ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ದೇಶಾದ್ಯಂತ ಇವಿ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಭವಿಷ್ಯದ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಯೋಜನೆಗಾಗಿ ವಾಹನ ಉದ್ಯಮದ ದಿಗ್ಗಜ ಸಂಸ್ಥೆಗಳಾದ ಹೀರೋ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಗ್ರೂಪ್ ಸಹಭಾಗೀತ್ವ ಯೋಜನೆ ಘೋಷಣೆ ಮಾಡಿವೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಮೈಲಿಗಲ್ಲು ಸಾಧಿಸಿದ್ದು, ಇವಿ ಸ್ಕೂಟರ್ ಉತ್ಪಾದನೆಯನ್ನು ಆರಂಭಿಸಿ ಸುಮಾರು 13 ವರ್ಷಗಳನ್ನು ಪೂರೈಸಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಾರುಕಟ್ಟೆಯಲ್ಲಿ ಬೇಡಿಕೆ ಪೂರೈಕೆಗಾಗಿ ಉದ್ಯಮ ವಿಸ್ತರಣೆಗಾಗಿ ಮಹತ್ವದ ಯೋಜನೆ ರೂಪಿಸಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಸಕಾಲದಲ್ಲಿ ಪೂರೈಸಲು ಬ್ರ್ಯಾಂಡ್‌ನ ವಿಸ್ತರಣೆ ಯೋಜನೆಗಳ ಭಾಗವಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಹೀಂದ್ರಾ ಗ್ರೂಪ್‌ ಜೊತೆಗೆ ಹೊಸ ಪಾಲುದಾರಿಕೆಯನ್ನು ಪ್ರಕಟಿಸಿದ್ದು, ಪಾಲುದಾರಿಕೆಯ ಭಾಗವಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಮಧ್ಯಪ್ರದೇಶದ ಪಿಥಮ್‌ಪುರ್‌ದಲ್ಲಿರುವ ಮಹೀಂದ್ರಾ ಕಂಪನಿಯ ವಾಹನ ಉತ್ಪಾದನಾ ಘಟಕವನ್ನು ಇವಿ ಸ್ಕೂಟರ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಹೀರೋ ಎಲೆಕ್ಟ್ರಿಕ್ ಈಗಾಗಲೇ ಲೂಧಿಯಾನದಲ್ಲಿರುವ ತನ್ನ ಇವಿ ವಾಹನ ಉತ್ಪಾದನಾ ಘಟಕದಲ್ಲಿ ಇವಿ ವಾಹನಗಳ ಉತ್ಪಾದನೆ ಕೈಗೊಳ್ಳುತ್ತಿದ್ದು, 2022ರ ಅಂತ್ಯದ ವೇಳೆಗೆ ವಾರ್ಷಿಕವಾಗಿ 1 ಮಿಲಿಯನ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉತ್ಪಾದಿಸುವ ಗುರಿ ಯೋಜನೆಗಾಗಿ ಮಹೀಂದ್ರಾ ವಾಹನ ಉತ್ಪಾದನಾ ಘಟಕವನ್ನು ಸಹ ಬಳಕೆ ಮಾಡಿಕೊಳ್ಳಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಪಾಲುದಾರಿಕೆಯ ಯೋಜನೆ ಅಡಿಯಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಗೆ ಮಹೀಂದ್ರಾ ಗ್ರೂಪ್ ತಮ್ಮ ಉತ್ಪಾದನಾ ಘಟಕದಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಅನುವು ಮಾಡಿಕೊಟ್ಟರೆ ಹೀರೋ ಎಲೆಕ್ಟ್ರಿಕ್ ಕಂಪನಿ ಮಹೀಂದ್ರಾ ಒಡೆತನದ ಪ್ಯೂಜೊ ಮೋಟಾರ್‌ಸೈಕಲ್‌ಗಳ ಇವಿ ಮಾದರಿಗಳ ಅಭಿವೃದ್ದಿಗಾಗಿ ತಾಂತ್ರಿಕವಾಗಿ ಸಹಾಯ ಮಾಡಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಇವಿ ವಾಹನಗಳ ಅಭಿವೃದ್ದಿ ಮತ್ತು ಉತ್ಪಾದನೆಗಾಗಿ ಎರಡು ಕಂಪನಿಗಳ ಒಗ್ಗೂಡಿಸುವಿಕೆಯು ವಾಹನಗಳ ಉತ್ಪಾದನೆ, ಬೆಲೆ ಮತ್ತು ಅಭಿವೃದ್ಧಿಯಲ್ಲಿ ಗಮನಾರ್ಹ ಲಾಭಗಳಿಗೆ ಕಾರಣವಾಗಬಹುದು ಎಂದು ಹೀರೋ ಎಲೆಕ್ಟ್ರಿಕ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಜೊತೆಗೆ ಹೊಸ ಪಾಲುದಾರಿಕೆ ಯೋಜನೆಯು ಭವಿಷ್ಯದ ಉತ್ಪನ್ನಗಳಿಗೆ ಕಾರಣವಾಗುವುದಲ್ಲದೆ ಅದು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಮಾತ್ರವಲ್ಲದೆ ಜಾಗತಿಕ ಅಗತ್ಯತೆಗಳನ್ನೂ ಸಹ ಪೂರೈಸಲಿದ್ದು, ಪಾಲುದಾರಿಕೆಯು ಉದ್ಯಮದಲ್ಲಿ ಗುಣಮಟ್ಟವನ್ನು ಹೊಂದಲು ಸಹಕಾರಿಯಾಗಲಿದೆ ಕಂಪನಿಯು ಮಾಹಿತಿ ಹಂಚಿಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಹೊಸ ಪಾಲುದಾರಿಕೆ ಕುರಿತಂತೆ ಮಾತನಾಡಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯ ಎಂಡಿ ನವೀನ್ ಮಂಜಾಲ್ ಅವರು 'ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಹೀರೋ ಎಲೆಕ್ಟ್ರಿಕ್ ಮುಂಚೂಣಿಯಲ್ಲಿದ್ದು, ದೀರ್ಘಾವಧಿಯ ಪಾಲುದಾರಿಕೆಯು ಎರಡೂ ಕಂಪನಿಗಳಿಗೂ ಎಲೆಕ್ಟ್ರಿಕ್ ವಾಹನ ಅಭಿವೃದ್ದಿ ಆಳವಾದ ಜ್ಞಾನವನ್ನು ಹೆಚ್ಚು ಮಾಡಲು ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಹೊಸ ಉತ್ಪನ್ನಗಳ ಅಭಿವೃದ್ಧಿ ಹೆಚ್ಚಿಸಲು ಇದು ಅನುವು ಮಾಡಿಕೊಡುತ್ತದೆ' ಎಂದಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಈ ಮೂಲಕ ಹೊಸ ಪಾಲುದಾರಿಕೆಯೊಂದಿಗೆ ಎರಡು ಕಂಪನಿಗಳು ಮುಂದಿನ ಐದು ವರ್ಷಗಳಲ್ಲಿ ವಾರ್ಷಿಕವಾಗಿ ಐದು ಮಿಲಿಯನ್ ಇವಿ ವಾಹನಗಳ ಉತ್ಪಾದನಾ ಗುರಿಹೊಂದಿದ್ದು, ಹೊಸ ಯೋಜನೆಗಾಗಿ ಶೀಘ್ರದಲ್ಲೇ ಭಾರೀ ಪ್ರಮಾಣ ಹೂಡಿಕೆ ಘೋಷಣೆ ಮಾಡಲು ಸಿದ್ದವಾಗುತ್ತಿವೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಇನ್ನು ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ಮೂರು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿಂದಿನ ಹತ್ತು ವರ್ಷಗಳಲ್ಲಿ ವಾಹನ ಮಾರಾಟ ಪ್ರಮಾಣವು ಕಳೆದ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಈ ಮೂಲಕ ಕಂಪನಿಯು ಇವಿ ದ್ವಿಚಕ್ರ ವಾಹನ ಮಾರಾಟ ವಿಭಾಗದಲ್ಲಿ ಶೇ.36 ರಷ್ಟು ಪಾಲು ತನ್ನದಾಗಿಸಿಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಇವಿ ಸ್ಕೂಟರ್ ಮಾರಾಟವನ್ನು ಮುಂದಿನ ಎರಡು ವರ್ಷಗಳಲ್ಲಿ ಶೇಕಡಾ 50ರಷ್ಟು ಹೆಚ್ಚಿಸುವ ನೀರಿಕ್ಷೆಯಲ್ಲಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಹೀಗಾಗಿ ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಇವಿ ವಾಹನಗಳ ಮಾರಾಟ ಮಳಿಗೆಗಳನ್ನು ದೇಶಾದ್ಯಂತ ವಿಸ್ತರಿಸುತ್ತಿದ್ದು, ಈಗಾಗಲೇ ಮಾರಾಟ ಮಳಿಗೆಗಳನ್ನು ಹೊಂದಿರುವ ನಗರಗಳಲ್ಲಿ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜಿಸಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಕಳೆದ ಒಂದು ವರ್ಷದ ಅವಧಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ನಗರಗಳಲ್ಲಿ ಹಲವು ಹೊಸ ಮಾರಾಟ ಮಳಿಗೆಗಳನ್ನು ತೆರೆದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಮುಂದಿನ ಮೂರು ವರ್ಷಗಳಲ್ಲಿ ಪ್ರತಿವರ್ಷ 2.5 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

