ಓಲಾ ಇವಿ 200 ಕಿ.ಮೀ ಚಾಲೆಂಜ್: ಹತ್ತು ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಆಫರ್..

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹೊಸ ಹೊಸ ಪ್ರಯತ್ನಗಳೊಂದಿಗೆ ಯಶಸ್ವಿಯಾಗುತ್ತಿದ್ದು, ಮೈಲೇಜ್ ವಿಚಾರವಾಗಿ ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿ ನೀಡುತ್ತಿರುವ ಕಂಪನಿಯು ತನ್ನ ಕಾರ್ಯಕ್ಷಮತೆ ಸಾಬೀತುಪಡಿಸಲು ತನ್ನ ಗ್ರಾಹಕರಿಗೆ ಹೊಸ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಓಲಾ ಇವಿ ಸ್ಕೂಟರ್ ಮಾಲೀಕರೊಬ್ಬರು ಇತ್ತೀಚೆಗೆ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 202 ಕಿ.ಮೀ ಕ್ರಮಿಸುವ ಮೂಲಕ ಇವಿ ಸ್ಕೂಟರ್ ಬ್ಯಾಟರಿ ಕಾರ್ಯಕ್ಷಮತೆ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರತಿ ಚಾರ್ಜ್‌ಗೆ ಕಂಪನಿಯು ನಿಗದಿಪಡಿಸಿರುವ ಮೈಲೇಜ್ ಪ್ರಮಾಣಕ್ಕಿಂತಲೂ ಹೆಚ್ಚು ಮೈಲೇಜ್ ನೀಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಗ್ರಾಹಕನಿಗೆ ಓಲಾ ಇವಿ ಕಂಪನಿಯು ಮತ್ತೊಂದು ಇವಿ ಸ್ಕೂಟರ್ ಅನ್ನು ಉಚಿತವಾಗಿ ನೀಡಿ ಅಭಿನಂದಿಸಿತ್ತು.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಎಸ್1 ಪ್ರೊ ಮಾದರಿಯು 3.97kWh ಲೀಥಿಯಂ ಅಯಾನ್ ಬ್ಯಾಟರಿ ಮೂಲಕ 181 ಕಿ.ಮೀ ಮೈಲೇಜ್ ಹೊಂದಿದ್ದರೂ ಓಲಾ ಮಾಲೀಕ ಕಾರ್ತಿಕ್ ಬಿಆರ್ ಎನ್ನುವವರು ಪೂರ್ತಿ ಚಾರ್ಜ್‌ನೊಂದಿಗೆ ಇಕೋ ಮೋಡ್ ಮೂಲಕ 202 ಕಿ.ಮೀ ರೈಡ್ ಮಾಡಿದ್ದರು.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಅರ್ಧದಷ್ಟು ನಗರಪ್ರದೇಶಗಳಲ್ಲಿ ಮತ್ತು ಇನ್ನು ಅರ್ಧದಷ್ಟು ಹೈವೇ ಚಾಲನೆ ಮೂಲಕ ಇನ್ನು ಶೇ.3 ರಷ್ಟು ಚಾರ್ಜ್ ಉಳಿತಾಯದೊಂದಿಗೆ 202 ಕಿ.ಮೀ ಯಶಸ್ವಿಯಾಗಿ ರೈಡ್ ಮಾಡಿದ್ದರು. ಪ್ರತಿ ಗಂಟೆಗೆ 48 ಕಿ.ಮೀ ಟಾಪ್ ಸ್ಪೀಡ್‌ನಲ್ಲಿ ಚಾಲನೆ ಮಾಡಿ ಹೆಚ್ಚು ಮೈಲೇಜ್ ದಾಖಲಿಸಿದ ಕಾರ್ತಿಕ್ ಚಾಲನಾ ಶೈಲಿಯನ್ನು ಮೆಚ್ಚಿ ಓಲಾ ಕಂಪನಿಯು ಎಸ್1 ಪ್ರೊ ಮಾದರಿಯಲ್ಲಿ ಗೇರುವಾ ಎಡಿಷನ್ ಅನ್ನು ಉಡುಗೊರೆಯಾಗಿ ನೀಡಿತ್ತು.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಕಾರ್ತಿಕ್ ಬಿಆರ್ ಸಾಧನೆಯನ್ನು ಮೆಚ್ಚಿರುವ ಕಂಪನಿಯು ಇನ್ನು ಹತ್ತು ಗ್ರಾಹಕರಿಗೆ ಪ್ರತಿ ಚಾರ್ಜ್‌ಗೆ ಕನಿಷ್ಠ 200 ಕಿ.ಮೀ ಕ್ರಮಿಸುವ ಚಾಲೆಂಜ್ ನೀಡಿದ್ದು, ಸ್ಪರ್ಧೆಯಲ್ಲಿ ಗೆಲ್ಲುವ ಮೊದಲ ಹತ್ತು ಗ್ರಾಹಕರಿಗೆ ಉಚಿತವಾಗಿ ಎಸ್1 ಪ್ರೊ ಮಾದರಿಯ ಗೇರುವಾ ಎಡಿಷನ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಹೇಳಿಕೊಂಡಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಗ್ರಾಹಕರು ಟ್ವಿಟರ್ ಹ್ಯಾಂಡಲ್ ಮೂಲಕ ವಾಹನದ ಸರಿಯಾದ ಮಾಹಿತಿ ಒದಗಿಸಬೇಕಿದ್ದು, ಆಯ್ಕೆಯಾಗುವ ಹತ್ತು ಗ್ರಾಹಕರಿಗೆ ಜೂನ್ ಆರಂಭದಲ್ಲಿ ಕಂಪನಿಯು ತನ್ನ ಬೃಹತ್ ವಾಹನ ಉತ್ಪಾದನಾ ಘಟಕದಲ್ಲಿಯೇ ಹೊಸ ಸ್ಕೂಟರ್ ವಿತರಿಸುವುದಾಗಿ ಮಾಹಿತಿ ಹಂಚಿಕೊಂಡಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಹೀಗಾಗಿ ದೇಶದ ಯಾವುದೇ ಮೂಲೆಯಿಂದಲೂ ಆಸಕ್ತ ಗ್ರಾಹಕರು ಓಲಾ ಇವಿ ಸ್ಕೂಟರ್ ಗೆಲ್ಲುವ ಸ್ಪರ್ಧೆಯಲ್ಲಿ ಭಾಗಿಯಾಗಬಹುದಾಗಿದ್ದು, ಉಚಿತವಾಗಿ ಸ್ಕೂಟರ್ ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಬಹುದು.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಇನ್ನು ಓಲಾ ಇವಿ ಸ್ಕೂಟರ್‌ ಅತ್ಯತ್ತಮ ಕಾರ್ಯಕ್ಷಮತೆ, ಗರಿಷ್ಠ ಮೈಲೇಜ್, ಪ್ರೀಮಿಯಂ ಫೀಚರ್ಸ್ ಮತ್ತು ಬಜೆಟ್ ಬೆಲೆಯು ಹೊಸ ಸ್ಕೂಟರ್ ಆಯ್ಕೆ ಮೌಲ್ಯವನ್ನು ಹೆಚ್ಚಿಸಿದ್ದು, ಪ್ರತಿ ಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

