Just In
- 34 min ago
ಭಾರತೀಯ ಕಾರುಗಳಿಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಳ: ಮೇ ತಿಂಗಳಲ್ಲಿ ಅತಿ ಹೆಚ್ಚು ರಫ್ತಾಗಿರುವ ಕಾರುಗಳಿವು!
- 1 hr ago
ಅತ್ಯಾಧುನಿಕ ಫೀಚರ್ಸ್ಗಳೊಂದಿಗೆ ಹೀರೋ ಪ್ಯಾಶನ್ ಎಕ್ಸ್ಟೆಕ್ ಬೈಕ್ ಬಿಡುಗಡೆ
- 1 hr ago
ಪ್ರಯಾಣಿಕ ಕಾರು ಮಾದರಿಗಳಿಗಾಗಿ 5 ಸ್ಟಾರ್ ರೇಟಿಂಗ್ ಹೊಂದಿರುವ ಟೈರ್ ಬಿಡುಗಡೆ ಮಾಡಿದ ಮೈಕೆಲಿನ್
- 3 hrs ago
ಬರೋಬ್ಬರಿ 40 ವೆರಿಯೆಂಟ್ಗಳನ್ನು ಹೊಂದಿರಲಿದೆ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್
Don't Miss!
- News
ಅಸ್ಸಾಂ ಪ್ರವಾಹ: ಅಸ್ಸಾಂ ಸಿಎಂ ಪರಿಹಾರ ನಿಧಿಗೆ ರಿಲಯನ್ಸ್ ಫೌಂಡೇಶನ್ 25 ಕೋಟಿ ರೂ.
- Sports
T20 ವಿಶ್ವಕಪ್ಗೂ ಮುನ್ನ ಕೊಹ್ಲಿ, ರೋಹಿತ್ ಮತ್ತು ರಾಹುಲ್ನೊಂದಿಗೆ ಆಯ್ಕೆಗಾರರು ಮಾತನಾಡಲಿ: ಸಾಬಾ ಕರೀಂ
- Movies
ಗಾಯಕಿಗೆ ಅಸಹ್ಯಕರ ಚಿತ್ರ ಕಳಿಸಿದವರ ವಿರುದ್ಧ ದೂರು: ಗಾಯಕಿಯ ಖಾತೆಯೇ ಬ್ಲಾಕ್!
- Technology
ಪೊಕೊ F4 5G V/S ಪೊಕೊ F3 GT: ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?
- Lifestyle
ಅಪಘಾತದಿಂದ ಕ್ಷಣಾರ್ಧದಲ್ಲಿ ಮಗುವಿನ ರಕ್ಷಿಸಿ, ತಾಯಿಯ ಮೊಬೈಲ್ ಪುಡಿ ಮಾಡಿದ ಸೈನಿಕ: ಸೈನಿಕನ ಕಾರ್ಯಕ್ಕೆ ನೆಟ್ಟಿಗರು ಫುಲ್ ಫಿದಾ
- Finance
ಪಿಎಂ ಕಿಸಾನ್ 12ನೇ ಕಂತು: ಶೀಘ್ರ ಈ ಕಾರ್ಯ ಮಾಡಿ
- Education
Vijayapura District Court Recruitment 2022 : 28 ಜವಾನ, ಆದೇಶ ಜಾರಿಕಾರ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ಬೆಲೆ ಏರಿಕೆ ಪಡೆದುಕೊಂಡ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ತನ್ನ ಎಕ್ಸ್ಟ್ರಿಮ್ 200ಎಸ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಇದರಿಂದ ಈ ಹೊಸ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಹೀರೋ ಮೋಟೊಕಾರ್ಪ್ ಕಂಪನಿಯು ಎಕ್ಸ್ಟ್ರಿಮ್ 200ಎಸ್ ಬೈಕ್ ಬೆಲೆಯನ್ನು ರೂ.2,000 ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ, ಈ ಹೊಸ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕ್ ಬೆಲೆಯು ದೆಹಲಿ ಎಕ್ಸ್ ಶೋ ರೂಂ ರೂ.1,30,614 ಆಗಿದೆ. ಬೆಲೆ ಏರಿಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳಿಲ್ಲ. ಬಿಎಸ್6 ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕಿನಲ್ಲಿ ಹಲವಾರು ಹೊಸ ಫೀಚರ್ ಗಳು, ಹೆಚ್ಚುವರಿ ಉಪಕರಣಗಳು ಮತ್ತು ವಿನ್ಯಾಸದಲ್ಲಿ ಸ್ವಲ್ಪ ನವೀಕರಣಗಳನ್ನು ನಡೆಸಲಾಗಿದೆ.

