ಹೊಸ ನವೀಕರಣವನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ತನ್ನ ಪಲ್ಸರ್ ಸರಣಿಯಲ್ಲಿರುವ ಬೈಕ್‌ಗಳನ್ನು ನವೀಕರಿಸಲಾಗುತ್ತಿದೆ. ಬಜಾಜ್ ಆಟೋ ಕಂಪನಿಯು ಪಲ್ಸರ್ ಬೈಕ್‌ಗಳೊಂದಿಗೆ ಡೋಮಿನಾರ್ 250 ಬೈಕ್ ಅನ್ನು ಕೂಡ ಸ್ವಲ್ಪಮಟ್ಟಿಗೆ ನವೀಕರಿಸಲಾಗಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಹೊಸ ಬಜಾಜ್ ಡೋಮಿನಾರ್ 250 ಬೈಕ್ ಬ್ಲ್ಯಾಕ್ ಔಟ್ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆದುಕೊಂಡಿದೆ. ಆದರೆ ಹೊಸ ಅಲಾಯ್ ವ್ಹೀಲ್ ವಿನ್ಯಾಸವು ಹಿಂದಿನ ಮಾದರಿಯಂತೆಯೇ ಕಾಣುತ್ತದೆ..ವಿನ್ಯಾಸದ ವಿಷಯದಲ್ಲಿ, ಬಜಾಜ್ ಡೋಮಿನಾರ್ 250 ಬಜಾಜ್ ಡೋಮಿನಾರ್ 400 ಮಾದರಿಗೆ ಹೋಲುತ್ತದೆ, ಡೋಮಿನಾರ್ 400 ಬೈಕಿನಲ್ಲಿ ಟೂರಿಂಗ್ ಅಕ್ಸೆಸರೀಸ್ ಇರುವುದರಿಂದ ಎರಡು ಬೈಕ್‌ಗಳನ್ನು ಪ್ರತ್ಯೇಕಿಸುವುದು ಸುಲಭವಾಗಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

250ಸಿಸಿ ವಿಭಾಗದಲ್ಲಿ ಸದ್ಯ ಉತ್ತಮ ಬೇಡಿಕೆಯೊಂದಿಗೆ ಬಜಾಜ್ ಡೋಮಿನಾರ್ 250 ಬೈಕ್ ಮಾರಾಟವಾಗುತ್ತಿದೆ.ಡೋಮಿನಾರ್ 250 ಬೈಕ್ ರೇಸಿಂಗ್ ಜೊತೆ ಮ್ಯಾಟ್ ಸಿಲ್ವರ್, ಸಿಟ್ರಸ್ ರಷ್ ಜೊತೆ ಮ್ಯಾಟ್ ಸಿಲ್ವರ್ ಮತ್ತು ಸ್ಪಾರ್ಕಿಂಗ್ ಬ್ಲ್ಯಾಕ್ ಜೊತೆ ಮ್ಯಾಟೆ ಸಿಲ್ವರ್ ಎಂಬ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಈ ಬೈಕ್ ಕ್ಯಾನಿಯಾನ್ ರೆಡ್ ಮತ್ತು ಚಾರ್ಕೊಲ್ ಬ್ಲ್ಯಾಕ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿಯು ಲಭ್ಯವಿದೆ. ಈ ಡೋಮಿನಾರ್ 250 ಬೈಕಿನಲ್ಲಿ 248 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ನೊಂದಿಗೆ ಸ್ಲಿಪ್-ಅಸಿಸ್ಟ್ ಕ್ಲಚ್ ಪಡೆದುಕೊಂಡಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಈ ಎಂಜಿನ್ 25 ಬಿಹೆಚ್‍ಪಿ ಪವರ್ ಮತ್ತು 23.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವಸ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಕೂಡ ಜೋಡಿಸಲಾಗಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಬಜಾಜ್ ಡೋಮಿನಾರ್ 250 ಮಾದರಿಯು ಹೆಚ್ಚು ಸ್ಪೂರ್ಟಿ ವಿನ್ಯಾಸದೊಂದಿಗೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಬಜಾಜ್ ಡೋಮಿನಾರ್ 400 ಮತ್ತು ಹೊಸ ಡೋಮಿನಾರ್ 250 ನಡುವಿನ ಕೆಲವು ವ್ಯತ್ಯಾಸಗಳನ್ನು ಹೊಂದಿವೆ. ಇದು ಕಡಿಮೆ ವೆಚ್ಚದ ಸ್ವಿಂಗಾರ್ಮ್, ಯುಎಸ್ಡಿ ಫೋರ್ಕ್ ಹಾಗೂ ವಿಭಿನ್ನ ಅಲಾಯ್ ವ್ಹೀಲ್ ವಿನ್ಯಾಸಗಳಾಗಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಈ ಬಜಾಜ್ ಡೋಮಿನಾರ್ 400 ಬೈಕಿಗೆ ಹೋಲಿಸಿದರೆ ಹೊಸ ಬಜಾಜ್ ಡೋಮಿನಾರ್ 250 ಬೈಕ್ ಮಾದರಿಯ ಟಯರ್ ಪ್ರೊಫೈಲ್‍ ಗಳು ಕೂಡ ಭಿನ್ನವಾಗಿದೆ. ಇನ್ನು ಈ ಬೈಕ್ ಡೋಮಿನಾರ್ 400 ಮಾದರಿಗಿಂತ ತೂಕ ಕಡಿಮೆಯಾಗಿದೆ,

