Just In
- 44 min ago
ಕಾರಿಗೆ ಆ್ಯಸಿಡ್ ಎರಚಿದ ಆರೋಪ: ಮಹಿಳೆ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ ಹೈಕೋರ್ಟ್
- 1 hr ago
ಅತ್ಯುತ್ತಮ ಫೀಚರ್ಸ್ ಒಳಗೊಂಡ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ವಿಶೇಷತೆಗಳು...
- 1 hr ago
ಆಸ್ಟರ್ ಎಸ್ಯುವಿಯಲ್ಲಿ ಮತ್ತೊಂದು ಹೊಸ ವೆರಿಯೆಂಟ್ ಬಿಡುಗಡೆ ಮಾಡಲಿದೆ ಎಂಜಿ ಮೋಟಾರ್
- 22 hrs ago
ಮೇ ತಿಂಗಳಿನಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-3 ಮಾರುತಿ ಸುಜುಕಿ ಕಾರುಗಳು...
Don't Miss!
- News
ಪಂಜಾಬ್ ಎಎಪಿಯ ಕೋಟೆ ಕೆಡವಿದ ಸಿಮ್ರಂಜಿತ್ ಸಿಂಗ್ ಮಾನ್ ಯಾರು? ಅಕಾಲಿಗರೊಂದಿಗೆ ಏನು ಸಂಬಂಧ
- Lifestyle
ನಮಗೆ ಸೂಕ್ತವಾದ ಮೆನ್ಸ್ಟ್ರಲ್ ಕಪ್ ಸೈಕ್ ಯಾವುದೆಂದು ತಿಳಿಯುವುದು ಹೇಗೆ?
- Education
Scholarship For Students : ವಿದ್ಯಾರ್ಥಿಗಳಿಗಾಗಿ ನೀಡಲಾಗುವ ವಿದ್ಯಾರ್ಥಿವೇತನ ಮತ್ತು ಅನುದಾನಗಳು
- Sports
SL vs IND 3ನೇ ಟಿ20: ಫ್ಯಾಂಟಸಿ ಡ್ರೀಮ್ ಟೀಮ್, ಸಂಭಾವ್ಯ 11ರ ಬಳಗ: ಭಾರತಕ್ಕೆ ಕ್ಲೀನ್ಸ್ವೀಪ್ ಗುರಿ
- Technology
ಇಂದು 'ರಿಯಲ್ಮಿ C30' ಸ್ಮಾರ್ಟ್ಫೋನ್ ಫಸ್ಟ್ ಸೇಲ್! ಸೇಲ್ ಆಫರ್ ಏನಿದೆ?
- Finance
ಷೇರು ಪೇಟೆ ಜಿಗಿತ: ಮಹೀಂದ್ರಾ ಟಾಪ್ ನಿಫ್ಟಿ ಗೇನರ್
- Movies
SRK ಅಂದ್ರೆ ಶಿವಣ್ಣ ಒಬ್ಬರೇ: ಶಾರುಖ್ ಖಾನ್ಗೆ ಶಾಕ್ ಕೊಟ್ಟ ಕನ್ನಡಿಗರು!
- Travel
ಕರ್ನಾಟಕದಲ್ಲಿರುವ ಈ 5 ಹೆಸರಾಂತ ವಿಷ್ಣುದೇವರ ದೇವಾಲಯಗಳಿಗೆ ಭೇಟಿ ಕೊಟ್ಟು ಧನ್ಯರಾಗಿ!
ಭಾರತದಲ್ಲಿ ವಿನೂತನ ಇವಿ ಸ್ಕೂಟರ್ಗಳ ಬಿಡುಗಡೆಗೆ ಸಿದ್ದವಾದ ಯುಎಇ ಮೂಲದ ಇವಿಯಂ
ದೇಶಾದ್ಯಂತ ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸಿವೆ. ಅದರಲ್ಲೂ ಇವಿ ಸ್ಕೂಟರ್ ವಿಭಾಗದಲ್ಲಿ ಸ್ಟಾರ್ಟ್ಅಪ್ ಕಂಪನಿಯು ಉತ್ತಮ ಬೇಡಿಕೆ ಪಡೆದುಕೊಳ್ಳತ್ತಿದ್ದು, ಕಳೆದ ಎರಡು ವರ್ಷಗಳಲ್ಲಿ ಹಲವಾರು ಇವಿ ಉತ್ಪಾದನಾ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬೇಡಿಕೆ ಆಧರಿಸಿ ಯುಎಇ ಮೂಲದ ಮೆಟಾ4 ಕಂಪನಿಯು ತನ್ನ ಹೊಸ ಇವೆಯಿಯಂ ಇವಿ ವಾಹನ ಉತ್ಪನ್ನಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಇವೆಯಿಯಂ ಬ್ರಾಂಡ್ ಅಡಿ ಗ್ರಾಹಕರ ಬೇಡಿಕೆಯೆಂತೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಒಟ್ಟು ಮೂರು ಇವಿ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೆಟಾ4 ಕಂಪನಿಯು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಉತ್ಪಾದನಾ ಯೋಜನೆ ಅಡಿಯಲ್ಲಿ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ಗಳು, ಎಲೆಕ್ಟ್ರಿಕ್ ಬೈಕ್ ಮತ್ತು ಎಲೆಕ್ಟ್ರಿಕ್ ಸೈಕಲ್ಗಳನ್ನು ಪರಿಚಯಿಸಲಿದೆ.