ಸದ್ಯ ದೇಶಾದ್ಯಂತ 500 ನಗರಗಳಲ್ಲಿ 700ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಅಗತ್ಯತೆಯ ಆಧಾರದ ಮೇಲೆ ಕಳೆದ ವರ್ಷ ಸುಮಾರು 1,500 ಹೊಸ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಸಿದ್ದವಾಗಿದೆ.

ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗಾಗಿ ಹೀರೋ ಎಲೆಕ್ಟ್ರಿಕ್ ಜೊತೆ ಕೈಜೋಡಿಸಿದ ಮಹೀಂದ್ರಾ ಗ್ರೂಪ್

2022 ಆರ್ಥಿಕ ವರ್ಷದ ಕೊನೆಯಲ್ಲಿ ದೇಶಾದ್ಯಂತ ಒಟ್ಟು ಒಂದು ಸಾವಿರ ಟಚ್ ಪಾಯಿಂಟ್(ಮಾರಾಟ ಮಳಿಗೆಗಳನ್ನು) ಹೊಂದುವ ಗುರಿಹೊಂದಿದ್ದು, ಚಾರ್ಜಿಂಗ್ ನಿಲ್ದಾಣಗಳ ಲಭ್ಯತೆಯ ಆಧಾರದ ಮೇಲೆ ಹೊಸ ಟಚ್ ಪಾಯಿಂಟ್ ತೆರೆಯಲಾಗುತ್ತಿದೆ.

Most Read Articles

Kannada
English summary
Hero electric and mahindra mahindra announce partnership for evs
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X