ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಇಟಾಲಿಯನ್ ಪ್ರೀಮಿಯಂ ಬೈಕ್ ಉತ್ಪಾದನಾ ಕಂಪನಿಯಾಗಿರುವ ಡುಕಾಟಿ ಭಾರತದಲ್ಲಿ ತನ್ನ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.65 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 16.65 ಲಕ್ಷ ಬೆಲೆ ಹೊಂದಿವೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಡುಕಾಟಿ ಕಂಪನಿಯು ಭಾರತದಲ್ಲಿ ಈಗಾಗಲೇ ಪ್ರಮುಖ ಪ್ರೀಮಿಯಂ ಬೈಕ್ ಮಾದರಿಗಳೊಂದಿಗೆ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಕಂಪನಿಯು ಇದೀಗ ತನ್ನ ಮಧ್ಯಮ ಕ್ರಮಾಂಕದಲ್ಲಿರುವ ಮಲ್ಟಿಸ್ಟ್ರಾಡಾ ಸರಣಿಯಲ್ಲಿರುವ ವಿ2 ಮತ್ತು ವಿ2 ಎಸ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಹೊಸ ಬೈಕ್ ಮಾದರಿಗಳು ದೂರದ ಪ್ರಯಾಣಕ್ಕೆ ಅತ್ಯಂತ ಆರಾಮದಾಯಕವಾಗಿದೆ ಮತ್ತು ಒರಟು ರಸ್ತೆಗಳಲ್ಲಿಯೂ ಉತ್ತಮ ಸಮತೋಲನವನ್ನು ಒದಗಿಸಲು ಸಹಕಾರಿಯಾಗಿವೆ ಎಂದಿರುವ ಡುಕಾಟಿ ಕಂಪನಿಯು ಅಡ್ವೆಂಚರ್ ಟೂರರ್ ಗ್ರಾಹಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ನೀರಿಕ್ಷೆಯಲ್ಲಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಜೊತೆಗೆ ವಿ2 ಹೊಸ ಮಾದರಿಗಳು ಸೆಮಿ ಫೇರ್ಡ್ ವಿನ್ಯಾಸವನ್ನು ನೀಡಲಾಗಿದ್ದು, ಬೈಕಿನ ಫೇರಿಂಗ್ ಸ್ಲಿಮ್ ಡ್ಯುಯಲ್ ಎಲ್‌ಇಡಿ ಸ್ಲಿಟ್ ಹೆಡ್‌ಲ್ಯಾಂಪ್‌ಗಳು, ದೊಡ್ಡ ಪಾರದರ್ಶಕ ವಿಂಡ್‌ಸ್ಕ್ರೀನ್, ಹ್ಯಾಂಡಲ್‌ಬಾರ್‌ನಲ್ಲಿ ತಿರುವು ಸೂಚಕಗಳು ಮತ್ತು ದೇಹದ ಬಣ್ಣವನ್ನು ಹೊಂದಿರುವ ರಿಯರ್ ವ್ಯೂ ಮಿರರ್‌ಗಳನ್ನು ಹೊಂದಿವೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಬೈಕಿನ ಕ್ರೋಮ್ ಟಿಪ್ ಮ್ಯಾಟ್ ಬ್ಲ್ಯಾಕ್ ಎಕ್ಸಾಸ್ಟ್ ಮತ್ತು ಸ್ಲಿಮ್ ಟೈಲ್‌ಲ್ಯಾಂಪ್‌ಗಳನ್ನು ಪಡೆಯಲಿದ್ದು, ಇದರ ಸ್ಪೋರ್ಟಿ ಲುಕ್ ಅನ್ನು ಮತ್ತಷ್ಟು ಹೆಚ್ಚಿಸಲು, ಕಪ್ಪು ಬಣ್ಣದ ರೂಪಾಂತರದಲ್ಲಿ ಕೆಂಪು ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ. ಇದಲ್ಲದೆ ಹೊಸ ಬೈಕ್ ಎಂಜಿನ್‌ಗೆ ಬೂದು ಮತ್ತು ಕಪ್ಪು ಬಣ್ಣಗಳ ಆಯ್ಕೆ ನೀಡಲಾಗಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಮಲ್ಟಿಸ್ಟ್ರಾಡಾ ವಿ2 ಹೊಸ ಮಾದರಿಯಲ್ಲಿ ಕಂಪನಿಯು ತನ್ನ ಶಕ್ತಿಶಾಲಿ ಎಂಜಿನ್ ಮಾದರಿಯಾದ 937 ಸಿಸಿ ಯುನಿಟ್ ಜೋಡಣೆ ಮಾಡಿದ್ದು, ಟೆಸ್ಟಾಸ್ಟ್ರೆಟ್ಟಾ 11 ಡಿಗ್ರಿ ಎಲ್ ಟ್ವಿನ್-ಸಿಲಿಂಡರ್ ಪ್ರೇರಣೆ ಹೊಂದಿದೆ. ಇದು ವಾಟರ್ ಕೂಲ್ಡ್ ಎಂಜಿನ್ ಆಗಿದ್ದು, 6 ಸ್ಪೀಡ್ ಮೂಲಕ 111.3 ಬಿಎಚ್‌ಪಿ ಉತ್ಪಾದನಾ ಶಕ್ತಿ ಹೊಂದಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಇದರೊಂದಿಗೆ ಎಂಜಿನ್‌ ನಿರ್ವಹಣೆಯ ಮಧ್ಯಂತರವನ್ನು ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಡುಕಾಟಿ ಹೊಸ ಮಾಹಿತಿ ಹಂಚಿಕೊಂಡಿದ್ದು, ಇದು ಪ್ರತಿ 15,000 ಕಿ.ಮೀ.ಗೆ ಒಂದು ಬಾರಿ ಎಂಜಿನ್ ಆಯಿಲ್ ಬದಲಾವಣೆ ಮತ್ತು 30,000 ಕಿ.ಮೀ.ಗೆ ಒಂದು ಬಾರಿ ವಾಲ್ವ್ ಚೆಕ್ ಕಡ್ಡಾಯಗೊಳಿಸಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಹಾಗೆಯೇ ಮಲ್ಟಿಸ್ಟ್ರಾಡಾ ಹೊಸ ವಿ2 ಮಾದರಿಗಳಲ್ಲಿ ಕಂಪನಿಯು ಹೊಸ ಕನೆಕ್ಟಿಂಗ್ ರಾಡ್‌ಗಳು, ಹೊಸ 8-ಡಿಸ್ಕ್ ಹೈಡ್ರಾಲಿಕ್ ಕ್ಲಚ್ ಮತ್ತು ನವೀಕರಿಸಿದ ಗೇರ್‌ಬಾಕ್ಸ್‌ನಂತಹ ಸುಧಾರಣೆಗಳನ್ನು ಪರಿಚಯಿಸಿದ್ದು, ಇದು ಗೇರ್‌ಗಳು ಮತ್ತು ಕ್ಲಚ್ ಅನ್ನು ಮೃದುಗೊಳಿಸುತ್ತದೆ. ಹೀಗಾಗಿ ಹೊಸ ಕನೆಕ್ಟಿಂಗ್ ರಾಡ್‌ಗಳು, ಹೊಸ ಕವರ್‌ಗಳು, ಗೇರ್‌ಬಾಕ್ಸ್ ಮತ್ತು ಕ್ಲಚ್‌ನಿಂದಾಗಿ ಎಂಜಿನ್ ಒಟ್ಟಾರೆ ತೂಕವು ಸುಮಾರು 2 ಕೆಜಿಯಷ್ಟು ಕಡಿಮೆಯಾಗಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಸುರಕ್ಷತೆಯ ವಿಚಾರಕ್ಕೆ ಬಂದರೆ ವಿ2 ಬೈಕ್ ಮಾದರಿಗಳಲ್ಲಿ ಕಂಪನಿಯು 19-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಮಿಶ್ರಲೋಹದ ಚಕ್ರಗಳನ್ನು ನೀಡಿದ್ದು, ಇದು ಮಲ್ಟಿಸ್ಟ್ರಾಡಾ 950 ಮಾದರಿಗಿಂತಲೂ 1.7 ಕೆಜಿ ಹಗುರವಾಗಿದೆ. ಪಿರೆಲ್ಲಿ ಸ್ಕಾರ್ಪಿಯನ್ ಟ್ರಯಲ್ ಟೈರ್ ಗಳನ್ನು ಬೈಕ್ ನಲ್ಲಿ ಅಳವಡಿಸಲಾಗಿದ್ದು, ಇದು ಸೆಮಿ-ಆಕ್ಟಿವ್ ಸ್ಕೈಹೂಕ್ ಸಸ್ಪೆನ್ಷನ್ ಅನ್ನು ಪಡೆಯುತ್ತದೆ, ಇದು ಎಲೆಕ್ಟ್ರಾನಿಕ್ ಹೊಂದಾಣಿಕೆ ವ್ಯವಸ್ಥೆಯನ್ನು ಸಹ ಹೊಂದಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಇನ್ನು ಹೊಸ ಮಲ್ಟಿಸ್ಟ್ರಾಡಾ ವಿ2 ಬೈಕ್ ಮಾದರಿಗಳಲ್ಲಿ ಕಂಪನಿಯು ನಾಲ್ಕು ರೈಡಿಂಗ್ ಮೋಡ್‌ಗಳನ್ನು ನೀಡಿದ್ದು, ಅಗತ್ಯಕ್ಕೆ ಅನುಗುಣವಾಗಿ ಬಳಕೆ ಮಾಡಲು ಸ್ಪೋರ್ಟ್, ಟೂರಿಂಗ್, ಅರ್ಬನ್ ಮತ್ತು ಎಂಡ್ಯೂರೋ ಮೋಡ್‌ಗಳನ್ನು ನೀಡಲಾಗಿದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಇದಲ್ಲದೇ ಹೊಸ ಬೈಕ್‌ಗಳು ಡ್ಯುಯಲ್ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್, ಕಾರ್ನರ್ ಎಬಿಎಸ್ ಮತ್ತು ವೆಹಿಕಲ್ ಹೋಲ್ಡ್ ಕಂಟ್ರೋಲ್ ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಸಹ ಪಡೆಯಲಿದ್ದು, ವಿ2 ಎಸ್ ಮಾದರಿಯು ರಸ್ತೆಯ ತಿರುವುಗಳಲ್ಲಿ ಕಾರ್ನರ್ ಹೆಡ್‌ಲೈಟ್‌ಗಳನ್ನು ಪಡೆಯುತ್ತದೆ. ಇದು ಲೀನಿಂಗ್ ಟರ್ನ್ ಇಂಡಿಕೇಟರ್ ಅನ್ನು ಹೊಂದಿದ್ದು, ಬೈಕ್ ತಿರುಗಿಸಿದ ತಕ್ಷಣವೇ ಆಕ್ಟಿವೇಟ್ ಆಗುತ್ತದೆ.

ಭಾರತದಲ್ಲಿ ಡುಕಾಟಿ ಹೊಸ ವಿ2 ಮತ್ತು ವಿ2 ಎಸ್ ಬೈಕ್ ಬಿಡುಗಡೆ

ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ರೆಡ್, ಸ್ಟ್ರೀಟ್ ಗ್ರೇ ಮತ್ತು ಜಿಪಿ ರೆಡ್ ಎನ್ನುವ ಒಟ್ಟು ಬಣ್ಣಗಳ ಆಯ್ಕೆ ನೀಡಿದ್ದು, ಕೊನೆಯ ಎರಡು ಬಣ್ಣಗಳನ್ನು ಮಾತ್ರ ವಿ2ಎಸ್ ಮಾದರಿಗಳಲ್ಲಿ ನೀಡಲಾಗಿದೆ.

Most Read Articles

Kannada
Read more on ಡುಕಾಟಿ ducati
English summary
Ducati multistrada v2 v2 s launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X