ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟಪ್ ಕಂಪನಿಯಾದ ಬ್ಯಾರೆಲ್ ಮೋಟಾರ್ಸ್ (Barrel Motors) ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಬ್ಯಾರೆಲ್ ಮೋಟಾರ್ಸ್‌ನ ಈ ಎಲೆಕ್ಟ್ರಿಕ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ಇತರ ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೋಲಿಸಿದರೆ ಸಾಕಷ್ಟು ವಿಭಿನ್ನವಾಗಿರುತ್ತದೆ. ಕಂಪನಿಯ ಈ ಮೋಟಾರ್‌ಸೈಕಲ್ ಎಲೆಕ್ಟ್ರಿಕ್ ಡರ್ಟ್ ಬೈಕ್ ಆಗಿದ್ದು, ಇದನ್ನು ಗುಡ್ಡಗಾಡು ಮತ್ತು ಕಲ್ಲಿನ ರಸ್ತೆಗಳಲ್ಲಿ ಓಡಿಸಲು ವಿನ್ಯಾಸಗೊಳಿಸಲಾಗಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಬ್ಯಾರೆಲ್ ಮೋಟಾರ್ಸ್ ಈ ಎಲೆಕ್ಟ್ರಿಕ್ ಬೈಕ್ ಅನ್ನು ವೆಲೋಕ್-ಇ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಪ್ರಸ್ತುತ ಕಂಪನಿಯು ಈ ಬೈಕಿನ ಮಾದರಿಯನ್ನು ಪರೀಕ್ಷಿಸುತ್ತಿದೆ. ಪರೀಕ್ಷಾ ಪ್ರಕ್ರಿಯೆ ಮುಗಿದ ಬಳಿಕ ಮಾರುಕಟ್ಟೆಯ ಅಗತ್ಯಕ್ಕೆ ಅನುಗುಣವಾಗಿ ಬೈಕ್ ಉತ್ಪಾದನೆ ಆರಂಭಿಸಲಾಗುವುದು.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಕಂಪನಿಯ ಪ್ರಕಾರ, ವೆಲೋಕ್-ಇ ಡರ್ಟ್ ಬೈಕ್‌ನ ಉತ್ಪಾದನೆಯನ್ನು 2024 ರಲ್ಲಿ ಪ್ರಾರಂಭಿಸಬಹುದು. ಈ ಬೈಕು ಈ ವರ್ಷ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಈ ಇ-ಬೈಕ್ ಅನ್ನು ಕಲ್ಲು, ಮಣ್ಣು, ಹಿಮ ಮತ್ತು ಮರಳಿನ ಮೇಲೆ ಸವಾರಿ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ಬೈಕ್‌ನ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಲು ಒಂದರಿಂದ ಒಂದೂವರೆ ವರ್ಷ ಬೇಕಾಗಬಹುದು ಎಂದು ಕಂಪನಿ ಹೇಳಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಮಾರುಕಟ್ಟೆಯಲ್ಲಿ ಮಾರಾಟವಾಗುವ ಸಾಮಾನ್ಯ ಪ್ರಯಾಣಿಕ ಬೈಕ್‌ಗಳಿಗಿಂತ ಭಿನ್ನವಾಗಿ ಆಫ್-ರೋಡ್ ಎಲೆಕ್ಟ್ರಿಕ್‌ಗಳ ಮೇಲೆ ಮಾತ್ರ ಗಮನಹರಿಸುತ್ತಿರುವುದಾಗಿ ಬ್ಯಾರೆಲ್ ಮೋಟಾರ್ಸ್ ತಿಳಿಸಿದೆ. ಈ ವಿಭಾಗದಲ್ಲಿ, ಕಂಪನಿಯು ಆಫ್ ರೋಡಿಂಗ್‌ಗೆ ಜನಪ್ರಿಯವಾಗಿರುವ ಹೀರೋ ಎಕ್ಸ್‌ಪಲ್ಸ್ ಮತ್ತು ಕೆಟಿಎಂ ಅಡ್ವೆಂಚರ್‌ನಂತಹ ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಕಂಪನಿಯ ಪ್ರಕಾರ, ವೆಲೋಕ್-ಇ ಬೈಕ್‌ನ ಪವರ್ ಔಟ್‌ಪುಟ್ 200 ಸಿಸಿ ಪೆಟ್ರೋಲ್ ಬೈಕ್‌ಗಿಂತ ಉತ್ತಮವಾಗಿರುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಹೆಚ್ಚು ಪವರ್ ನೀಡುವುದು ಮಾತ್ರವಲ್ಲದೆ ಇದರ ಟಾರ್ಕ್ ಕೂಡ 200ಸಿಸಿ ಬೈಕ್‌ಗಿಂತಲೂ ಹೆಚ್ಚು ಇರಲಿದೆ. ಹೆಚ್ಚಿನ ಶಕ್ತಿ ಮತ್ತು ಟಾರ್ಕ್‌ನಿಂದಾಗಿ, ಒರಟು ರಸ್ತೆಗಳಲ್ಲಿ ಇದರ ಕಾರ್ಯಕ್ಷಮತೆ ಪೆಟ್ರೋಲ್ ಬೈಕ್‌ಗಿಂತ ಉತ್ತಮವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಗಸ್ತು ತಿರುಗಲು ಬಳಸಲಾಗುವುದು

