ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ತನ್ನ ಸಹ ಬ್ರಾಂಡ್ ಸೈಬೋರ್ಗ್ ಬ್ರಾಂಡ್ ಅಡಿ ವಿವಿಧ ಮಾದರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುವ ಬೃಹತ್ ಯೋಜನೆ ರೂಪಿಸಿದ್ದು, ಸೈಬೋರ್ಗ್ ಬ್ರಾಂಡ್ ಅಡಿಯಲ್ಲಿ ಮೂರನೇ ಬೈಕ್ ಮಾದರಿಯನ್ನು ಇದೀಗ ಅನಾವರಣಗೊಳಿಸಲಾಗಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆಗಳ ಅಡಿಯಲ್ಲಿ ಇವಿ ಸ್ಟಾರ್ಟ್ಅಪ್ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದ್ದು, ಕಳೆದ ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಹೊಸ ಇವಿ ವಾಹನ ಉತ್ಪಾದನಾ ಆಟೋ ಉದ್ಯಮಕ್ಕೆ ಲಗ್ಗೆಯಿಟ್ಟಿವೆ. ಗುರಾಗ್ರಾಮ್ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಸಹ ತನ್ನ ಸಹ ಬ್ರಾಂಡ್ ಸೈಬೋರ್ಗ್ ನಿರ್ಮಾಣದ ಅಡಿ ವಿವಿಧ ಸೆಗ್ಮೆಂಟ್‌ಗಳಲ್ಲಿ ಇವಿ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸೈಬೋರ್ಗ್ ಕಂಪನಿಯು ಈಗಾಗಲೇ ಯೋಧ ಎಲೆಕ್ಟ್ರಿಕ್ ಕ್ರೂಸರ್ ಬೈಕ್ ಮತ್ತು ಬಾಬ್-ಇ ಡರ್ಟ್ ಬೈಕ್‌ಗಳನ್ನು ಅನಾವರಣಗೊಳಿಸಿದ್ದು, ಇದೀಗ ಹೈ-ಸ್ಪೀಡ್ ವೈಶಿಷ್ಟ್ಯತೆಯ ಜಿಟಿ 120 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಜಿಟಿ 120 ಎಲೆಕ್ಟ್ರಿಕ್ ಸ್ಪೋರ್ಟ್ ಬೈಕ್ ಮಾದರಿಯು ಮೊದಲೆರಡು ಬೈಕ್ ಮಾದರಿಗಳಂತೆ ಪ್ರಮುಖ ತಾಂತ್ರಿಕ ವೈಶಿಷ್ಟ್ಯತೆಗಳನ್ನು ಹೊಂದಿದ್ದರೂ ಎಲೆಕ್ಟ್ರಿಕ್ ಮೋಟಾರ್ ಮತ್ತು ಗರಿಷ್ಠ ವೇಗದಲ್ಲಿ ಮಿಂಚಲಿದ್ದು, 6000 ವೊಲ್ಟ್ ಮೋಟಾರ್ ಪವರ್ ಮೂಲಕ ಇದು ಪ್ರತಿ ಗಂಟೆಗೆ 125 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸೈಬೋರ್ಗ್ ಕಂಪನಿಯು ಹೊಸ ಜಿಟಿ 120 ಬೈಕ್ ಮಾದರಿಯಲ್ಲಿ ಬಿಎಲ್‌ಡಿಸಿ ಹಬ್ ಮೋಟಾರ್ ಬಳಕೆ ಮಾಡಿದ್ದು, ತಗೆದುಹಾಕಲು ಸಾಧ್ಯವಿಲ್ಲದ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದೆ. ಬ್ಯಾಟರಿ ಪ್ಯಾಕ್ ತೆಗೆದುಹಾಕಲು ಸಾಕಷ್ಟು ತೂಕ ಹೊಂದಿರುವ ಹಿನ್ನಲೆಯಲ್ಲಿ ಫಿಕ್ಸ್ಡ್ ಬ್ಯಾಟರಿ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಚಾರ್ಜಿಂಗ್ ಸರ್ಪೊಟ್ ಹೊಂದಿರುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಇದನ್ನು