ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ 2022ರ ಜೂನ್ ತಿಂಗಳ ಮಾಸಿಕ ಮಾರಾಟದ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 4,84,867 ಯುನಿಟ್‌ಗಳನ್ನು ಮಾರಾಟಗೊಳಿಸಿದ್ದಾರೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು 4,69,160 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ 3.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯ ಪ್ರಕಾರ, ಸಂಪುಟಗಳಲ್ಲಿನ ಬೆಳವಣಿಗೆಯು ನಿರಂತರವಾಗಿ ಸುಧಾರಿಸುತ್ತಿರುವ ಗ್ರಾಹಕರ ಭಾವನೆಯನ್ನು ಸೂಚಿಸುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಉತ್ತಮ ಮಾನ್ಸೂನ್ ಮತ್ತು ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯು ಮುಂದುವರಿಯುತ್ತದೆ ಎಂದು ಹೀರೋ ಮೋಟೊಕಾರ್ಪ್ ನಿರೀಕ್ಷಿಸುತ್ತುದೆ,

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

2022-23ರ ಹಣಕಾಸು ವರ್ಷದ (ಏಪ್ರಿಲ್-ಜೂನ್) ಮೊದಲ ತ್ರೈಮಾಸಿಕದಲ್ಲಿ 13.90 ಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿದ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್. ಹಿಂದಿನ ಹಣಕಾಸು ವರ್ಷದ 10.25 ಲಕ್ಷ ಯುನಿಟ್‌ಗಳನ್ನು ಅನುಗುಣವಾದ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು 35.7 ಶೇಕಡಾ ಬೆಳವಣಿಗೆಯಾಗಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

2021-22 ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ (ಜನವರಿಯಿಂದ ಮಾರ್ಚ್‌ವರೆಗೆ) ಕಂಪನಿಯು 11.89 ಲಕ್ಷಗಳನ್ನು ಮಾರಾಟ ಮಾಡಿದಾಗ ತ್ರೈಮಾಸಿಕ ಮಾರಾಟ ಸಂಖ್ಯೆಗಳು 17 ಪ್ರತಿಶತದಷ್ಟು ಬೆಳವಣಿಗೆಯಾಗಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿಕೆಯಲ್ಲಿ ಪ್ರಕಟಿಸಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

