ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಡಿಯೋ ಆವೃತ್ತಿಯಲ್ಲಿ ಸೀಮಿತ ಅವಧಿಗಾಗಿ ಸ್ಪೋರ್ಟ್ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 68,317 ಬೆಲೆ ಹೊಂದಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಯುವ ಗ್ರಾಹಕರ ಆಯ್ಕೆಯಲ್ಲಿ ತನ್ನದೇ ಜನಪ್ರಿಯತೆ ಹೊಂದಿರುವ ಡಿಯೋ ಸ್ಕೂಟರ್ ಮಾದರಿಯು ಹಲವಾರು ಹೊಸ ಬದಲಾವಣೆಗಳೊಂದಿಗೆ ಭಾರತದಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ ಕಂಪನಿಯು ಹೊಸ ಸೌಲಭ್ಯಗಳನ್ನು ಒಳಗೊಂಡ ಸ್ಪೋರ್ಟಿ ವರ್ಷನ್ ಬಿಡುಗಡೆ ಮಾಡಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಡಿಯೋ ಸ್ಪೋರ್ಟ್ ಅನ್ನು ಹೋಂಡಾ ಕಂಪನಿಯು ಪ್ರಮುಖ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದ್ದು, ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ರೂಪಾಂತರಗಳು ಆರಂಭಿಕವಾಗಿ ರೂ. 68,317 ಮತ್ತು ಟಾಪ್ ಎಂಡ್ ಮಾದರಿಯು ರೂ. 73,317 ಬೆಲೆ ಹೊಂದಿವೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಹೊಸ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ವಿಶೇಷ ಬಣ್ಣಗಳ ಆಯ್ಕೆ ಹೊಂದಿದ್ದು, ರೆಡ್ ವಿಂಗ್ ಡೀಲರ್‌ಶಿಪ್ ಅಥವಾ ಆನ್‌ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ರೆಡ್ ರಿಯರ್ ಸಸ್ಪೆನ್ಷನ್ ಹೊಸ ಸ್ಕೂಟರ್ ಪ್ರಮುಖ ಆಕರ್ಷಣೆಯಾಗಿದ್ದು, ಸ್ಪೋರ್ಟಿ ಡಿಸೈನ್ ಇಷ್ಟಪಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಸ್ಟ್ರಾಂಷಿಯಂ ಸಿಲ್ವರ್ ಮೆಟಾಲಿಕ್ ಜೊತೆ ಬ್ಲ್ಯಾಕ್ ಮತ್ತು ಸ್ಪೋರ್ಟ್ಸ್ ರೆಡ್ ಜೊತೆ ಬ್ಲ್ಯಾಕ್ ಬಣ್ಣಗಳ ಆಯ್ಕೆ ನೀಡಿದ್ದು, ಈ ಎರಡು ಬಣ್ಣಗಳು ಆಯ್ಕೆಯು ಎರಡೂ ರೂಪಾಂತರಗಳಲ್ಲೂ ಲಭ್ಯವಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಡಿಯೋ ಸ್ಪೋರ್ಟ್‌ಗೆ ಹೆಚ್ಚಿನ ಮಟ್ಟದ ಸ್ಪೋರ್ಟಿ ಲುಕ್ ನೀಡಲು ಫೈಟಿಂಗ್ ರೆಡ್ ರಿಯರ್ ಕುಶನ್ ಸ್ಪ್ರಿಂಗ್ ಅನ್ನು ನೀಡಲಾಗಿದ್ದು, ಡಿಲಕ್ಸ್ ರೂಪಾಂತರದಲ್ಲಿ ಸ್ಪೋರ್ಟಿ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಸ್ಕೂಟರ್ ಮುಂಭಾಗದಲ್ಲಿ ಎರಡು ಬದಿಯಲ್ಲೂ ಪಾಕೆಟ್, ಲಗೇಜ್ ಹುಕ್ ಹೊಂದಿದ್ದು, 5.3-ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ 105 ಕೆ.ಜಿ ತೂಕ ಹೊಂದಿದೆ. ಇದರೊಂದಿಗೆ ಹೊಸ ಸ್ಕೂಟರ್ ಮಾದರಿಯು 650 ಎಂಎಂ ಆಸನ ಎತ್ತರದೊಂದಿಗೆ 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ಹೊಂದಿದ್ದು, ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಹೊಸ ಸ್ಕೂಟರ್‌ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 110ಸಿಸಿ PGM-FI ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಸಿವಿಟಿ ಗೇರ್‌ಬಾಕ್ಸ್‌ನೊಂದಿಗೆ 7.65 ಬಿಎಚ್‌ಪಿ ಮತ್ತು 9 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಡಿಯೋ ಸ್ಪೋರ್ಟ್ಸ್‌ ಸ್ಕೂಟರ್ ಮುಂಭಾಗದಲ್ಲಿ ಕಂಪನಿಯು ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಅಂಡರ್ ಬೋನ್ ಮಾದರಿಯಲ್ಲಿ ಫ್ರೇಮ್ ಮತ್ತು 3 ಹಂತಗಳ ಹೊಂದಾಣಿಕೆಯೊಂದಿಗೆ ಹಿಂಭಾಗದ ಮೊನೊಶಾಕ್ ಸಸ್ಷೆಷನ್ ಅನ್ನು ಒಳಗೊಂಡಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ಸ್ಕೂಟರ್‌ನಲ್ಲಿ ಕಾಂಬಿ-ಬ್ರೇಕಿಂಗ್ ಸಿಸ್ಟಂ ನೀಡಲಾಗಿದ್ದು, ಎರಡು ಬದಿಯಲ್ಲೂ 130 ಎಂಎಂ ಡ್ರಮ್‌ ಬ್ರೇಕ್‌ಗಳಿದ್ದು, 90/90-12 54J (ಮುಂಭಾಗದಲ್ಲಿ) ಮತ್ತು 90/100-10 53J (ಹಿಂಭಾಗದಲ್ಲಿ) ಟೈರ್‌ಗಳೊಂದಿಗೆ 10-ಇಂಚಿನ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಹಾಗೆಯೇ ಹೊಸ ಹೋಂಡಾ ಡಿಯೊ ಮುಂಭಾಗದ ಏಪ್ರನ್‌ನ ಕೆಳಗಿನ ವಿಭಾಗದಲ್ಲಿ ಇಂಡಿಕೇಟರ್‌ಗಳೊಂದಿಗೆ ಎಲ್ಇಡಿ ಹೆಡ್‌ಲೈಟ್ ಮತ್ತು ಹ್ಯಾಂಡಲ್‌ಬಾರ್ ಕೌಲ್ ಅನ್ನು ಅಲಂಕರಿಸುವ ಎಲ್ಇಡಿ ಡೇ ಟೈಮ್ ರನ್ನಿಂಗ್ ಬಾರ್‌ನೊಂದಿಗೆ ಹೊಂದಿದೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಹೊಸ ಸ್ಕೂಟರ್‌ನಲ್ಲಿ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ACG ತಂತ್ರಜ್ಞಾನದೊಂದಿಗೆ ಸೈಲೆಂಟ್ ಸ್ಟಾರ್ಟ್, ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್ಆಫ್ ಮತ್ತು ಬಾಹ್ಯ ಇಂಧನ ಮುಚ್ಚಳವನ್ನು ಇತರ ವೈಶಿಷ್ಟ್ಯಗಳು ಒಳಗೊಂಡಿವೆ.

