ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಹೊಸ ತಂತ್ರಜ್ಞಾನ ಪ್ರೇರಿತ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 2.26 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಪ್ರೀಮಿಯಂ ಬೈಕ್ ಸರಣಿ ಮಾರಾಟವನ್ನು ಹಂತ-ಹಂತವಾಗಿ ಹೆಚ್ಚಳ ಮಾಡುತ್ತಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 300 ಸಿಸಿ ವಿಭಾಗದಲ್ಲಿ ಪ್ರಮುಖ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಹೊಸ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಮಾದರಿಯು ತಾಂತ್ರಿಕ ಸೌಲಭ್ಯಗಳಿಗೆ ಅನುಗುಣವಾಗಿ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೊ ಎನ್ನುವ ಎರಡು ವೆರಿಯೆಂಟ್ ಹೊಂದಿದ್ದು, ಆರಂಭಿಕ ಮಾದರಿಯು ರೂ. 2.26 ಲಕ್ಷ ಬೆಲೆ ಹೊಂದಿದ್ದರೆ ಡಿಲಕ್ಸ್ ಪ್ರೊ ಮಾದರಿಯು ರೂ. 2.29 ಲಕ್ಷ ಬೆಲೆ ಹೊಂದಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಹೋಂಡಾ ಕಂಪನಿಯು ಹೊಸ ಬೈಕ್ ಮಾದರಿಯನ್ನು ತನ್ನ ಪ್ರೀಮಿಯಂ ಬೈಕ್ ಶೋರೂಂ ಹೋಂಡಾ ಬಿಗ್‌ವಿಂಗ್ ಮೂಲಕ ಮಾರಾಟ ಮಾಡಲಿದ್ದು, ಹೊಸ ಬೈಕ್ ಮಾದರಿಯು ಆಕ್ರಮಣಕಾರಿ ವಿನ್ಯಾಸ ಮತ್ತು ಸಾಕಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ನಿರ್ಮಾಣಗೊಂಡಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್‌ನಲ್ಲಿ ಕಂಪನಿಯು 286 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 24.13 ಬಿಎಚ್‌ಪಿ ಪವರ್ ಮತ್ತು 25.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಸುಗಮ ಸವಾರಿಗಾಗಿ ಹೊಸ ಬೈಕಿನಲ್ಲಿ ಕಂಪನಿಯು ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಜೊತೆಗೆ ಆಕ್ರಮಣಕಾರಿ ವಿನ್ಯಾಸವನ್ನು ನೀಡಿದ್ದು, ಸುರಕ್ಷತೆಯನ್ನು ಸುಧಾರಿಸಲು ಸ್ಲಿಪ್ಪರ್ ಕ್ಲಚ್ ಅಸಿಸ್ಟ್ ಜೊತೆಗೆ ಇದು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ನೀಡುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಇದರೊಂದಿಗೆ ಇದು ಸ್ಪ್ಲಿಟ್ ಸೀಟ್ ಮತ್ತು ಗೋಲ್ಡನ್ ಫ್ರಂಟ್ ಸಸ್ಪೆನ್ಷನ್ ಅನ್ನು ಸಹ ಹೊಂದಿದ್ದು, ಇದು ಬೈಕಿನ ಹೊರ ನೋಟವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಇದರೊಂದಿಗೆ ಬೈಕಿನ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಹೊಸ ಬೈಕಿನ ವೈಶಿಷ್ಟ್ಯತೆಗಳ ಬಗೆಗೆ ಹೇಳುವುದಾದರೆ ಎಲ್ಲಾ ಕಡೆಗಳಲ್ಲೂ ಎಲ್ಇಡಿ ದೀಪಗಳನ್ನು ನೀಡಲಾಗಿದ್ದು, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಬ್ಲೂಟೂತ್ ಸಂಪರ್ಕದ ಮೂಲಕ ಮಲ್ಟಿ ಕನೆಕ್ಟ್ ನಿರ್ವಹಿಸುವ ಹೋಂಡಾ ರೋಡ್‌ಸಿಂಕ್ ವೈಶಿಷ್ಟ್ಯವನ್ನು ಇದಕ್ಕೆ ನೀಡಲಾಗಿದ್ದು, ಈ ತಂತ್ರಜ್ಞಾನದ ಸಹಾಯದಿಂದ ನೀವು ಕರೆಗಳು, ಸಂದೇಶಗಳು, ಸಂಗೀತ, ನ್ಯಾವಿಗೇಷನ್ ಮತ್ತು ಹವಾಮಾನ ಮಾಹಿತಿಯನ್ನು ಪಡೆಯಬಹುದು.