3.97kWh ಲೀಥಿಯಂ ಅಯಾನ್ ಬ್ಯಾಟರಿ ಆಯ್ಕೆ ಹೊಂದಿರುವ ಎಸ್1 ಪ್ರೊ ಮಾದರಿಯಲ್ಲಿ ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದ್ದು, ಪ್ರತಿ ಗಂಟೆಗೆ ಇದು 115ಕಿ.ಮೀ ಟಾಪ್ ಸ್ಪೀಡ್‌ ಹೊಂದಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಹೈಪರ್ ಮೋಡ್‌ಗಳಲ್ಲಿ ಹೆಚ್ಚಿನ ವೇಗದಲ್ಲಿ ಕ್ರಮಿಸಿದರೂ ಇಕೋ ಮೋಡ್‌ನಲ್ಲಿ ಕಡಿಮೆ ವೇಗದೊಂದಿಗೆ ಹೆಚ್ಚಿನ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, ಹೊಸ ಸ್ಕೂಟರ್ ಇದೀಗ 2.0 ಸಾಫ್ಟ್‌ವೇರ್ ಅಪ್‌ಡೇಟ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗುತ್ತಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಓಲಾ ಇವಿ ಸ್ಕೂಟರ್‌ಗಳು ಅತ್ಯುತ್ತಮ ವಿನ್ಯಾಸದೊಂದಿಗೆ ಗರಿಷ್ಠ ಮಟ್ಟದ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಸ್ಕೂಟರ್‌ಗಳಲ್ಲಿ ಟ್ವಿನ್ ಪಾಡ್ ಎಲ್ಇಡಿ ಸೆಟ್ಅಪ್, ಎಲ್ಇಡಿ ಡಿಆರ್‌ಎಲ್ಎಸ್, ಎಲ್ಇಡಿ ಟೈಲ್‌ಲ್ಯಾಂಪ್, ಕೌಂಟ್‌ರ್ಡ್ ಸೀಟ್, ಅಲಾಯ್ ವ್ಹೀಲ್, 36-ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಪೋರೇಜ್, ರಿಯರ್ ಗ್ರ್ಯಾಬ್ ರೈಲ್ಸ್, ಫ್ರಂಟ್ ಸ್ಟೋರೇಜ್ ಪ್ಯಾಕೇಟ್, ಲಗೇಜ್ ಹುಕ್ ಮತ್ತು ಹತ್ತು ವಿವಿಧ ಬಣ್ಣಗಳ ಆಯ್ಕೆ ಹೊಂದಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಹೊಸ ಸ್ಕೂಟರ್‌ಗಳು 1,859 ಎಂಎಂ ಉದ್ದ, 712 ಎಂಎಂ ಅಗಲ, 1,160 ಎಂಎಂ ಎತ್ತರ, 1,359 ಎಂಎಂ ವ್ಹೀಲ್ ಬೆಸ್, 792 ಎಂಎಂ ಸೀಟ್ ಹೈಟ್, 125 ಕೆ.ಜಿ ತೂಕ ಹೊಂದಿದ್ದು, ಮುಂಭಾಗದಲ್ಲಿ ಸಿಂಗಲ್ ಫೋರ್ಕ್ ಸಸ್ಫೆಷನ್ ಮತ್ತು ಹಿಂಬದಿಯಲ್ಲಿ ಮೊನೊ ಶಾಕ್ ಸಸ್ಷೆಷನ್‌ನೊಂದಿಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಜೋಡಣೆ ಹೊಂದಿವೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಜೊತೆಗೆ ಹೊಸ ಸ್ಕೂಟರ್‌ನಲ್ಲಿ 7-ಇಂಚಿನ ಟಿಎಫ್‌ಟಿ ಟಚ್‌ಸ್ಕ್ರೀನ್ ಮತ್ತು ಶಟರ್‌ಪ್ರೂಫ್ ಸ್ಕ್ರೀನ್‌ನೊಂದಿಗೆ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಆನ್ ಬೋರ್ಡ್ ನ್ಯಾನಿಗೇಷನ್‌ಗಾಗಿ ಇಸಿಮ್ ಇಂಟರ್‌ನೆಂಟ್ ಕನೆಕ್ಟಿವಿಟಿ, ಸ್ಮಾಟ್‌ಫೋರ್ಟ್ ಮೂಲಕ ವಿವಿಧ ತಾಂತ್ರಿಕ ಅಂಶಗಳನ್ನು ನಿಯಂತ್ರಿಸಲು ಕನೆಕ್ಟೆಡ್ ಫೀಚರ್ಸ್ ಸಹ ನೀಡಲಾಗಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

