ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಕೊಮಾಕಿ ಎಲೆಕ್ಟ್ರಿಕ್(Komaki Electric) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಹೊಸ ಇವಿ ದ್ವಿಚಕ್ರ ವಾಹನಗಳನ್ನು ಪರಿಚಯಿಸಿದ್ದು, ಹೊಸ ರೇಂಜರ್ ಕ್ರೂಸರ್ ಇವಿ ಬೈಕ್ ಮಾದರಿಯು ಇವಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸುವ ನೀರಿಕ್ಷೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ರೇಂಜರ್ ಹೆಸರಿನಲ್ಲಿ ಬಿಡುಗಡೆಯಾಗಿರುವ ಕೊಮಾಕಿ ಹೊಸ ಇವಿ ಕ್ರೂಸರ್ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.68 ಲಕ್ಷ ಬೆಲೆ ಹೊಂದಿದ್ದು, ಇವಿ ಬೈಕ್ ಮಾದರಿಗಳಲ್ಲಿಯೇ ಅತಿ ಹೆಚ್ಚು ಪ್ರೀಮಿಯಂ ಫೀಚರ್ಸ್ ಹೊಂದಿರುವ ಹೊಸ ರೇಂಜರ್ ಬೈಕ್ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಲಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಹೊಸ ಬೈಕ್ ಮಾದರಿಯು 4kWh ಲೀಥಿಯಂ ಬ್ಯಾಟರಿ ಜೊತೆಗೆ 5,000 ವ್ಯಾಟ್ ಮೋಟಾರ್‌ನಿಂದ ಚಾಲಿತವಾಗಲಿದ್ದು, ಇದು ವಿವಿಧ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಚಾರ್ಜ್‌ಗೆ 180 ಕಿ.ಮೀ ನಿಂದ 220 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ರೇಂಜರ್ ಕ್ರೂಸರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಕಂಪನಿಯು ಹೆಚ್ಚಿನ ಮಟ್ಟದ ಮೈಲೇಜ್ ಮಾತ್ರವಲ್ಲದೆ ಹಲವಾರು ಸೆಗ್ಮೆಂಟ್ ಫಸ್ಟ್ ಫೀಚರ್ಸ್‌‌ಗಳನ್ನು ಜೋಡಣೆ ಮಾಡಿದ್ದು, ಹೊಸ ಬೈಕಿನಲ್ಲಿ ಕ್ರೂಸ್ ಕಂಟ್ರೋಲ್, ರಿಪೇರಿ ಸ್ವಿಚ್, ರಿವರ್ಸ್ ಸ್ವಿಚ್, ಬ್ಲೂಟೂತ್ ಮತ್ತು ಸುಧಾರಿತ ಬ್ರೇಕಿಂಗ್ ಸಿಸ್ಟಮ್‌ನಂತಹ ಆಧುನಿಕ ವೈಶಿಷ್ಟ್ಯಗಳಿವೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಮೊದಲ ನೋಟದಲ್ಲಿ ಇದು ಬಜಾಜ್ ನಿರ್ಮಾಣದ ಅವೆಂಜರ್ ಕ್ರೂಸರ್ ಬೈಕ್ ಮಾದರಿಯ ವಿನ್ಯಾಸದ ಹೋಲಿಕೆಯಿದ್ದರೂ ಇವಿ ಬೈಕ್ ಮಾದರಿಗಾಗಿ ವಿಭಿನ್ನವಾದ ವಿನ್ಯಾಸದ ಅಂಶಗಳು ಬೈಕಿನ ಪ್ರಮುಖ ಗುಣಲಕ್ಷಣಗಳಾಗಿದ್ದು, ಕ್ರೋಮ್ ಟ್ರಿಮ್‌ನೊಂದಿಗೆ ರೆಟ್ರೊ-ಥೀಮ್ ರೌಂಡ್ ಎಲ್‌ಇಡಿ ಹೆಡ್‌ಲ್ಯಾಂಪ್, ಸಾಮಾನ್ಯ ಬೈಕಿನಲ್ಲಿರುವಂತೆ ಫ್ಯೂಲ್ ಟ್ಯಾಂಕ್ ವಿನ್ಯಾಸ, ವಿಭಜಿತ ಆಸನ, ಬ್ಲಾಕ್ ರೆಸ್ಟ್ ಜೊತೆ ಪ್ಯಾನಿರರ್ಸ್ ಅನ್ನು ಪಡೆದುಕೊಂಡಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಜೊತೆಗೆ ಹೆಡ್‌ಲ್ಯಾಂಪ್‌ಗಾಗಿ ರೆಟ್ರೊ ಮಾದರಿಯ ಸೈಡ್ ಇಂಡಿಕೇಟರ್‌ಗಳು ಸಹ ಬೈಕಿ ಅಂದವನ್ನು ಹೆಚ್ಚಿಸಿದ್ದು, ಬಜಾಜ್ ಕ್ರೂಸರ್‌ಗೆ ಹೋಲುವ ಕೆಲವು ವಿನ್ಯಾಸ ಅಂಶಗಳು ರ್ಯಾಕ್ಡ್ ವೈಡ್ ಹ್ಯಾಂಡಲ್‌ಬಾರ್‌ಗಳು, ಸಿಂಗಲ್-ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಫ್ಯೂಯಲ್ ಟ್ಯಾಂಕ್‌ನಲ್ಲಿ ಹೊಳೆಯುವ ಕ್ರೋಮ್-ಟ್ರೀಟೆಡ್ ಡಿಸ್ಪ್ಲೇ ಗ್ರಾಹಕರನ್ನು ಸೆಳೆಯುತ್ತವೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಇದರೊಂದಿಗೆ ಹೊಸ ಬೈಕಿನಲ್ಲಿ ಬ್ಲ್ಯೂಟೂಥ್ ಸೌಂಡ್ ಸಿಸ್ಟಂ ಸೇರಿದಂತೆ ವಿವಿಧ ಆಕ್ಸೆಸರಿಸ್‌ಗಳೊಂದಿಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಸೈಡ್ ಸ್ಟ್ಯಾಂಡ್ ಸೆನ್ಸಾರ್, ಕ್ರೂಸ್ ಕಂಟ್ರೋಲ್ ಮತ್ತು ಆ್ಯಂಟಿ ಥೆಪ್ಟ್ ಲಾಕ್ ಸಿಸ್ಟಂ ಸೇರಿಸಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಹಾಗೆಯೇ ವೃತ್ತಾಕಾರದ ಟೈಲ್‌ ಲೈಟ್, ಲೆಗ್ ಗಾರ್ಡ್‌ಗಳು, ಫಾಕ್ಸ್ ಎಕ್ಸಾಸ್ಟ್ ಮತ್ತು ಕಪ್ಪು ಮಿಶ್ರಲೋಹದ ಚಕ್ರಗಳನ್ನು ಒಳಗೊಂಡಿದ್ದು, ಪ್ರಸ್ತುತ ಭಾರತೀಯ ರಸ್ತೆಗಳಲ್ಲಿ ಯಾವುದೇ ಎಲೆಕ್ಟ್ರಿಕ್ ಕ್ರೂಸರ್ ಇಲ್ಲದಿರುವುದು ಇದು ಬ್ರ್ಯಾಂಡ್‌ನ ಪ್ರಾಬಲ್ಯ ಹೆಚ್ಚುವ ನೀರಿಕ್ಷೆಗಳಿವೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಇನ್ನು ಎಲೆಕ್ಟ್ರಿಕ್ ವಾಹನ ಮಾರಾಟ ಆರಂಭಿಸಿದ ನಂತರ ಕೊಮಾಕಿ ಕಂಪನಿಯು ಇದುವರೆಗೆ 30 ಸಾವಿರಕ್ಕೂ ಯುನಿಟ್ ಇವಿ ಸ್ಕೂಟರ್ ಮಾರಾಟ ಮಾಡಿದ್ದು, ಹೊಸ ಉತ್ಪನ್ನಗಳೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಹೆಚ್ಚುತ್ತಿರುವ ಇಂಧನಗಳ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಈಗಾಗಲೇ ಫೇಮ್ 2 ಸಬ್ಸಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಯಡಿ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಹಾಗೆಯೇ ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮದೇ ಆದ ಎಲೆಕ್ಟ್ರಿಕ್ ವಾಹನ ನೀತಿ ಅಳವಡಿಸಿಕೊಳ್ಳುತ್ತಿದ್ದು, ಕೇಂದ್ರ ಸರ್ಕಾರದ ಯೋಜನೆಗಳ ಜೊತಗೆ ರಾಜ್ಯ ಸರ್ಕಾರಗಳು ಸಹ ಇವಿ ವಾಹನ ಬಳಕೆ ಹೆಚ್ಚಳಕ್ಕೆ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿದಾರರನ್ನು ಉತ್ತೇಜಿಸಲು ಗರಿಷ್ಠ ಸಬ್ಸಡಿ ಮತ್ತು ನೋಂದಣಿ ಶುಲ್ಕ ಮನ್ನಾದಂತಹ ಯೋಜನೆಗಳನ್ನು ಪ್ರಕಟಿಸಿ ಇವಿ ವಾಹನ ಬಳಕೆಯನ್ನು ಉತ್ತೇಜಿಸಲಾಗುತ್ತಿದ್ದು, ಹೊಸ ಯೋಜನೆಗಳಿಗೆ ಪೂರಕವಾಗಿ ವಿವಿಧ ಸ್ಟಾರ್ಟ್ಅಪ್ ಕಂಪನಿಗಳು ಹೊಸ ಮಾದರಿಯ ಇವಿ ವಾಹನಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ.

ಪ್ರತಿ ಚಾರ್ಜ್‌ಗೆ 220 ಕಿ.ಮೀ ಮೈಲೇಜ್ ನೀಡುವ ಕೊಮಾಕಿ ರೇಂಜರ್ ಇ-ಬೈಕ್ ಬಿಡುಗಡೆ

ದೆಹಲಿ ಮೂಲದ ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ಮತ್ತಷ್ಟು ಹೊಸ ಇವಿ ದ್ವಿಚಕ್ರ ವಾಹನಗಳನ್ನು ಪರಿಚಯಿಸುತ್ತಿದ್ದು, ಕ್ರೂಸರ್ ಇವಿ ಬೈಕ್ ಮಾದರಿಯು ಇವಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Komaki ranger electric bike launched in india details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X