ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಮೋಟೊಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಪ್ರತ್ಯೇಕವಾದ ವಿಡಾ(Vida) ಬ್ರ್ಯಾಂಡ್ ಆರಂಭಿಸಿದ್ದು, ಹೊಸ ಪ್ಲ್ಯಾಟ್‌ಫಾರ್ಮ್ ಆಧರಿಸಿರುವ ಹೊಸ ಸ್ಕೂಟರ್ ಮಾದರಿಯು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳಿಗಾಗಿ ಹೀರೋ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ ಹೀರೋ ಮೋಟೊಕಾರ್ಪ್ ಕಂಪನಿಯು ಪ್ರತ್ಯೇಕ ಇವಿ ಬ್ರಾಂಡ್ ಆರಂಭಿಸುತ್ತಿದ್ದು, ವಿಡಾ ಬ್ರಾಂಡ್ ಅಡಿ ಕಂಪನಿಯು ಪ್ರಮುಖ ಇವಿ ದ್ವಿಚಕ್ರವಾಹನಗಳನ್ನು ಹೊರತರಲಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಈ ವರ್ಷದ ಜುಲೈ 1ರಂದು ವಿಡಾ ಬ್ರ್ಯಾಂಡ್ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಹೀರೋ ಎಲೆಕ್ಟ್ರಿಕ್ ಮಾದರಿಗಳಿಂತಲೂ ವಿಭಿನ್ನ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೊಸ ಬ್ರಾಂಡ್ ಮೂಲಕ ಮಾರುಕಟ್ಟೆ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಹೊಸ ಸ್ಕೂಟರ್ ಬಿಡುಗಡೆಗೂ ಮುನ್ನು 100 ಮಿಲಿಯನ್ ಯುಎಸ್ಎ ಡಾಲರ್ ಜಾಗತಿಕ ಸುಸ್ಥಿರತೆ ನಿಧಿ ಘೋಷಿಸಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಹೊಸ ಉದ್ಯಮಗಳನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಈ ನಿಧಿಯನ್ನು ಬಳಸಲಾಗುವುದು ಎಂದು ಹೀರೋ ಮೋಟೊಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಮಾಹಿತಿ ನೀಡಿದ್ದು, ಭವಿಷ್ಯದ ಯೋಜನೆಗಳೊಂದಿಗೆ ಕಂಪನಿಯು ಭಾರೀ ಪ್ರಮಾಣದ ಆದಾಯದ ನೀರಿಕ್ಷೆಯಲ್ಲಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯು ಕೇವಲ ತನ್ನ ಹೊಸ ಯೋಜನೆಗಳಿಗೆ ಮಾತ್ರವಲ್ಲದೆ ಹಲವು ಇವಿ ಸ್ಟಾರ್ಟ್ಅಪ್ ಕಂಪನಿಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಹೊಸ ಬಂಡವಾಳ ಯೋಜನೆ ಅಡಿ ಮತ್ತಷ್ಟು ಇವಿ ಸ್ಕೂಟರ್‌ಗಳು ಶೀಘ್ರದಲ್ಲಿಯೇ ಮಾರುಕಟ್ಟೆ ಪ್ರವೇಶಿಸಲಿವೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ದೇಶಾದ್ಯಂತ ತೈಲ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಸಾಂಪ್ರಾದಾಯಿಕ ವಾಹನಗಳ ನಿರ್ವಹಣಾ ವೆಚ್ಚದಲ್ಲಿ ಭಾರೀ ಏರಿಕೆಯಾಗುತ್ತಿದ್ದು, ಹೊಸ ವಾಹನ ಖರೀದಿದಾರರಿಗೆ ಪರಿಸರ ಸ್ನೇಹಿ ಮತ್ತು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೀಗಾಗಿ ಹೀರೋ ಮೋಟೊಕಾರ್ಪ್ ಕಂಪನಿಯು ತನ್ನ ಮುಖ್ಯ ಬ್ರಾಂಡ್ ಅಡಿಯಲ್ಲಿ ಪ್ರತ್ಯೇಕವಾಗಿ ಇವಿ ವಾಹನಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುವ ಯೋಜನೆ ಹೊಂದಿದ್ದು, ಆಂಧ್ರಪ್ರದೇಶದ ಚಿತ್ತೂರಿನಲ್ಲಿರುವ ಹೀರೋ ಮೋಟೊಕಾರ್ಪ್ ದ್ವಿಚಕ್ರ ವಾಹನ ಉತ್ಪಾದನಾ ಘಟಕದಲ್ಲಿಯೇ ಪ್ರತ್ಯೇಕವಾಗಿ ಇವಿ ವಾಹನ ಅಭಿವೃದ್ದಿ ಮತ್ತು ಉತ್ಪಾದನಾ ಘಟಕ ನಿರ್ಮಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೊಸ ಇವಿ ವಾಹನ ಉತ್ಪಾದನಾ ಘಟಕಕ್ಕೆ ಹೀರೋ ಕಂಪನಿಯು ಗಾರ್ಡನ್ ಫ್ಯಾಕ್ಟರಿ ಎಂದು ನಾಮಕರಣ ಮಾಡಿದ್ದು, ಹೊಸ ವಾಹನ ಉತ್ಪಾದನಾ ಘಟಕದಲ್ಲಿ ಬ್ಯಾಟರಿ ಪ್ಯಾಕ್ ತಯಾರಿಕೆ, ರೋಡ್ ಟೆಸ್ಟಿಂಗ್, ವಾಹನ ಜೋಡಣೆ ಮತ್ತು