ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನ ಉತ್ತೇಜಿಸಲು ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿರುವುದು ಮಹತ್ವದ ಬದಲಾವಣೆಗೆ ಕಾರಣವಾಗುತ್ತಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯದ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡಲಾಗುತ್ತಿರುವುದರಿಂದ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಇವಿ ವಾಹನಗಳಿಗೆ ಪೂರಕವಾಗಿ ವಿವಿಧ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಜೊತೆಗೆ ರಾಜ್ಯ ಮಟ್ಟದಲ್ಲೂ ಇವಿ ನೀತಿಗಳನ್ನು ಅಳಡಿಸಿಕೊಂಡಿದ್ದು, ದೆಹಲಿ ಸರ್ಕಾರವು ಈ ವಿಚಾರದಲ್ಲಿ ಇತರೆ ರಾಜ್ಯಗಳಿಂತಲೂ ಹೆಚ್ಚಿನ ಪ್ರೊತ್ಸಾಹ ಯೋಜನೆಗಳನ್ನು ಅಳವಡಿಸಿಕೊಂಡಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಎಲೆಕ್ಟ್ರಿಕ್ ವಾಹನಗಳ ಖರೀದಿಗಾಗಿ ಹಲವಾರು ಸಬ್ಸಡಿ ಯೋಜನೆಗಳ ಮೂಲಕ ಇವಿ ವಾಹನಗಳ ನೋಂದಣಿಯಲ್ಲಿ ಮುಂಚೂಣಿಯಲ್ಲಿ ದೆಹಲಿಯಲ್ಲಿ ಇದೀಗ ಇ-ಸೈಕಲ್ ಖರೀದಿಗೆ ಭರ್ಜರಿ ಸಬ್ಸಡಿ ಮೊತ್ತವನ್ನು ಘೋಷಣೆ ಮಾಡಲಾಗಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಹೊಸ ಸಬ್ಸಡಿ ಯೋಜನೆ ಅಡಿಯಲ್ಲಿ ದೆಹಲಿ ನಿವಾಸಿಗಳು ಪ್ರಯಾಣಿಕರ ಬಳಕೆ ಎಲೆಕ್ಟ್ರಿಕ್ ಸೈಕಲ್ ಬೆಲೆಯಲ್ಲಿ ಶೇ. 25 ರಷ್ಟು ಮತ್ತು ವಾಣಿಜ್ಯ ಬಳಕೆಯ ಕಾರ್ಗೋ ಎಲೆಕ್ಟ್ರಿಕ್ ಸೈಕಲ್‌ನ ಬೆಲೆಯಲ್ಲಿ ಶೇ. 33 ರಷ್ಟು ಸಬ್ಸಿಡಿಯನ್ನು ಪಡೆಯಬಹುದಾಗಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ದೆಹಲಿ ಸರ್ಕಾರವು ಮೊದಲ ಹಂತದಲ್ಲಿ ಮಾರಾಟಗೊಳ್ಳುವ 10 ಸಾವಿರ ಇ-ಸೈಕಲ್‌ಗಳಿಗೆ ಗರಿಷ್ಠ ರೂ.5,500 ತನಕ ಸಬ್ಸಡಿ ನೀಡಲಿದ್ದು, ಇದರಲ್ಲಿ ಮೊದಲಿಗೆ ಸಬ್ಸಡಿಗಾಗಿ ಅರ್ಜಿ ಸಲ್ಲಿಸುವ 1 ಸಾವಿರ ಗ್ರಾಹಕರಿಗೆ ಹೆಚ್ಚುವರಿಯಾಗಿ ರೂ. 2 ಸಾವಿರ ಹೆಚ್ಚುವರಿ ರಿಯಾಯ್ತಿ ನೀಡಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಹಾಗೆಯೇ ಸರಕು ಸಾಗಿಸಲು ಮತ್ತು ಗ್ರಾಹಕರ ಉತ್ಪನ್ನಗಳು ಮನೆ ಬಾಗಿಲಿಗೆ ತಲುಪಿಸುವ ಇ-ಕಾಮರ್ಸ್ ಕಂಪನಿಗಳ ಕಾರ್ಗೊ ಎಲೆಕ್ಟ್ರಿಕ್ ಸೈಕಲ್‌ಗಳಿಗೆ ಗರಿಷ್ಠ ರೂ. 15 ಸಾವಿರ ತನಕ ಸಬ್ಸಡಿ ಘೋಷಣೆ ಮಾಡಿದ್ದು, ಇ-ಸೈಕಲ್ ಖರೀದಿಯನ್ನು ಉತ್ತೇಜಿಸಲು ಹೊಸ ಯೋಜನೆ ಸಾಕಷ್ಟು ಸಹಕಾರಿಯಾಗಲಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಹೊಸ ಸಬ್ಸಡಿ ಯೋಜನೆ ಅಡಿಯಲ್ಲಿ ವಿನಾಯ್ತಿ ಪಡೆಯಲು ಬಯಸುವ ವಾಹನ ಮಾಲೀಕರು ಖರೀದಿ ನಂತರ ನೇರವಾಗಿ ದೆಹಲಿ ಸಾರಿಗೆ ಇಲಾಖೆಯ ವೆಬ್‌ಸೈಟ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಿದ 7 ದಿನಗಳ ಒಳಗಾಗಿ ಸಬ್ಸಡಿ ಹಣವನ್ನು ಮಾಲೀಕರ ಖಾತೆಗೆ ಜಮಾ ಮಾಡಲಾಗುತ್ತದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಒಂದು ಹೊಸ ಸಬ್ಸಡಿ ಯೋಜನೆ ಅಡಿಯಲ್ಲಿ ಡೆಲಿವರಿ ಅಥವಾ ಕಾರ್ಗೋ ಕಂಪನಿಗಳು ತಮ್ಮ ಹಳೆಯ ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳನ್ನು ಸ್ಕ್ರ್ಯಾಪ್ ಮಾಡಿ ಇ-ಸೈಕಲ್ ಅಳವಡಿಸಿಕೊಳ್ಳಲು ಬಯಸಿದರೆ ಪ್ರತಿ ಹೊಸ ಇ-ಕಾರ್ಗೋ ಸೈಕಲ್ ಖರೀದಿಯ ಮೇಲೆ ಅವರಿಗೆ ರೂ. 