Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
80 ಕಿ.ಮೀ ರೇಂಜ್ ಹೊಂದಿರುವ Horwin SK3 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ
ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳುತ್ತಿದೆ. ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಜನಪ್ರಿಯ ವಾಹನ ತಯಾರಕ ಕಂಪನಿಯು ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ. ಇದರ ನಡುವೆ ಯುರೋಪ್ ಮಾರುಕಟ್ಟೆಗಾಗಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹಾರ್ವಿನ್ ಕಂಪನಿಯು ಪರಿಚಯಿಸಿದೆ. ಹಾರ್ವಿನ್ ಎಸ್‌ಕೆ3 (Horwin SK3) ಒಂದು ಸುಂದರ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಆಸ್ಟ್ರಿಯಾ ಮೂಲದ ಇವಿ ಬ್ರ್ಯಾಂಡ್, ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ದಿಪಡಿಸಿ ಪರಿಚಯಿಸಲಾಗಿದೆ. ಹಾರ್ವಿನ್ ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ನಯವಾದ ಮತ್ತು ಚೂಪಾದ ವಿನ್ಯಾಸವನ್ನು ಪಡೆಯುತ್ತದೆ ಅದು ಮ್ಯಾಕ್ಸಿ ಸ್ಕೂಟರ್ ಶೈಲಿಗಳನ್ನು ಅಳವಡಿಸಿಕೊಂಡಿದೆ.

ಈ ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ಮ್ಯಾಕ್ಸಿ-ಶೈಲಿಯ ಸ್ಕೂಟರ್‌ಗಳಂತೆ ಎತ್ತರವಾಗಿದೆ ಮತ್ತು ಪ್ರಮುಖವಾಗಿದೆ. ಮುಂಭಾಗದಲ್ಲಿ, ಸ್ಕೂಟರ್‌ಗೆ ಟ್ವಿನ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಏಪ್ರನ್‌ನಲ್ಲಿ ಅಳವಡಿಸಲಾಗಿದ್ದು, ಅದು BMW C400 GT ಮಾದರಿಯಲ್ಲಿರುವಂತೆ ಇದೆ.

ಏಪ್ರನ್ ಸಣ್ಣ ಮತ್ತು ಹೊಂದಾಣಿಕೆಯ ಫ್ಲೈಸ್ಕ್ರೀನ್ ಅನ್ನು ಸಹ ಹೊಂದಿದೆ. ಸ್ಕೂಟರ್ ಅದರ ಮುಂಭಾಗ ಮತ್ತು ಪ್ಯಾನೆಲ್ ಗಳ ಉದ್ದಕ್ಕೂ ಅನೇಕ ಕಟ್ ಗಳು ಮತ್ತು ಕ್ರೀಸ್‌ಗಳನ್ನು ಹೊಂದಿದೆ, ಇದು ಆಧುನಿಕ ಮತ್ತು ಪ್ರಯೋಜನಕಾರಿ ನೋಟವನ್ನು ನೀಡುತ್ತದೆ.

