬಜಾಜ್ ಪಲ್ಸರ್ 150 ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಹಳೆಯ ಡಿಜಿಟಲ್-ಅನಾಲಾಗ್ ಲೇಔಟ್ ಇದೆ. ಜೊತೆಗೆ LED ಲೈಟ್‌ಗಳು ಹಾಗೂ USB ಚಾರ್ಜಿಂಗ್ ಪೋರ್ಟ್‌ಗಳಂತಹ ಇನ್ನಿತರ ಯಾವುದೇ ನವೀನವಾದ ವೈಶಿಷ್ಟ್ಯಗಳನ್ನು ಹೊಂದಿಲ್ಲ ಎಂದು ಹೇಳಬಹುದು.

ಬೆಲೆ
ಈ ಎರಡು ಬೈಕ್‌ಗಳ ಬೆಲೆ ವಿಚಾರವಾಗಿ ಹೇಳುವುದಾದರೇ ಇವು ಗ್ರಾಹಕರಿಗೆ ಕೈಗೆಟುತ್ತವೆ ಎಂದು ಹೇಳಬಹುದು. ಬಜಾಜ್ ಪಲ್ಸರ್ P150 ಟ್ವಿನ್ ಡಿಸ್ಕ್ ಮತ್ತು ಸಿಂಗಲ್ ಡಿಸ್ಕ್ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಇದರ ಬೆಲೆ ರೂ.1.16 ಲಕ್ಷದಿಂದ (ಎಕ್ಸ್ ಶೋ ರೂಂ, ದೆಹಲಿ) ಪ್ರಾರಂಭವಾಗಲಿದೆ. ಮತ್ತೊಂದೆಡೆ, ಪಲ್ಸರ್ 150 ಬೇಸ್ ಸಿಂಗಲ್-ಡಿಸ್ಕ್ ರೂಪಾಂತರಕ್ಕಾಗಿ ರೂ.1.11 ಲಕ್ಷದಿಂದ (ಎಕ್ಸ್-ಶೋರೂಮ್, ದೆಹಲಿ) ಆರಂಭವಾಗುತ್ತದೆ. ನಿಮ್ಮ ಆಯ್ಕೆಯ ಬೈಕ್‌ನ್ನು ಅದು ಒಳಗೊಂಡಿರುವ ವೈಶಿಷ್ಟಗಳನ್ನು ಆಧಾರಿಸಿ ಖರೀದಿ ಮಾಡಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Most Read Articles

Kannada
Read more on ಬಜಾಜ್ bajaj
English summary
Bajaj pulsar 150 vs pulsar p150 which is best
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X