300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆಗೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಭಾರತೀಯ ಮಾರುಕಟ್ಟೆಯ ದ್ವಿಚಕ್ರ ವಾಹನ ವಿಭಾಗದಲ್ಲಿ ಆಫ್ ರೋಡ್ ಬೈಕ್‌ಗಳ ಕ್ರೇಜ್ ಹೆಚ್ಚಾಗತೊಡಗಿದೆ. ಭಾರತದಲ್ಲಿ ಪ್ರವಾಸ ಮಾಡಲು ಯುವಕರು ಆಫ್-ರೋಡ್ ಬೈಕ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಹೀರೋ ಮೋಟೋಕಾರ್ಪ್‌ನಿಂದ ರಾಯಲ್ ಎನ್‌ಫೀಲ್ಡ್ ವರೆಗೆ, ಈ ವಿಭಾಗದಲ್ಲಿ ಕೆಲವು ಆಫ್-ರೋಡ್ ಮಾದರಿಗಳನ್ನು ಕಾಣಬಹುದು.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್, ಈ ವಿಭಾಗದಲ್ಲಿ ಹೀರೋ ಎಕ್ಸ್‌ಪಲ್ಸ್ 200, ಎಕ್ಸ್‌ಪಲ್ಸ್ 200 4 ವಿ ಮತ್ತು ಎಕ್ಸ್‌ಪಲ್ಸ್ 200 ಟಿ ಮಾರಾಟ ಮಾಡುತ್ತಿದೆ. ಇದೀಗ ಕಂಪನಿಯು ಆಫ್ ರೋಡ್ ವಿಭಾಗದಲ್ಲಿ ದೊಡ್ಡ ಎಂಜಿನ್ ಬೈಕ್‌ಗಳನ್ನು ತರಲು ತಯಾರಿ ನಡೆಸುತ್ತಿದೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಕಂಪನಿಯು XPulse 300, XPulse 300T ಮತ್ತು Stream 300S ನಂತಹ ದೊಡ್ಡ ಎಂಜಿನ್ ಬೈಕ್‌ಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಸುದ್ದಿಯಾಗಿದೆ. ಇತ್ತೀಚೆಗೆ, ಈ ಬೈಕ್‌ಗಳ ಮಾದರಿಗಳನ್ನು ಪರೀಕ್ಷಿಸುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಕಂಪನಿಯು ಹೊಸ ಬೈಕ್ ಮಾದರಿಗಳನ್ನು ತರಲು ತಯಾರಿ ನಡೆಸುತ್ತಿದೆ ಎಂದು ಖಚಿತಪಡಿಸಿದೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ವರದಿಯ ಪ್ರಕಾರ, ಹೀರೋ ಎಕ್ಸ್‌ಪಲ್ಸ್ 300 ಅಡ್ವೆಂಚರ್ ಬೈಕ್ ಆಗಿದ್ದರೆ, ಎಕ್ಸ್‌ಪಲ್ಸ್ 300 ಟಿ ಅಡ್ವೆಂಚರ್ ಟೂರರ್ ಮಾಡೆಲ್ ಆಗಿರುತ್ತದೆ. ಇನ್ನು ಸ್ಟ್ರೀಮ್ 300S ಫುಲ್ ಫೇರಿಂಗ್‌ನೊಂದಿಗೆ ಸ್ಪೋರ್ಟ್ಸ್ ಬೈಕ್ ಆಗಿರುತ್ತದೆ. ಕಂಪನಿಯು ಈ ಮೂರು ಬೈಕ್‌ಗಳಲ್ಲಿ 300 ಸಿಸಿ ಎಂಜಿನ್ ಅನ್ನು ಬಳಸುತ್ತಿದೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಇದರೊಂದಿಗೆ ಇವು ಕಂಪನಿಯ ಅತ್ಯಂತ ಶಕ್ತಿಶಾಲಿ ಬೈಕ್‌ಗಳಾಗಿವೆ. ಎಲ್ಲಾ ಬೈಕುಗಳಲ್ಲಿ ಒಂದೇ ಎಂಜಿನ್ ಅನ್ನು ಬಳಸಲಾಗುವುದು, ಆದರೆ ಶಕ್ತಿ ಮತ್ತು ಟಾರ್ಕ್ ಔಟ್ಪುಟ್ ಬದಲಾಗಬಹುದು. Hero XPulse 300 ಬೈಕ್‌ಗಳ ಕೆಲವು ಪ್ರಮುಖ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇವುಗಳಲ್ಲಿ ಎತ್ತರದ ಹ್ಯಾಂಡಲ್‌ಬಾರ್, ಆಕ್ರಮಣಕಾರಿ ಹೆಡ್‌ಲ್ಯಾಂಪ್ ಕೌಲ್, ಕಾಂಪ್ಯಾಕ್ಟ್ ವಿಂಡ್‌ಸ್ಕ್ರೀನ್, ಇಂಜಿನ್ ಗಾರ್ಡ್, ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಪೋಕ್ ವೀಲ್‌ಗಳು, ಆಫ್-ರೋಡ್ ಟೈರ್‌ಗಳು ಮತ್ತು LED ಹೆಡ್‌ಲೈಟ್ ಸೇರಿವೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಕಂಪನಿಯು 2023 ರಲ್ಲಿ ಈ ಮೂರು ಬೈಕ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. Hero XPulse 300 ಪರಿಕಲ್ಪನೆಯನ್ನು 2020 Hero World ಈವೆಂಟ್‌ನಲ್ಲಿ ಪರಿಚಯಿಸಲಾಯಿತು. ಈ ಮಾದರಿಗಳಲ್ಲಿ ಹೀರೋ ಮೊದಲ ಬಾರಿಗೆ ಟ್ರೆಲ್ಲಿಸ್ ಫ್ರೇಮ್ ಅನ್ನು ಬಳಸುತ್ತಿದ್ದಾರೆ. ಈ ಮೂಲಕ ಕಂಪನಿಯ ಈ ಮಾದರಿಯು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯವಾಗಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

