ಶೀಘ್ರದಲ್ಲಿಯೇ ಮತ್ತೆರಡು ಹೊಸ ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಇವಿ ವಾಹನ ಮಾರುಕಟ್ಟೆಯು ಉತ್ತಮ ಬೆಳವಣಿಗೆ ಸಾಧಿಸುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ವಿವಿಧ ಇವಿ ವಾಹನ ತಯಾರಕ ಕಂಪನಿಗಳು ಹೊಸ ಉತ್ಪನ್ನಗಳೊಂದಿಗೆ ಗಮನಸೆಳೆಯುತ್ತಿವೆ. ಬ್ಯಾಟ್‌ರೇ(BattRE) ಕಂಪನಿಯು ಸಹ ಈಗಾಗಲೇ ವಿವಿಧ ಇವಿ ಉತ್ಪನ್ನಗಳ ಮಾರಾಟ ಹೊಂದಿದ್ದು, ಶೀಘ್ರದಲ್ಲಿಯೇ ಮತ್ತೆರಡು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ಹಂಚಿಕೊಂಡಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗುತ್ತಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಬ್ಸಡಿ ಯೋಜನೆಗಳ ಪರಿಣಾಮ ಇವಿ ವಾಹನಗಳಿಗೆ ಬೇಡಿಕೆಯು ಕಳೆದ ವರ್ಷಕ್ಕಿಂತಲೂ ಇದೀಗ ಸಾಕಷ್ಟು ಹೆಚ್ಚಳವಾಗಿದ್ದು, ಇವಿ ದ್ವಿಚಕ್ರ ವಾಹನ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸುತ್ತಿದೆ. ಹೀಗಾಗಿ ಬ್ಯಾಟ್‌ರೇ ಕಂಪನಿಯು ತನ್ನ ಇವಿ ದ್ವಿಚಕ್ರ ವಾಹನಗಳ ಸಾಲಿಗೆ ಮತ್ತೆರಡು ಹೊಸ ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಒಂದು ಇವಿ ಸ್ಕೂಟರ್ ಮತ್ತೊಂದು ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡಬಹುದಾಗಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಪ್ರಮುಖ ಇವಿ ದ್ವಿಚಕ್ರ ವಾಹಗಗಳು ಉತ್ತಮ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಬ್ಯಾಟ್‌ರೇ ಕಂಪನಿಯು ಕೂಡಾ ಹೊಸ ಇವಿ ಮಾದರಿಯನ್ನು ಪ್ರತಿ ಚಾರ್ಜ್‌ಗೆ ಕನಿಷ್ಠ 150 ಕಿ.ಮೀ ಮೈಲೇಜ್ ರೇಂಜ್‌ನಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಹೊಸ ದ್ವಿಚಕ್ರ ವಾಹನಗಳ ತಾಂತ್ರಿಕ ಅಂಶಗಳ ಕುರಿತಾಗಿ ಕಂಪನಿಯು ಯಾವುದೇ ಮಾಹಿತಿ ನೀಡಿಲ್ಲವಾದರೂ ಹೊಸ ಮಾದರಿಗಳನ್ನು ಮುಂಬರುವ ಮಾರ್ಚ್ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ.90 ಸಾವಿರದಿಂದ ರೂ. 1.20 ಲಕ್ಷ ಬೆಲೆ ಅಂತರದಲ್ಲಿ 150 ಕಿ.