ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಪ್ರೀಮಿಯಂ ಟೂರಿಂಗ್ ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಭಾರತದಲ್ಲಿ ಹೊಸ ಟೂರಿಂಗ್ ಬೈಕ್ ಸರಣಿ ಬಿಡುಗಡೆ ಮಾಡಿದ್ದು, ಗ್ರಾಹಕರ ಬೇಡಿಕೆಯೆಂತೆ ಕಂಪನಿಯು ಆರ್ 1250 ಆರ್‌ಟಿ, ಕೆ 1600 ಜಿಟಿಎಲ್, ಕೆ 1600 ಬ್ಯಾಗರ್ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಗಳನ್ನು ಪರಿಚಯಿಸಲಾಗಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಆರ್ 1250 ಆರ್‌ಟಿ, ಕೆ 1600 ಜಿಟಿಎಲ್, ಕೆ 1600 ಬ್ಯಾಗರ್ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 23.95 ಲಕ್ಷ ಬೆಲೆ ಹೊಂದಿದ್ದು, ಹೊಸ ಟೂರಿಂಗ್ ಬೈಕ್ ಮಾದರಿಗಳಲ್ಲಿ ಆರ್ 1250 ಮಾದರಿಯು ಆರಂಭಿಕ ಆವೃತ್ತಿಯಾಗಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಹೊಸ ಟೂರಿಂಗ್ ಬೈಕ್‌ಗಳಲ್ಲಿ ಆರ್ 1250 ಆರ್‌ಟಿ ಮಾದರಿಯು ರೂ. 23.95 ಲಕ್ಷ ಬೆಲೆ ಹೊಂದಿದ್ದರೆ ಕೆ 1600 ಬ್ಯಾಗರ್ ಮಾದರಿಯು ರೂ. 29.90 ಲಕ್ಷ, ಕೆ 1600 ಜಿಟಿಎಲ್ ಮಾದರಿಯು ರೂ. 32 ಲಕ್ಷ ಮತ್ತು ಕೆ 1600 ಗ್ಲ್ಯಾಂಡ್ ಅಮೆರಿಕಾ ಮಾದರಿಯು ರೂ. 33 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಟೂರಿಂಗ್ ಬೈಕ್ ಮಾದರಿಗಳ ಬಿಡುಗಡೆಯೊಂದಿಗೆ ಅಧಿಕೃತ ಬುಕಿಂಗ್ ಆರಂಭಿಸಿರುವ ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಮುಂದಿನ ತಿಂಗಳು ವಿತರಣೆ ಆರಂಭಿಸಲಿದ್ದು, ಹೊಸ ಮಾದರಿಗಳಲ್ಲಿ ಈ ಬಾರಿ ಹಲವಾರುವ ಸುಧಾರಿತ ತಂತ್ರಜ್ಞಾನ ಮತ್ತು ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಬಿಎಂಡಬ್ಲ್ಯು ಮೋಟೊರಾಡ್‌ ಹೊಸದಾಗಿ ಬಿಡುಗಡೆ ಮಾಡಿರುವ ಟೂರಿಂಗ್ ಮೋಟಾರ್‌ಸೈಕಲ್ ಶ್ರೇಣಿಯಲ್ಲಿ ಆರ್ 1250 ಆರ್‌ಟಿ ಮಾದರಿಯು ಅತ್ಯಂತ ಅಗ್ಗದ ಮಾದರಿಯಾಗಿದ್ದು, 2022ರ ಮಾದರಿಯಲ್ಲಿ ಕಂಪನಿಯು ಸುಧಾರಿಸಿದ ಏರೋಡೈನಾಮಿಕ್, ಹೊಸ ಫೇರಿಂಗ್ ಮತ್ತು