Hero XPulse 300 ಬೈಕ್‌ಗಳ ಕೆಲವು ಪ್ರಮುಖ ವೈಶಿಷ್ಟ್ಯಗಳ ಕುರಿತು ಮಾತನಾಡುವುದಾದರೆ, ಇವುಗಳಲ್ಲಿ ಎತ್ತರದ ಹ್ಯಾಂಡಲ್‌ಬಾರ್, ಆಕ್ರಮಣಕಾರಿ ಹೆಡ್‌ಲ್ಯಾಂಪ್ ಕೌಲ್, ಕಾಂಪ್ಯಾಕ್ಟ್ ವಿಂಡ್‌ಸ್ಕ್ರೀನ್, ಇಂಜಿನ್ ಗಾರ್ಡ್, ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಪೋಕ್ ವೀಲ್‌ಗಳು, ಆಫ್-ರೋಡ್ ಟೈರ್‌ಗಳು ಮತ್ತು LED ಹೆಡ್‌ಲೈಟ್ ಸೇರಿವೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

XPulse 300T ಅನ್ನು ವಿಭಿನ್ನ ಶೈಲಿಯಲ್ಲಿ ನೀಡಬಹುದು. ಈ ಬೈಕ್ ಅಡ್ವೆಂಚರ್ ಟೂರರ್ ಆಗುವ ಸಾಧ್ಯತೆ ಹೆಚ್ಚಾಗಿ. ಬಿಡುಗಡೆಯಾದಾಗ, XPulse 300 ಶ್ರೇಣಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಯೆಜ್ಡಿ ಅಡ್ವೆಂಚರ್, KTM 390 ಅಡ್ವೆಂಚರ್ ಮತ್ತು BMW G310GS ನಂತಹ ಪ್ರತಿಸ್ಪರ್ಧಿಗಳೊಂದಿಗೆ ಸ್ಪರ್ಧಿಸಲಿದೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಸೋರಿಕೆಯಾದ ಫೋಟೋಗಳ ಪ್ರಕಾರ, Hero Xtreme 300S ನ ಸಂಪೂರ್ಣ ವಿನ್ಯಾಸವು Xtreme 200S ನಂತೆಯೇ ಇದೆ. ಅದರ ಕೆಲವು ಪ್ರಮುಖ ವಿನ್ಯಾಸದ ವೈಶಿಷ್ಟ್ಯಗಳಲ್ಲಿ ಅಲಾಯ್‌ ವೀಲ್‌ಗಳು, ಆಕ್ರಮಣಕಾರಿ ಮುಂಭಾಗದ ವಿನ್ಯಾಸ, ಮುಂಭಾಗದ ಕೌಲ್ ಮೌಂಟೆಡ್ ರಿಯರ್ ವ್ಯೂ ಮಿರರ್‌ಗಳು ಮತ್ತು ಪೂರ್ಣ ದೇಹ ಫೇರಿಂಗ್ ಸೇರಿವೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಈ ಬೈಕ್ ಕಡಿಮೆ ಸ್ಥಾನದ ಹ್ಯಾಂಡಲ್‌ಬಾರ್ ಮತ್ತು ಹಿಂಭಾಗದ ಸೆಟ್ ಫುಟ್‌ಪೆಗ್‌ಗಳನ್ನು ಒಳಗೊಂಡಿದೆ. ಈ ಬೈಕ್‌ಗಳನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ತರಬಹುದು. ಇವು ಆಫ್‌ರೋಡ್‌ ಪ್ರಿಯರಿಗಾಗಿಯೇ ಕಂಪನಿ ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದ ಪ್ರಮುಖ ಆಫ್‌ರೋಡ್ ಬೈಕ್‌ಗಳಿಗೆ ಕಠಿಣ ಪೈಪೋಟಿ ನೀಡಲಿವೆ.