ಮೀ ಮೈಲೇಜ್ ರೇಂಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಬಹುದಾಗಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಪ್ರಸ್ತುತ ಮಾರುಕಟ್ಟೆಯಲ್ಲಿ ಬ್ಯಾಟ್‌ರೇ ಕಂಪನಿಯು ಬ್ಯಾಟ್‌ರೇ ಒನ್, ಬ್ಯಾಟ್‌ರೇ ಲೊ, ಬ್ಯಾಟ್‌ರೇ ಲೊ ಟಿ ಮತ್ತು ಬ್ಯಾಟ್‌ರೇ ಜಿಪಿಎಸ್ ಇವಿ ಸ್ಕೂಟರ್ ಸೇರಿದಂತೆ ನ್ಯೂಟ್ರಾನ್, ಮಾಂಟ್ರಾ, ಕ್ರಾಸ್ ಮತ್ತು ಹ್ಯೂಜ್‌ನಂತಹ ವ್ಯಾಪಕ ಶ್ರೇಣಿಯ ಇ-ಸೈಕಲ್ ಮಾದರಿಗಳನ್ನು ಸಹ ಮಾರಾಟ ಮಾಡುತ್ತಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಬ್ಯಾಟ್‌ರೇ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸದ್ಯ ರೂ. 59,900 ಆರಂಭಿಕ ಬೆಲೆ ಹೊಂದಿದ್ದರೆ ಹೈ ಎಂಡ್ ಮಾದರಿಯಾದ ಬ್ಯಾಟ್‌ರೇ ಲೊ ಟಿ ಮಾದರಿಯು ರೂ. 79,999 ಬೆಲೆಯೊಂದಿಗೆ ಅತ್ಯಂತ ದುಬಾರಿ ಮಾದರಿಯಾಗಿದ್ದು, ಹೊಸದಾಗಿ ಬಿಡುಗಡೆಯಾಗುತ್ತಿರುವ ಇವಿ ಮಾದರಿಗಳು ಪ್ರಸ್ತುತ ಮಾದರಿಗಳಿಂತಲೂ ಹೆಚ್ಚಿನ ಬೆಲೆ ಪಡೆದುಕೊಂಡಿದ್ದರೂ ಹೆಚ್ಚಿನ ಮಟ್ಟದ ಮೈಲೇಜ್ ರೇಂಜ್ ಮತ್ತು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಳ್ಳಲಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಬ್ಯಾಟ್‌ರೇ ಒನ್ ಮಾದರಿಯು ಸದ್ಯ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಶ್ರೇಣಿಯಲ್ಲಿ ಹೆಚ್ಚು ಬೇಡಿಕೆಯಿರುವ ಮಾದರಿಗಳಲ್ಲಿ ಒಂದಾಗಿದ್ದು, ಇದು ಬ್ರ್ಯಾಂಡ್‌ನ 48V ಮತ್ತು 30 Ah ಬ್ಯಾಟರಿ ಸಾಮರ್ಥ್ಯದ BLDC ಮೋಟಾರ್‌ನೊಂದಿಗೆ ಪ್ರತಿ ಚಾರ್ಜ್‌ಗೆ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ವಿಭಾಗದ ಮೊದಲ ವೈಶಿಷ್ಟ್ಯತೆಗಳನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಹೊಸ ಉತ್ಪನ್ನಗಳೊಂದಿಗೆ ಕಂಪನಿಯು ಮಾರಾಟ ಮಳಿಗೆಗಳನ್ನು ಸಹ ವಿಸ್ತರಿಸಲು ನಿರ್ಧರಿಸಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಹೊಸ ವಿಸ್ತರಣಾ ಯೋಜನೆಗಳ ಮೂಲಕ ಮತ್ತು ಮಾರಾಟವನ್ನು ಸುಧಾರಿಸಲು ದೇಶಾದ್ಯಂತ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲೂ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿದೆ ಎಂದಿರುವ ಬ್ಯಾಟ್‌ರೇ ಕಂಪನಿಯು ಡೀಲರ್‌ಶಿಪ್ ನೆಟ್‌ವರ್ಕ್ ವಿಸ್ತರಣೆಗೆ ಬರೋಬ್ಬರಿ ರೂ. 