ಈ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕ್ ಟ್ವಿನ್ ಎಲ್ಇಡಿ ಹೆಡ್ ಲ್ಯಾಂಪ್ ಗಳು, ಎಲ್ಇಡಿ ಟೈಲ್ ಲೈಟ್ ಗಳು, ಹಿಂಭಾಗದ ಕೌಲ್ ವಿನ್ಯಾಸ, ಆಂಟಿ-ಸ್ಲಿಪ್ ಸೀಟುಗಳು ಮತ್ತು ಇತರ ನವೀಕರಣಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿತು.

ಈ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕ್ ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಟ್ರಿಪ್ ಮೀಟರ್ ಮತ್ತು ಸರ್ವಿಸ್ ರಿಮೈಂಡರ್ ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತದೆ.

ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕಿನ ಫೀಚರ್ ಗಳ ಸುದೀರ್ಘ ಪಟ್ಟಿಯ ಜೊತೆಗೆ, ಈ ಎಕ್ಸ್ಟ್ರಿಮ್ 200ಎಸ್ ಬೈಕ್ ಸಹ ಹೊಚ್ಚ ಹೊಸ ಬಣ್ಣದ ಆಯ್ಕೆಯೊಂದಿಗೆ ಬರುತ್ತಿದೆ ಇದು ಪರ್ಲ್ ಫೇಡ್ಲೆಸ್ ವೈಟ್ ಎಂದು ಕರೆಯಲಾಗುತ್ತದೆ. ಇನ್ನು ಸ್ಪೋರ್ಟ್ಸ್ ರೆಡ್ ಮತ್ತು ಪ್ಯಾಂಥರ್ ಬ್ಲ್ಯಾಕ್ನ ಇತರ ಎರಡು ಸ್ಟ್ಯಾಂಡರ್ಡ್ ಆಯ್ಕೆಗಳೊಂದಿಗೆ ಈ ಹೊಸ ಬಣ್ಣದ ಆಯ್ಕೆಯು ಲಭ್ಯವಿರುತ್ತದೆ.

ಈ ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಹೊಸ ಎಕ್ಸ್ಟ್ರಿಮ್ 200ಎಸ್ ಬೈಕಿನಲ್ಲಿ ಅದೇ 199 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಫ್ಯೂಯಲ್ -ಇಂಜೆಕ್ಟ್ ಎಂಜಿನ್ ಅನ್ನು ನವೀಕರಿಸಿ ಅದನ್ನು ಅಳವಡಿಸಲಾಗಿದೆ.

ಈ ಎಂಜಿನ್ 8500 ಆರ್ಪಿಎಂನಲ್ಲಿ 17.8 ಬಿಹೆಚ್ಪಿ ಪವರ್ ಮತ್ತು 6500 ಆರ್ಪಿಎಂನಲ್ಲಿ 16.4 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ ಅನ್ನು ಐದು-ಸ್ಪೀಡ್ ಗೇರ್ಬಾಕ್ಸ್ನೊಂದಿಗೆ ಜೋಡಿಸಲಾಗಿದೆ.

ಈ ಹೀರೋ ಎಕ್ಸ್ಟ್ರಿಮ್ 200ಎಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಏಳು-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಸೆಟಪ್ ಅನ್ನು ನೀಡಿದೆ.ಇನ್ನು ಪ್ರಮುಖವಾಗಿ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಬೈಕಿನ ಮುಂಭಾಗದಲ್ಲಿ 276 ಎಂಎಂ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಿದೆ.