2022ರ ಜೂನ್ ತಿಂಗಳ ಮೋಟಾರ್‌ಸೈಕಲ್ ಮಾರಾಟವು 4,61,421 ಯುನಿಟ್‌ಗಳನ್ನು ಹೊಂದಿದೆ, ಕಳೆದ ತಿಂಗಳಿನಲ್ಲಿ ಕೇವಲ 23,446 ಸ್ಕೂಟರ್ ಗಳನ್ನು ಮಾರಾಟ ಮಾಡಿದೆ. 2022 ಜೂನ್ ತಿಂಗಳಿನಲ್ಲಿ ಕಂಪನಿಯ ಮೋಟಾರ್‌ಸೈಕಲ್ ಮಾರಾಟವು ಜೂನ್ 2021 ರಲ್ಲಿ 4,41,536 ಯುನಿಟ್‌ಗಳ ಮಾರಾಟದಿಂದ ಶೇಕಡಾ 4.5 ರಷ್ಟು ಹೆಚ್ಚಾಗಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕವಾದ ವಿಡಾ(Vida) ಬ್ರ್ಯಾಂಡ್ ಆರಂಭಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಸ್ಕೂಟರ್ ಮಾದರಿಯು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿ ಪ್ರತ್ಯೇಕ ಇವಿ ಬ್ರಾಂಡ್ ಆರಂಭಿಸುತ್ತಿದ್ದು, ವಿಡಾ ಬ್ರ್ಯಾಂಡ್ ಅಡಿ ಕಂಪನಿಯು ಪ್ರಮುಖ ಇವಿ ದ್ವಿಚಕ್ರವಾಹನಗಳನ್ನು ಹೊರತರಲಿದೆ. ಹೊಸ ಬ್ರಾಂಡ್ ಮೂಲಕ ಮಾರುಕಟ್ಟೆ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನು 100 ಮಿಲಿಯನ್ ಯುಎಸ್ಎ ಡಾಲರ್ ಜಾಗತಿಕ ಸುಸ್ಥಿರತೆ ನಿಧಿ ಘೋಷಿಸಿದ್ದಾರೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ನಿಧಿಯನ್ನು ಬಳಸಲಾಗುವುದು ಎಂದು ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಮಾಹಿತಿ ನೀಡಿದ್ದು, ಭವಿಷ್ಯದ ಯೋಜನೆಗಳೊಂದಿಗೆ ಕಂಪನಿಯು ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಕೇವಲ ತನ್ನ ಹೊಸ ಯೋಜನೆಗಳಿಗೆ ಮಾತ್ರವಲ್ಲದೆ ಹಲವು ಇವಿ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಹೊಸ ಬಂಡವಾಳ ಯೋಜನೆ ಅಡಿ ಮತ್ತಷ್ಟು ಇವಿ ಸ್ಕೂಟರ್‌ಗಳು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿವೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಇನ್ನು ಹೀರೋ ಮೋಟೊಕಾರ್ಪ್ ತನ್ನ ಹೊಸ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಡ್ರಮ್ ಮತ್ತು ಡಿಸ್ಕ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಹೆಚ್ಚುವರಿ ಪ್ರೀಮಿಯಂಗಾಗಿ, ಎಕ್ಸ್‌ಟೆಕ್‌ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತ ಸಾಕಷ್ಟು ಉಪಯುಕ್ತ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬ್ರ್ಯಾಂಡ್‌ನ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪುನರುಚ್ಚರಿಸುವ 5 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ತನ್ನ ಆಕ್ರಮಣಕಾರಿ ಮಾರ್ಕೆಟಿಂಗ್ ಕಾರ್ಯತಂತ್ರದ ಭಾಗವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಈ ಹೊಸ ಹೊಸ ಹೀರೋ ಪ್ಯಾಶನ್ ಎಕ್ಸ್‌ಟೆಕ್‌ ಬೈಕ್ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.74,590 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.78,990 ಆಗಿದೆ. ಇದು ಬೇಸ್ ಪ್ಯಾಶನ್ ಪ್ರೊಗಿಂತ ರೂ. 5,000-6,000 ವರೆಗೆ ದುಬಾರಿಯಾಗಿದೆ. ಇದರೊಂದಿಗೆ ಬ್ಲೂ ಬ್ಯಾಕ್‌ಲಿಟ್ ಇನ್ ಸ್ಟ್ರೂಮೆಂಟ್ ಕ್ಲಸ್ಟರ್ ಫೋನ್ ಬ್ಯಾಟರಿ ಶೇಕಡಾವನ್ನು ಸಹ ತೋರಿಸುತ್ತದೆ. ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್ ಸಾಂಪ್ರದಾಯಿಕ ಹ್ಯಾಲೊಜೆನ್ ಲ್ಯಾಂಪ್‌ಗಿಂತ 12 ಪ್ರತಿಶತ ಉದ್ದದ ಕಿರಣದೊಂದಿಗೆ ಸೆಗ್ಮೆಂಟ್ ಬ್ರೈಟ್‌ನೆಸ್‌ನಲ್ಲಿ ಅತ್ಯುತ್ತಮವಾಗಿ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಳೆದ ತಿಂಗಳು ಹೀರೋ ಮೋಟೊಕಾರ್ಪ್ ಒಟ್ಟಾರೆ 4,84,867 ಯುನಿಟ್‌ಗಳನ್ನು ಮಾರಾಟಗೊಳಿಸುವಲ್ಲಿ ಯಶಸ್ವಿಯಾಗಿದೆ. ಹೀರೋ ಕಂಪನಿಯ ಬೈಕ್ ಗಳು ಮಾರಾಟವು ಹೆಚ್ಚಾಗುತ್ತಿದೆ. ಆದರೆ ಸ್ಕೂಟರ್ ಗಳು ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನು ನೀಡುತ್ತಿಲ್ಲ.

Most Read Articles

Kannada
English summary
Hero motocorp gets growth of 3 35 percent in june 2022 sales details
Story first published: Saturday, July 2, 2022, 19:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X