Just In
- 32 min ago
ಭಾರತದಲ್ಲಿ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಗೆ ಸಿದ್ದವಾದ ಎಲೆಕ್ಟ್ರಾನ್ ಇವಿ
- 13 hrs ago
ಆಕರ್ಷಕ ವಿನ್ಯಾಸದ 2022ರ ಹ್ಯುಂಡೈ ಟ್ಯೂಸಾನ್ ಎಸ್ಯುವಿಯ ವಿಶೇಷತೆಗಳು
- 14 hrs ago
ಪಾಸ್ಫೋರ್ಟ್ ಪ್ರಯೋಜನಗಳೇನು? ಏಕೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತವೆ ನೋಡಿ..
- 14 hrs ago
ಬ್ರೇಕ್ ಫೇಲ್ ಆದಾಗ ಕೇವಲ 8 ಸೆಕೆಂಡುಗಳಲ್ಲಿ ಕಾರು ನಿಲ್ಲಿಸುವುದು ಹೇಗೆ? ಇಲ್ಲಿದೆ ಉಪಯುಕ್ತ ಸಲಹೆ
Don't Miss!
- Movies
ಮಗಳಿಗೆ ದುಬಾರಿ ಗಿಫ್ಟ್ ಕೊಟ್ಟ ನಟ ದುನಿಯಾ ವಿಜಯ್!
- News
ಏಡಿ ಕಣ್ಣಿಂದ ಕ್ಯಾಮೆರಾ- ಸೆಲ್ಫ್ ಡ್ರೈವಿಂಗ್ ಕಾರಿಗೆ ಭರ್ಜರಿ ಪುಷ್ಟಿ
- Lifestyle
ಶನಿದೋಷ ನಿವಾರಣೆ ಹಾಗೂ ಸಂಪತ್ತು ವೃದ್ಧಿಗೆ ಕೃಷ್ಣ ಜನ್ಮಾಷ್ಟಮಿಗೆ ಮಾಡಿ ಈ ವಿಶೇಷ ಪರಿಹಾರ
- Technology
ಧಮಾಕಾ ಕೊಡುಗೆ!..ಭರ್ಜರಿ ಡಿಸ್ಕೌಂಟ್ನಲ್ಲಿ ಹೊಸ ಸ್ಮಾರ್ಟ್ಟಿವಿ ನಿಮ್ಮದಾಗಿಸಿಕೊಳ್ಳಿ!
- Finance
ಆಗಸ್ಟ್ 17: ಭಾರತದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು
- Sports
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಖರೀದಿಸುತ್ತೇನೆ ಎಂದ ಎಲಾನ್ ಮಸ್ಕ್!
- Education
Distance Education Courses And Colleges : ದೂರ ಶಿಕ್ಷಣ ಮೂಲಕ ಅಧ್ಯಯನಕ್ಕೆ ಉತ್ತಮ ಕೋರ್ಸ್ ಮತ್ತು ಕಾಲೇಜುಗಳ ವಿವರ
- Travel
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ ತನ್ನ ನಿಂಜಾ 400 ಬೈಕ್ ಅನ್ನು ಹೊಸ ನವೀಕರಣಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬೆಲೆಯು ರೂ.4.99 ಲಕ್ಷವಾಗಿದೆ.

ಕವಾಸಕಿ ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಿಂಜಾ 400 ನ ಯುರೋ 5 ಕಂಪ್ಲೈಂಟ್ ಆವೃತ್ತಿಯನ್ನು ಯುರೋಪ್ನಲ್ಲಿ ಬಿಡುಗಡೆ ಮಾಡಿದೆ, ಇನ್ನು ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿ ಬಿಡುಗಡೆಗೊಳಿಸಲಾಗಿದೆ. ಅಧಿಕೃತ ವೆಬ್ಸೈಟ್ನ ಪ್ರಕಾರ, ಕವಾಸಕಿ ನಿಂಜಾ 400 ಬೈಕಿನ ಬೆಲೆಯು ಇದರ BS4 ಮಾದರಿಯನ್ನು ಲ್ಲಿಸುವ ಮೊದಲು ಲಭ್ಯವಿರುವ ಅದೇ ಬೆಲೆಯಾಗಿದೆ.

ಕವಾಸಕಿ ನಿಂಜಾ ಬೈಕ್ ಅನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಕವಾಸಕಿ ನಿಂಜಾ H2 ನಿಂದ ಕೆಲವು ಸ್ಟೈಲಿಂಗ್ ಬಿಟ್ಗಳನ್ನು ಎರವಲು ಪಡೆಯಲಾಗಿದೆ. ಕೆಲವು ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಲಿಮ್ ಡ್ಯುಯಲ್ ಎಲ್ಇಡಿ ಹೆಡ್ಲ್ಯಾಂಪ್ಗಳು, ಸ್ಲೀಕ್ ಎಲ್ಇಡಿ ಡಿಆರ್ಎಲ್ಗಳು ಮತ್ತು ವಿಂಡ್ಸ್ಕ್ರೀನ್ ಅನ್ನು ಹೊಂದಿದೆ.

