ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಕೆನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ (ಕೆಇಎಲ್) ಕಂಪನಿಯು ಭಾರತದಲ್ಲಿ ತನ್ನ ಹಳೆಯ ಜನಪ್ರಿಯಯೊಂದಿಗೆ ಮತ್ತೆ ಮಾರುಕಟ್ಟೆಗೆ ಮರಳಿ ಪ್ರವೇಶಿಸುತ್ತಿದ್ದು, ಕಂಪನಿಯು ಈ ಬಾರಿ ಇವಿ ವಾಹನ ಮಾದರಿಗಳೊಂದಿಗೆ ಖರೀದಿಗೆ ಲಭ್ಯವಾಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ದೇಶಿಯ ಮಾರುಕಟ್ಟೆಯಲ್ಲಿನ ಇವಿ ವಾಹನಗಳ ಮಾರಾಟವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಕಳೆದ ತಿಂಗಳು ಪ್ರಮುಖ ಇವಿ ವಾಹನ ಉತ್ಪಾದನಾ ಕಂಪನಿಗಳು ಉತ್ತಮ ಬೆಳವಣಿಗೆ ಸಾಧಿಸಿವೆ. ಹೀಗಾಗಿ ಮಾರುಕಟ್ಟೆಗೆ ವಿವಿಧ ಹೊಸ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಕೆನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು ಸಹ ಸುಧಾರಿತ ಇವಿ ವಾಹನ ಮಾದರಿಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಸಿದ್ದವಾಗುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ದುಬಾರಿ ಇಂಧನಗಳ ಪರಿಣಾಮ ಸಾಂಪ್ರಾದಾಯಿಕ ವಾಹನ ನಿರ್ವಹಣಾ ವೆಚ್ಚವು ಸಹ ಸಾಕಷ್ಟು ಏರಿಕೆಯಾಗುತ್ತಿದ್ದು, ಹೀಗಿರುವಾಗ ಹೊಸ ವಾಹನ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳು ಪ್ರಮುಖ ಆಕರ್ಷಣೆಯಾಗುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಗ್ರಾಹಕರ ಬೇಡಿಕೆಯೆಂತೆ ಈಗಾಗಲೇ ಹಲವು ಹೊಸ ಮಾದರಿಗಳು ಭಾರತಕ್ಕೆ ಪ್ರವೇಶಿಸಿದ್ದು, ಇವಿ ವಾಹನಗಳ ಬಿಡುಗಡೆಗಾಗಿ ಕೆನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು ಪ್ರತ್ಯೇಕ ನಿಯಂತ್ರಣ ಹೊಂದಿರುವ ಇವಿ ಅಂಗಸಂಸ್ಥೆ ತೆರೆಯುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಕೆನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಗಾಗಿ ಶೇ. 51 ಪಾಲಿನೊಂದಿಗೆ ಹೊಸ ಕಂಪನಿಯನ್ನು ರಚಿಸಿದ್ದು, ಹೊಸ ಕಂಪನಿಯ ಅಧಿಕೃತ ಹೆಸರನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಹೊಸ ಇವಿ ವಾಹನ ಮಾದರಿಗಾಗಿ ಭಾರತೀಯ ಇವಿ ಮಾರುಕಟ್ಟೆಯ ಅಭಿವೃದ್ಧಿಯನ್ನು ಮೌಲ್ಯಮಾಪನ ಮಾಡುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಕೆನೆಟಿಕ್ ಕಂಪನಿಯ ಜೊತೆ ಚೀನಾ ಮೂಲದ ಐಮಾ ಟೆಕ್ನಾಲಜಿ ಗ್ರೂಪ್‌ ಕೂಡಾ ಪಾಲುದಾರಿಕೆ ಮಾಡಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಐಮಾ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದ್ದರೂ ಕೆನೆಟಿಕ್ ಕಂಪನಿಯು ಹೊಸ ಇವಿ ಸ್ಕೂಟರ್‌ಗಳನ್ನು ಸಂಪೂರ್ಣವಾಗಿ ಭಾರತದಲ್ಲಿಯೇ ಸಂಪೂರ್ಣವಾಗಿ ಉತ್ಪಾದನೆ ಕೈಗೊಳ್ಳಲಿದ್ದು, ಐಮಾ ಕಂಪನಿಯು ಹೊಸ ಯೋಜನೆಗಾಗಿ ಹೂಡಿಕೆಯ ಜೊತೆ ತಂತ್ರಜ್ಞಾನ ಬೆಳವಣೆಗೆ ಸಹಕಾರ ನೀಡಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಕೆನೆಟಿಕ್ ಕಂಪನಿಯು ಭಾರತದಲ್ಲಿ ಸದ್ಯಕ್ಕೆ ವಾಹನ ಉತ್ಪಾದನೆ ಮಾಡದಿದ್ದರೂ ವಾಹನ ಉತ್ಪಾದನೆ ಮುಖ್ಯವಾಗಿರುವ ಆಕ್ಸಲ್‌ಗಳು, ಗೇರ್‌ಬಾಕ್ಸ್‌, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಪ್ರಮುಖವಾಗಿ ಬೇಕಿರುವ ಫ್ರೇಮ್‌ಗಳಂತಹ ಸ್ವಯಂ ಘಟಕಗಳನ್ನು ತಯಾರಿಸುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಹೀಗಾಗಿ ಸ್ವಯಂ ನಿರ್ಮಾಣದ ಇವಿ ಸ್ಕೂಟರ್ ಉತ್ಪಾದನೆಗಾಗಿ ಕೆನೆಟಿಕ್ ಕಂಪನಿಯು ಎಲ್ಲಾ ರೀತಿಯ ಸೌಲಭ್ಯ ಹೊಂದಿದ್ದು, ಈ ಹಿನ್ನಲೆಯಲ್ಲಿ ಕಂಪನಿಯು ಹೊಸ ಇವಿ ಸ್ಕೂಟರ್‌ಗಳ ಜೊತೆಗೆ ಇತರೆ ಮಧ್ಯಮ ಕ್ರಮಾಂಕದ ಇವಿ ವಾಹನ ಮಾದರಿಗಳ ಬಿಡುಗಡೆಗೆ ಮುಂದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಹೊಸ ಯೋಜನೆ ಕುರಿತಂತೆ ಪ್ರಕ್ರಿಯೆಸಿರುವ ಕೆನೆಟಿಕ್ ಇಂಜಿನಿಯರಿಂಗ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಜಿಂಕ್ಯ ಫಿರೋಡಿಯಾ, ಅವರು ಕಳೆದ 1 ವರ್ಷದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ವಾರ್ಷಿಕವಾಗಿ 3.56 ಲಕ್ಷ ಯುನಿಟ್‌ಗಳನ್ನು ದಾಟಿದ್ದು, ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟವು 2.30 ಲಕ್ಷ ಯೂನಿಟ್‌ಗಳನ್ನು ದಾಟಿದೆ. ಹೀಗಾಗಿ ಭವಿಷ್ಯದಲ್ಲಿ ಇವಿ ವಾಹನಗಳ ಉತ್ಪಾದನೆಯು ಇನ್ನಷ್ಟು ಹೆಚ್ಚಳವಾಗಲಿದ್ದು, ಕೆನೆಟಿಕ್ ಕಂಪನಿ ಕೂಡಾ ಗ್ರಾಹಕರ ಬೇಡಿಕೆಯೆಂತೆ ಹೊಸ ಮಾದರಿಯ ಇವಿ ಉತ್ಪನ್ನ ತೆರೆಯಲು ಉತ್ಸುಕವಾಗಿದೆ ಎಂದಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ. ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯೊಂದಿಗೆ ಮಾರುಕಟ್ಟೆಗೆ ಮರಳಿ ಬರಲಿದೆ ಕೆನೆಟಿಕ್

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

Most Read Articles

Kannada
English summary
Kinetic to enter mainstream two wheeler electric scooter market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X