ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಪ್ರಯತ್ನಗಳ ಹೊರತಾಗಿಯೂ, ಇವಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ದೇಶದ ವಿವಿಧೆಡೆ ಸಂಭವಿಸುತ್ತಲೇ ಇವೆ. ಇತ್ತೀಚೆಗೆ ತೆಲಂಗಾಣ ರಾಜ್ಯದ ಕರೀಂನಗರ ಜಿಲ್ಲೆಯಲ್ಲಿ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟಗೊಂಡು ಸ್ಕೂಟರ್ ಹೊತ್ತಿ ಉರಿದಿದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಅದೃಷ್ಟವಶಾತ್ ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಸ್ಕೂಟರ್ ಅರ್ಧದಷ್ಟು ಸುಟ್ಟುಹೋಗಿದೆ. ಕರೀಂನಗರ ಜಿಲ್ಲೆಯ ರಾಮಡುಗು ವಲಯದ ರಾಮಚಂದ್ರಾಪುರ ಗ್ರಾಮದ ನಿವಾಸಿ ಏಗೂರ್ಲು ಒದೇಲು ಎಂಬವುರು ಕೆಲವು ತಿಂಗಳ ಹಿಂದೆ ಬೆನ್ಲಿಂಗ್ ಕಂಪನಿಯಿಂದ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದರು.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಅಂದಿನಿಂದ ಸ್ಕೂಟರ್ ಚೆನ್ನಾಗಿ ಓಡುತ್ತಿದ್ದರೂ ಭಾನುವಾರ ರಾತ್ರಿ ಮನೆಯ ಮುಂದೆ ಸ್ಕೂಟರ್ ನಿಲ್ಲಿಸಿ ರಾತ್ರಿ ಊಟಕ್ಕೆ ಮನೆಗೆ ತೆರಳುವ ಮುನ್ನ ವಿದ್ಯುತ್ ಚಾಲಿತ ವಾಹನದ ಚಾರ್ಜರ್ ಪೋರ್ಟ್ ಅನ್ನು ಪವರ್ ಸಾಕೆಟ್ ಗೆ ಅಳವಡಿಸಿ ಸ್ವಿಚ್ ಆನ್ ಮಾಡಿದ್ದರು.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಸ್ವಲ್ಪ ಹೊತ್ತಿನಲ್ಲೇ ಸ್ಕೂಟರ್ ನಲ್ಲಿದ್ದ ಬ್ಯಾಟರಿ ಸ್ಫೋಟಗೊಂಡು ಭಾರೀ ಸದ್ದು ಮಾಡಿದ್ದರಿಂದ ಒದೇಲು ಮನೆಯಿಂದ ಹೊರಗೆ ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಸ್ಕೂಟರ್ ಅರ್ಧದಷ್ಟು ಸುಟ್ಟು ಹೋಗಿತ್ತು. ಅದೃಷ್ಟವಶಾತ್ ಸ್ಕೂಟರ್ ಅನ್ನು ಮನೆಯ ಹೊರಗೆ ನಿಲ್ಲಿಸಿದ್ದರಿಂದ ಯಾರಿಗೂ ಗಾಯಗಳಾಗಿಲ್ಲ. ಆದರೆ, ಬ್ಯಾಟರಿ ವೈಫಲ್ಯಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಬೆನ್ಲಿಂಗ್ ಚೀನಾದ ಎಲೆಕ್ಟ್ರಿಕ್ ವಾಹನ ಕಂಪನಿಯಾಗಿದೆ. ಪ್ರಸ್ತುತ, ಈ ಬ್ರಾಂಡ್‌ನಿಂದ ದೇಶೀಯ ಮಾರುಕಟ್ಟೆಯಲ್ಲಿ ನಾಲ್ಕು ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯವಿವೆ, ಅವುಗಳೆಂದರೆ ಆರಾ, ಫಾಲ್ಕನ್, ಕ್ರಿಟಿ ಮತ್ತು ಐಕಾನ್. ಇತ್ತೀಚಿನ ಬೆಂಕಿ ಘಟನೆಗೆ ತುತ್ತಾಗಿರುವುದು ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಈ ಬ್ರಾಂಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇಲ್ಲಿಯವರೆಗೆ ಯಾವುದೇ ಬೆಂಕಿಯ ಪ್ರಕರಣಗಳು ವರದಿಯಾಗಿಲ್ಲ. ಬಹುಶಃ ಇದು ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಬೆನ್ಲಿಂಗ್ ಫಾಲ್ಕನ್ ಕಡಿಮೆ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದರಲ್ಲಿ ಕೇವಲ ಗಂಟೆಗೆ 25 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಚಲಿಸಲು ಸಾಧ್ಯವಿಲ್ಲ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಇದು 250 ವ್ಯಾಟ್ 60 ವೋಲ್ಟ್ ಬ್ರಷ್ ರಹಿತ ವಿದ್ಯುತ್ ಮೋಟರ್ ಹೊಂದಿದೆ. ಬ್ಯಾಟರಿ ಆಯ್ಕೆಗಳಿಗೆ ಬಂದಾಗ, ಇದು 60V / 20Ah * 5 (VRLA) ಸಾಮರ್ಥ್ಯದ ಲೀಡ್ ಆಸಿಡ್ ಬ್ಯಾಟರಿ ಅಥವಾ 60V / 22Ah * 1 (Li-Ion) ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದೀಗ ಬೆಂಕಿ ಹೊತ್ತಿಕೊಂಡಿರುವ ಮಾದರಿ ಲೀಡ್ ಆಸಿಡ್ ಬ್ಯಾಟರಿಯೇ ಅಥವಾ ಲಿ-ಐಯಾನ್ ಬ್ಯಾಟರಿಯೇ ಎಂಬುದು ತಿಳಿದುಬಂದಿಲ್ಲ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಇತ್ತೀಚಿನ ಎಲ್ಲಾ ವಿದ್ಯುತ್ ಅಪಘಾತಗಳಲ್ಲಿ, ಲಿಥಿಯಂ ಅಯಾನ್ ಬ್ಯಾಟರಿ ಸ್ಫೋಟಗಳು ಅತ್ಯಂತ ಸಾಮಾನ್ಯವಾಗಿದೆ. ಹಾಗಾಗಿ ಇತ್ತೀಚೆಗೆ ಕರೀಂನಗರದಲ್ಲಿ ನಡೆದ ಅಪಘಾತದಲ್ಲೂ ಲೀಥಿಯಂ ಐಯಾನ್ ಬ್ಯಾಟರಿ ಆವೃತ್ತಿ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಕಂಪನಿಯು ತಮ್ಮ ಲೀಡ್ ಆಸಿಡ್ ಬ್ಯಾಟರಿ ಆವೃತ್ತಿಗೆ 2.5 A (VRLA) ಚಾರ್ಜರ್ ಅನ್ನು ನೀಡುತ್ತದೆ, ಆದರೆ ಲಿಥಿಯಂ ಅಯಾನ್ ಬ್ಯಾಟರಿ ಆವೃತ್ತಿಗೆ 6 A (Li-Ion) ಚಾರ್ಜರ್ ಅನ್ನು ನೀಡುತ್ತಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಸಪೋರ್ಟ್‌ ಮಾಡುತ್ತದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಈ ಚಾರ್ಜರ್ ಅನ್ನು ಬಳಸಿಕೊಂಡು ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 4 ಗಂಟೆಗಳನ್ನು ತೆಗೆದುಕೊಳ್ಳುತ್ತದೆ, ಆದರೆ ಲೆಡ್ ಆಸಿಡ್ ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಸುಮಾರು 7-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 70-75 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಬೆನ್ಲಿಂಗ್ ಫಾಲ್ಕನ್ ಎಲೆಕ್ಟ್ರಿಕ್ ಸ್ಕೂಟರ್‌ನ ಪ್ರಮುಖ ವೈಶಿಷ್ಟ್ಯಗಳೆಂದರೆ ತಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಯುಎಸ್‌ಬಿ ಪೋರ್ಟ್, ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿರುವ ಹೆಡ್‌ಲ್ಯಾಂಪ್, ಪ್ರತಿ ಬಾರಿ ಬ್ರೇಕ್‌ಗಳನ್ನು ಅನ್ವಯಿಸಿದಾಗ ಬ್ಯಾಟರಿಯನ್ನು ಚಾರ್ಜ್ ಮಾಡಲು ವಿನ್ಯಾಸಗೊಳಿಸಲಾದ ಪುನರುತ್ಪಾದಕ ಬ್ರೇಕಿಂಗ್ ಸಿಸ್ಟಮ್ ಮತ್ತು ಸ್ಕೂಟರ್ ಕಳ್ಳತನವಾಗದಿರಲು ಆ್ಯಂಟಿ ಥೆಫ್ಟ್ ಪ್ರೊಟೆಕ್ಷನ್ ಅಲಾರಾಂ, ಸ್ಮಾರ್ಟ್ ಬ್ರೇಕ್‌ಡೌನ್ ಸಹಾಯ, ಇಂಟೆಲಿಜೆಂಟ್ ಸ್ಪೀಡೋಮೀಟರ್ ಕನ್ಸೋಲ್‌ನಂತಹ ವೈಶಿಷ್ಟ್ಗಳನ್ನು ಈ ಬೈಕ್ ಒಳಗೊಂಡಿದೆ.