ಇವಿಯಂ ಬ್ರಾಂಡ್ನ ಅಡಿಯಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪರಿಚಯಿಸುತ್ತಿರುವ ಮೆಟಾ4 ಕಂಪನಿಯು ಹೊಸ ಯೋಜನೆಗಾಗಿ ಭಾರತದಲ್ಲಿ ವೊಲ್ಟಿ ಎನರ್ಜಿ ಕಂಪನಿಯೊಂದಿಗೆ ಕೈಜೋಡಿಸಿದ್ದು, ಹೊಸ ಯೋಜನೆಗಾಗಿ ಸುಮಾರು ರೂ. 250 ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದೆ.
ಮೆಟಾ4 ಅಂಗಸಂಸ್ಥೆಯಾದ ಇವಿಯಂ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳನ್ನ ವೊಲ್ಟಿ ಎನರ್ಜಿ ಕಂಪನಿಯು ಉತ್ಪಾದನೆ ಮತ್ತು ಮಾರಾಟ ಜವಾಬ್ದಾರಿ ವಹಿಸಲಿದ್ದು, ಸ್ಥಳೀಯವಾಗಿ ಹೊಸ ವಾಹನಗಳ ಉತ್ಪಾದನೆಗಾಗಿ ಸುಮಾರು 15 ಎಕರೆ ಭೂಮಿ ಖರೀದಿಸಿದೆ.

ಹೊಸ ಯೋಜನೆಗಾಗಿ ತೆಲಂಗಾಣ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿರುವ ಇವಿಯಂ ಕಂಪನಿಯು ಜಹೀರಾಬಾದ್ನಲ್ಲಿ ಸಬ್ಸಡಿ ದರದಲ್ಲಿ ಭೂಮಿ ಖರೀದಿಸಿದ್ದು, ಹೊಸ ಉತ್ಪಾದನಾ ಘಟಕದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳ ಭರವಸೆ ನೀಡಿದೆ.

ಹೊಸ ಇವಿ ವಾಹನ ಉತ್ಪಾದನಾ ಘಟಕದ ಮೂಲಕ ಸುಮಾರು 500 ಜನರಿಗೆ ಉದ್ಯೋಗ ಭರವಸೆ ನೀಡಿರುವ ಇವೆಯಂ ಕಂಪನಿಯು ಉತ್ಪಾದನೆ ಮತ್ತು ಮಾರಾಟ ಆರಂಭ ನಂತರ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರಿಗೆ ಪರೋಕ್ಷವಾಗಿ ಉದ್ಯೋಗ ಅವಕಾಶಗಳು ದೊರೆಯುವುದಾಗಿ ಹೇಳಿಕೊಂಡಿದೆ.

ಇವಿಯಂ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸರಾಸರಿ ಬೆಲೆ ಮತ್ತು ಸ್ಪರ್ಧಾತ್ಮಕತೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಹೊಸ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಪರಿಚಯಿಸುವುದಾಗಿ ಹೇಳಿಕೊಂಡಿದ್ದು, ಬ್ರ್ಯಾಂಡ್ನ ಹೊಸ ಉತ್ಪಾದನಾ ಸ್ಥಾವರವು ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದಿದೆ.

ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಸ್ತುತ ಸ್ಥಳೀಕರಣದ ಕೊರತೆಯಿದೆ ಎಂದು ಇವಿಯಂ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ಸ್ಥಳೀಕರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಹೊಸ ಇವಿ ಉತ್ಪನ್ನಗಳನ್ನು ಶೇ.100 ರಷ್ಟು ಸ್ಥಳೀಯ ಬಿಡಿಭಾಗಗಳೊಂದಿಗೆ ಭಾರತೀಯ ಬ್ರಾಂಡ್ ಆಗಿ ಗುರುತಿಸಿಕೊಳ್ಳುವ ಆಶಯ ವ್ಯಕ್ತಪಡಿಸಿದೆ.

ಹೊಸ ಇವಿ ವಾಹನ ಉತ್ಪನ್ನಗಳಿಗಾಗಿ ಕಂಪನಿಯು ಈಗಾಗಲೇ ವಿವಿಧ ಹಂತಗಳ ಮಾರುಕಟ್ಟೆ ಅಧ್ಯಯನ ಕೂಡಾ ನಡೆಸಿದ್ದು, ಭಾರತೀಯ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ವಿವಿಧ ಮಾದರಿಗಳನ್ನು ಸಿದ್ದಪಡಿಸುತ್ತಿದೆ.

ಇವಿಯಂ ಕಂಪನಿಯು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆಗೆ ಅರ್ಹವಾಗುವಂತೆ ಪ್ರಮುಖ ಮಾನದಂಡಗಳನ್ನು ಆಧರಿಸಿ ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದ್ದು, ಬಜೆಟ್ ಮತ್ತು ಪ್ರೀಮಿಯಂ ಬೆಲೆಗಳಲ್ಲಿ ಹೊಸ ಇವಿ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಇವಿ ವಾಹನ ಮಾದರಿಗಳ ಉತ್ಪಾದನೆಗಾಗಿ ಈಗಾಗಲೇ ನುರಿತ ಉದ್ಯೋಗಿಗಳ ತಂಡವನ್ನು ರಚಿಸಿರುವ ಇವಿಯಂ ಕಂಪನಿಯು ಈ ವರ್ಷಾಂತ್ಯಕ್ಕೆ ದೇಶಾದ್ಯಂತ ಪ್ರಮುಖ ಇವಿ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಾಗುವ ಭರವಸೆ ನೀಡಿದೆ.

ಇವಿಯಂ ಕಂಪನಿಯು ಇವಿ ಸ್ಕೂಟರ್ಗಳ ಮಾರಾಟಕ್ಕಾಗಿ ಕೆಲವೇ ಕಡೆಗಳಲ್ಲಿ ಪ್ರತ್ಯೇಕ ಮಳಿಗೆಗಳನ್ನು ಹೊಂದಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಪ್ರಮುಖ ಮಲ್ಟಿ ಬ್ರಾಂಡ್ ಸ್ಟೋರ್ಗಳ ಜೊತೆ ಮಾರಾಟ ಸೌಲಭ್ಯವನ್ನು ಆರಂಭಿಸುತ್ತಿದ್ದು, ಮೊದಲ ಹಂತದಲ್ಲಿಯೇ ಒಟ್ಟು ಮೂರು ಇವಿ ಸ್ಕೂಟರ್ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.

ಮೊದಲ ಹಂತದಲ್ಲಿ ಕಂಪನಿಯು ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್, ದೆಹಲಿ-ಎನ್ಸಿಆರ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಹೊಸ ಮಾರಾಟ ಮಳಿಗೆಗಳನ್ನು ತೆರೆಯುತ್ತಿದ್ದು, ಮಾರಾಟ ಆರಂಭದ ನಂತರ ಬೇಡಿಕೆ ಆಧರಿಸಿ ಮಾರಾಟ ವ್ಯಾಪ್ತಿ ಇತರೆ ರಾಜ್ಯಗಳಿಗೂ ವಿಸ್ತರಿಸಲಿದೆ.