ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ದೇಶಾದ್ಯಂತ ಇವಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಪ್ರಮುಖ ವಾಹನ ಕಂಪನಿಗಳ ಇವಿ ಸ್ಕೂಟರ್‌ಗಳಲ್ಲಿ ಕಂಡುಬರುತ್ತಿರುವ ಬೆಂಕಿ ಅನಾಹುತಗಳು ಗ್ರಾಹಕರಲ್ಲಿ ಗೊಂದಲ ಮೂಡಿಸುತ್ತಿದ್ದು, ಇವಿ ಸ್ಕೂಟರ್‌ಗಳ ಸುರಕ್ಷತೆ ಕುರಿತಂತೆ ಗ್ರಾಹಕರಲ್ಲಿ ಆತಂಕ ಮೂಡಿಸಿವೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಬಜೆಟ್ ಬೆಲೆಯ ಹೆಸರಿನಲ್ಲಿ ಸುರಕ್ಷಾ ಮಾನದಂಡಗಳನ್ನು ಉಲ್ಲಂಘಿಸಿ ಇವಿ ಸ್ಕೂಟರ್ ಮಾರಾಟ ಮಾಡಿದ ಪರಿಣಾಮ ಬೆಂಕಿ ಅವಘಡಗಳಿಗೆ ಮುಖ್ಯ ಕಾರಣವಾಗಿರುವ ಬಗ್ಗೆ ಅರಿತಿರುವ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಪ್ರಮುಖ ಐದು ಇ-ವಾಹನ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳ ಕುರಿತಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪ್ರಾಧಿಕಾರವು ಇ-ವಾಹನ ತಯಾರಕರಿಗೆ ಶೋಕಾಸ್ ನೋಟಿಸ್ ನೀಡಿದ್ದು, ಇ-ವಾಹನಗಳಲ್ಲಿನ ಬೆಂಕಿ ಅವಘಡಗಳನ್ನು ತಡೆಯಲು ಏನೆಲ್ಲಾ ಕ್ರಮ ಕೈಗೊಂಡಿದ್ದಿರಿ ಮತ್ತು ಮಾನದಂಡಗಳ ಪಾಲನೆ ಆಗುತ್ತಿದೆಯಾ ಎಂದು ಇವಿ ವಾಹನ ಉತ್ಪಾದನಾ ಕಂಪನಿಗಳಿಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಸೆಂಟರ್ ಫಾರ್ ಫೈರ್ ಎಕ್ಸ್‌ಪ್ಲೋಸಿವ್ ಅಂಡ್ ಎನ್ವಿರಾನ್‌ಮೆಂಟ್ ಸೇಫ್ಟಿ (CFEES) ತಜ್ಞರ ತಂಡವು ಈಗಾಗಲೇ ವಿದ್ಯುತ್ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲು ಪ್ರಮುಖ ಕಾರಣಗಳನ್ನು ಬಿಚ್ಚಿರುವುದರಿಂದ CFEES ತಜ್ಞರ ಸಮಿತಿಯಿಂದಲೂ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರವು ವರದಿ ಕೇಳಿದ್ದು, ನಿಗದಿತ ಮಾನದಂಡಗಳ ಪಾಲನೆ ಕುರಿತಾಗಿ ಇ ವಾಹನ ಕಂಪನಿಗಳಿಗೆ ಪ್ರಾಧಿಕಾರವು ಹೊಸ ಮಾರ್ಗಸೂಚಿಗಳನ್ನು ನೀಡಬಹುದಾಗಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಘಟನೆಗಳಿಗೆ ಪ್ರಾಧಿಕಾರವು ಬ್ಯಾಟರಿ ಉತ್ಪಾದನಾ ಕಂಪನಿಗಳನ್ನೇ ಜವಾಬ್ದಾರನ್ನಾಗಿ ಮಾಡಬಹುದಾಗಿದ್ದು, ಹೊಸ ಸುರಕ್ಷಾ ಮಾನದಂಡಗಳನ್ನು ಪಾಲನೆಯಲ್ಲಿ ವಿಫಲವಾಗಿರುವ ಕಂಪನಿಗಳಿಗೆ ಪ್ರಾಧಿಕಾರವು ದಂಡವಿಧಿಸುವುದರ ಜೊತೆಗೆ ಈಗಾಗಲೇ ಮಾರಾಟಮಾಡಲಾದ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳನ್ನು ಉನ್ನತೀಕರಿಸಿಕೊಡುವಂತೆ ಆದೇಶ ನೀಡಬಹುದಾಗಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಈ ವರ್ಷ ದೇಶದಾದ್ಯಂತ ಇ-ಸ್ಕೂಟರ್‌ಗಳಲ್ಲಿ 38ಕ್ಕೂ ಹೆಚ್ಚು ಬೆಂಕಿಯ ಪ್ರಕರಣಗಳು ವರದಿಯಾಗಿದ್ದು, ಪುಣೆಯಲ್ಲಿ ಓಲಾ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಓಲಾ ಇವಿ ಸ್ಕೂಟರ್ ಬೆಂಕಿ ಅವಘಡದ ನಂತರ ಒಕಿನಾವಾದ ಪ್ಯೂರ್ ಇವಿ, ಜಿತೇಂದ್ರ ಎಲೆಕ್ಟ್ರಿಕ್ ಮತ್ತು ಇತರೆ ಹಲವು ಸ್ಟಾರ್ಟ್ ಅಪ್ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿಯ ಕೆಲವು ಪ್ರಕರಣಗಳು ವರದಿಯಾಗಿದ್ದು, ಇದೇ ಸಮಯದಲ್ಲಿ ಜೂನ್‌ ಆರಂಭದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿನಲ್ಲೂ ಕೂಡಾ ಬೆಂಕಿ ಕಾಣಿಸಿಕೊಂಡಿತ್ತು.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಬೆಂಕಿ ಅವಘಡಗಳಿಂದ ಎಚ್ಚೆತ್ತುಕೊಂಡ ಪ್ರಮುಖ ಇವಿ ಕಂಪನಿಗಳು ತಾಂತ್ರಿಕ ದೋಷ ಹೊಂದಿರಬಹುದಾದ ಸುಮಾರು 6 ಸಾವಿರಕ್ಕೂ ಹೆಚ್ಚು ವಾಹನಗಳನ್ನು ಹಿಂಪಡೆದಿದ್ದು, ಒಕಿನಾವ ಕಂಪನಿಯೊಂದಿಗೆ ಸುಮಾರು 3 ಸಾವಿರ ಇವಿ ಸ್ಕೂಟರ್‌ಗಳನ್ನು ಹಿಂಪಡೆಯುವ ಮೂಲಕ ಆಗಬಹುದಾದ ಅನಾಹುತಕ್ಕೆ ಬ್ರೇಕ್ ಹಾಕಿವೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಹೀಗಾಗಿ ಭವಿಷ್ಯದಲ್ಲಿ ಬ್ಯಾಟರಿ ಸುರಕ್ಷತೆಗಾಗಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಕೆಲವು ಹೊಸ ಮಾನದಂಡಗಳನ್ನು ಶಿಫಾರಸ್ಸು ಮಾಡಿತ್ತು. ಎಲೆಕ್ಟ್ರಿಕ್ ವಾಹನ ತಯಾರಕರು ವಿಶ್ವಾಸಾರ್ಹತೆ, ಚಾರ್ಜಿಂಗ್ ಸಾಮರ್ಥ್ಯ, ವಿಭಿನ್ನ ಪರಿಸರಗಳು ಮತ್ತು ತಾಪಮಾನಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯವನ್ನು ಪರಿಶೀಲಿಸಲು ಬ್ಯಾಟರಿಗಳನ್ನು ಪ್ರತ್ಯೇಕವಾಗಿ ಪರೀಕ್ಷಿಸಬೇಕಾಗುತ್ತದೆ ಎಂದು ಸಲಹೆ ನೀಡಿತ್ತು.