 ಸೀಮಿತ ಅವಧಿಗಾಗಿ ಡಿಯೋ ಸ್ಪೋರ್ಟ್ ಸ್ಕೂಟರ್ ಬಿಡುಗಡೆ ಮಾಡಿದ ಹೋಂಡಾ

ಈ ಮೂಲಕ ಡಿಯೋ ಸ್ಕೂಟರ್ ಮಾದರಿಯು ಸ್ಪೋರ್ಟಿ ವಿನ್ಯಾಸದ ಜೊತೆ ಉತ್ತಮ ಪರ್ಫಾಮೆನ್ಸ್ ಹೊಂದಿದ್ದು, ಇದು ಪ್ರತಿ ಲೀಟರ್‌ಗೆ 50 ಕಿ.ಮೀ ಮೈಲೇಜ್ ಹೊಂದಿದೆ. ಹೀಗಾಗಿ ಉತ್ತಮ ಮೈಲೇಜ್, ಸ್ಪೋರ್ಟಿ ವಿನ್ಯಾಸವು ಡಿಯೋ ಸ್ಕೂಟರ್ ಆಯ್ಕೆಯ ಪ್ರಮುಖ ಆಕರ್ಷಣೆಯಾಗಿವೆ.

Most Read Articles

Kannada
English summary
Honda dio sports scooter launched at rs 68 317 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X