2.0 ಸಾಫ್ಟ್‌ವೇರ್ ಅಪ್‌ಡೇಟ್‌ ಹೊಂದಿರುವ ಎಸ್‍1 ಪ್ರೊ ಮಾದರಿಯು ಎಕ್ಸ್‌ಶೋರೂಂ ಪ್ರಕಾರ 1.30 ಲಕ್ಷದಿಂದ ರೂ. 1.40 ಲಕ್ಷಕ್ಕೆ ಬೆಲೆ ಏರಿಕೆ ಪಡೆದುಕೊಂಡಿದ್ದು, ಕಂಪನಿಯು ಇದೀಗ ಮೂರನೇ ಹಂತದ ಖರೀದಿ ವಿಂಡೋ ತೆರೆದಿದೆ.

ಓಲಾ ಇವಿ 200 ಕಿ.ಮೀ ಚಾಲೆಂಜ್: ವಿಜೇತರಿಗೆ ಉಚಿತ ಎಸ್1 ಪ್ರೊ ಎಲೆಕ್ಟಕ್ ಸ್ಕೂಟರ್ ಆಫರ್..

ಓಲಾ ಎಲೆಕ್ಟ್ರಿಕ್ ಕಂಪನಿಯು ಹೊಸ ಇವಿ ಸ್ಕೂಟರ್ ಮಾದರಿಗಾಗಿ ಇದುವರೆಗೆ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದ್ದು, ಬುಕಿಂಗ್ ಆಧರಿಸಿ ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ. ಆರಂಭದಲ್ಲಿ ಉತ್ಪಾದನಾ ಪ್ರಕ್ರಿಯೆಯಲ್ಲಿ ಆದ ಗೊಂದಲಗಳಿಂದ ನಿಧಾನಗೊಂಡಿದ್ದ ವಿತರಣೆಯು ಇದೀಗ ವೇಗಪಡೆದುಕೊಂಡಿದ್ದು, ಕಂಪನಿಯು ಇದೀಗ ಬುಕಿಂಗ್ ಸಲ್ಲಿಸಿರುವ ಇನ್ನುಳಿದ ಗ್ರಾಹಕರಿಗೆ ಖರೀದಿಗೆ ಪ್ರಕ್ರಿಯೆಗೆ ಆಹ್ವಾನ ನೀಡಿದೆ.

Most Read Articles

Kannada
English summary
Customers who cross 200km range in a single charge can get free ola s1 pro
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X