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಎಲ್ಲಾ ಮಾಹಿತಿಗಳನ್ನು ಪಡೆಯಲು ಮತ್ತು ನಿಯಂತ್ರಿಸಲು ಹ್ಯಾಂಡಲ್‌ನಲ್ಲಿರುವ ಸ್ವಿಚ್‌ನೊಂದಿಗೆ ನಿರ್ವಹಿಸಬಹುದಾಗಿದ್ದು, ಮಸ್ಕಲ್ಯೂರ್ ಡ್ಯುಯಲ್ ಟೋನ್ ಫ್ಯೂಲ್ ಟ್ಯಾಂಕ್ ಹೊ ಬೈಕಿಗೆ ಬಲಿಷ್ಠ ವಿನ್ಯಾಸ ನೀಡುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಇದರೊಂದಿಗೆ ಕಂಪ್ಯಾಕ್ಟ್ ಮಫ್ಲರ್ ಮತ್ತು ವಿ-ಆಕಾರದ ಮಿಶ್ರಲೋಹದ ಚಕ್ರಗಳೊಂದಿಗೆ ಸ್ಪ್ಲಿಟ್ ಸೀಟ್ ಅನ್ನು ಪಡೆಯುತ್ತದೆ. ಇದು ಮುಂಭಾಗದಲ್ಲಿ ಅಮಾನತುಗೊಳಿಸುವುದಕ್ಕಾಗಿ ಯುಎಸ್‌ಡಿ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ 5-ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಪೆನ್ಶನ್ ಅನ್ನು ಪಡೆಯುತ್ತದೆ. ಇದು ಹಿಂಭಾಗದಲ್ಲಿ 150 ಎಂಎಂ ಅಗಲದ ರೇಡಿಯಲ್ ಟೈರ್‌ಗಳನ್ನು ಪಡೆಯುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಸವಾರನ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಈ ಬೈಕ್‌ನಲ್ಲಿ ಎಂಜಿನ್ ಸ್ಟಾರ್ಟ್ ಸ್ಟಾಪ್ ಸ್ವಿಚ್, ಟ್ಯಾಂಕ್‌ ಮೇಲ್ಭಾಗದಲ್ಲಿ ಕೀ, ಯುಎಸ್‌ಬಿ-ಸಿ ಫೋನ್ ಚಾರ್ಜರ್ ನೀಡಲಾಗಿದ್ದು, ಹೊಸ ಬೈಕ್ 14.1 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಒಟ್ಟು 153 ಕೆಜಿ ತೂಗುತ್ತದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಹೊಸ ಬೈಕ್ 2084 ಎಂಎಂ ಉದ್ದ, 765 ಎಂಎಂ ಅಗಲ, 1075 ಎಂಎಂ ಎತ್ತರ ಮತ್ತು 1,390 ಎಂಎಂ ವ್ಹೀಲ್‌ಬೆಸ್ ಹೊಂದಿದ್ದು, ಕಂಪನಿಯು 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿಯನ್ನು ನೀಡುತ್ತದೆ. ಈ ಮೂಲಕ ಇದು ಟಿವಿಎಸ್ ಅಪಾಚೆ ಆರ್‌ಆರ್ 310 ಮಾದರಿಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆ ವ್ಯಕ್ತಪಡಿಸಲಾಗಿದೆ.

ಹೊಸ ತಂತ್ರಜ್ಞಾನ ಪ್ರೇರಿತ ಹೋಂಡಾ ಸಿಬಿ300ಎಫ್ ಸ್ಟ್ರೀಟ್‌ಫೈಟರ್ ಬೈಕ್ ಬಿಡುಗಡೆ

ಇನ್ನ ಹೊಸ ಬೈಕಿನಲ್ಲಿ ಕಂಪನಿಯು ಒಟ್ಟು ಮೂರು ಬಣ್ಣ ಆಯ್ಕೆಗಳನ್ನು ನೀಡಿದ್ದು, ಸ್ಪೋರ್ಟ್ಸ್ ರೆಡ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಬಣ್ಣಗಳು ಬೈಕ್ ಬಲಿಷ್ಠತೆಗೆ ಪೂರಕವಾಗಿದೆ.

Most Read Articles

Kannada
English summary
Honda cb300f launched in india at rs 2 26 lakh details
Story first published: Monday, August 8, 2022, 20:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X