ಚಾರ್ಜ್ ಮಾಡಬಹುದಾಗಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹೊಸ ಇವಿ ಸ್ಪೋರ್ಟ್ ಬೈಕ್ ಮಾದರಿಯಲ್ಲಿ ಕಂಪನಿಯು 4.68 kWH ಲೀಥಿಯಂ ಅಯಾನ್ ಬ್ಯಾಟರಿ ಬಳಕೆ ಮಾಡಿದ್ದು, 125 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 180 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಸೈಬೋರ್ಗ್ ಕಂಪನಿಯು ಬಿಡುಗಡೆ ಮಾಡಲಿರುವ ಇನ್ನೆರಡು ಇ-ಬೈಕ್ ಮಾದರಿಗಳಲ್ಲಿ ಯೋಧ ಮಾದರಿಯು ಪ್ರತಿ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ನೀಡಲಿದ್ದರೆ ಡರ್ಟ್ ಬಾಬ್-ಇ ಬೈಕ್ ಮಾದರಿಯು 110 ಕಿ.ಮೀ ಮೈಲೇಜ್ ಹೊಂದಿದ್ದು, ಮೂರನೇ ಬೈಕ್ ಮಾದರಿಯಾದ ಜಿಟಿ 120 ಮಾದರಿಯು ಗರಿಷ್ಠ 180 ಕಿ.ಮೀ ಮೈಲೇಜ್ ಪ್ರೇರಿತ ಬ್ಯಾಟರಿ ಪ್ಯಾಕ್ ಹೊಂದಿರಲಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹೊಸ ಬೈಕಿನಲ್ಲಿ 260 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್ ನೀಡಲಾಗಿದ್ದು, ರಿವರ್ಸ್ ಮೋಡ್, ವಿವಿಧ ರೀತಿದ ಶಬ್ದಗಳನ್ನು ಒಳಗೊಂಡಿರುವ ಪಾರ್ಕಿಂಗ್ ಅಸಿಸ್ಟ್ ಸೌಲಭ್ಯಗಳನ್ನು ಬೈಕ್ ಚಾಲನೆಯನ್ನು ಸುಲಭವಾಗಿಸುತ್ತದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಇನ್ನುಳಿದಂತೆ ಹೊಸ ಜಿಟಿ 120 ಇವಿ ಸ್ಪೋರ್ಟ್ ಬೈಕಿನಲ್ಲಿ ಎಲ್ಇಡಿ ಸ್ಕ್ರೀನ್, ಐಪಿ65 ಪ್ರಮಾಣಿತ ಬಾಡಿ ಪ್ಯಾನೆಲ್, ರಿಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಸಿಬಿಎಸ್ ಬ್ರೇಕಿಂಗ್ ಸಿಸ್ಟಂ ಜೊತೆ ಫ್ರಂಟ್ ಡಿಸ್ಕ್ ಸೇರಿದಂತೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಅಪ್ ಮತ್ತು ಹಿಂಬದಿಯಲ್ಲಿ ವಿವಿಧ ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಷೆಷನ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಇನ್ನುಳಿದಂತೆ ಹೊಸ ಎಲೆಕ್ಟ್ರಿಕ್ ಬೈಕಿನಲ್ಲಿ ಸುರಕ್ಷತೆಗಾಗಿ ಜಿಯೋ ಫೆನ್ಸಿಂಗ್ ಸೇರಿದಂತೆ ಬ್ಯಾಟರಿ ಸ್ಟೇಟಸ್, ಯುಎಸ್‌ಬಿ ಚಾರ್ಜಿಂಗ್, ಬ್ಲೂಟೂಥ್, ಕೀ ಲೆಸ್ ಇಗ್ನಿಷನ್(ರಿಮೋಟ್ ಕಂಟ್ರೋಲ್), ಡಿಜಿಟಲ್ ಕ್ಲಸ್ಟರ್ ನೀಡಲಾಗಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹಾಗೆಯೇ ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ಮೋಟಾರ್, ಬ್ಯಾಟರಿ ಮತ್ತು ಬೈಕ್ ಬಿಡಿಭಾಗಗಳ ಮೇಲೆ 5 ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು, ಶೀಘ್ರದಲ್ಲಿಯೇ ಹೊಸ ಬೈಕ್ ಬೆಲೆ ಮತ್ತು ವಿತರಣಾ ಅವಧಿಯ ಮಾಹಿತಿಯನ್ನು ಹಂಚಿಕೊಳ್ಳಲಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಸೈಬೋರ್ಗ್ ಕಂಪನಿಯು ಹೊಸ ಇವಿ ಸ್ಪೋರ್ಟ್ ಬೈಕ್ ಬಿಡುಗಡೆಗೂ ಮುನ್ನ ಬಿಡುಗಡೆಗೂ ಮುನ್ನ ಯೋಧ ಕ್ರೂಸರ್ ಎಲೆಕ್ಟ್ರಿಕ್ ಬೈಕ್ ಮತ್ತು ಬಾಬ್-ಇ ಡರ್ಟ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಸೈಬೋರ್ಗ್ ಮೊದಲ ಇವಿ ಬೈಕ್ ಮುಂದಿನ ತಿಂಗಳು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಹೊಸ ಇವಿ ಬೈಕ್ ಮಾದರಿಗಳನ್ನು ಸೈಬೋರ್ಗ್ ಕಂಪನಿಯು ಸಂಪೂರ್ಣವಾಗಿ ಸ್ಥಳೀಯ ಬಿಡಿಭಾಗಗಳೊಂದಿಗೆ ಅಭಿವೃದ್ದಿಪಡಿಸಲಿದ್ದು, ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ವಾರ್ಷಿಕವಾಗಿ 40 ಸಾವಿರ ಯುನಿಟ್ ಉತ್ಪಾದನೆಗೆ ಯೋಜನೆ ರೂಪಿಸಿದೆ.

ಪ್ರತಿ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡುವ ಜಿಟಿ 120 ಸ್ಪೋರ್ಟ್ ಇವಿ ಬೈಕ್ ಅನಾವರಣಗೊಳಿಸಿದ ಸೈಬೋರ್ಗ್

ಗುರುಗ್ರಾಮ್‌ನಲ್ಲಿ ತನ್ನ ಮೊದಲ ಇವಿ ಬೈಕ್ ಉತ್ಪಾದನಾ ಘಟಕವನ್ನು ತೆರೆಯಲು ಉದ್ದೇಶಿಸಿರುವ ಇಗ್ನಿಟ್ರಾನ್ ಮೋಟೋಕಾರ್ಪ್ ಕಂಪನಿಯು ಇವಿ ವಾಹನಗಳೊಂದಿಗೆ ಬ್ಯಾಟರಿ ವಿನಿಯಮ ಕೇಂದ್ರಗಳ ಸ್ಥಾಪನೆಯ ಮೇಲೂ ಹೆಚ್ಚಿನ ಗಮನಹರಿಸಿದೆ. ಇವಿ ವಾಹನಗಳ ಬ್ಯಾಟರಿ ರೀಚಾರ್ಜ್‌ಗಾಗಿ ಗಂಟೆಗಟ್ಟಲೆ ಕಾಯುವುದನ್ನು ತಪ್ಪಿಸಲು ಬ್ಯಾಟರಿ ವಿನಿಯಮ ಕೇಂದ್ರಗಳು ಸಾಕಷ್ಟು ಸಹಕಾರಿಯಾಗಲಿದ್ದು, ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಪ್ರತಿ ಕಿ.ಮೀ ಗೆ ಒಂದರಂತೆ ಬ್ಯಾಟರಿ ವಿನಿಯಮ ಕೇಂದ್ರಗಳನ್ನು ತೆರೆಯುವ ಬೃಹತ್ ಯೋಜನೆ ರೂಪಿಸುತ್ತಿದೆ.

Most Read Articles

Kannada
English summary
Cyborg unveils gt 120 high speed electric sports bike details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X