ಫೀಲ್ಡಿಗಿಳಿದ ಜಪಾನ್ ಎಂಜಿನಿಯರ್‌ಗಳು...ಬರಲಿದೆಯೇ ಎಲೆಕ್ಟ್ರಿಕ್ ಆಕ್ಟೀವಾ...ಟಿವಿಎಸ್, ಬಜಾಜ್‌ಗೆ ಸೆಡ್ಡು!

ಭಾರತದಲ್ಲಿ ಇಂಧನ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೆಡಿಕೆ ಹೆಚ್ಚಾಗುತ್ತಿದೆ. ಇವಿಗಳು ಪೆಟ್ರೋಲ್ ಚಾಲಿತ ವಾಹನಗಳಿಗಿಂತ ಸ್ವಲ್ಪ ದುಬಾರಿಯಾದರೂ ಭಾರತದಲ್ಲಿ ಉತ್ತಮ ಸ್ವಾಗತ ಸಿಗುತ್ತಿದೆ. ಹೆಚ್ಚಿನ ಹಣಕ್ಕೆ ಕೊಂಡರೂ ಪೆಟ್ರೋಲ್ ಹಾಗೂ ನಿರ್ವಹಣೆಯನ್ನು ಉಳಿಸಬಹುದೆಂಬ ಯೋಚನೆಯಲ್ಲಿ ಜನರಿದ್ದಾರೆ. ಹಾಗಾಗಿ ಸ್ಟಾರ್ಟಪ್ ಕಂಪನಿಗಳಿಂದ ಹಿಡಿದು ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುತ್ತಿವೆ.

ಇನ್ನು ಇಂಧನ ಚಾಲಿತ ಸ್ಕೂಟರ್ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿರುವ ಹೋಂಡಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿದೆ. ಪ್ರಸ್ತುತ ಬಜಾಜ್ ಮತ್ತು ಟಿವಿಎಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಆದರೆ ಹೋಂಡಾ ಮಾತ್ರ ಇನ್ನೂ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲ.

ಫೀಲ್ಡಿಗಿಳಿದ ಜಪಾನ್ ಎಂಜಿನಿಯರ್‌ಗಳು...ಬರಲಿದೆಯೇ ಎಲೆಕ್ಟ್ರಿಕ್ ಆಕ್ಟೀವಾ...ಟಿವಿಎಸ್, ಬಜಾಜ್‌ಗೆ ಸೆಡ್ಡು!

ಆದರೆ ಇತ್ತೀಚೆಗೆ ವಾಹನ ವಲಯದಲ್ಲಿ ಬದಲಾವಣೆಯನ್ನು ಮನಗಂಡಿರುವ ಹೋಂಡಾ ಕಂಪನಿಯು ಇದೀಗ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ವರದಿಗಳ ಪ್ರಕಾರ, ಹೋಂಡಾದ ಎಲೆಕ್ಟ್ರಿಕ್ ಸ್ಕೂಟರ್ 2023ರ ಮೊದಲಾರ್ಧದಲ್ಲಿ ಬಿಡುಗಡೆಯಾಗಲಿದೆ. ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಹೆಸರನ್ನು ಇನ್ನೂ ಪ್ರಕಟಿಸಲಾಗಿಲ್ಲ. ಆದರೆ ಇದು ಬಜಾಜ್ ಚೇತಕ್ ಮತ್ತು ಟಿವಿಎಸ್ ಐಕ್ಯೂಬ್‌ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿದೆ.

ಹೋಂಡಾ ಕಂಪನಿಯು ತನ್ನ ಹೊಸ ಇವಿ ಸ್ಕೂಟರ್ ಹೆಸರನ್ನು ಘೋಷಿಸಲಾಗಿಲ್ಲವಾದರೂ, ಇದು ಆಕ್ಟಿವಾ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿರಬಹುದು ಎಂದು ಹೋಂಡಾ ಮೂಲಗಳು ಸೂಚಿಸುತ್ತವೆ. ವರದಿಗಳ ಪ್ರಕಾರ, ಹೋಂಡಾ ಪ್ರಸ್ತುತ ಅಲ್ಲಿನ ಎಂಜಿನಿಯರ್‌ಗಳು ಮತ್ತು ಭಾರತದಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳನ್ನು ಒಟ್ಟುಗೂಡಿಸಿ ಹೊಸ ತಂಡವನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಈ ಇಂಜಿನಿಯರ್‌ಗಳ ತಂಡವು ಭಾರತೀಯ ಮಾರುಕಟ್ಟೆಗೆ ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡಲಿದೆ.

ಜಪಾನಿನ ಎಂಜಿನಿಯರ್‌ಗಳ ತಂಡವು ಭಾರತೀಯ ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಹಾಗೂ ಸದ್ಯಕ್ಕಿರುವ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಅತ್ಯುತ್ತಮ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸಲು ಯೋಜಿಸಿಕೊಂಡಿದ್ದಾರೆ. ನಾವು ಈಗ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟಕ್ಕೆ ಪರಿಚಯಿಸಿದರೆ ಅದು ಯಶಸ್ವಿಯಾಗುತ್ತದೆಯೇ? ಎಂಬ ಆಲೋಚನೆಯಲ್ಲಿರುವ ಜಪಾನ್ ಎಂಜಿನಿಯರ್‌ಗಳು ಸದ್ಯಕ್ಕಿರುವ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಿ ಯಾವೆಲ್ಲಾ ವಿನ್ಯಾಸ ವೈಶಿಷ್ಟ್ಯಗಳೊಂದಿಗೆ ಇವಿ ಸ್ಕೂಟರ್ ತರಬಹುದು ಎಂಬ ಯೋಜನೆ ರೂಪಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಹೋಂಡಾ ಈಗಾಗಲೇ ಎಲ್ಲಾ ಚರ್ಚೆಗಳನ್ನು ಪೂರ್ಣಗೊಳಿಸಿದೆ. ಈ ಚರ್ಚೆಗಳ ಕೊನೆಯಲ್ಲಿ, ಪ್ರಾಯೋಗಿಕ ಅಪ್ಲಿಕೇಶನ್‌ಗಳಿಗೆ ಸೂಕ್ತವಾದ ಮತ್ತು ಭಾರತೀಯ ಗ್ರಾಹಕರಿಗೆ ವಿಶ್ವಾಸಾರ್ಹವಾದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಹೋಂಡಾ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ, ದ್ವಿಚಕ್ರ ವಾಹನಗಳು ಪ್ರಸ್ತುತ ಹೆಚ್ಚು ಮಾರಾಟವಾಗುವ ಉತ್ಪನ್ನಗಳಾಗಿವೆ. ಮುಂಬರುವ ವರ್ಷಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟ ಹಲವು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಅದಕ್ಕಾಗಿಯೇ ಹೋಂಡಾ ಈಗ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಗಂಭೀರವಾಗಿ ಪ್ರಯತ್ನಿಸುತ್ತಿದೆ. ಆಕ್ಟೀವಾ ಸ್ಕೂಟರ್‌ನ ಎಲೆಕ್ಟ್ರಿಕ್ ಆವೃತ್ತಿಯು ಗ್ರಾಹಕರಲ್ಲಿ ಖರೀದಿ ಮಡುವ ಆಸಕ್ತಿ ಹೆಚ್ಚಿಸಬಹುದು. ಹೋಂಡಾ ಆಕ್ಟಿವಾ ಪ್ರಸ್ತುತ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಹೋಂಡಾ ಆಕ್ಟೀವಾ ಸ್ಕೂಟರ್‌ಗಳಿಗೆ ಮಾತ್ರವಲ್ಲದೆ ಹೀರೋ ಸ್ಪ್ಲೆಂಡರ್‌ನಂತಹ ಜನಪ್ರಿಯ ಬೈಕ್‌ಗಳಿಗೂ ಸವಾಲೊಡ್ಡುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ದ್ವಿಚಕ್ರ ವಾಹನಗಳಲ್ಲಿ ಅಗ್ರಸ್ಥಾನದಲ್ಲಿದೆ.

ಹಾಗಾಗಿ ಇದರ ಎಲೆಕ್ಟ್ರಿಕ್ ಆವೃತ್ತಿಯೂ ಮಾರಾಟದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಿವೆ. ಬಜಾಜ್ ಚೇಥಕ್ ಮತ್ತು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮಾತ್ರವಲ್ಲದೆ, ಇತರ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಾದ Ola S1 Pro ಮತ್ತು Ather 450X, ಹೋಂಡಾದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಕಠಿಣ ಸವಾಲನ್ನು ನೀಡುವ ನಿರೀಕ್ಷೆಯಿದೆ. ಹೋಂಡಾ ಮಾತ್ರವಲ್ಲದೆ ಯಮಹಾ ಕೂಡ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

Most Read Articles

Kannada
Read more on ಹೋಂಡಾ honda
English summary
Is the electric activa coming soon
Story first published: Saturday, November 26, 2022, 11:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X