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಇದರಿಂದ ಎಲ್ಲಾ ಇವಿ ವಾಹನ ತಯಾರಕ ಕಂಪನಿಗಳಿಗೆ ಕೇಂದ್ರ ಸಾರಿಗೆ ಇಲಾಖೆಯು ಈಗಾಗಲೇ ಹೊಸ ಮಾನದಂಡಗಳನ್ನು ಜಾರಿ ತಂದಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಇವಿ ವಾಹನಗಳು ಹೊಸ ಮಾನದಂಡಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಅಗ್ನಿ ಅವಘಡಗಳ ಕುರಿತು ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಂಡಿದ್ದ ತನಿಖಾ ಸಮಿತಿಯು ಈಗಾಗಲೇ ಪ್ರಾಥಮಿಕ ವರದಿ ಸಲ್ಲಿಸಿದ್ದು, ವರದಿಯಲ್ಲಿ ತನಿಖಾ ಸಮಿತಿಯು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಯಲ್ಲಿ ಕಂಡುಬರುತ್ತಿರುವ ಅಗ್ನಿ ಅವಘಡಗಳಿಗೆ ಬ್ಯಾಟರಿ ವಿಭಾಗದಲ್ಲಿನ ಕೂಲಿಂಗ್ ತಂತ್ರಜ್ಞಾನದ ಕೊರತೆಯೇ ಘಟನೆಗಳಿಗೆ ಮುಖ್ಯ ಕಾರಣವೆಂದು ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ದೀರ್ಘಕಾಲಿಕ ಪ್ರಯಾಣದ ನಂತರ ಬ್ಯಾಟರಿ ವಿಭಾಗದಲ್ಲಿ ಹೆಚ್ಚಿನ ಮಟ್ಟದ ಶಾಖ ಉತ್ಪತ್ತಿಯಾಗಲಿದ್ದು, ಇದರಿಂದ ಬ್ಯಾಟರಿಗಳಲ್ಲಿನ ಶೆಲ್‌ಗಳಲ್ಲಿ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಲಾಗಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಹೀಗಾಗಿ ಬ್ಯಾಟರಿ ವಿಭಾಗದಲ್ಲಿ ಸೂಕ್ತವಾದ ಕೂಲಿಂಗ್ ತಂತ್ರಜ್ಞಾನ ಅಳವಡಿಸದ ಹೊರತು ಇಂತಹ ಘಟನೆಗಳು ಭವಿಷ್ಯದಲ್ಲಿ ಮತ್ತೆ ಮರುಕಳಿಸುವ ಎಚ್ಚರಿಕೆ ನೀಡಲಾಗಿದ್ದು, ಬ್ಯಾಟರಿಗಳಲ್ಲಿ ಕೂಲಿಂಗ್ ತಂತ್ರಜ್ಞಾನವನ್ನು ಈಗಾಗಲೇ ವಿವಿಧ ಇವಿ ಕಾರುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇವಿ ಸ್ಕೂಟರ್‌ಗಳಲ್ಲಿ ಬೆಂಕಿ ಅವಘಡ: ಪ್ರಮುಖ ವಾಹನ ಕಂಪನಿಗಳಿಗೆ ಶೋಕಾಸ್ ನೋಟಿಸ್

ಆದರೆ ಬಜೆಟ್ ಬೆಲೆ ಇವಿ ಸ್ಕೂಟರ್‌ಗಳಲ್ಲಿ ತಂತ್ರಜ್ಞಾನ ಕೊರತೆ ಹೆಚ್ಚಿದ್ದು, ಇದೇ ಕಾರಣಕ್ಕೆ ಸ್ಕೂಟರ್‌ಗಳು ಚಾಲನೆಯಿರುವಾಗಲೇ ಕೆಲವೊಮ್ಮೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಸದ್ಯಕ್ಕೆ ಇವಿ ವಾಹನಗಳಲ್ಲಿನ ಅಗ್ನಿ ಅವಘಡ ಕುರಿತಾಗಿ ಇದು ತನಿಖೆಯ ಪ್ರಾಥಮಿಕ ವರದಿಯಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ತನಿಖಾ ತಂಡವು ಸ್ಪಷ್ಟನೆ ನೀಡಿದೆ.

Most Read Articles

Kannada
English summary
Ccpa issues notices to ev manufacturers for fire incidents
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X