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಇತ್ತೀಚೆಗೆ ಹೊಸ ಹೀರೋ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಸಂಪೂರ್ಣವಾಗಿ ಮಾರಾಟವಾಗಿದೆ. ಈ ಹೊಸ ರ್‍ಯಾಲಿ ಎಡಿಷನ್ ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿತ್ತು. ಇದೀಗ ಈ ಎಲ್ಲಾ ಯುನಿಟ್ ಗಳು ಮಾರಾಟವಾಗಿದೆ. ಈ ಎಕ್ಸ್‌ಪಲ್ಸ್ 200 4ವಿ ರ್‍ಯಾಲಿ ಎಡಿಷನ್ ಆವೃತ್ತಿಯೊಂದಿಗೆ, ಗ್ರಾಹಕರು ಎಕ್ಸ್‌ಪಲ್ಸ್ 200 4ವಿಯ ಫ್ಯಾಕ್ಟರಿ ಕಸ್ಟಮ್ ರೂಪಾಂತರವನ್ನು ಹೆಚ್ಚು ಆಫ್-ರೋಡ್ ಸಿದ್ಧ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೊಂದಿಗೆ ಪಡೆಯಬಹುದು.

300 ಸಿಸಿ ಶಕ್ತಿಶಾಲಿ ಆಫ್‌-ರೋಡ್ ಬೈಕ್‌ಗಳ ಬಿಡುಗಡೆ ಸಜ್ಜದ ಹೀರೋ: ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬೈಕ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿ ಕಳೆದ ದಶಕದಿಂದ ಆಫ್‌ರೋಡ್‌ ಬೈಕ್‌ಗಳಿಗೆ ಭಾರಿ ಕ್ರೇಜ್ ಹುಟ್ಟಿಕೊಂಡಿದೆ. ಈ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿರುವ ರಾಯಲ್ ಎನ್‌ಫೀಲ್ಡ್ ತನ್ನ ಹಿಮಾಲಯನ್ ಮಾದರಿಯೊಂದಿಗೆ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿದ್ದರೆ ಹೀರೋ ತನ್ನ ಹೊಸ ಆಫ್‌ರೋಡ್ ಮಾದರಿಗೊಳಿಂದಿಗೆ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಿ ಆಫ್‌ರೋಡ್‌ ಪ್ರಿಯರನ್ನು ಆಕರ್ಷಿಸುತ್ತಿದೆ.

Most Read Articles

Kannada
English summary
Hero is gearing up to launch 300cc powerful off road bikes
Story first published: Saturday, August 13, 2022, 16:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X