ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಯುವಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಭಾರತದಲ್ಲಿ ಆಗಸ್ಟ್ 7 ರಂದು ಬಿಡುಗಡೆ ಮಾಡಲಾಗಿದ್ದು, ಇದನ್ನು 1.50 ಲಕ್ಷ ರೂಪಾಯಿ (ಎಕ್ಸ್‌ ಶೋರೂಂ) ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಸಾಕಷ್ಟು ಬದಲಾವಣೆಗಳೊಂದಿಗೆ ತರಲಾಗಿದೆ. ಅಲ್ಲದೆ ಕಂಪನಿಯು ತನ್ನ ಲೈನ್‌ಅಪ್‌ನಲ್ಲಿಯೇ ಅತ್ಯಂತ ಕಡಿಮೆ ಬೆಲೆಗೆ ಇದನ್ನು ಪರಿಚಯಿಸಿದೆ. ಇದೀಗ ಬೈಕ್‌ನ ಸಾಮರ್ಥ್ಯವನ್ನು ಗ್ರಾಹಕರಿಗೆ ತಿಳಿಸುವ ಸಮಯ ಬಂದಿದೆ. ಈ ಹೊಸ ಬೈಕ್ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ವಿಶ್ವದ ಅತಿ ಎತ್ತರದ ರಸ್ತೆಗಳಲ್ಲಿ ಒಂದಾದ ಖರ್ದುಂಗ್ ಲಾ ಪ್ರದೇಶಕ್ಕೆ ತಲುಪಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಆ ಸಂದರ್ಭದಲ್ಲಿ ತೆಗೆದ ಕೆಲವುಚಿತ್ರಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಹಂಟರ್‌ನ ಕಪ್ಪು ಬಣ್ಣದ ಮಾದರಿಯಲ್ಲಿ ಖರ್ದುಂಗ್ ಲಾ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಆದರೂ ಕಂಪನಿಯು ಅದರ ಸವಾರನ ವಿವರಗಳನ್ನು ನೀಡಿಲ್ಲ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ತಮ್ಮ ಉತ್ತಮ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ ಎಂಬುದನ್ನು ಹೊಸ ಹಂಟರ್ ಮತ್ತೊಮ್ಮೆ ಸಾಭೀತು ಪಡಿಸಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಲಡಾಖ್ S3A ಬೈಕ್‌ನ ಸಾಮರ್ಥ್ಯಗಳನ್ನು ಪರೀಕ್ಷಿಸಲು ಉತ್ತಮ ಸ್ಥಳವಾಗಿದೆ, ಆದ್ದರಿಂದ ಕಂಪನಿಯು ತನ್ನ ಹೊಸ ಬೈಕ್ ಅನ್ನು ಸಹ ಅಲ್ಲಿಗೆ ಕಳುಹಿಸಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಬಿಡುಗಡೆಯಾದ ನಂತರ ಕಂಪನಿಯ ಪ್ರವೇಶ ಮಟ್ಟದ ಬೈಕ್ ಆಗಿ ಮಾರ್ಪಟ್ಟಿದೆ. ಸಾಮರ್ಥ್ಯದ ವಿಷಯದಲ್ಲಿ ಹಂಟರ್ 350 ಯಾವುದೇ ರಾಯಲ್ ಎನ್‌ಫೀಲ್ಡ್ ಬೈಕ್‌ಗಿಂತ ಕಡಿಮೆಯಿಲ್ಲ ಎಂದು ರಾಯಲ್ ಎನ್‌ಫೀಲ್ಡ್ ತೋರಿಸಲು ಹೊರಟಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಇನ್ನು ಬೈಕ್ ವಿಷಯಕ್ಕೆ ಬಂದರೆ ರಾಯಲ್ ಎನ್‌ಫೀಲ್ಡ್ ಹಂಟರ್‌ನ ತೂಕವನ್ನು 181 ಕೆ.ಜಿಯಲ್ಲಿ ಇರಿಸಲಾಗಿದ್ದರೇ, ಇದರ ಗ್ರೌಂಡ್ ಕ್ಲಿಯರೆನ್ಸ್ ಅನ್ನು 150 ಎಂಎಂ ಇರಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ನಲ್ಲಿ ಲಡಾಖ್‌ಗೆ ಹೋಗುವವರಿಗೆ, ಇದು 179 ಕೆ.ಜಿ ಭಾರ ಹೊರುವ ಸಾಮರ್ಥ್ಯದೊಂದಿಗೆ 114 ಗರಿಷ್ಠ ವೇಗವನ್ನು ತಲುಪಬಲ್ಲದು.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಇದರ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂದಿನ ಚಕ್ರದಲ್ಲಿ 270 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ. ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅದರ ಮೆಟ್ರೋ ರೂಪಾಂತರದಲ್ಲಿ ನೀಡಲಾಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಅನ್ನು ರೆಟ್ರೋ ಸಿಂಗಲ್ ವೆರಿಯಂಟ್‌ನಲ್ಲಿ ನೀಡಲಾಗಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಇನ್ನು ಹಂಟರ್ 350 ನಲ್ಲಿ ಸಸ್ಪೆನ್ಷನ್‌ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಅವಳಿ ಶಾಕ್‌ಗಳನ್ನು ನೀಡಲಾಗಿದೆ. ಬೈಕ್ 17-ಇಂಚಿನ ಅಲಾಯ್‌ ವೀಲ್‌ಗಳನ್ನು ಪಡೆಡೆದುಕೊಂಡಿದೆ. 110/70-17 54P ಮತ್ತು 140/70 - 17 - 66P ನಲ್ಲಿ ಮುಂಭಾಗದ ವೀಲ್‌ಗಳನ್ನು ನೀಡಲಾಗಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಹೊಸ ಹಂಟರ್‌ಗೆ ಟ್ಯೂಬ್ ಲೆಸ್ ಟೈರ್ ಅಳವಡಿಸಲಾಗಿದ್ದು, ಇದು 1,370 ಎಂಎಂ ವ್ಹೀಲ್ ಬೇಸ್ ಹೊಂದಿದ್ದು, 800 ಎಂಎಂ ಸೀಟ್ ಎತ್ತರದೊಂದಿಗೆ ಬರುತ್ತದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 20.2 bhp ಪವರ್ ಮತ್ತು 27 Nm ಟಾರ್ಕ್ ಅನ್ನು ಉತ್ಪಾದಿಸುವ 349 cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಇದನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಹಂಟರ್‌ನ ಮೆಟ್ರೋ ರೂಪಾಂತರದಲ್ಲಿ ರೆಬೆಲ್ ಬ್ಲ್ಯಾಕ್, ರೆಬೆಲ್ ಬ್ಲೂ ಮತ್ತು ರೆಬೆಲ್ ರೆಡ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ. ಈ ಬೈಕ್ 36.2 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬಿಡುಗಡೆಯ ಬಳಿಕ ಇದು ವಿವಿಧ ಮೋಟಾರ್‌ಸೈಕಲ್‌ಗಳೊಂದಿಗೆ ಸ್ಪರ್ಧಿಸಬೇಕಿದೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಈ ಬಗ್ಗೆ ಹೇಳುವುದಾದರೆ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ಗೆ ಮಾರುಕಟ್ಟೆಯಲ್ಲಿ ಹೋಂಡಾ CB350RS, Jawa 42 ಮತ್ತು TVS ರೋನಿನ್ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಈ ಎಲ್ಲಾ ಮೋಟಾರ್‌ಸೈಕಲ್‌ಗಳು ಬಹುತೇಕ ಒಂದೇ ರೀತಿಯ ಡಿಸೈನ್ ಹೊಂದಿವೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್‌ನ ಬೆಲೆಯನ್ನು ಸ್ಪಷ್ಟವಾಗಿ ನಿಗದಿಪಡಿಸಿದ್ದು, ಈ ಮೋಟಾರ್‌ಸೈಕಲ್ ದೇಶದಲ್ಲಿ ಹೆಚ್ಚು ಮಾರಾಟವಾಗುವ 350cc ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಇನ್ನು ಪ್ರತಿಸ್ಪರ್ಧಿಗಳಿಗೆ ಕಠಿಣ ಪೈಪೋಟಿ ನೀಡಲಿದೆ ಎಂದು ಮೂಲಗಳು ಹೇಳುತ್ತಿವೆ.

ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ರಾಯಲ್ ಎನ್‌ಫೀಲ್ಡ್‌ನ ಹೊಸ ಹಂಟರ್ 350 ತನ್ನ ಲುಕ್‌ನಲ್ಲಿ ಯುವಕರ ಮನಕದ್ದಿದೆ. ಅಲ್ಲದೇ ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದರಿಂದ ಉತ್ತಮ ಮಾರಾಟವನ್ನು ದಾಖಲಿಸುವ ಸಾಧ್ಯತೆಯಿದೆ. ಇನ್ನು ಕರ್ದುಂಗ್ ಲಾ ವಿಷಯಕ್ಕೆ ಬಂದರೆ ವಾಹನಗಳು ಸಂಚರಿಸುವ ವಿಶ್ವದ ಅತಿ ಎತ್ತರದ ಪ್ರದೇಶಕ್ಕೆ ಹಂಟರ್‌ ಈಗ ತಲುಪಿದೆ. ಕಂಪನಿಯು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ವಿಶ್ವದ ಅತಿ ಎತ್ತರದ ರಸ್ತೆಗಳಲ್ಲಿ ಒಂದಕ್ಕೆ ಕಳುಹಿಸಿರುವುದಾಗಿ ತಿಳಿದುಬಂದಿದೆ. ಇಲ್ಲಿಯವರೆಗೆ ಕಂಪನಿಯು ಈ ವಿತರಣೆಯನ್ನು ಪ್ರಾರಂಭಿಸಿಲ್ಲ, ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಯಾವೆಲ್ಲಾ ದಾಖಲೆಗಳನ್ನು ಮುರಿಯಲಿದೆ ಎಂಬುದನ್ನು ಕಾದುನೊಡಬೇಕಿದೆ.

Most Read Articles

Kannada
English summary
Hunter 350 proved its capability by reaching the highest altitude in the world
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X