ಇದರೊಂದಿಗೆ ಹೀರೋ ಮೋಟೊಕಾರ್ಪ್ ತನ್ನ ಬಹುನಿರೀಕ್ಷಿತ ಎಕ್ಸ್ಟ್ರಿಮ್ 160ಆರ್ ಬೈಕನ್ನು ಭಾರತದಲ್ಲಿ 2020ರ ಜುನ್ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಈ ಹೀರೋ ಎಕ್ಸ್ಟ್ರಿಮ್ 160ಆರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಆದರೆ ಹೀರೋ ಮೋಟೊಕಾರ್ಪ್ ಕಂಪನಿಯು ಈ ಎಕ್ಸ್ಟ್ರಿಮ್ 160ಆರ್ ಬೈಕ್ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಬೈಕಿನ ಬೆಲೆಯನ್ನು ರೂ.500 ರಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ಬಳಿಕ ಹೀರೋ ಎಕ್ಸ್ಟ್ರಿಮ್ 160ಆರ್ ಬೈಕಿನ ಸಿಂಗಲ್ ಡಿಸ್ಕ್ ರೂಪಾಂತರಕ್ಕೆ ರೂ.1,12,110 ರೂ.ಗಳಾಗಿದ್ದರೆ, ಡ್ಯುಯಲ್ ಡಿಸ್ಕ್ ರೂಪಾಂತರದ ಬೆಲೆಯು ರೂ.1,15,160 ಗಳಾಗಿದೆ.

ಇನ್ನು ಈ ಬೈಕಿನ ಸ್ಟೆಲ್ತ್ ಆವೃತ್ತಿಯ ಬೆಲೆಯು ರೂ.1,17,160 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಹೀರೋ ಎಕ್ಸ್ಟ್ರಿಮ್ 160ಆರ್ ಬೈಕ್ ಕಂಪನಿಯ ಪ್ರೀಮಿಯಂ ಬೈಕ್ ಆಗಿದ್ದರೂ ಎಂಟ್ರಿ ಲೆವೆಲ್ ಮಾದರಿಯಂತೆ ಉತ್ತಮವಾಗಿ ಮಾರಾಟವಾಗುತ್ತಿದೆ. ಹೊಸ ಹೀರೋ ಎಕ್ಸ್ಟ್ರಿಮ್ 160ಆರ್ ಬೈಕನ್ನು ರಾಜಸ್ಥಾನದ ಜೈಪುರದಲ್ಲಿರುವ ಆರ್&ಡಿ ಘಟಕದಲ್ಲಿ ಸಂಪೂರ್ಣವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಬ್ರ್ಯಾಂಡ್ನಿಂದ ಪ್ರೀಮಿಯಂ 160 ಸಿಸಿ ಬಿಎಸ್ 6 ಎಂಜಿನ್ ಅನ್ನು ಈ ಬೈಕಿನಲ್ಲಿ ಅಳವಡಿಸಲಾಗಿದೆ. ಹೊಸ ಬೈಕಿಗೆ ಈ ಎಂಜಿನ್ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಎಕ್ಸ್ಪಲ್ಸ್ 200 4ವಿ ಬೈಕ್ ತುಸು ದುಬಾರಿಯಾಗಿದೆ. ಹೀರೋ ಎಕ್ಸ್ಪಲ್ಸ್ 200 4ವಿ ಬೈಕ್ ರೂ.2,200 ಗಳಷ್ಟು ದುಬಾರಿಯಾಗಿದೆ. ಇದೀಗ ಈ ಬೈಕಿನ ಬೆಲೆಯು ರೂ.1,32,350 ಆಗಿದೆ. ಕುತೂಹಲಕಾರಿಯಾಗಿ, ಲೋ-ಸ್ಪೆಕ್ ಹೀರೋ ಎಕ್ಸ್ಪಲ್ಸ್ 200 2ವಿ ಬೆಲೆಗಳು ಬದಲಾಗದೆ ಉಳಿದಿವೆ. ಹೀರೋ ಎಕ್ಸ್ಪಲ್ಸ್ 200 4ವಿ ಯಾವಾಗಲೂ ನೈಜ ಆಫ್-ರೋಡ್ ಸಾಮರ್ಥ್ಯ ಹೊಂದಿರುವ ಅತ್ಯಂತ ಸಮರ್ಥ ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್ ಆಗಿದೆ.

ಹೀರೋ ಎಕ್ಸ್ಟ್ರಿಮ್ 200ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್ ಗಳಲ್ಲಿ ಒಂದಾಗಿದೆ, ಈ ಹೀರೋ ಎಕ್ಸ್ಟ್ರಿಮ್ 200ಎಸ್ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಆರ್ಎಸ್ 200 ಮತ್ತು ಕೆಟಿಎಂ ಆರ್ಸಿ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ಈ ಬೈಕಿನ ಬೆಲೆ ಏರಿಕೆಯು ಮಾರಾಟದ ಮೇಕೆ ಪರಿಣಾಮ ಬೀರುತ್ತದೆಯೇ ಎಂಬುವುದು ಕಾದು ನೋಡಬೇಕಿದೆ.