 ಮತ್ತೊಂದು ಇವಿ ಸ್ಕೂಟರ್ ಬ್ಯಾಟರಿ ಸ್ಪೋಟ: ಅದೃಷ್ಟವಶಾತ್ ಬಚಾವ್‌ ಆದ ಚಾಲಕ

ಇದು ಟ್ಯೂಬ್‌ಲೆಸ್ ಟೈರ್‌ಗಳೊಂದಿಗಿನ ಅಲಾಯ್‌ ವೀಲ್‌ಗಳು, ಪವರ್ ಬಟನ್‌ನೊಂದಿಗೆ ಕೀಲೆಸ್ ಸ್ಟಾರ್ಟ್ ವೈಶಿಷ್ಟ್ಯ, ಇಬ್ಬರು ಪ್ರಯಾಣಿಕರನ್ನು ಆರಾಮವಾಗಿ ಸಾಗಿಸಬಲ್ಲ ವಿಶಾಲವಾದ ಸೀಟ್, ದೊಡ್ಡ ಡಿಜಿಟಲ್ ಸ್ಪೀಡೋಮೀಟರ್, ಎಲ್‌ಇಡಿ ಬ್ರೇಕ್ ಲೈಟ್ ಮತ್ತು ಇಂಡಿಕೇಟರ್‌ಗಳು ಮತ್ತು ಟೆಲಿಸ್ಕೋಪಿಕ್ ಸಸ್ಪೆನ್ಶನ್ ಸೆಟಪ್‌ನಂತಹ ಇತರ ವೈಶಿಷ್ಟ್ಯಗಳನ್ನು ಹೊಂದಿದೆ.

Most Read Articles

Kannada
English summary
Benling falcon electric scooter catches fire in karimnagar telangana luckily no one hurt
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X