Just In
- 9 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 10 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 11 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 11 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Movies ನೀಲಿ ಪ್ರಪಂಚದ ಕರಾಳ ಸತ್ಯವನ್ನ ಹೇಳಿದ ಲಾನಾ ರೋಡ್ಸ್
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಬಿಎಂಡಬ್ಲ್ಯು ಜಿ 310 ಆರ್ಆರ್ ಬೈಕ್ ಮಾದರಿಗೆ ಭರ್ಜರಿ ಬೇಡಿಕೆ
ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ತನ್ನ ರೀಬ್ಯಾಡ್ಜ್ ಆವೃತ್ತಿಯಾದ ಹೊಸ ಜಿ 310 ಆರ್ಆರ್ ಬೈಕ್ ಮಾದರಿಯನ್ನು ಕಳೆದ ವಾರವಷ್ಟೇ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಬಿಡುಗಡೆಯ ಆರಂಭದಲ್ಲಿಯೇ ಉತ್ತಮ ಬೇಡಿಕೆ ದಾಖಲಿಸಿದೆ.
ಹೊಸ ಜಿ 310 ಆರ್ಆರ್ ಮಾದರಿಯು ಬಿಎಂಡಬ್ಲ್ಯು ಮೋಟೋರಾಡ್ ಕಂಪನಿಯು ಭಾರತದಲ್ಲಿ ಸಹಭಾಗಿತ್ವ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಜೊತೆಗೂಡಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಟಿವಿಎಸ್ನ ಅಪಾಚೆ ಆರ್ಆರ್310 ಮಾದರಿಯ ರೀಬ್ಯಾಜ್ಡ್ ಮಾದರಿಯಾಗಿದೆ.
ಹೊಸ ಬೈಕ್ ಮಾದರಿಯು ಪ್ರಮುಖ ಎರಡು ವೆರಿಯೆಂಟ್ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ದೆಹಲಿ ಎಕ್ಸ್ಶೋರೂಂ ಪ್ರಕಾರ ಹೊಸ ಬೈಕ್ ಆರಂಭಿಕವಾಗಿ ರೂ. 2.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 2.99 ಲಕ್ಷ ಬೆಲೆ ಹೊಂದಿದೆ.
ಸ್ಟ್ಯಾಂಡರ್ಡ್ ಮತ್ತು ಸ್ಟೈಲ್ ಸ್ಪೋರ್ಟ್ ಎನ್ನುವ ಎರಡು ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಬೈಕ್ ಮಾದರಿಯು ಇದುವರೆಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಯುನಿಟ್ಗಳಿಗೆ ಬೇಡಿಕೆ ಪಡೆದುಕೊಂಡಿದ್ದು, ಹೊಸ ಬೈಕಿನ ಎಂಜಿನ್, ಫ್ರೆಮ್ ಮತ್ತು ಸಸ್ಷೆಂಷನ್ ಸೇರಿದಂತೆ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಅಪಾಚೆ ಆರ್ಆರ್310 ಮಾದರಿಯಿಂದ ಎರವಲು ಪಡೆದುಕೊಂಡಿದೆ.
ವಿಶೇಷ ಬಣ್ಣಗಳ ಆಯ್ಕೆ ಮತ್ತು ಗ್ರಾಫಿಕ್ಸ್ ವಿನ್ಯಾಸವು ಹೊಸ ಬೈಕಿಗೆ ಅಪಾಚೆ ಆರ್ಆರ್310 ಮಾದರಿಗಿಂತಲೂ ತುಸು ಭಿನ್ನವಾದ ಲುಕ್ ನೀಡಿದ್ದು, ಬಿಎಂಡಬ್ಲ್ಯು ಬ್ಯಾಡ್ಜ್ ಹೊಸ ಬೈಕಿನ ಮೌಲ್ಯವನ್ನು ಹೆಚ್ಚಿಸಿದೆ.
ಇನ್ನು ಬಿಎಂಡಬ್ಲ್ಯು ಹೊಸ ಜಿ 310 ಆರ್ಆರ್ ಮಾದರಿಯಲ್ಲಿ ಅಪಾಚೆ ಆರ್ಆರ್310 ಮಾದರಿಯಲ್ಲಿರುವಂತೆ 312.2 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದ್ದು, ಇದು 6-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ 33.52 ಬಿಎಚ್ಪಿ ಮತ್ತು 27.3 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಹೊಸ ಬೈಕಿನಲ್ಲಿ ಸ್ಪಿಪ್ಲರ್ ಕ್ಲಚ್ ಜೊತೆಗೆ ವಿವಿಧ ನಾಲ್ಕು ರೈಡಿಂಗ್ ಮೋಡ್ಗಳಿದ್ದು, ಬೈಕ್ ಚಾಲನೆಯನ್ನು ಸರಳಗೊಳಿಸಲು ಟ್ರ್ಯಾಕ್, ಸ್ಪೋರ್ಟ್, ಅರ್ಬನ್ ಮತ್ತು ರೈನ್ ರೈಡ್ ಮೋಡ್ಗಳು ಅತ್ಯುತ್ತಮವಾಗಿವೆ.