ಪವರ್‌ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಹೆಚ್ಚು ಕ್ರಿಯಾತ್ಮಕವಾಗಿ ಸಿದ್ದಗೊಂಡಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಇದಲ್ಲದೆ ಹೊಸ ಆರ್ 1250 ಆರ್‌ಟಿ ಮಾದರಿ ಟ್ರಾವೆಲ್ ಮತ್ತು ಟೂರಿಂಗ್ ಗುಣವನ್ನು ಹೆಚ್ಚಿಸಿದ್ದು, ಹೊಸ ಆವಿಷ್ಕಾರಗಳೊಂದಿಗೆ ತನ್ನ ವಿಭಾಗದಲ್ಲಿ ಅತ್ಯುತ್ತಮ ಮಾದರಿ ಎನ್ನುವ ಜನಪ್ರಿಯತೆ ಹೊಂದಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಅದರ ಜೊತೆಗೆ ಹೊಸ ಬೈಕಿನಲ್ಲಿ ಜನಪ್ರಿಯವಾಗಿ 2-ಸಿಲಿಂಡರ್ ಬಾಕ್ಸರ್ ಎಂಜಿನ್ ಅನ್ನು ಹೊಂದಿದ್ದು, ಬಿಎಂಡಬ್ಲ್ಯು ಪ್ರಕಾರ ಇದು ಆರಾಮದಾಯಕ ಪ್ರಯಾಣ ಮತ್ತು ಡೈನಾಮಿಕ್ ರೈಡ್ ಅನ್ನು ಖಾತ್ರಿಗೊಳಿಸುತ್ತದೆ. ಹಾಗೆಯ್ ಹೊಸ ಬೈಕಿನ ಪವರ್‌ಟ್ರೇನ್‌ನಲ್ಲಿ ಬಿಎಂಡಬ್ಲ್ಯು ಶಿಫ್ಟ್ ಕ್ಯಾಮ್ ತಂತ್ರಜ್ಞಾನ ಹೊಂದಿದ್ದು, ಇದು ಅತ್ಯುತ್ತಮ ಫರ್ಪಾಮೆನ್ಸ್‌ನೊಂದಿಗೆ ಇಂಧನ ಬಳಕೆಯ ಅಂಕಿಅಂಶಗಳನ್ನು ಸುಧಾರಿಸುತ್ತದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಆರ್ 1250 ಆರ್‌ಟಿ ಮಾದರಿಯಲ್ಲಿ 1254ಸಿಸಿ, 2-ಸಿಲಿಂಡರ್, ಬಾಕ್ಸರ್ ಎಂಜಿನ್ ಮೂಲಕ 134.1 ಬಿಎಚ್‌ಪಿ ಪವರ್ ಮತ್ತು 143 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಮೂಲಕ ಹೊಸ ಮೋಟಾರ್‌ಸೈಕಲ್ ಕೇವಲ 3.7 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗದೊಂದಿಗೆ ಪ್ರತಿ ಗಂಟೆಗೆ ಗರಿಷ್ಠ 200 ಕಿ.ಮೀ ಗರಿಷ್ಠ ವೇಗವನ್ನು ಸಾಧಿಸುತ್ತದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಇನ್ನು ಕೆ 1600 ಜಿಟಿಎಲ್ ಮಾದರಿಯು ಹೊಸ ಟೂರಿಂಗ್ ಶ್ರೇಣಿಯ ಸ್ಪೋರ್ಟಿಯರ್ ಮಾದರಿಯಾಗಿದ್ದರೆ ಹೊಸ ಕೆ 1600 ಬ್ಯಾಗರ್ ತುಸು ಹೆಚ್ಚುವರಿ ಐಷಾರಾಮಿ ಮತ್ತು ಸೌಕರ್ಯದೊಂದಿಗೆ ಅರಾಮದಾಯಕ ಪ್ರಯಾಣವನ್ನು ನೀಡುತ್ತದೆ. ಇದರಲ್ಲಿ ಹೊಸ ಕೆ 1600 ಜಿಟಿಎಲ್ ಬೆಲೆಗಳು ರೂ 32.00 ಲಕ್ಷದಿಂದ ಪ್ರಾರಂಭವಾದರೆ ಕೆ 1600 ಬ್ಯಾಗರ್ ಬೆಲೆಗಳು