ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 44ನೇ ಡಕಾರ್ ‌ರ‍್ಯಾಲಿಯು 12 ಹಂತಗಳೊಂದಿಗೆ ಪೂರ್ಣಗೊಂಡಿದ್ದು, ಪ್ರಸಕ್ತ ವರ್ಷದ ಡಕಾರ್ ‌ರ‍್ಯಾಲಿಯ ಪ್ರತಿ ಹಂತದಲ್ಲೂ ಉತ್ತಮ ಪ್ರದರ್ಶನ ತೋರಿದ ಗ್ಯಾಸ್‌-ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ ಮತ್ತು ಗಾಜೊ ರೇಸಿಂಗ್ ಟೊಯೊಟಾ ತಂಡದ ನಾಸರ್ ಅಲ್-ಅತ್ತಿಯಾ ವಿಜಯಶಾಲಿಯಾಗಿ ಹೊರಹೊಮ್ಮಿದರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

2022ರ ಡಕಾರ್ ‌ರ‍್ಯಾಲಿಯು ಸೌದಿ ಅರೇಬಿಯಾದ ಜೆದ್ದಾದಿಂದ ಆರಂಭವಾಗಿ ಪುನಃ ಜೆದ್ದಾ ನಗರಕ್ಕೆ ಬಂದು ತಲುಪಿದ್ದು, ಬರೋಬ್ಬರಿ 4 ಸಾವಿರ ಕಿ.ಮೀ ಅಂತರವನ್ನು ಒಳಗೊಂಡಿದ್ದ ಪ್ರಸಕ್ತ ವರ್ಷದ ರ‍್ಯಾಲಿಯು ಒಟ್ಟು 12 ಹಂತಗಳೊಂದಿಗೆ ಪೂರ್ಣಗೊಂಡಿತು. 12ನೇ ಹಂತದಲ್ಲಿ ಒಟ್ಟು 163 ಕಿ.ಮೀ ವಿಶೇಷ ಮಾರ್ಗದೊಂದಿಗೆ ಗುರಿತಲುಪಿದ ಹೋಂಡಾ ತಂಡದ ಪಾಬ್ಲೊ ಕ್ವಿಂಟಾನಿಲ್ಲಾ ಮೊದಲ ಸ್ಥಾನ ಗಳಿಸಿದರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಬಿಷಾ ನಗರದಿಂದ ಆರಂಭಗೊಂಡಿದ್ದ 12ನೇ ಹಂತವು ಪ್ರಮುಖ ಮಾರ್ಗಗಳೊಂದಿಗೆ ಜೆದ್ದಾ ನಗರಕ್ಕೆ ತಲುಪಿದ್ದು, 12ನೇ ಹಂತದ 163 ಕಿ.ಮೀ ವಿಶೇಷ ಮಾರ್ಗವನ್ನು 1 ಗಂಟೆ 40 ನಿಮಿಷ 18 ಸೆಕೆಂಡುಗಳಲ್ಲಿ ಗುರಿತಲುಪಿದ ಹೋಂಡಾ ತಂಡದ ಪಾಬ್ಲೊ ಕ್ವಿಂಟಾನಿಲ್ಲಾ ಮೊದಲ ಸ್ಥಾನವನ್ನು ಗಳಿಸಿದರೆ ರೆಡ್‌ಬುಲ್ ಕೆಟಿಎಂ ತಂಡ ಟೋಬಿ ಪ್ರೈಸ್‌ ಮತ್ತು ಹೋಂಡಾ ತಂಡದ ಜೋಸ್ ಕಾರ್ನೆಜೊ ಫ್ಲೋರಿಮೊ ಮೂರನೇ ಸ್ಥಾನಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಬೈಕ್ ವಿಭಾಗದಲ್ಲಿನ 12 ಹಂತಗಳಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡು ಬಂದ ಗ್ಯಾಸ್‌-ಗ್ಯಾಸ್ ಫ್ಯಾಕ್ಟರಿ ರೇಸಿಂಗ್ ತಂಡದ ಸ್ಯಾಮ್ ಸದರ್‌ಲ್ಯಾಂಡ್‌ ಮೊದಲ ಸ್ಥಾನ ಗಳಿಸಿದರೆ ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ಪಾಬ್ಲೊ ಕ್ವಿಂಟಾನಿಲ್ಲಾ ಎರಡನೇ ಸ್ಥಾನವನ್ನು ಮತ್ತು ರೆಡ್‌ಬುಲ್ ಕೆಟಿಎಂ ತಂಡದ ಮಥಿಯಾಸ್ ವಾಕ್ನರ್ ಮೂರನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಭಾರತೀಯ ಮೋಟೊಸ್ಪೋರ್ಟ್ಸ್ ತಂಡಗಳಾದ ಹೀರೋ ಮೋಟೊಸ್ಪೋರ್ಟ್ಸ್ ಮತ್ತು ಟಿವಿಎಸ್ ಶೆರ್ಕೊ ತಂಡಗಳು ಉತ್ತಮ ರ‍್ಯಾಂಕಿಂಗ್‌ನೊಂದಿಗೆ ತೇರ್ಗಡೆಗೊಂಡಿದ್ದು, ಪ್ರತಿ ಹಂತದಲ್ಲೂ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಟಿವಿಎಸ್ ತಂಡದ ಲೊರೆಂಜೊ ಸ್ಯಾಂಟೊಲಿನೊ 44ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ 11ನೇ ಸ್ಥಾನವನ್ನು ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಹೀರೋ ತಂಡದ ಪ್ರತಿನಿಧಿ ಪೋರ್ಚುಗೀಸ್ ರೈಡರ್ ಜೋಕ್ವಿಮ್ ರೊಡ್ರಿಗಸ್ ಕೂಡಾ 3ನೇ ಹಂತದಲ್ಲಿ ಮೊದಲ ಸ್ಥಾನವನ್ನು ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ಪಡೆದುಕೊಂಡಿದ್ದು, ಹೀರೋ ಮೋಟೊಸ್ಪೋರ್ಟ್ಸ್ ತಂಡದ ಮತ್ತೊಬ್ಬ ಸ್ಪರ್ಧಿ ಆರೋನ್ ಮೇರ್ ಕೂಡಾ ಉತ್ತಮ ಪ್ರದರ್ಶನ ತೋರುವ ಮೂಲಕ 16ನೇ ಸ್ಥಾನಪಡೆದುಕೊಂಡಿದ್ದಾರೆ.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಟಿವಿಎಸ್ ಶೆರ್ಕೊ ತಂಡದ ರೈಡರ್‌ಗಳಲ್ಲಿ ಲೊರೆಂಜೊ ಸ್ಯಾಂಟೊಲಿನೊ ಒಟ್ಟಾರೆ ರ‍್ಯಾಂಕಿಂಗ್‌‌ನಲ್ಲಿ 11ನೇ ಸ್ಥಾನವನ್ನು, ರೂಯಿ ಗೊನೆಲ್ವೆಸ್ 24ನೇ ಸ್ಥಾನವನ್ನು ಮತ್ತು ಹರಿತ್ ನೋಹ್ 110ನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಇನ್ನು ಪ್ರಸಕ್ತ ವರ್ಷದ ಡಕಾರ್ ರ‍್ಯಾಲಿಯ ಕಾರುಗಳ ವಿಭಾಗವೂ ಕೂಡಾ ಭಾರೀ ಸೆಣಸಾಟದಲ್ಲಿ ಪೂರ್ಣಗೊಂಡಿದ್ದು, ಗಾಜೊ ರೇಸಿಂಗ್ ಟೊಯೊಟಾ, ಹಂಟರ್ ಟಿ1 ಬಿಆರ್‌ಎಕ್ಸ್ ಮತ್ತು ಆಡಿ ಇ-ಟ್ರಾನ್ ನಡುವಿನ ಸ್ಪರ್ಧೆಗಳು ಪ್ರತಿ ಹಂತದಲ್ಲೂ ಭಾರೀ ಪೈಪೋಟಿ ನಡೆಸಿದವು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಕಾರುಗಳ ವಿಭಾಗದ ಒಟ್ಟಾರೆ ರ‍್ಯಾಂಕಿಂಗ್‌ನಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಟೊಯೊಟಾ ಮುಖ್ಯ ಸ್ಪರ್ಧಿ ನಾಸರ್ ಅಲ್-ಅತ್ತಿಯಾ ಗೆಲವು ಸಾಧಿಸಿದ್ದು, ಹಂಟರ್ ಟಿ1 ಬಿಆರ್‌ಎಕ್ಸ್ ತಂಡದ ಸೆಬಾಸ್ಟಿಯನ್ ಲೋಯೆಬ್ ಎರಡನೇ ಸ್ಥಾನವನ್ನು ಮತ್ತು ಟೊಯೊಟಾ ತಂಡದ ಮತ್ತೊಬ್ಬ ಸ್ಪರ್ಧಿ ಯಜೀದ್ ಅಲ್ ರಾಜಿ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಟ್ರಕ್ ವಿಭಾಗದ ಸ್ಪರ್ಧೆಯಲ್ಲಿ ಕಮಾಜ್ ಮಾಸ್ಟರ್ ತಂಡವು ಪ್ರತಿ ಹಂತದಲ್ಲೂ ಅತ್ಯುತ್ತಮ ಚಾಲನಾ ಕೌಶಲ್ಯತೆಯೊಂದಿಗೆ ಅಗ್ರಸ್ಥಾನದೊಂದಿಗೆ ಮೊದಲ ತಂಡವಾಗಿ ಹೊರಹೊಮ್ಮಿದ್ದು, ಮೊದಲ ಮೂರು ಸ್ಥಾನದಲ್ಲೂ ಭರ್ಜರಿ ಪ್ರದರ್ಶನದೊಂದಿಗೆ ಕಮಾಜ್ ಮಾಸ್ಟರ್ ತಂಡದ ಡಿಮಿಟ್ರಿ ಸೊಟಿಕ್ನೊವ್, ಎಡ್ವರ್ಡ್ ನಿಕೋಲೇವ್, ಆಂಟನ್ ಶಿಬಾಲೋವ್ ಮೊದಲ ಮೂರು ಸ್ಥಾನಗಳಲ್ಲಿ ಜಯಗಳಿಸಿದರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಇದರೊಂದಿಗೆ ಕ್ವಾಡ್ ಸೈಕಲ್ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಯಮಹಾ ರೇಸಿಂಗ್ ಎಸ್ಎಂಎಕ್ಸ್ ಡ್ರ್ಯಾಗನ್ ತಂಡದ ಅಲೆಕ್ಸಾಂಡ್ರೆ ಗಿರೌಡ್ ಮೊದಲ ಸ್ಥಾನವನ್ನು, ಡ್ರ್ಯಾಗನ್ ರ್ಯಾಲಿ ತಂಡದ ಫ್ರಾನ್ಸಿಸ್ಕೊ ಮೊರೆನೊ ಎರಡನೇ ಸ್ಥಾನವನ್ನು ಮತ್ತು ಓರ್ಲೆನ್ ತಂಡದ ಕಾಮಿಲ್ ವಿಸ್ನೀವ್ಸ್ಕಿ ಮೂರನೇ ಸ್ಥಾನ ಪಡೆದುಕೊಂಡರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಹಾಗೆಯೇ ಲೈಟ್ ಪೋಟೊಟೈಪ್ ಟಿ3 ವಿಭಾಗದಲ್ಲಿ ಇಕೆಎಸ್ ಸೌಥ್ ರೇಸಿಂಗ್ ತಂಡದ ಫ್ರಾನ್ಸಿಸ್ಕೊ ಲೋಪೆಜ್ ಕಾಂಟಾರ್ಡೊ ಮೊದಲ ಸ್ಥಾನಗಳಿಸಿದರೆ ಸೈಡ್-ಬೈ-ಸೈಡ್ ವೆಹಿಕಲ್ ವಿಭಾಗದಲ್ಲಿ ಕ್ಯಾನ್ ಎಂ ಫ್ಯಾಕ್ಟರಿ ಸೌಥ್ ರೇಸಿಂಗ್ ತಂಡದ ಆಸ್ಟಿನ್ ಜೋನ್ಸ್ ಮೊಲದ ಸ್ಥಾನ ಗಳಿಸಿದರು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