100 ಕೋಟಿ ಹೂಡಿಕೆ ಮಾಡುತ್ತಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಬ್ಯಾಟ್‌ರೇ ಕಂಪನಿಯು ದೇಶಾದ್ಯಂತ ಈಗಾಗಲೇ 19 ರಾಜ್ಯಗಳಲ್ಲಿ 300 ಡೀಲರ್‌ಶಿಪ್‌ಗಳನ್ನು ತೆರೆದಿದ್ದು, 2022-23 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಬ್ರ್ಯಾಂಡ್‌ನ ಚಿಲ್ಲರೆ ಮಾರಾಟ ಜಾಲವು 700ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಹೊಸ ಉತ್ಪನ್ನಗಳು ಮತ್ತು ಮಾರಾಟ ಮಳಿಗೆಗಳ ವಿಸ್ತರಣೆಯ ಮೂಲಕ ಕಂಪನಿಯು 2022-23ನೇ ಹಣಕಾಸು ವರ್ಷದಲ್ಲಿ ರೂ. 450 ಕೋಟಿಗೂ ಅಧಿಕ ಆದಾಯ ನಿರೀಕ್ಷೆಯಲ್ಲಿದ್ದು, ಬಿಡುಗಡೆಗಾಗಿ ಸಿದ್ದವಾಗಿರುವ ಎರಡು ಹೊಸ ಇವಿ ಉತ್ಪನ್ನಗಳು ಕಂಪನಿಗೆ ಹೆಚ್ಚಿನ ಆದಾಯ ತಂದುಕೊಡುವ ನೀರಿಕ್ಷೆಯಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಇದರ ಜೊತೆಗೆ ಕಂಪನಿಯು ಇವಿ ವಾಹನ ಖರೀದಿಗೆ ಸರಳವಾದ ಸಾಲಸೌಲಭ್ಯಗಳನ್ನು ಸಹ ಪರಿಚಯಿಸಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಜೆಸ್ಟ್‌ಮನಿ ಸಹಭಾಗಿತ್ವದಲ್ಲಿ ಬ್ಯಾಟ್‌ರೇ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ ಖರೀದಿಗೆ ಸುಲಭ ಕಂತುಗಳಲ್ಲಿ ಖರೀದಿಸಬಹುದಾದ ಸಾಲ ಸೌಲಭ್ಯ ನೀಡುತ್ತಿದೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಕ್ರೆಡಿಟ್ ಸ್ಕೋರ್ ಹೊಂದಿರದ ಗ್ರಾಹಕರು ಸಹ ಈ ಹಣಕಾಸು ಯೋಜನೆಯಡಿ ಬ್ಯಾಟ್‌ರೇ ಸ್ಕೂಟರ್‌ಗಳನ್ನು ಖರೀದಿಸಬಹುದಾಗಿದ್ದು, ಬ್ಯಾಟ್‌ರೇ ನಿರ್ಮಾಣದ ಎಲ್ಲಾ ಇವಿ ಸ್ಕೂಟರ್‌ಗಳ ಖರೀದಿಗೂ ಈ ಸಾಲಸೌಲಭ್ಯಗಳನ್ನು ಲಭ್ಯವಿವೆ.

ಹೈ ಸ್ಪೀಡ್ ಇವಿ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ ಬ್ಯಾಟ್‌ರೇ

ಜೆಸ್ಟ್‌ಮನಿಯ ಆನ್‌ಲೈನ್ ಹಣಕಾಸು ಯೋಜನೆಯಡಿಯಲ್ಲಿ ಗ್ರಾಹಕರಿಗೆ ಹಲವಾರು ಅನುಕೂಲಗಳಿವೆ. ಗ್ರಾಹಕರು ಕೆವೈಸಿಗಾಗಿ ಶೋರೂಂಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಕೆವೈಸಿಯ ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿ ನಡೆಯಲಿದ್ದು, ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರದ ಗ್ರಾಹಕರು ಸಹ ಸ್ಕೂಟರ್‌ಗಳಿಗೆ ಹಣಕಾಸು ಸೌಲಭ್ಯವನ್ನು ಪಡೆಯಬಹುದಾಗಿದ್ದು, ಸ್ಕೂಟರ್ ಖರೀದಿಗಾಗಿ 3, 6 ಹಾಗೂ 12 ತಿಂಗಳ ಇಎಂಐ ಆಯ್ಕೆಯನ್ನು ನೀಡಲಾಗುತ್ತದೆ.

Most Read Articles

Kannada
English summary
Battre to launch new electric scooter and motorcycle soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X