ಇದರೊಂದಿಗೆ ಫ್ರಂಟ್ ಕೌಲ್-ಮೌಂಟೆಡ್ ಫಂಕಿ ರಿಯರ್ ವ್ಯೂ ಮಿರರ್ಗಳು, ಕಡಿಮೆ-ಸೆಟ್, ಅಗಲವಾದ ಹ್ಯಾಂಡಲ್ಬಾರ್, ಸ್ಕಪಲಟಡ್ ಫ್ಯೂಯಲ್ ಟ್ಯಾಂಕ್, ಸ್ಪ್ಲಿಟ್-ಸೀಟ್ ವಿನ್ಯಾಸ ಮತ್ತು ಅಪ್ಸ್ವೆಪ್ಟ್ ಎಕ್ಸಾಸ್ಟ್ ಸೇರಿವೆ. ಬಾಡಿವರ್ಕ್ ಗಮನಾರ್ಹ ಪರಿಮಾಣವನ್ನು ಸೇರಿಸುತ್ತದೆ

ಇದು ನಿಂಜಾ 400 ಗಾಗಿ ದೊಡ್ಡ ಬೈಕ್ ಲುಕ್ ಮತ್ತು ಅನುಭವವನ್ನು ಖಾತ್ರಿಗೊಳಿಸುತ್ತದೆ. ನಿಂಜಾ 400 ಗಾಗಿ ಬಣ್ಣದ ಆಯ್ಕೆಗಳಲ್ಲಿ ಲೈಮ್ ಗ್ರೀನ್ ಮತ್ತು ಮೆಟಾಲಿಕ್ ಕಾರ್ಬನ್ ಗ್ರೇ ಸೇರಿವೆ. ಈ ಎರಡೂ ಬಣ್ಣದ ಥೀಮ್ಗಳು ಸಮಾನವಾಗಿ ಆಕರ್ಷಕವಾಗಿವೆ,

ಗ್ರೇ ಆವೃತ್ತಿಯು ಹೆಚ್ಚು ಕಾಂತೀಯ ವ್ಯಕ್ತಿತ್ವವನ್ನು ಹೊಂದಿದೆ. ಈ ಬೈಕ್ ಹೆಚ್ಚು ಅಗ್ರೇಸಿವ್, ಪ್ರಾಬಲ್ಯ ಮತ್ತು ರೋಡ್ ಗ್ರಿಪ್ ಅನ್ನು ಹೊಂದಿದೆ. ಎರಡೂ ಬಣ್ಣಗಳ ರೂಪಾಂತರಗಳು ಉತ್ಸಾಹಭರಿತ ಗ್ರಾಫಿಕ್ಸ್ ಅನ್ನು ಹೊಂದಿದ್ದು ಅದು ಹೆಚ್ಚುವರಿ ಸ್ಪೋರ್ಟಿನೆಸ್ ಅನ್ನು ಸೇರಿಸುತ್ತದೆ.

ಹೊಸ ನಿಂಜಾ 400 ಹೈಬ್ರಿಡ್ ಕಾಕ್ಪಿಟ್ ಅನ್ನು ಹೊಂದಿದ್ದು, ಮಧ್ಯದಲ್ಲಿ ದೊಡ್ಡ ಅನಲಾಗ್ ಟ್ಯಾಕೋಮೀಟರ್ ಅನ್ನು ಹೊಂದಿದೆ. ಎಡಭಾಗದಲ್ಲಿ ವಾರ್ನಿಂಗ್ ಲ್ಯಾಂಪ್ ಗಳಿವೆ, ಆದರೆ ಬಲಭಾಗದಲ್ಲಿ ಮಲ್ಟಿ-ಫಂಕ್ಷನ್ LCD ಸ್ಕ್ರೀನ್ ಹೊಂದಿದೆ. ಸುಲಭವಾದ ವೀಕ್ಷಣೆಗಾಗಿ ಗೇರ್ ಸ್ಥಾನ ಫೋಷಿಸನ್ ಸೆಂಟ್ರಲ್ ಅಲ್ಲಿ ಇರಿಸಲಾಗಿದೆ.