44ನೇ ಆವೃತ್ತಿಯಲ್ಲಿ ಕಳೆದ ಆವೃತ್ತಿಯಲ್ಲಿನ 14 ಹಂತಗಳನ್ನು ಇದೀಗ 12ಕ್ಕೆ ಇಳಿಕೆ ಮಾಡಲಾಗಿತ್ತು. ಒಟ್ಟು ಅಂತರವನ್ನು ಕಳೆದ ಬಾರಿಯ 7 ಸಾವಿರ ಕಿ.ಮೀ ಮಾರ್ಗವನ್ನು ಈ ಬಾರಿ 4 ಸಾವಿರ ಕಿ.ಮೀ ಗಳಿಗೆ ಇಳಿಕೆ ಮಾಡಲಾಗಿತ್ತು. ಪ್ರಸಕ್ತ ವರ್ಷದ ರ‍್ಯಾಲಿಯಲ್ಲಿ ಶೇ. 80 ರಷ್ಟು ಮಾರ್ಗವು ಮರಳುಗಾಡು ಮತ್ತು ಕಲ್ಲುಮಿಶ್ರಿತ ಮಣ್ಣು ಒಳಗೊಂಡಿರಲಿದ್ದಲ್ಲದೆ ಶೇ.20 ರಷ್ಟು ಮಾತ್ರವೇ ಸಾಮಾನ್ಯ ಮಾರ್ಗವಾಗಿತ್ತು.

ಡಕಾರ್ ರ‍್ಯಾಲಿ 2022: ಎರಡನೇ ಬಾರಿಗೆ ಡಕಾರ್ ರ‍್ಯಾಲಿ ಗೆದ್ದ ಸ್ಯಾಮ್ ಸದರ್‌ಲ್ಯಾಂಡ್‌

ಕಳೆದ ವರ್ಷದ ಡಕಾರ್ ಆವೃತ್ತಿಗಿಂತಲೂ ಹೊಸ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಹಲವಾರು ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಂಡಿದ್ದ ಆಯೋಜಕರು ಹಲವಾರು ದುರಂತಗಳಿಗೆ ಕಾರಣವಾಗುತ್ತಿರುವ ರುಬ್ ಅಲ್-ಕಾಲಿ ಮರಭೂಮಿ ಮಾರ್ಗವನ್ನು ಈ ಬಾರಿ ಕೈಬಿಟ್ಟಿದ್ದರು. ವಿಶ್ವದಲ್ಲೇ ಅಪಾಯಕಾರಿ ಮೋಟಾರ್‌ಸ್ಪೋರ್ಟ್‌ಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯು 1979ರಿಂದ ವಾರ್ಷಿಕವಾಗಿ ಆಯೋಜನೆಗೊಳ್ಳುತ್ತಿದ್ದು, ಯುರೋಪ್, ಆಫ್ರಿಕಾ ಮತ್ತು ಮಧ್ಯಪ್ರಾಚ್ಯಗಳ ದೇಶಗಳ ಪ್ರಮುಖ ಮರಳುಗಾಡು ಮಾರ್ಗಗಳಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

Most Read Articles

Kannada
English summary
Dakar rally 2022 sunderland al attiyah finish on top details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X