ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಪುಣೆ ಮೂಲದ ಇವಿಟ್ರಿಕ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದು, ಕಂಪನಿಯು ಇದೀಗ ಹೊಸ ರೈಜ್(RISE) ಇವಿ ಬೈಕ್ ಬಿಡುಗಡೆ ಮಾಡಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಹೈ ಸ್ಪೀಡ್ ವೈಶಿಷ್ಟ್ಯತೆ ಹೊಂದಿರುವ ಹೊಚ್ಚ ಹೊಸ ರೈಜ್ ಮೋಟಾರ್‌ಸೈಕಲ್ ಮಾದರಿಯು ಪ್ರತಿಸ್ಪರ್ಧಿ ಮಾದರಿಗಳಿಂತೂ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ಹೊಸ ಇವಿ ಬೈಕ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 1,59,990 ಬೆಲೆ ಹೊಂದಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಪಿಎಪಿಎಸ್ ವೆಂಚರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವಿಟ್ರಿಕ್ ಕಂಪನಿಯು ರೈಜ್ ಮಾದರಿಯನ್ನು ಹೈ ಎಂಡ್ ತಂತ್ರಜ್ಞಾನಗಳೊಂದಿಗೆ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಬೈಕ್ ಮಾದರಿಯನ್ನು 'ಮೇಕ್ ಇನ್ ಇಂಡಿಯಾ' ಯೋಜನೆ ಅಡಿ ಉತ್ಪಾದನೆ ಮಾಡಲಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯಾದ ರೈಜ್ ಪ್ರತಿ ಗಂಟೆಗೆ ಗರಿಷ್ಠ 70 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಪ್ರತಿ ಚಾರ್ಜ್‌ಗೆ ಗರಿಷ್ಠ 110 ಕಿ.ಮೀ ಮೈಲೇಜ್ ಖಾತ್ರಿಪಡಿಸಲಿದ್ದು, ಹೊಸ ಇವಿ ಬೈಕ್ ಮಾದರಿಯಲ್ಲಿ ಕಂಪನಿಯು ಲಿಥಿಯಂ-ಐಯಾನ್ ಬ್ಯಾಟರಿ ಜೋಡಣೆ ಮಾಡಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ರೈಜ್ ಇವಿ ಬೈಕ್ ಮಾದರಿಯಲ್ಲಿರುವ 70v/40ah ಲಿಥಿಯಂ-ಐಯಾನ್ ಬ್ಯಾಟರಿಯು ಗರಿಷ್ಠ 4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗಲಿದ್ದು, ಚಾರ್ಜ್ ಪೂರ್ಣಗೊಂಡ ನಂತರ ಆಟೋ ಕಟ್ ತಂತ್ರಜ್ಞಾನದ ಮೂಲಕ ಗರಿಷ್ಠ ಸುರಕ್ಷತೆಯನ್ನು ಒದಗಿಸುತ್ತದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಆಟೋ ಕಟ್ ತಂತ್ರಜ್ಞಾನದಿಂದಾಗಿ ಬ್ಯಾಟರಿ ಓವರ್ ಚಾರ್ಜ್ ಪರಿಣಾಮದಿಂದ ಆಗಬಹುದಾದ ಅನಾಹುತಗಳನ್ನು ತಡೆಯಲಿದ್ದು, ಹೀಗಾಗಿ ಇದು ಬ್ಯಾಟರಿಯನ್ನು ಚಾರ್ಜ್ ಮಾಡಲು ಬಳಕೆದಾರರಿಗೆ ಸಾಕಷ್ಟು ಅನುಕೂಲಕರ ಮತ್ತು ಸುರಕ್ಷಿತವಾಗಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಹೊಸ ಬೈಕಿ ಬ್ಯಾಟರಿ ಚಾರ್ಜ್‌ ಮಾಡಲು ಕಂಪನಿಯು 10amp ಮೈಕ್ರೋ ಚಾರ್ಜರ್‌ ನೀಡಲಿದ್ದು, ಇದು ಅತಿ ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಹೆಚ್ಚಿನ ಬ್ಯಾಟರಿ ಚಾರ್ಜ್ ಮಾಡುತ್ತದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಇನ್ನು ಹಲವಾರು ಹೊಸ ತಂತ್ರಜ್ಞಾನಗಳಿದ್ದು, ಪ್ರತಿ ಸ್ಪರ್ಧಿ ಮಾದರಿಗೆ ಉತ್ತಮ ಪೈಪೋಟಿ ನೀಡುತ್ತದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಇನ್ನು ಹೊಸ ಬೈಕ್ ವಿನ್ಯಾಸದ ಕುರಿತು ಮಾತನಾಡುವುದಾದರೆ ಹೊಸ ಬೈಕಿ ಸ್ಪೋರ್ಟಿ ವಿನ್ಯಾಸ ಹೊಂದಿದ್ದು, ಇದು ಬದಿಗಳಲ್ಲಿ ತೀಕ್ಷ್ಣವಾದ ಕಟ್‌ಗಳು ಡ್ಯಾಶ್‌ನೊಂದಿಗೆ ಸ್ಪೋರ್ಟಿ ನೋಟವನ್ನು ಹೆಚ್ಚಿಸುತ್ತದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಹಾಗೆಯೇ ಹೊಸ ಬೈಕಿನಲ್ಲಿ ಕಂಪನಿಯು ಡೇ ರನ್ನಿಂಗ್ ಲೈಟ್ ಫಂಕ್ಷನ್‌ನೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ ನೀಡಿದ್ದು, ಹಿಂಬದಿಯ ವಿಂಕರ್‌ಗಳು ಸಹ ಬೈಕಿನ ಸ್ಪೋರ್ಟಿ ಲುಕ್‌ಗೆ ಕಾರಣವಾಗಿವೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಹೊಸ ಬೈಕಿನಲ್ಲಿ ಕಂಪನಿಯು ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ 2000watt BLDC ಮೋಟಾರ್‌ ಜೋಡಿಸಿದ್ದು, ಇದು ಗರಿಷ್ಠ ಟಾಪ್ ಸ್ಪೀಡ್‌ನಲ್ಲೂ ಹೆಚ್ಚಿನ ಮಟ್ಟದ ಬ್ಯಾಟರಿ ದಕ್ಷತೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಬೈಕಿನಲ್ಲಿ ಕಂಪನಿಯು ರೆಡ್ ಮತ್ತು ಬ್ಲ್ಯಾಕ್ ಬಣ್ಣಗಳ ಆಯ್ಕೆ ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ದೇಶಾದ್ಯಂತ ತನ್ನ ಸಹಭಾಗಿತ್ವದ ಮಾರಾಟ ಮಳಿಗೆಗಳ ಮೂಲಕ ವಿತರಣೆ ಮಾಡಲಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಅದಕ್ಕಾಗಿ ಕಂಪನಿಯು ಇಂದಿನಿಂದಲೇ ಆಸಕ್ತ ಹೊಸ ಇವಿ ಬೈಕ್ ಖರೀದಿದಾರರಿಂದ ರೂ. 5 ಸಾವಿರ ಮುಂಗಡದೊಂದಿಗೆ ಬುಕಿಂಗ್ ಆರಂಭಿದ್ದು, ದೇಶಾದ್ಯಂತ 22 ರಾಜ್ಯಗಳಲ್ಲಿ ಹೊಸ ಇವಿ ಬೈಕ್ ಸದ್ಯ ಖರೀದಿಗೆ ಲಭ್ಯವಿರಲಿದೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

125 ಟಚ್ ಪಾಯಿಂಟ್‌ಗಳ ಮೂಲಕ ಹೊಸ ಇವಿ ಬೈಕ್ ವಿತರಣೆ ಆರಂಭಿಸಲಿರುವ ಇವಿಟ್ರಿಕ್ ಕಂಪನಿಯು ಶೇ.100 ರಷ್ಟು ಸ್ಥಳೀಯ ಬಿಡಿಭಾಗಗಳೊಂದಿಗೆ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡಿದ್ದು, ಇವಿಟ್ರಿಕ್ ಹೊಸ ಇವಿ ಉತ್ಪನ್ನಗಳನ್ನು ಇಂಟರ್ನ್ಯಾಷನಲ್ ಸೆಂಟರ್ ಫಾರ್ ಅಟೋಮೋಟಿವ್ ಟೆಕ್ನಾಲಜಿ(iCAT) ಸಂಸ್ಥೆಯಿಂದ ಅನುಮೋದನೆಗೊಂಡಿವೆ.

ಪ್ರತಿ ಚಾರ್ಜ್‌ಗೆ 110 ಕಿ.ಮೀ ಮೈಲೇಜ್ ನೀಡುವ ಇವಿಟ್ರಿಕ್ ರೈಜ್ ಬೈಕ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇವಿಟ್ರಿಕ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಇವಿಟ್ರಿಕ್ ಆಕ್ಸಿಸ್, ಇವಿಟ್ರಿಕ್ ರೈಡ್, ಇವಿ ಟ್ರಿಕ್ ಮೈಟಿ ಮಾದರಿಗಳ ಮೂಲಕ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಕಂಪನಿಯು ರೈಜ್ ಇವಿ ಬೈಕ್ ಮೂಲಕ ಮತ್ತೊಂದು ಹಂತದ ಬೆಳವಣಿಗೆ ಕಾಣುವ ನೀರಿಕ್ಷೆಯಲ್ಲಿದೆ. ಹೊಸ ಬೈಕ್ ಮಾದರಿಯಲ್ಲಿ ಕಂಪನಿಯು ಕಡಿಮೆ ಮೈಲೇಜ್ ನೀಡಿದ್ದರೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ ಎನ್ನಬಹುದು.

Most Read Articles

Kannada
English summary
Evtric motors first electric motorcycle rise launched at ex showroom 1 59 990
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X