ಕವಾಸಕಿ ನಿಂಜಾ 400 ಬೈಕಿನಲ್ಲಿ 399ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್, DOCH, 8 ವಾಲ್ವ್ ಮೋಟಾರ್ ಆಗಿದ್ದು ಅದು 10,000 ಆರ್ಪಿಎಂನಲ್ಲಿ 45 ಬಿಹೆಚ್ಪಿ ಪವರ್ ಮತ್ತು 8,000 ಆರ್ಪಿಎಂನಲ್ಲಿ 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್ಮಿಷನ್ಗೆ ಜೋಡಿಸಲಾಗಿದೆ.

ಸುಗಮ ಪ್ರತಿಕ್ರಿಯೆ ಮತ್ತು ನಿಯಂತ್ರಣದ ಜೊತೆಗೆ ರೆವ್ ಶ್ರೇಣಿಯಾದ್ಯಂತ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಲು ಎಂಜಿನ್ ಅನ್ನು ಟ್ಯೂನ್ ಮಾಡಲಾಗಿದೆ. ಕವಾಸಕಿ ಎಂಜಿನ್ ವಿನ್ಯಾಸವನ್ನು ಸುಧಾರಿಸಿದೆ, ಇದು 250cc ಮೋಟರ್ನಂತೆ ಕಾಂಪ್ಯಾಕ್ಟ್ ಆಗಿದೆ.

ಕವಾಸಕಿ ನಿಂಜಾ 400 ಬೈಕಿನಲ್ಲಿ ಟ್ರೆಲ್ಲಿಸ್ ಫ್ರೇಮ್ ಅನ್ನು ಬಳಸುತ್ತದೆ, ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ ಮತ್ತು ಹಿಂಭಾಗದಲ್ಲಿ ಪ್ರಿ ಲೋಡ್ ಹೊಂದಾಣಿಕೆಯೊಂದಿಗೆ ಗ್ಯಾಸ್ ಚಾರ್ಜ್ಡ್ ಮೊನೊಶಾಕ್ ಸಸ್ಪೆಂಕ್ಷನ್ ಅನ್ನು ಹೊಂದಿದೆ. ಇನ್ನು ಪ್ರಮುಖವಾಗಿ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬ್ರೇಕಿಂಗ್ ಅನ್ನು ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ 310 ಎಂಎಂ ಮತ್ತು 220 ಎಂಎಂ ಪೆಟಲ್ ಡಿಸ್ಕ್ಗಳನ್ನು ಹೊಂದಿದೆ. ಇನ್ನು ಇದರ ಜೊತೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಇನ್ನು ಕವಾಸಕಿ ಕಂಪನಿಯು 2022ರ ವರ್ಸಿಸ್ 650 ಮಾದರಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.2022ರ ಕವಾಸಕಿ ವರ್ಸಿಸ್ 650 ಬೈಕಿನಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಮಾಡಿದೆ. ಕವಾಸಕಿ ವರ್ಸಿಸ್ 650 ಬೈಕ್ ವರ್ಸಿಸ್ 1000 ನಿಂದ ಪ್ರೇರಿತವಾಗಿದೆ. ಇದು ಟ್ವಿನ್ ಎಲ್ಇಡಿ ಹೆಡ್ಲೈಟ್ಗಳು ಮತ್ತು ಹೊಸ ನಾಲ್ಕು-ಮಾರ್ಗ ಹೊಂದಾಣಿಕೆಯ ವಿಂಡ್ಸ್ಕ್ರೀನ್ ಅನ್ನು ಹೊಂದಿದೆ. ಉಳಿದ ಬಾಡಿವರ್ಕ್ ಮೊದಲಿನಂತೆಯೇ ಇದೆ, ಹೊರಹೋಗುವ ವೆರಿಸ್ 650 ನಿಂದ ಪ್ರತ್ಯೇಕಿಸಲು ಸಹಾಯ ಮಾಡಲು ಹೊಸ ಎಂಜಿನ್ ಕೌಲ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಉಳಿಸಿಕೊಂಡಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಕವಾಸಕಿ ನಿಂಜಾ 400 ಬೈಕ್ ಆರಾಮದಾಯಕ ಸವಾರಿ ಅನುಭವ ಮತ್ತು ಅತ್ಯುತ್ತಮ ಕಂಟ್ರೋಲ್ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಈ ಬೈಕ್ 785 ಎಂಎಂ ಸೀಟ್ ಎತ್ತರವನ್ನು ಹೊಂದಿದೆ. ಇದು ಉತ್ತಮ ನಿಯಂತ್ರಣ ಮತ್ತು ನಿರ್ವಹಣೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ವಾಸಕಿ ನಿಂಜಾ 400 ಬೈಕ್ ಆಕರ್ಷಕ ಲುಕ್ ಮತ್ತು ಇದರ ಸೌಂಡ್ ನಿಂದ ನೋಡುಗರ ಗಮನಸೆಳೆಯುತ್ತದೆ.