ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ತನ್ನ ಅತಿ ಹೆಚ್ಚು ಮಾರಾಟವಾಗುವ ಆಕ್ಟಿವಾ ಸ್ಕೂಟರ್ ಮಾದರಿಗಳ ಬೆಲೆಗಳನ್ನು ಪರಿಷ್ಕರಿಸಿದೆ. ಹೊಸ ಬೆಲೆ ಪರಿಷ್ಕರಣೆಯು ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಎರಡೂ ರೂಪಾಂತರಗಳ ಮೇಲೆ ಪರಿಣಾಮ ಬೀರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳ ಬೆಲೆಯನ್ನು ರೂ,500 ನಿಂದ ರೂ.1,000ಕ್ಕೆ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ, ಆಕ್ಟಿವಾ 6ಜಿ ಸ್ಕೂಟರ್ ಬೆಲೆಯು ರೂ. 71,432 ರಿಂದ ಲಭ್ಯವಿರುತ್ತದೆ. ಮತ್ತೊಂದೆಡೆ, ಆಕ್ಟಿವಾ 125 ಈಗ ರೂ.74,989 ನಿಂದ ಲಭ್ಯವಿರುತ್ತದೆ. ಬೆಲೆ ಏರಿಕೆಯ ಹೊರತಾಗಿ, ಸ್ಕೂಟರ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೋಂಡಾ ಆಕ್ಟಿವಾ ದೇಶದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡನೇ ಸ್ಕೂಟರ್ ಮತ್ತು ಪ್ರತಿ ಮೂರನೇ ದ್ವಿಚಕ್ರ ವಾಹನವು ಆಕ್ಟಿವಾ ಆಗಿರುತ್ತದೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಮೊದಲಿಗೆ ಹೋಂಡಾ ಆಕ್ಟಿವಾ 125 ಸ್ಕೂಟರ್ ಬಗ್ಗೆ ಹೇಳುವುದಾದರೆ ಸ್ಟ್ಯಾಂಡರ್ಡ್, ಅಲಾಯ್ ಮತ್ತು ಡಿಲಕ್ಸ್ ಎಂಬ ರೂಪಾಂತರಗಳಲ್ಲಿ ಲಭ್ಯವಿದೆ. ವಿಶ್ವಾಸಾರ್ಹವಾದ ಹಾಗೂ ಹೆಚ್ಚು ಮೈಲೇಜ್ ನೀಡುವ ಈ ಸ್ಕೂಟರ್ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಈ ಹೋಂಡಾ ಆಕ್ಟಿವಾ 125 ಸ್ಕೂಟರ್ ನಲ್ಲಿ 124 ಸಿಸಿ ಏರ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿಎಂನಲ್ಲಿ 8.18 ಬಿಹೆಚ್‍ಪಿ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಬಿಎಸ್ 6 ಎಂಜಿನ್ ಹೊಂದಿರುವ ಈ ಆಕ್ಟಿವಾ 125 ಸ್ಕೂಟರಿನಲ್ಲಿ ಪರಿಷ್ಕರಿಸಿದ ಎಲ್‍ಇ‍‍ಡಿ ಹೆಡ್ ಲ್ಯಾಂಪ್, ಮುಂಭಾಗ ಹಾಗೂ ಸೈಡ್‍‍ನಲ್ಲಿ ಕ್ರೋಮ್ ಟ್ರಿಮ್ ಹಾಗೂ ಮುಂಭಾಗದಲ್ಲಿ ಹೊಸ ಎಪ್ರಾನ್‍‍ಗಳನ್ನು ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಹೋಂಡಾ ಆಕ್ಟಿವಾ 125 ಸ್ಕೂಟರ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹಿಂಭಾಗದಲ್ಲಿ ಮೂರು-ಹಂತದ ಹೊಂದಾಣಿಕೆ ಮಾಡಬಹುದಾದ ಸ್ಪ್ರಿಂಗ್-ಲೋಡೆಡ್ ಹೈಡ್ರಾಲಿಕ್ ಸೆಟಪ್ ಅನ್ನು ಹೊಂದಿದೆ..

