ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ‌ರ‍್ಯಾಲಿಯಲ್ಲಿ ಒಂಬತ್ತು ಹಂತಗಳು ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ‌ರ‍್ಯಾಲಿಯ ಪ್ರತಿ ಹಂತದಲ್ಲೂ ವಿವಿಧ ತಂಡಗಳು ದಾಖಲೆ ಪ್ರದರ್ಶನ ನೀಡುತ್ತಿದೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

2022ರ ಡಕಾರ್ ‌ರ‍್ಯಾಲಿಯು ಸೌದಿ ಅರೇಬಿಯಾದ ಜೆದ್ದಾದಿಂದ ಆರಂಭವಾಗಿ ವಾಡಿ ಅಡ್ ದವಾಸಿರ್ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿರುವ ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಒಂಬತ್ತನೇ ಹಂತವು 402 ಕಿ.ಮೀ ಒಳಗೊಂಡಿತ್ತು. ಒಂಬತ್ತನೇ ಹಂತದಲ್ಲಿ ಒಟ್ಟು 287 ಕಿ.ಮೀ ಮಾರ್ಗದಲ್ಲಿ 150 ಕಿ.ಮೀ ಸಾಮಾನ್ಯ ಮಾರ್ಗವಾದರೆ ಇನ್ನುಳಿದ ಮಾರ್ಗವು ಅತ್ಯಂತ ಕಠಿಣವಾಗಿತ್ತು.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ವಾಡಿ ಅಡ್ ದವಾಸಿರ್ ನಗರದಿಂದ ಆರಂಭಗೊಂಡಿದ್ದ ಒಂಬತ್ತನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಪುನಃ ವಾಡಿ ಅಡ್ ದವಾಸಿರ್‌ಗೆ ತಲುಪಬೇಕಿತ್ತು. ಒಂಬತ್ತನೇ ಹಂತದ ಮಾರ್ಗವನ್ನು 2 ಗಂಟೆ 29 ನಿಮಿಷ 30 ಸೆಕೆಂಡುಗಳಲ್ಲಿ ಗುರಿತಲುಪಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಜೋಸ್ ಇಗ್ನಾಸಿಯೊ ಕಾರ್ನೆಜೊ ಮೊದಲ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಬೈಕ್ ವಿಭಾಗದಲ್ಲಿ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಜೋಸ್ ಇಗ್ನಾಸಿಯೊ ಕಾರ್ನೆಜೊ ಮೊದಲ ಸ್ಥಾನ ಪಡೆದರೆ ಮೊದಲ ವಿಜೇತ ಸ್ಪರ್ಧಿಗಿಂತ 1 ನಿಮಿಷ 26 ಸೆಕೆಂಡ್‌ ತಡವಾಗಿ ಗುರಿತಲುಪಿದ ರೆಡ್‌ಬುಲ್ ಕೆಟಿಎಂ ತಂಡದ ರೈಡರ್ ಕೆವಿನ್ ಬೆನವಿಡೆಸ್ ಎರಡನೇ ಸ್ಥಾನವನ್ನು ಮತ್ತು 1 ನಿಮಿಷ 47 ಸೆಂಕೆಂಡ್ ತಡವಾಗಿ ಗುರಿತಲುಪಿದ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ತಂಡದ ರಿಕ್ಕಿ ಬ್ರಾಬೆಕ್ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಒಂಬತ್ತು ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದಿರುವ ಕೆಟಿಎಂ ತಂಡದ ಮ್ಯಾಥಿಯಾಸ್ ವಾಕ್ನರ್ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಗ್ಯಾಸ್‌ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ ಎರಡನೇ ಸ್ಥಾನವನ್ನು ಮತ್ತು ಮೂರನೇ ಸ್ಥಾನವನ್ನು ಯಹಹಾ ರೈಡರ್ ಆಡ್ರಿಯನ್ ವ್ಯಾನ್ ಬೆವೆರೆನ್ ಮುಂದುವರಿದಿದ್ದಾರೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಹಾಗೆಯೇ ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಒಂಬತ್ತನೇ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದು, ಹೀರೋ ತಂಡವನ್ನು ಪ್ರತಿನಿಧಿಸುತ್ತಿರುವ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಮೂರನೇ ಹಂತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದ ಜೋಕ್ವಿಮ್ ರೊಡ್ರಿಗಸ್ ಒಂಬತ್ತನೇ ಹಂತವನ್ನು 11ನೇ ಸ್ಥಾನದೊಂದಿಗೆ ಗುರಿತಲುಪಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ ಆರನೇ ಹಂತದಲ್ಲಿ 21ನೇ ಸ್ಥಾನಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಟಿವಿಎಸ್ ಶೆರ್ಕೊ ತಂಡವು ಕೂಡಾ ಒಂಬತ್ತನೇ ಹಂತದಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಳ್ಳುತ್ತಿದ್ದು, ಟಾಪ್ 30 ಒಳಗೆ ಸ್ಥಾನ ಪಡೆದಿರುವ ಟಿವಿಎಸ್ ತಂಡದ ರೈಡರ್‌ಗಳಲ್ಲಿ ಹರಿತ್ ನೋಹ್ 31 ನೇ ರ‍್ಯಾಕಿಂಗ್‌ನಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಒಂಬತ್ತನೇ ಹಂತದಲ್ಲಿನ ಕಾರುಗಳ ವಿಭಾಗದಲ್ಲೂ ಗಾಜೊ ರೇಸಿಂಗ್ ಟೊಯೊಟಾ ಮತ್ತು ಹಂಟರ್ ಟಿ1 ಬಿಆರ್‌ಎಕ್ಸ್ ನಡುವೆ ಭಾರೀ ಪೈಪೋಟಿ ಮುಂದುವರೆದಿದ್ದು, ಒಂಬತ್ತನೇ ಹಂತದಲ್ಲಿ ಟೊಯೊಟಾ ತಂಡದ ಗಿನಿಯೆಲ್ ಡಿ ವಿಲಿಯರ್ಸ್ ಮೊದಲ ಸ್ಥಾನವನ್ನು ಮತ್ತು ಟೊಯೊಟಾದ ಮತ್ತೊಬ್ಬ ಸ್ಪರ್ಧಿ ಹೆನ್ರಿಕ್ ಲಟೆಗನ್ ಹಾಗೂ ಟೊಯೊಟಾ ಮುಖ್ಯ ತಂಡದ ನಾಸರ್ ಅಲ್-ಅತ್ತಿಯಾ ಮೂರನೇ ಸ್ಥಾನಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಒಂಬತ್ತನೇ ಹಂತದ ಕಾರುಗಳ ವಿಭಾಗದಲ್ಲಿ ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿಯನ್ ಲೋಯೆಬ್ ಮತ್ತು ಆಡಿಯ ಸ್ಪೋರ್ಟ್ ತಂಡದ ಕಾರ್ಲೊಸ್ ಶೆಂಜ್ ಕೂಡಾ ಉತ್ತಮ ರ‍್ಯಾಕಿಂಗ್ ಹೊಂದಿದ್ದು, ಹೈಲಕ್ಸ್ ಮಾದರಿಯು ಉತ್ತಮ ಪ್ರದರ್ಶನ ತೋರುತ್ತಿದೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