3 ಸಾವಿರ ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಹೆಚ್ಚುವರಿ ಸಬ್ಸಡಿಗಾಗಿ ಡೆಲಿವರಿ ಕಂಪನಿಗಳು ತಮ್ಮ ಹಳೆಯ ಬೈಕ್‌ಗಳನ್ನು ಅಧಿಕೃತ ಸ್ಕ್ರ್ಯಾಪ್ ಡೀಲರ್‌ನಿಂದ ಸ್ಕ್ರ್ಯಾಪ್ ಮಾಡಿಸಬೇಕಿದ್ದು, ಸ್ಕ್ರ್ಯಾಪ್ ಡೀಲರ್‌ನಿಂದ ಪ್ರಮಾಣಪತ್ರವನ್ನು ಸಹ ಪಡೆಯಬೇಕಾಗುತ್ತದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಇ-ಸೈಕಲ್ ಮಾರಾಟದ ಸಂದರ್ಭದಲ್ಲಿ ಡೀಲರ್ಸ್‌ಗಳು ಪ್ರತಿ ಗ್ರಾಹಕರಿಂದಲೂ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದು, ವಾಹನ ಮಾರಾಟದ ಮಾಹಿತಿಯನ್ನು ಡೀಲರ್ಸ್‌ಗಳು ದೆಹಲಿ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಿಗೆ ಅಪಲೋಡ್ ಮಾಡುತ್ತಾರೆ. ಡೀಲರ್ಸ್ ಮಾಹಿತಿ ಮತ್ತು ಗ್ರಾಹಕರ ಅರ್ಜಿ ವಿವರಗಳನ್ನು ಪರಿಶೀಲಿಸಿ ಸಬ್ಸಡಿ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ಪೂರಕವಾಗಿ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಿಸಲಾಗುತ್ತಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ವಿವಿಧ ರಾಜ್ಯಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ನಿಲ್ದಾಣ ಕಾರ್ಯಾರಂಭಕ್ಕೆ ಸಿದ್ದವಾಗುತ್ತಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೂಡಾ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ನಿಲ್ದಾಣಗಳು ಕಾರ್ಯಾರಂಭಿಸುತ್ತಿದ್ದು, ಜೂನ್ ಅಂತ್ಯಕ್ಕೆ ದೆಹಲಿ ಹೊಸದಾಗಿ ಸುಮಾರು 100 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಆರಂಭಗೊಳ್ಳುತ್ತಿವೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳಲ್ಲಿ, ಮಾಲ್‌ಗಳಲ್ಲಿ, ಸೂಪರ್ ಮಾರುಕಟ್ಟೆಗಳಲ್ಲಿ ಸ್ಥಳ ಲಭ್ಯತೆ ಆಧರಿಸಿ ಹೊಸ ಇವಿ ಚಾರ್ಜಿಂಗ್ ನಿಲ್ದಾಣಗಳನ್ನು ಆರಂಭಿಸಲಾಗಿತ್ತಿದ್ದು, ಇವಿ ವಾಹನಗಳಿಗೆ ನೀಡಲಾಗುವ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ ರೂ. 2 ನಿಗದಿಪಡಿಸಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ಇದು ಇವಿ ವಾಹಗಳಿಗೆ ಇತರೆ ರಾಜ್ಯಗಳಲ್ಲಿ ನೀಡುವ ವಿದ್ಯುತ್‌ಗಿಂತಲೂ ಅತಿ ಕಡಿಮೆ ದರವಾಗಿದ್ದು, ಆರಂಭದಲ್ಲಿ ಇವಿ ವಾಹನಗಳನ್ನು ಉತ್ತೇಜಿಸಲು ದೆಹಲಿ ಸರ್ಕಾರ ಕಡಿಮೆ ದರದಲ್ಲಿ ವಿದ್ಯುತ್ ಪೂರೈಸಲು ನಿರ್ಧರಿಸಿದೆ.

ಎಲೆಕ್ಟ್ರಿಕ್ ಸೈಕಲ್ ಖರೀದಿದಾರರಿಗೂ ಸಿಗಲಿದೆ ರೂ.15 ಸಾವಿರ ತನಕ ಸಬ್ಸಡಿ

ದೇಶಾದ್ಯಂತ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ವಾಯು, ಶಬ್ದ ಮಾಲಿನ್ಯ ಕಡಿಮೆ ಮಾಡಿ ಕಾರ್ಬನ್‌ ಹೊರಸೂಸುವಿಕೆ ತಗ್ಗಿಸಲು ಸಹಕಾರಿಯಾಗುತ್ತಿದ್ದು, ಇ-ವಾಹನ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿವಿಧ ರಾಜ್ಯ ಸರ್ಕಾರಗಳು ಹಲವು ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ.

Most Read Articles

Kannada
English summary
Delhi government has announced to subsidy on electric cycles
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X