ಹಾಗೆಯೇ ಹೊಸ ಬೈಕಿನ ಮುಂಭಾಗದಲ್ಲಿ ಶೋವಾ ಯುಎಸ್ಡಿ ಫೋರ್ಕ್ಗಳೊಂದಿಗೆ ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಚಾಸಿಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಷೆಂಷನ್ ಅನ್ನು ಒಳಗೊಂಡಿದ್ದು, ಮೈಕೆಲಿನ್ ಟೈರ್ಗಳೊಂದಿಗೆ 17-ಇಂಚಿನ ಮಿಶ್ರಲೋಹದ ಚಕ್ರಗಳು ಬೈಕ್ ಸವಾರಿ ಅನುಭವ ಅತ್ಯುತ್ತಮಗೊಳಿಸಲಿವೆ.
ಆದರೆ ಅಪಾಚೆ ಆರ್ಆರ್310 ಮಾದರಿಯಲ್ಲಿರುವ ಹೊಸ ಜಿ 310 ಆರ್ಆರ್ ಮಾದರಿಯಲ್ಲಿ ಕಂಪನಿಯು ಹೊಂದಾಣಿಕೆ ಮಾಡಬಹುದಾದ ಸಸ್ಷೆಂಷನ್ ನೀಡಲಾಗಿಲ್ಲ. ಆದರೆ ಹೊಸ ಬೈಕಿನಲ್ಲಿ ಕಂಪನಿಯು ವಿವಿಧ ರೈಡಿಂಗ್ ಮೋಡ್ಗಳಿಗೆ ಪೂರಕವಾದ ಮೈಕೆಲಿನ್ ರೋಡ್ 5 ಟೈರ್ ಜೋಡಣೆ ಹೊಂದಿದ್ದು, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ನೀಡಲಾಗಿದೆ.
ಮುಂಭಾಗದ ಚಕ್ರಗಳಲ್ಲಿ 300ಎಂಎಂ ಡಿಸ್ಕ್ ಬ್ರೇಕ್ ಮತ್ತು 240 ಎಂಎಂ ಹಿಂಭಾಗದ ಡಿಸ್ಕ್ ಬ್ರೇಕ್ ನೀಡಲಾಗಿದ್ದು, ಬೈಬ್ರೆ ಬ್ರೇಕ್ ಕ್ಯಾಲಿಪರ್ಗಳಿಂದ ಜೋಡಿಸಲಾದ ಡ್ಯುಯಲ್-ಚಾನೆಲ್ ಎಬಿಎಸ್ನಿಂದ ಬೈಕ್ ನಿಯಂತ್ರಿಸಲಿವೆ.
ಇನ್ನುಳಿದಂತೆ ಹೊಸ ಬೈಕ್ ಮಾದರಿಯಲ್ಲಿ ರೀಬ್ಯಾಡ್ಜ್ ಆವೃತ್ತಿಯಲ್ಲಿರುವಂತೆ ಸ್ಪೋರ್ಟ್ಸ್ ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್, ರಾಕ್ಡ್ ವಿಂಡ್ಸ್ಕ್ರೀನ್, ಗೋಲ್ಡನ್ ಪೇಂಟ್ ಯುಎಸ್ಡಿ ಫ್ರಂಟ್ ಫೋರ್ಕ್ಗಳು ಮತ್ತು ಎಲ್ಇಡಿ ಟೈಲ್ಲೈಟ್ ನೀಡಲಾಗಿದೆ.
ಅಪಾಚೆ ಆರ್ಆರ್ 310 ಮತ್ತು ಹೊಸ ಜಿ 310 ಆರ್ಆರ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ 'ಜರ್ಮನ್' ಬೈಕ್ನಲ್ಲಿ ನೀಡಲಾದ ಬಿಎಂಡಬ್ಲ್ಯು ಬ್ಯಾಡ್ಜಿಂಗ್ ಮತ್ತು ಲೈವರಿ ಇದು ದೊಡ್ಡ ಬೀಮರ್ ಸೂಪರ್ಸ್ಪೋರ್ಟ್ ಬೈಕ್ಗಳಲ್ಲಿ ಕಂಡು ಬರುವದನ್ನು ನಿಮಗೆ ನೆನಪಿಸಲಿದ್ದು, ಹೊಸ ಬೈಕಿನಲ್ಲಿ 5 ಇಂಚಿನ ಟಿಎಫ್ಟಿ ಡಿಜಿಟಲ್ ಸ್ಕ್ರೀನ್ ನೀಡಲಾಗಿದ್ದರೂ ಸಹ ಬೈಕಿನಲ್ಲಿ ಯಾವುದೇ ಬ್ಲ್ಯೂಟೂತ್ ಕನೆಕ್ಟಿವಿಟಿ ನೀಡಲಾಗಿಲ್ಲ.
ಹೊಸ ಜಿ 310 ಆರ್ಆರ್ ಬೈಕಿನಲ್ಲಿ ರೀಬ್ಯಾಡ್ಜ್ ಮಾದರಿಯಾದ ಅಪಾಚೆ ಆರ್ಆರ್ ನಲ್ಲಿರುವ ಪ್ರಮುಖ ಫೀಚರ್ಸ್ ಇಲ್ಲವಾದರೂ ಸಾಮಾನ್ಯ ಮಾದರಿಗಿಂತಲೂ ರೂ. 30 ಸಾವಿರ ಸಾವಿರದಷ್ಟು ದುಬಾರಿಯಾಗಲಿದ್ದು, ಬ್ರಾಂಡ್ ಬ್ಯಾಡ್ಜ್ ಹೊಸ ಬೈಕ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸುತ್ತದೆ.