ಟ್ರಕ್ ವಿಭಾಗದ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಪ್ರತಿ ಹಂತದಲ್ಲೂ ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮುಂದುವರೆದಿದ್ದು, ಮೊದಲ ಮೂರು ಸ್ಥಾನವನ್ನು ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್ ಅಗ್ರಸ್ಥಾನದಲ್ಲಿದ್ದಾರೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

44ನೇ ಆವೃತ್ತಿಯಲ್ಲಿ ಕಳೆದ ಆವೃತ್ತಿಯಲ್ಲಿನ 14 ಹಂತಗಳನ್ನು 12ಕ್ಕೆ ಇಳಿಕೆ ಮಾಡಿದ್ದು, ಯಾವುದೇ ರೀತಿಯ ದುರಂತಗಳಿಗೆ ಎಡೆಮಾಡಿಕೊಡದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲಾಗಿದೆ. 2022ರ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಅಂತರದಿಂದ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿದೆ.

ಡಕಾರ್ ರ‍್ಯಾಲಿ 2022: ಒಂಬತ್ತನೇ ಹಂತದಲ್ಲಿ ಹೋಂಡಾ, ಟೊಯೊಟಾ ತಂಡಗಳ ಅಬ್ಬರ ಜೋರು!

2022ರ ಆವೃತ್ತಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದು, ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಡಲಾಗಿದೆ.

Most Read Articles

Kannada
English summary
Dakar rally 2022 stage 9 results jose cornejo claim victory in the bikes category
Story first published: Wednesday, January 12, 2022, 1:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X