ಭಾರತೀಯ ಸೇನೆಯ ಅಗತ್ಯತೆಗಳನ್ನು ಪೂರೈಸುವ ಕೆಲವು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಬ್ಯಾರೆಲ್ ಮೋಟಾರ್ಸ್ ಹೇಳಿದೆ. ವೆಲೋಕ್-ಇ ಎಲೆಕ್ಟ್ರಿಕ್ ಬೈಕ್ ಅನ್ನು ಗಡಿಯ ಪಕ್ಕದ ಪ್ರದೇಶಗಳಲ್ಲಿ ಗಸ್ತು ತಿರುಗಲು ಬಳಸಬಹುದು. ಲಡಾಖ್ ಮತ್ತು ಸಿಯಾಚಿನ್‌ನ ಕಠಿಣ ಹವಾಮಾನದಲ್ಲೂ ಈ ಬೈಕ್ ಅನ್ನು ಬಳಸಬಹುದು.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಬ್ಯಾರೆಲ್ ಮೋಟಾರ್ಸ್‌ನ ವೆಲೋಕ್-ಇ ಎಲೆಕ್ಟ್ರಿಕ್ ಬೈಕ್ ಕೆಲವು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ, ಮೊದಲ ರೂಪಾಂತರವು ಸ್ಟ್ರೀಟ್ ಬೈಕ್ ಆಗಿದ್ದು, ಎರಡನೆಯ ರೂಪಾಂತರವು ಹೆಚ್ಚು ಶಕ್ತಿಶಾಲಿ ಆಫ್-ರೋಡ್ ಬೈಕ್ ಆಗಿ ಹೊರಹೊಮ್ಮಲಿದೆ. ಕಂಪನಿಯು ದೂರದ ಟೂರಿಂಗ್ ಬೈಕ್‌ಗಳನ್ನು ತಯಾರಿಸಲು ಕೂಡ ಯೋಜಿಸಿದೆ. ಇದಕ್ಕಾಗಿ ಕಂಪನಿಯು ಮೈಲೇಜ್ ವಿಸ್ತರಿಸುವ ಕೆಲಸ ಮಾಡುತ್ತಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

150 ಕಿ.ಮೀ ಮೈಲೇಜ್

Veloc-e ಎಲೆಕ್ಟ್ರಿಕ್ ಬೈಕ್ ಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ವ್ಯಾಪ್ತಿಯನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ತಯಾರಿಸಲು ಸ್ಥಳೀಯ ತಯಾರಕರಿಂದ ಶೇ90 ರಷ್ಟು ಉಪಕರಣಗಳನ್ನು ಖರೀದಿಸಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಸ್ಥಳೀಯ ಮಾರುಕಟ್ಟೆಯಿಂದ ಬ್ಯಾಟರಿ ಪ್ಯಾಕ್‌ಗಳು ಮತ್ತು ಬ್ಯಾಟರಿ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಸಾಧನಗಳನ್ನು ಖರೀದಿಸುತ್ತಿದೆ, ಆದರೆ ಬ್ಯಾಟರಿ ಸೆಲ್‌ಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ದೇಶದಲ್ಲಿ ಈಗಾಗಲೇ ಆಫ್‌ ರೋಡ್ ಬೈಕ್ ಹಾಗೂ ಕಾರುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಭಾರತೀಯರು ಹೆಚ್ಚು ಅಡ್ವೆಂಚರ್ ಪ್ರಿಯರಾಗಿದ್ದು, ಟೂರಿಂಗ್ ಹಾಗೂ ಲಾಂಗ್ ಡ್ರೈವ್ ಟ್ರಿಪ್‌ಗಳಿಗಾಗಿ ಆಫ್ ರೋಡರ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಹಾಗಾಗಿಯೇ ಹಿಮಾಲಯನ್, ಎಕ್ಸ್‌ಪಲ್ಸ್, ಯೆಜ್ಡಿ ಅಡ್ವೆಂಚರ್ ಬೈಕ್‌ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ಶೀಘ್ರದಲ್ಲೇ ಸೇನೆಗೆ ಸೇವೆ ಸಲ್ಲಿಸಲಿದೆ ಬೆಂಗಳೂರು ಮೂಲದ ಎಲೆಕ್ಟ್ರಿಕ್ ಡರ್ಟ್ ಬೈಕ್

ಡ್ರೈವ್‌ಸ್ಪಾರ್ಕ್ ಆಭಿಪ್ರಾಯ

ಭಾರತೀಯ ಮಾರುಕಟ್ಟೆಯಲ್ಲಿ ಅಡ್ವೆಂಚರ್ ಬೈಕ್‌ಗಳು ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿವೆ. ಯುವಕರು ಹೆಚ್ಚಾಗಿ ಇಂತಹ ಬೈಕ್‌ಗಳಿಗೆ ಆಕರ್ಷಿತರಾಗುವ ಹಿನ್ನೆಲೆ ವಾಹನ ತಯಾರಕರು ಕೂಡ ಹಲವು ಹೊಸ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ವಾಹನಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದ್ದಾರೆ. ಇದೀಗ ಬರುತ್ತಿರುವ ಎಲೆಕ್ಟ್ರಿಕ್ ಬ್ಯಾರೆಲ್ ವೆಲೋಕ್-ಇ ಈಗಾಗಲೇ ಇರುವ ಆಫ್‌ ರೋಡರ್‌ಗಳೊಂದಿಗೆ ಎಷ್ಟರ ಮಟ್ಟಿಗೆ ಸೆಣಸಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.

Most Read Articles

Kannada
English summary
Bangalore based electric dirt bike will soon serve the army
Story first published: Saturday, July 9, 2022, 16:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X