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಹೊಸ ಬಜಾಜ್ ಡೋಮಿನಾರ್ 250 ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಈ ಮಾದರಿಯ ಮುಂಭಾಗದಲ್ಲಿ 37 ಎಂಎಂ ಯುಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಸುರಕ್ಷತಾ ದೃಷ್ಠಯಿಂದ ಪ್ರಮುಖವಾದ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬೈಕಿನ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಿದ್ದಾರೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಇನ್ನು ಬಜಾಜ್ ಆಟೋ ಕಂಪನಿಯು ತನ್ನ ಜನಪ್ರಿಯ ಪಲ್ಸರ್ ಎನ್ಎಸ್160 ಬೈಕಿಗೆ ಹೊಸ ವೈಟ್ ಮತ್ತು ಬ್ಲ್ಯಾಕ್ ಎಂಬ ಡ್ಯುಯಲ್ ಟೋನ್ ಪೇಂಟ್ ಸ್ಕೀಮ್ ಅನ್ನು ಸೇರಿಸಿದೆ. ಇದರಿಂದ ಹೊಸ ಪಲ್ಸರ್ ಎನ್ಎಸ್160 ಬೈಕ್ ಇನ್ನಷ್ಟು ಆಕರ್ಷಕವಾಗಿ ಕಾಣುತ್ತಿದೆ. ಕೆಡ್ ಸ್ಟ್ರೀಟ್‌ಫೈಟರ್‌ಗೆ ಹೆಚ್ಚು ಅಗತ್ಯವಿರುವ ಸ್ಪೋರ್ಟಿ ಫ್ಲೇರ್ ಅನ್ನು ಸೇರಿಸುತ್ತವೆ. ಈ ಹೊಸ ಪಲ್ಸರ್ ಎನ್ಎಸ್ 160 ಬೈಕ್ ಇಂಧನ ಟ್ಯಾಂಕ್ ಮತ್ತು ಬಿಕಿನಿ ಫೇರಿಂಗ್‌ನಂತಹ ಭಾಗಗಳನ್ನು ಬಿಳಿ ಬಣ್ಣದಿಂದ ಕೂಡಿದೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಆಟೋ ಕಂಪನಿಯು ಇತ್ತೀಚೆಗೆ ತನ್ನ ಹೊಸ ದ್ವಿಚಕ್ರ ವಾಹನಕ್ಕೆ ಹೊಸ ಹೆಸರನ್ನು ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಬಜಾಜ್ ಆಟೋ ಕಂಪನಿಯು ಟ್ವಿನರ್ ಎಂಬ ಹೆಸರಿನ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ. ಈ ಹೊಸ ಮಾದರಿಯ ಬಗ್ಗೆ ಬಜಾಜ್ ಕಂಪನಿಯು ಯಾವುದೇ ಮಾಹಿತಿಗಳು ಬಹಿರಂಗಪಡಿಸಿಲ್ಲ. ಆದರೆ ಹೊಸ ಮಿಡ್ ವೈಟ್ ವಿಭಾಗದ ಬೈಕಿಗೆ ಈ ಹೆಸರನ್ನು ಬಳಸಬಹುದೆಂದು ನಾವು ನಿರೀಕ್ಷಿಸುತ್ತೇವೆ. 'ಟ್ವಿನ್ನರ್' ಎಂಬುದು ಟ್ವಿನ್ ಸಿಲಿಂಡರ್ ಬೈಕ್ ಹೆಸರು ಆಗಿರುವ ಸಾಧ್ಯತೆಗಳಿದೆ. ಬಜಾಜ್ ಪ್ರಸ್ತುತ ಭಾರತೀಯ ಮಾರುಕಟ್ಟೆಗಾಗಿ ಬ್ರಿಟಿಷ್ ಮೋಟಾರ್‌ಸೈಕಲ್ ತಯಾರಕ ಟ್ರಯಂಫ್‌ನ ಪಾಲುದಾರಿಕೆಯಲ್ಲಿ ಮಿಡ್ ಸೈಜ್ ವಿಭಾಗದ ಮೋಟಾರ್‌ಸೈಕಲ್‌ಗಳನ್ನು ಅಭಿವೃದ್ಧಿಪಡಿಸುತ್ತಿದೆ