ರೂ 29.90 ಲಕ್ಷದಿಂದ ಪ್ರಾರಂಭವಾಗುತ್ತವೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಆದರೆ ಟೂರಿಂಗ್ ಶ್ರೇಣಿಯಲ್ಲಿ ಅಗ್ರಸ್ಥಾನದಲ್ಲಿ ಅತ್ಯಂತ ದುಬಾರಿ ಮೋಟಾರ್‌ಸೈಕಲ್ ಮಾದರಿಯಾಗಿರುವ ಕೆ 1600 ಗ್ರ್ಯಾಂಡ್ ಅಮೆರಿಕಾ ಮಾದರಿಯು ಇತರೆ ಟೂರಿಂಗ್ ಮಾದರಿಗಳಿಂತ ಹೆಚ್ಚಿನ ಮಟ್ಟದ ಫೀಚರ್ಸ್‌ಗಳೊಂದಿಗೆ ಐಷಾರಾಮಿ ರೈಡಿಂಗ್ ಒದಗಿಸಲಿದ್ದು, ಇದು ಎಕ್ಸ್‌ಶೋರೂಂ ಪ್ರಕಾರ ರೂ. 33 ಲಕ್ಷ ಬೆಲೆ ಹೊಂದಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಹೊಸ ಕೆ 1600 ಮೋಟಾರ್‌ಸೈಕಲ್ ಶ್ರೇಣಿಯ ಎಲ್ಲಾ ಮಾದರಿಗಳಲ್ಲೂ ಕಂಪನಿಯು 1,649 ಸಿಸಿ, 6-ಸಿಲಿಂಡರ್, ಇನ್-ಲೈನ್ ಎಂಜಿನ್ ನೀಡಿದ್ದು, ಈ ಎಂಜಿನ್ 6,750 ಆರ್‌ಪಿಎಂಂ ನಲ್ಲಿ 158.24 ಬಿಎಚ್‌ಪಿ ಮತ್ತು 5,250 ಆರ್‌ಪಿಎಂನಲ್ಲಿ 180 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಹೊಸ ಬೈಕ್ ಮಾದರಿಗಳ ಖರೀದಿಗಾಗಿ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ಹಲವಾರು ಹಣಕಾಸು ಸಂಸ್ಥೆಗಳಿಂದ ಸುಲಭ ಮತ್ತು ಸರಳವಾದ ಹಲವಾರು ಸಾಲಸೌಲಭ್ಯಗಳನ್ನು ನೀಡುತ್ತಿದ್ದು, ಹಣಕಾಸು ಸೌಲಭ್ಯದೊಂದಿಗೆ ಹೊಸ ಬೈಕ್ ಖರೀದಿ ಮೇಲೆ ಮೂರು ವರ್ಷಗಳ ಪ್ರಮಾಣಿತ ವಾರಂಟಿ ಅಥವಾ ಅನಿಯಮಿತ ಕಿಲೋಮೀಟರ್‌ ತನಕ ವಾರಂಟಿ ಘೋಷಿಸಿದೆ.

ಭಾರತದಲ್ಲಿ ಹೊಸ ಟೂರಿಂಗ್ ರೇಂಜ್ ಬೈಕ್‌ಗಳನ್ನು ಬಿಡುಗಡೆ ಮಾಡಿದ ಬಿಎಂಡಬ್ಲ್ಯು ಮೋಟೊರಾಡ್

ಹೊಸ ಬೈಕ್ ಖರೀದಿದಾರರಿಗೆ ಕಂಪನಿಯು ಗರಿಷ್ಠ ವಾರಂಟಿ ಜೊತೆಗೆ ಹೆಚ್ಚುವರಿ ಮೌಲ್ಯದೊಂದಿಗೆ ಐದು ವರ್ಷಗಳ ತನಕ ವಿಸ್ತರಿತ ವಾರಂಟಿ ಮತ್ತು 24X7 ರೋಡ್ ಅಸಿಸ್ಟ್ ಸೇವೆಗಳನ್ನು ಒದಗಿಸುತ್ತದೆ.

Most Read Articles

Kannada
English summary
Bmw motorrad india launches its new touring range details
Story first published: Wednesday, August 17, 2022, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X