2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಭಾರದಲ್ಲಿ ಸ್ಕೂಟರ್ ವಿಭಾಗದಲ್ಲಿ ಮುಂಚುಣಿಯಲ್ಲಿರುವ ಹೋಂಡಾ ಇಂಡಿಯಾ 2023ರ ವೇಳೆಗೆ 'ಆ್ಯಕ್ಟೀವಾ' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಯೋಜಿಸಿದೆ. ಹೋಂಡಾ ಪ್ರಕಾರ, ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್ ಮುಂದಿನ ಹಣಕಾಸು ವರ್ಷದ ವೇಳೆಗೆ ಸಿದ್ಧವಾಗಲಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಅಟ್ಸುಶಿ ಒಗಾಟಾ ಮಾತನಾಡಿ, ಭಾರತದಲ್ಲಿ ಇವಿ ಸ್ಪೇಸ್‌ಗೆ ಪ್ರವೇಶಿಸುವ ಹೋಂಡಾದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಇತ್ತೀಚಿನ ದಿನಗಳಲ್ಲಿ ಇವಿ ವಾಹನಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ಸಾಂಪ್ರದಾಯಿಕ ಪೆಟ್ರೋಲ್ ವಾಹನಗಳನ್ನು ಹಿಂದಿಕ್ಕುವ ದಿಶೆಯಲ್ಲಿ ಮುನ್ನುಗುತ್ತಿವೆ ಎಂದರು.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಹೋಂಡಾ ಆ್ಯಕ್ಟೀವಾ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿರುವುದರಿಂದ, ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗೂ ಹೋಂಡಾ ಅದೇ ಹೆಸರನ್ನು ಬಳಸುತ್ತಿದೆ ಎಂಬುದು ತಾರ್ಕಿಕವಾಗಿದೆ. 'ಆ್ಯಕ್ಟೀವಾ' ನೇಮ್ ಪ್ಲೇಟ್ ವಿಶ್ವಾಸಾರ್ಹತೆ ಮತ್ತು ಕಾರ್ಯಕ್ಷಮತೆಯಂತಹ ಬ್ರಾಂಡ್‌ನ ಯುಎಸ್‌ಪಿಗಳನ್ನು ಹೊಂದಿರುವುದರಿಂದ ಗ್ರಾಹಕರಿಗೆ ಬ್ರಾಂಡ್‌ನೊಂದಿಗೆ ಸಂಪರ್ಕ ಸಾಧಿಸಲು ಇದು ಸುಲಭಗೊಳಿಸುತ್ತದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಜಪಾನಿನ ದೈತ್ಯ ದ್ವಿಚಕ್ರ ವಾಹನ ಕಂಪನಿ, ದೇಶದ ಅತಿ ಹೆಚ್ಚು ಮಾರಾಟವಾಗುವ ಆ್ಯಕ್ಟೀವಾ ನೀಪ್ಲೇಟ್ ಇವಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ಮಾದರಿಯು ಇತ್ತೀಚೆಗೆ ಬೌನ್ಸ್ ಇನ್ಫಿನಿಟಿಯಲ್ಲಿ ಪರಿಚಯಿಸಲಾದ ಬ್ಯಾಟರಿ ವಿನಿಮಯ ವ್ಯವಸ್ಥೆಯೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಈಗಾಗಲೇ ಭಾರತದಲ್ಲಿ ಆ್ಯಕ್ಟೀವಾ ಶ್ರೇಣಿ ಮುಂಚೂಣಿಯಲ್ಲಿದ್ದು, ಬೌನ್ಸ್‌ನೊಂದಿಗಿನ ಸಹಭಾಗಿತ್ವ ಹೊಸ ಕ್ರಾಂತಿ ಸೃಷ್ಟಿಸಬಹುದು. ಅಲ್ಲದೇ ಈಗಾಗಲೇ ಮುಂಚೂಣಿಯಲ್ಲಿರುವ ಓಲಾ, ಎಥರ್, ಒಕಿನಾವಾದಂತಹ ಎಲೆಕ್ಟ್ರಿಕ್ ವಾಹನಗಳಿಗೆ ತೀವ್ರ ಪೈಪೋಟಿ ನೀಡುವ ಸಾದ್ಯತೆಯಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುತ್ತದೆಯೇ ಅಥವಾ ಅಂತರರಾಷ್ಟ್ರೀಯ ಉತ್ಪನ್ನ ಸಾಲಿನಿಂದ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸ್ವಲ್ಪ ಮಾರ್ಪಡಿಸಿದ ಆವೃತ್ತಿಯನ್ನು ಬಳಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬರಲು ಕೆಲವು ದಿನಗಳು ಕಾಯಬೇಕಿದೆ. ಪ್ರಸ್ತುತ, ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಭಾರತದಲ್ಲಿ ಬೆನ್ಲೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರೀಕ್ಷಿಸುತ್ತಿದೆ. ಇದು ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ಎಐ)ನಲ್ಲಿಯೂ ಕಂಡುಬಂದಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಬಹುಶಾಃ ಇದೇ ವಾಹನವನ್ನು 2023ರಲ್ಲಿ ಆ್ಯಕ್ಟೀವಾ ಇವಿಗಿಂತ ಮೊದಲೇ ಬಿಡುಗಡೆ ಮಾಡಬಹುದು. ಹೀಗೇನಾದರೂ ಬಿಡುಗಡೆಯಾದರೆ ಮುಂಬರಲಿರುವ ಆ್ಯಕ್ಟೀವಾದ ಪವರ್ ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹತಿ ಹೊರಬರುವ ಸಾಧತೆ ಇದೆ. ಈಗಾಗಲೇ ಇರುವ ಹೋಂಡಾದ ಇವಿ ಸ್ಕೂಟರ್‌ ಮಾದರಿಗಳಿಗಿಂತ ಆಕ್ಟೀವಾ ಇವಿ ಹೆಚ್ಚು ಜನಪ್ರಿಯವಾಗಲಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಬೆನ್ಲೆ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಹೋಂಡಾ ಜಪಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ನಾಲ್ಕು ವಿಭಿನ್ನ ಮಾದರಿಗಳನ್ನು ನೀಡುತ್ತಿದೆ. ಈ ರೂಪಾಂತರಗಳಲ್ಲಿ ಬೆನ್ಲೆ ಇ: ಐ, ಬೆನ್ಲೆ ಇ: ಐ ಪ್ರೊ, ಬೆನ್ಲೆ ಇ: 2, ಮತ್ತು ಬೆನ್ಲೆ ಇ: 2 ಪ್ರೊ ಸೇರಿವೆ. ಇವು ಆ ದೇಶದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದು, ಭಾರತದಲ್ಲೂ ಅದೇ ಜನಪ್ರಿಯತೆ ಪಡೆಯಲು ಸಜ್ಜಾಗುತ್ತಿವೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಬೆನ್ಲೆ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ಪ್ರಾಥಮಿಕವಾಗಿ ಬಿ 2 ಬಿ ಮತ್ತು ಬಿ 2 ಸಿ ಸೆಗ್ಮೆಂಟ್ ಗಳಲ್ಲಿ ಕೊನೆಯ ಮೈಲಿ ಡೆಲಿವರಿಗಾಗಿ ಉದ್ದೇಶಿಸಲಾಗಿದ್ದರೂ, ಪ್ರಯಾಣಿಕರಿಗೆ ಸೂಕ್ತವಾದ ಎಲೆಕ್ಟ್ರಿಕ್ ಸ್ಕೂಟರ್ ಗೆ ಪವರ್ ನೀಡಲು ಪವರ್ ಟ್ರೇನ್ ಮತ್ತು ಹಾರ್ಡ್ ವೇರ್ ಅನ್ನು ಬಳಸಬಹುದು. ಇದಕ್ಕಾಗಿ ತಯಾರಕರು ಕೂಡ ಹೆಚ್ಚುವರಿ ಪವರ್‌ ನೀಡಲು ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಬೆನ್ಲೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗಾಗಲೇ ಪರೀಕ್ಷಿಸಿರುವುದರಿಂದ, ಈ ಎಲೆಕ್ಟ್ರಿಕ್ ಸ್ಕೂಟರ್ ಮುಂಬರುವ ಹೋಂಡಾ 'ಆ್ಯಕ್ಟೀವಾ' ಎಲೆಕ್ಟ್ರಿಕ್ ಸ್ಕೂಟರ್‌ಗೆ ಅಡಿಪಾಯ ಹಾಕುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್ ಬಿಡುಗಡೆ ಬಳಿಕ ಎಲೆಕ್ಟ್ರಿಕ್ ಆ್ಯಕ್ಟೀವಾ ಸ್ಕೂಟರ್ ಬಗ್ಗೆ ಒಂದು ಸೂಕ್ತ ವಿವರಣೆ ಸಿಗಲಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಏಕೆಂದರೆ ಎರಡು ವಾಹನಗಳು ಒಂದೇ ಪ್ಲಾಟ್‌ಪಾರ್ಮ್‌ನಲ್ಲಿ ತಯಾರಾಗುವ ಮಾಹಿತಿಯಿದೆ. ಇದಲ್ಲದೆ, ಹೋಂಡಾ ತನ್ನ ಅಂತರರಾಷ್ಟ್ರೀಯ ಉತ್ಪನ್ನ ಪೋರ್ಟ್ಫೋಲಿಯೊದಲ್ಲಿ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಸಹ ಹೊಂದಿದೆ. ಇದರಲ್ಲಿ ಹೋಂಡಾ ಪಿಸಿಎಕ್ಸ್ ಎಲೆಕ್ಟ್ರಿಕ್, ಹೋಂಡಾ ಗೈರೋ ಇ:, ಹೋಂಡಾ ಗೈರೋ ಕ್ಯಾನೋಪಿ ಇ: ಮುಂತಾದ ಎಲೆಕ್ಟ್ರಿಕ್ ಸ್ಕೂಟರ್ ಗಳು ಸೇರಿವೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಇವೆಲ್ಲವೂ ಆಯಾ ಮಾದರಿಗಳಿಗೆ ಅನುಗುವಾಗಿ ಉತ್ತಮ ಮಾರಾಟ ದಾಖಲಿಸಿವೆ. ಹೋಂಡಾ ಈಗಾಗಲೇ ಇವಿ ವಲಯದಲ್ಲಿ ದೊಡ್ಡ ಯೋಜನೆಗಳನ್ನು ಹೊಂದಿದೆ. ಕಂಪನಿಯು ಇತ್ತೀಚೆಗೆ ಬ್ಯಾಟರಿ ಪ್ಯಾಕ್ ಗಳನ್ನು ತಯಾರಿಸಲು ಹೊಸ ಅಂಗಸಂಸ್ಥೆಯನ್ನು ಸಹ ಸ್ಥಾಪಿಸಿದೆ.

2023ರ ವೇಳೆಗೆ 'ಆ್ಯಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಹೋಂಡಾ ತಯಾರಿ

ಈ ಅಂಗಸಂಸ್ಥೆಗಾಗಿ ಜಪಾನಿನ ತಯಾರಕರು 133 ಕೋಟಿ ರೂ.ಗಳ ಬಂಡವಾಳವನ್ನು ಹೂಡಿದ್ದಾರೆ. ಹೋಂಡಾ 'ಆಕ್ಟಿವಾ' ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಮೂಲಕ, ಹೋಂಡಾ ಈ ಸೆಗ್ಮೆಂಟ್ ನಲ್ಲಿ ಪ್ರಾಬಲ್ಯ ಸಾಧಿಸುವ ಭರವಸೆ ಹೊಂದಿದೆ.

Most Read Articles

Kannada
Read more on ಹೋಂಡಾ honda
English summary
Honda planning to launch activa ev in india by 2023
Story first published: Friday, May 6, 2022, 10:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X