ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ವಿವಿಧ ಮಾದರಿಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಗ್ರಾಹಕರ ತಲುಪುವಿಕೆಯಲ್ಲಿ ಹಲವಾರು ಅಭಿಯಾನಗಳ ಮೂಲಕ ಯಶಸ್ವಿಯಾಗಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಗ್ರಾಹರಕನ್ನು ತಲುಪಲು ಹಲವಾರು ಅಭಿಯಾನಗಳ ಮೂಲಕ ಯಶಸ್ವಿಯಾಗಿರುವ ಹೋಂಡಾ ದ್ವಿಚಕ್ರ ವಾಹನ ವಿಭಾಗವು ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿ ಗ್ರಾಹಕರನ್ನು ಸೆಳೆಯುತ್ತಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೌದು, ಹೋಂಡಾ ದ್ವಿಚಕ್ರ ವಾಹನ ವಿಭಾಗವು ಕೇರಳದಲ್ಲಿ ಮೊದಲ ಬಾರಿಗೆ ಭೌಗೋಳಿಕ ಅಡೆತಡೆಗಳನ್ನು ನಿವಾರಿಸಿ ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹಿನ್ನೀರಿನಿಂದ ಹೆಚ್ಚು ಜಲಾವೃತವಾಗಿ ಪ್ರದೇಶಗಳಲ್ಲಿನ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಕಂಪನಿಯು ಹೊರಾಂಗಣ ಜಾಹೀರಾತು ಭಾಗವಾಗಿ ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ್ದು, ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭದ ನಂತರ ಕಂಪನಿಯ ಬೇಡಿಕೆ ಪ್ರಮಾಣವು ನಿರ್ದಿಷ್ಟ ವ್ಯಾಪ್ತಿಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಉಪಕ್ರಮದೊಂದಿಗೆ ಹೋಂಡಾ ಕಂಪನಿಯು ತನ್ನ ಜನಪ್ರಿಯ ಆಕ್ಟೀವಾ ಸ್ಕೂಟರ್‌ ಅನ್ನು ಪ್ರದರ್ಶನಗೊಳಿಸುತ್ತಿದ್ದು, ಓಣಂ ಆಚರಣೆಗೆ ಮುನ್ನ ಅಲೆಪ್ಪಿಯ ಅರುಕುಟ್ಟಿಯಿಂದ ಆರಂಭವಾದ ಹೌಸ್ ಬೋಟ್‌ ಶೋರೂಂ ಅಭಿಯಾನವು ಇದೀಗ ಅಲಪ್ಪುಳಕ್ಕೆ ತಲುಪಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಕಳೆದ ಒಂದು ವಾರದಿಂದ ಆರಂಭವಾಗಿರುವ ಹೌಸ್ ಬೋಟ್‌ ಶೋರೂಂ ಅಭಿಯಾನವು ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಹೊಸ ಅಭಿಯಾನ ಭಾಗವಾಗಿ ಇದು ಕೆಲವು ತಿಂಗಳು ಕಾಲ ಮುಂದುವರಿಯಲಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಇನ್ನು ದ್ವಿಚಕ್ರ ವಾಹನ ಉತ್ಪಾದನೆಯಲ್ಲಿ ಸಹಭಾಗಿತ್ವ ಹೊಂದಿದ್ದ ಹೀರೋ ಮತ್ತು ಹೋಂಡಾ ಕಂಪನಿಗಳು ಇದೀಗ ಪ್ರತ್ಯೇಕವಾಗಿದ್ದರೂ ಮಾರಾಟದಲ್ಲಿ ಈ ಎರಡು ಕಂಪನಿಗಳು ಸಾಕಷ್ಟು ಪೈಪೋಟಿ ನಡೆಸುತ್ತಿದ್ದು, ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನ ಮಾರಾಟದಲ್ಲಿ ಹೋಂಡಾ ದ್ವಿಚಕ್ರ ವಾಹನ ಕಂಪನಿಯು ಹೀರೋ ಮೋಟೊಕಾರ್ಪ್ ಕಂಪನಿಯನ್ನು ಹಿಂದಿಕ್ಕಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಮತ್ತೊಂದು ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) 2022ರ ಆಗಸ್ಟ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಅಗ್ರಸ್ಥಾನಕ್ಕೇರಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಮಾರಾಟ ವರದಿಯ ಪ್ರಕಾರ ಕಳೆದ ತಿಂಗಳು ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಒಟ್ಟು 285,400 ಯುನಿಟ್‌ಗಳನ್ನು ಮಾರಾಟ ಮಾಡಿದರೆ ಹೀರೋ ಮೋಟೋಕಾರ್ಪ್ ಕಂಪನಿಯು 251,939 ಯುನಿಟ್‌ ಮಾರಾಟ ಮಾಡಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಎರಡೂ ಕಂಪನಿಗಳ ನಡುವೆ 33,461 ಯುನಿಟ್ ಗಳಷ್ಟು ವ್ಯತ್ಯಾಸಗಳಿದ್ದು, ಇದೀಗ ದಸರಾ ಮತ್ತು ದೀಪಾವಳಿ ವೇಳೆ ಎರಡು ಕಂಪನಿಗಳ ನಡುವಿನ ಮಾರಾಟ ಪೈಪೋಟಿ ಮತ್ತಷ್ಟು ಹೆಚ್ಚಳವಾಗಲಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ತನ್ನ ಜನಪ್ರಿಯ ಮಾದರಿಗಳಲ್ಲಿ ನಿರಂತವಾಗಿ ಹಲವಾರು ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇತ್ತೀಚೆಗೆ ಕಮ್ಯೂಟರ್ ಬೈಕ್ ಆವೃತ್ತಿಯಾದ ಶೈನ್ ಮಾದರಿಯಲ್ಲಿ ವಿಶೇಷ ಆವೃತ್ತಿ ಬಿಡುಗಡೆ ಮಾಡಿತು.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಹೊಸ ಶೈನ್ ಸೆಲೆಬ್ರೇಷನ್ ಎಡಿಷನ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವಾರು ಹೊಸ ಫೀಚರ್ಸ್ ಮತ್ತು ಹೆಚ್ಚುವರಿ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಿದೆ. ಶೈನ್ ಬೈಕ್ ಮಾದರಿಯು ತನ್ನ ವಿಭಾಗದ ಅತ್ಯುತ್ತಮ ಬೈಕ್ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೋಂಡಾ ಕಂಪನಿಯು ಇದೀಗ ಗ್ರಾಹಕರಿಗೆ ಹೊಸ ಆಯ್ಕೆ ನೀಡವುದಕ್ಕಾಗಿ ಶೈನ್ ಸೆಲೆಬ್ರೆಷನ್ ಎಡಿಷನ್ ಬಿಡುಗಡೆ ಮಾಡಿದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಶೈನ್ ಸೆಲೆಬ್ರೇಷನ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 78,878 ಬೆಲೆ ಹೊಂದಿದ್ದು, ಹೊಸ ಮಾದರಿಯು ಸ್ಟ್ಯಾಂಡರ್ಡ್ ಶೈನ್ ಮಾದರಿಗಿಂತ ರೂ. 1500 ದುಬಾರಿಯಾಗಿದೆ. ವಿಶೇಷ ಮಾದರಿಯಲ್ಲಿ ಯಾವುದೇ ತಾಂತ್ರಿಕ ಬದಲಾವಣೆಗಳಿಲ್ಲದಿದ್ದರೂ ಹೊಸ ಫೀಚರ್ಸ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಸೌಲಭ್ಯಗಳು ಗ್ರಾಹಕರನ್ನು ವಿಶೇಷ ಆವೃತ್ತಿಯತ್ತ ಗಮನಸೆಳೆಯಲಿದ್ದು, ಅದರ ಆಕರ್ಷಕ ಗೋಲ್ಡನ್ ಥೀಮ್‌ನೊಂದಿಗೆ ಹೊಸ ನೋಟವನ್ನು ನೀಡುತ್ತದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಜೊತೆಗೆ ಗಮನಸೆಳೆಯುವ ಸ್ಟ್ರೈಪ್‌ಗಳು, ಗೋಲ್ಡನ್ ವಿಂಗ್ ಮಾರ್ಕ್ ಲಾಂಛನ, ಫ್ಯೂಲ್ ಟ್ಯಾಂಕ್ ಮೇಲೆ ಸೆಲೆಬ್ರೇಶನ್ ಎಡಿಷನ್ ಲೋಗೋ ಹೊಸ ಬೈಕಿಗೆ ಹೆಚ್ಚಿನ ಪ್ರೀಮಿಯಂ ಸ್ಟೈಲಿಂಗ್‌ ನೀಡಲಿದ್ದು, ಹೊಸ ಸ್ಯಾಡಲ್ ಬ್ರೌನ್ ಸೀಟ್ ಹೊಸ ಬೈಕಿಗೆ ಹೊಸ ಲುಕ್ ನೀಡುತ್ತದೆ.

ಹೌಸ್ ಬೋಟ್‌ನಲ್ಲಿ ತೇಲುವ ಶೋರೂಂ ಆರಂಭಿಸಿದ ಹೋಂಡಾ ಮೋಟಾರ್‌ಸೈಕಲ್

ಇದರೊಂದಿಗೆ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮಫ್ಲರ್ ಕವರ್, ಸೈಡ್ ಕವರ್‌ನಲ್ಲಿ ಗೋಲ್ಡನ್ ಟಚ್ ನೀಡಿರುವುದು ಸೆಲೆಬ್ರೇಷನ್ ಮಾದರಿಗೆ ಉತ್ತಮ ವಿನ್ಯಾಸ ನೀಡಿದ್ದು, ಹೊಸ ಮಾದರಿಯು ಮುಂಬರುವ ಹಬ್ಬದ ದಿನಗಳಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Honda motorcycle launched floating showroom in the backwaters of kerala
Story first published: Wednesday, October 5, 2022, 8:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X