ವೆಹಿಕಲ್ ಎಂಡ್ ಆಫ್ ಲೈನ್ ಟೆಸ್ಟಿಂಗ್(EOL) ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೀರೋ ಮೋಟೊಕಾರ್ಪ್ ಕಂಪನಿಯ ಹೊಸ ಇವಿ ಸ್ಕೂಟರ್‌ಗಳ ಕುರಿತಾಗಿ ಯಾವುದೇ ತಾಂತ್ರಿಕ ಮಾಹಿತಿ ಲಭ್ಯವಿಲ್ಲವಾದರೂ ಹೊಸ ಇವಿ ಸ್ಕೂಟರ್ ಮಾದರಿಗಳು ಶೀಘ್ರದಲ್ಲೇ ರೋಡ್ ಟೆಸ್ಟಿಂಗ್ ಆರಂಭಿಸಲಿದ್ದು, ಹೊಸ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾದ ಓಲಾ, ಸಿಂಪಲ್ ಎನರ್ಜಿ ಮಾದರಿಗಳಲ್ಲಿನ ಮೈಲೇಜ್‌ಗೆ ಪೈಪೋಟಿಯಾಗಿ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಲಿವೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಬಿಡುಗಡೆಯಾಗಲಿರುವ ಹೀರೋ ಮೊದಲ ಇವಿ ಸ್ಕೂಟರ್ ಸಹಭಾಗೀತ್ವ ಕಂಪನಿಯಾಗಿರುವ ಗೊಗೊರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ವಿವಾ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಕೇಂದ್ರ ಸಾರಿಗೆ ಇಲಾಖೆಯಲ್ಲೂ ಹೊಸ ವಾಹನ ಬಿಡುಗಡೆಗಾಗಿ ನೋಂದಣಿ ಕೂಡಾ ಮಾಡಲಾಗಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಗೊಗೊರೊ ಕಂಪನಿಯು ಸದ್ಯ ತೈವಾನ್‌ನಲ್ಲಿ ವಿವಿಧ ಮಾದರಿಯ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣಗೊಂದಿಗೆ ಸೌರವಿದ್ಯುತ್ ಮೂಲಕವೇ ಬ್ಯಾಟರಿ ಸ್ವಾಪಿಂಗ್ ಸೌಲಭ್ಯವನ್ನು ಜೋಡಣೆ ಮಾಡುವಲ್ಲಿ ಯಶಸ್ವಿ ಕಂಡುಕೊಂಡಿದ್ದು, ಹೀರೋ ಕಂಪನಿಯು ಕೂಡಾ ಇದೀಗ ಗೊಗೊರೊ ಜೊತೆಗೂಡಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಳ್ಳುತ್ತಿದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಎಲೆಕ್ಟ್ರಿಕ್ ವಾಹನಗಳ ಬಳಕೆ ಆಸಕ್ತಿ ಇದ್ದರೂ ಕೂಡಾ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಇವಿ ವಾಹನಗಳ ಬ್ಯಾಟರಿ ರೇಂಜ್ ಸಾಮಾರ್ಥ್ಯವು ಖರೀದಿಗೆ ಹಿಂದೇಟು ಹಾಕುವಂತೆ ಮಾಡಿದ್ದು, ಈ ಸಮಸ್ಯೆ ನಿವಾರಣೆಗಾಗಿ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಚಾರ್ಜಿಂಗ್ ಒದಗಿಸಲು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ನಿರ್ಮಾಣ ಮಾಡುತ್ತಿವೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಬ್ಯಾಟರಿ ವಿನಿಯಮ ಕೇಂದ್ರಗಳು ಎಲೆಕ್ಟ್ರಿಕ್ ವಾಹನಗಳಿಗೆ ತ್ವರಿತವಾಗಿ ಬ್ಯಾಟರಿ ಸೌಲಭ್ಯಗಳನ್ನು ಒದಗಿಸಬಹುದಾಗಿದ್ದು, ಬ್ಯಾಟರಿ ರೇಂಜ್ ಆಧಾರದ ಮೇಲೆ ಇಂತಿಷ್ಟು ಪ್ರಮಾಣದ ದರ ಪಾವತಿಸಿಬೇಕಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ ಹೀರೋ ಮೋಟೊಕಾರ್ಪ್ ನಿರ್ಮಾಣದ ಮೊದಲ ಇವಿ ಸ್ಕೂಟರ್

ಬ್ಯಾಟರಿ ವಿನಿಮಯದ ವೇಳೆ ಗ್ರಾಹಕರು ತಮ್ಮ ಬಳಿಯಿರುವ ಚಾರ್ಜ್ ಮುಗಿದಿರುವ ಬ್ಯಾಟರಿಯನ್ನು ವಿನಿಮಯ ಕೇಂದ್ರಗಳಿಗೆ ಹಿಂದಿರುಗಿಸುವ ಮೂಲಕ ಚಾರ್ಜ್ ಮಾಡಲಾದ ಬ್ಯಾಟರಿ ಪಡೆದುಕೊಳ್ಳುವ ವ್ಯವಸ್ಥೆ ಇದಾಗಿದ್ದು, ಹೊಸ ಸೌಲಭ್ಯವು ಚಾರ್ಜಿಂಗ್ ಸಮಯವನ್ನು ಉಳಿಸುವ ಮೂಲಕ ಬ್ಯಾಟರಿ ಖಾಲಿಯಾದ ತಕ್ಷಣವೇ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.

Most Read Articles

Kannada
English summary
Hero motocorp new e scooter likely to launch soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X