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಈ ಹೋಂಡಾ ಆಕ್ಟಿವಾ 125 ಸ್ಕೂಟರ್ ಸ್ಕೂಟರ್ ನಲ್ಲಿ ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಎಸಿಜಿ ಸ್ಟಾರ್ಟರ್, ಐಡಲ್ ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ನಂತಹ ಫೀಚರ್ಸ್ ಗಳನ್ನು ಹೊಂದಿವೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಇನ್ನು ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಬಗ್ಗೆ ಹೇಳುವುದಾದರೆ, ಈ ಬಿಎಸ್-6 ಆಕ್ಟಿವಾ 6ಜಿ ಸ್ಕೂಟರನ್ನು ಹೊಸ ಫೀಚರ್ ಗಳು ಮತ್ತು ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉದ್ದವಾದ ವೀಲ್‌ಬೇಸ್‌ನೊಂದಿಗೆ ಬಿಡುಗಡೆಗೊಳಿಸಿದ್ದರು.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಹೋಂಡಾ ಆಕ್ಟಿವಾ 6ಜಿ ಡಿಲಕ್ಸ್ ರೂಪಾಂತರದಲ್ಲಿ ಎಸಿಜಿ ಸ್ಟಾರ್ಟರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಇನ್ನು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮತ್ತು ಫ್ಯುಯಲ್ ಫಿಲ್ಲರ್ ಕ್ಯಾಪ್ ಅನ್ನು ಕೂಡ ಹೊಂದಿದೆ. ಈ ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಸ್ಕೂಟರ್ ಕಂಪನಿಯ ಪಿಜಿಎಂ-ಫೈ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದರಿಂದಾಗಿ ಈ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಜನಪ್ರಿಯ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಬ್ಲ್ಯಾಕ್, ಡ್ಯಾಝಲ್ ಯೆಲ್ಲೊ, ಗ್ಲಿಟರ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಪ್ರೆಷಿಯಸ್ ವೈಟ್ ಮತ್ತು ಪರ್ಲ್ ಸ್ಪಾರ್ಟನ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಕಳೆದ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ 3,09,549 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಮಾರಾಟವು ಕಳೆದ ತಿಂಗಳಿಗಿಂತ ಶೇಕಡಾ 8.3 ರಷ್ಟು ಏರಿಕೆ ಕಂಡಿದೆ. ಇನ್ನು ಹೋಂಡಾ ಕಂಪನಿಯು ಕಳೆದ ತಿಂಗಳಿನಲ್ಲಿ 11,794 ಯುನಿಟ್‌ಗಳನ್ನು ರಫ್ತು ಮಾಡಿದ್ದಾರೆ.ಜಪಾನಿನ ಬೈಕ್ ತಯಾರಕರ ರಫ್ತು ಫೆಬ್ರವರಿಗಿಂತ 56.2 ರಷ್ಟು ಕಡಿಮೆಯಾಗಿದೆ. ಇನ್ನು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ದ್ವಿಚಕ್ರ ವಾಹನಗಳ ರಫ್ತಿನಲ್ಲಿ 30 ಲಕ್ಷದ ಗಡಿ ದಾಟಿ ಹೊಸ ಮೈಲಿಗಲ್ಲನ್ನು ಇತ್ತೀಚೆಗೆ ಸಾಧಿಸಿತು.

ಬೆಲೆ ಏರಿಕೆ ಪಡೆದುಕೊಂಡ ಹೋಂಡಾ ಆಕ್ಟಿವಾ 6ಜಿ ಮತ್ತು ಆಕ್ಟಿವಾ 125 ಸ್ಕೂಟರ್‌ಗಳು

ಈ ಹೋಂಡಾ ಕಂಪನಿಯು 21 ವರ್ಷಗಳ ಕಾರ್ಯಾಚರಣೆಯಲ್ಲಿ 30 ಲಕ್ಷ ಯುನಿಟ್ ಗಳನ್ನು ರಫ್ತು ಮಾಡಿ ಹೊಸ ಮೈಲಿಗಲ್ಲನ್ನು ಸಾಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಜಪಾನಿನ ತಯಾರಕರು 2001 ರಲ್ಲಿ ಐಕಾನಿಕ್ ಹೋಂಡಾ ಆಕ್ಟಿವಾದೊಂದಿಗೆ ರಫ್ತು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ 15 ಲಕ್ಷ ಮೈಲಿಗಲ್ಲನ್ನು ದಾಟಿದರು. ಉಳಿದಂತೆ ಹೋಂಡಾ ಕಂಪನಿಯು ತನ್ನ ಮುಂದಿನ 15 ಲಕ್ಷ ರಫ್ತುಗಳು ಕಳೆದ ಐದು ವರ್ಷಗಳಲ್ಲಿ ಸಾಧಿಸಿದೆ.

Most Read Articles

Kannada
English summary
Honda activa 6g and activa 125 price hiked in india details
Story first published: Friday, April 8, 2022, 19:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X