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಈ ಬೈಕ್‌ಗಳು 200ಸಿಸಿ ಯಿಂದ 700ಸಿಸಿ ಇಂಜಿನ್ ಸಾಮರ್ಥ್ಯದಲ್ಲಿರುತ್ತವೆ ಮತ್ತು ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಿರುತ್ತವೆ. ಮುಂಬರುವ ಈ ಬೈಕ್‌ಗಳಲ್ಲಿ ಮೊದಲನೆಯದನ್ನು ಈ ವರ್ಷದ ಅಂತ್ಯದ ಮೊದಲು ಅಧಿಕೃತವಾಗಿ ಅನಾವರಣಗೊಳಿಸಬಹುದು. ಅವರು ಟ್ರಯಂಫ್ ಬೊನೆವಿಲ್ಲೆ ಸರಣಿಯಂತೆಯೇ ರೆಟ್ರೊ-ಪ್ರೇರಿತ ವಿನ್ಯಾಸವನ್ನು ಹೊಂದಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ರೆಟ್ರೋ ಮೋಟಾರ್‌ಸೈಕಲ್‌ಗಳು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯವಾಗಿವೆ.

ಹೊಸ ನವೀಕರಣಗಳನ್ನು ಪಡೆದುಕೊಂಡ ಬಜಾಜ್ ಡೋಮಿನಾರ್ 250 ಬೈಕ್

ಬಜಾಜ್ ಡೋಮಿನಾರ್ 250 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್ 250 ಮತ್ತು ಯಮಹಾ ಎಫ್‌ಜೆಡ್ 25 ಬೈಕ್‌ಗಳಳಿಗೆ ಪೈಪೋಟಿ ನೀಡುತ್ತದೆ. ಹೊಸ ನವೀಕರಣಗಳೊಂದಿಗೆ ಡೋಮಿನಾರ್ 250 ಬೈಕ್ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Bajaj updated dominar 250 with new alloy wheels read to find more details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X