ತುಲನಾತ್ಮಕವಾಗಿ ಸಮತಟ್ಟಾದ ಸೀಟ್ ದಪ್ಪನಾದ ಸಿಂಗಲ್-ಪೀಸ್ ಗ್ರಾಬ್ ರೈಲ್‌ನೊಂದಿಗೆ ಬರುತ್ತದೆ, ಇದನ್ನು ಲಗೇಜ್ ಮೌಂಟಡ್ ರ್ಯಾಕ್ ಅಥವಾ ಪ್ಯಾನಿಯರ್ ಬಾಕ್ಸ್‌ನೊಂದಿಗೆ ಪಿಲಿಯನ್ ಬ್ಯಾಕ್‌ರೆಸ್ಟ್ ಅನ್ನು ಪರಿಕರವಾಗಿ ಬದಲಾಯಿಸಬಹುದು. ಮೂಲಭೂತವಾಗಿ, ಇದನ್ನು ದೈನಂದಿನ ಪ್ರಯಾಣಕ್ಕಾಗಿ ಮತ್ತು ದೂರದ ಪ್ರವಾಸಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಹಾರ್ವಿನ್ ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 6.2kW ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದೆ, ಇದು 2.52kWh ಲಿಥಿಯಂ-ಐಯಾನ್ ಬ್ಯಾಟರಿಯಿಂದ ಪವರ್ ಅನ್ನು ಪಡೆಯುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ 90 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಈ ಹಾರ್ವಿನ್ ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 80 ಕಿ.ಮೀ ದೂರ ಚಲಿಸುತ್ತದೆ. ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅನ್ನು ಆಯ್ಕೆಯಾಗಿ ಪಡೆಯುವ ಮೂಲಕ, ರೇ<�ಜ್ ಅನ್ನು 160 ಕಿಮೀ ವರೆಗೆ ವಿಸ್ತರಿಸಬಹುದು. ಆದರೆ ಎರಡನೇ ಬ್ಯಾಟರಿಯ ಸೇರ್ಪಡೆಯು ಸೀಟಿನ ಕೆಳಗಿರುವ ಸಂಗ್ರಹಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಹಾರ್ವಿನ್ ತನ್ನ ಗ್ರಾಹಕರಿಗೆ 8A ಚಾರ್ಜರ್ ಅನ್ನು ಪ್ರಮಾಣಿತವಾಗಿ ಒದಗಿಸಲಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಎಸ್‌ಕೆ3 ಪೂರ್ಣ ಎಲ್ಇಡಿ ಲೈಟಿಂಗ್, ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಪ್ಯಾನೆಲ್, ಕೀ ರಹಿತ ಕಾರ್ಯಾಚರಣೆ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ.

ಸ್ಕೂಟರ್‌ನ ಹಾರ್ಡ್‌ವೇರ್ ಕಾನ್ಫಿಗರೇಶನ್‌ಗಳು ಸಸ್ಪೆಂಕ್ಷನ್ ಸೆಟಪ್‌ನೊಂದಿಗೆ ಮುಂಭಾಗದಲ್ಲಿ ಮತ್ತು ಡ್ಯುಯಲ್ ರಿಯರ್ ಸ್ಪ್ರಿಂಗ್‌ಗಳಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಒಳಗೊಂಡಿರುತ್ತವೆ.ಸ್ಕೂಟರ್ ಬ್ಲ್ಯಾಕ್ 14-ಇಂಚಿನ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿರುತ್ತದೆ.

ಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೇಕಿಂಗ್ ಸೆಟಪ್ ಕಾಂಬಿ ಬ್ರೇಕಿಂಗ್ ಸಿಸ್ಟಮ್ (CBS) ಸಹಾಯದಿಂದ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಡ್ರಮ್ ಬ್ರೇಕ್ ಅನ್ನು ನೀಡಲಾಗಿದೆ.ಇದರ ಬ್ರೇಕಿಂಗ್ ಸಿಸ್ಟಂ ಉತ್ತಮವಾಗಿದೆ. ಹಾರ್ವಿನ್ ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ಮ್ಯಾಟಲಿಕ್ ಬ್ಲೂ, ಬ್ಲ್ಯಾಕ್ ಮತ್ತು ಮ್ಯಾಟಲಿಕ್ ಗ್ರೇ ಎಂಬ ಮೂರು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಯುರೋ 3990 (ಅಂದಾಜು. ರೂ.3.42 ಲಕ್ಷ) ಬೆಲೆಯಯಲ್ಲಿ ಯುರೋಪ್‌ನಾದ್ಯಂತ ಈ ತಿಂಗಳು ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತದೆ.

ಹೊಸ ಹಾರ್ವಿನ್ ಎಸ್‌ಕೆ3 ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದರ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಯುರೋಪ್ ನಲ್ಲಿ ಯಶಸ್ವಿಯಾದ ಬಳಿಕ ಇತರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯು ಬಿಡುಗಡೆಯಾಗುವ ಸಾಧ್ಯತೆಗಳಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಗಳದ ಬಜಾಜ್ ಆಟೋ, ಟಿವಿಎಸ್ ಮೋಟಾರ್ ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ. ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.

ಇದರ ನಡುವೆ ಹಲವು ಎಲೆಕ್ಟ್ರಿಕ್ ದ್ವಿಚಕ್ರ ಬ್ರ್ಯಾಂಡ್ ಗಳು ಕೂಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಒಟ್ಟಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಿಡುಗಡೆಯಾಗಲಿವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಿಡುಗಡೆಯಾಗುವ ಸಾಧ್ಯತೆಗಳಿದೆ.