ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕೊಮಾಕಿ ಎಲೆಕ್ಟ್ರಿಕ್ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆ ಆಧರಿಸಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ ಮಾಡಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಹೊಸ ವೆನಿಸ್ ಇಕೋ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 79 ಸಾವಿರ ಬೆಲೆ ಹೊಂದಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ವೆನಿಸ್ ಇಕೋ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯೊಂದಿಗೆ ಕೊಮಾಕಿ ಕಂಪನಿಯು ಒಟ್ಟು 11 ಕಡಿಮೆ-ವೇಗದ ಮತ್ತು 6 ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೊಂದಿದಂತಾಗಿದ್ದು, ಹೊಸ ಸ್ಕೂಟರ್‌ನಲ್ಲಿ ಲಿಥಿಯಂ ಫೆರೋ ಫಾಸ್ಫೇಟ್ (LiPO4) ಬ್ಯಾಟರಿ ಜೋಡಿಸಲಾಗಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿರುವ ಲೀಥಿಯಂ-ಐಯಾನ್ ಬ್ಯಾಟರಿಯಲ್ಲಿ ರಿಯರ್ ಟೈಮ್ ವಿಶ್ಲೇಷಕ ಸೌಲಭ್ಯವನ್ನು ಸಹ ಜೋಡಿಸಲಾಗಿದ್ದು, ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚದೊಂದಿಗೆ ದೀರ್ಘಾವಧಿಯವರೆಗೆ ವಿಶ್ವಾಸಾರ್ಹ ಸವಾರಿಯನ್ನು ಒದಗಿಸುತ್ತದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಗುಣಮಟ್ಟದ, ಉತ್ತಮ ಕಾರ್ಯಕ್ಷಮತೆ, ಸುರಕ್ಷಿತ ಮತ್ತು ದೃಢವಾಗಿ ವಿನ್ಯಾಸಗೊಳಿಸಲಾದ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ಕೊಮಾಕಿ ಕಂಪನಿಯು ಹೊಸ ಸ್ಕೂಟರ್ ಮೂಲಕ ಹೆಚ್ಚಿನ ಮಟ್ಟದ ಬೇಡಿಕೆ ನೀರಿಕ್ಷೆಯಲ್ಲಿದ್ದು, ಲಿಥಿಯಂ ಫೆರೋ ಫಾಸ್ಫೇಟ್ ಕೋಶವು ಬೆಂಕಿ ನಿರೋಧಕ ಮತ್ತು ಸುರಕ್ಷಿತವೆಂದು ಪರಿಗಣಿಸಲಾಗಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಹೆಚ್ಚಿನ ವೇಗದಲ್ಲಿರುವಾಗ ಬೆಂಕಿ ನಿರೋಧಕ ಲಿಥಿಯಂ ಫೆರೋ ಫಾಸ್ಫೇಟ್ (LFP) ಬ್ಯಾಟರಿ ಮತ್ತು ರಿಯಲ್ ಟೈಮ್ ಲೀಥಿಯಂ ಬ್ಯಾಟರಿ ವಿಶ್ಲೇಷಕವು ಸವಾರನಿಗೆ ನಿಖರ ಮಾಹಿತಿ ನೀಡಲಿದ್ದು, ಇದರಿಂದ ಯಾವುದೇ ರೀತಿಯ ಬೆಂಕಿ ಅವಘಡಗಳನ್ನು ತಪ್ಪಿಸಬಹುದಾಗಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ವೆನಿಸ್ ಇಕೋ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಕಂಪನಿಯು ಸವಾರರಿಗೆ ಅನುಕೂಕಕ್ಕಾಗಿ ಮೂರನೇ ತಲೆಮಾರಿನ ಟಿಎಫ್‌ಟಿ ಪರದೆಯನ್ನು ನೀಡಿದ್ದು, ಸ್ಕೂಟರ್‌ನಲ್ಲಿ ಒದಗಿಸಲಾದ ಬ್ಯಾಟರಿಯು 2000ಕ್ಕೂ ಹೆಚ್ಚು ಚಾರ್ಜಿಂಗ್ ಸೈಕಲ್‌ ಹೊಂದಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿರುವ ಟಿಎಫ್‌ಟಿ ಡಿಸ್ಪ್ಲೇ ಸ್ಕೂಟರ್ ಸವಾರರಿಗೆ ಉತ್ತಮ ನ್ಯಾವಿಗೇಷನ್ ಅನುಭವ ನೀಡಲಿದ್ದು, ಹೊಸ ಸ್ಕೂಟರ್ ಇಂಟಿಗ್ರೇಟೆಡ್ ಮ್ಯೂಸಿಕ್ ಪ್ಲೇಯರ್ ಸಿಸ್ಟಂ ಅನ್ನು ಸಹ ಹೊಂದಿದೆ. ಮ್ಯೂಸಿಕ್ ಸಿಸ್ಟಂಗಾಗಿ ಸ್ಕೂಟರ್‌ನಲ್ಲಿ ಸ್ಪೀಕರ್‌ಗಳನ್ನು ಅಳವಡಿಸಲಾಗಿದ್ದು, ಇದು ಹೊಸ ರೈಡಿಂಗ್ ಅನುಭವ ನೀಡುತ್ತದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಕೊಮಾಕಿ ಕಂಪನಿಯು ಈ ಸ್ಕೂಟರ್‌ನಲ್ಲಿ ಸುಧಾರಿತ ಬ್ಯಾಟರಿ ನಿರ್ವಹಣಾ ವ್ಯವಸ್ಥೆಯನ್ನು ಸಹ ಬಳಸುತ್ತಿದ್ದು, ಇದು ಬ್ಯಾಟರಿ ಪ್ಯಾಕ್ ಒಳಗೆ ಉತ್ಪತ್ತಿಯಾಗುವ ಸಂಚಿತ ಶಾಖವನ್ನು ಕಡಿಮೆ ಮಾಡುತ್ತದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಇದಕ್ಕಾಗಿ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಅವಘಡಗಳಿಂದ ಸುರಕ್ಷಿತವಾಗಿಸಲು ಎಲ್ಎಫ್‌ಪಿ ಬ್ಯಾಟರಿಗಳ ಜೊತೆಗೆ ವಿವಿಧ ಸಂವೇದಕಗಳನ್ನು ಬಳಸುತ್ತಿದ್ದು, ಬಳಕೆಯ ಅವಧಿಯನ್ನು ವಿಸ್ತರಿಸಿರುವುದು ಉತ್ತಮವಾಗಿದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯಗಳ ಹೊರತಾಗಿಯೂ ಕೊಮಾಕಿ ವೆನಿಸ್ ಇಕೋ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ನಯವಾದ ವಿನ್ಯಾಸ ಹೊಂದಿದ್ದು, ಇದು ಗಾರ್ನೆಟ್ ರೆಡ್, ಸ್ಯಾಕ್ರಮೆಂಟೊ ಗ್ರೀನ್, ಜೆಟ್ ಬ್ಲಾಕ್, ಮೆಟಾಲಿಕ್ ಬ್ಲೂ, ಬ್ರೈಟ್ ಆರೆಂಜ್ ಮತ್ತು ಸಿಲ್ವರ್ ಕ್ರೋಮ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ.

ಫೈರ್ ಪ್ರೂಫ್ ಬ್ಯಾಟರಿ ಹೊಂದಿರುವ ಕೊಮಾಕಿ ಹೊಸ ವೆನಿಸ್ ಇಕೋ ಹೈ-ಸ್ಪೀಡ್ ಇವಿ ಸ್ಕೂಟರ್ ಬಿಡುಗಡೆ

ಆಧುನಿಕ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿರುವ ಕೊಮಾಕಿ ಹೊಸ ವೆನಿಸ್ ಮಾದರಿಯು ತನ್ನ ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಖಂಡಿತವಾಗಿಯೂ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ಸ್ಕೂಟರ್ ಮೂಲಕ ಕೊಮಾಕಿ ಕಂಪನಿಯು ಮುಂಬರುವ ದೀಪಾವಳಿ ವೇಳೆ ಹೆಚ್ಚಿನ ಮಟ್ಟದ ಬೇಡಿಕೆಯ ನೀರಿಕ್ಷೆಯಲ್ಲಿದೆ.

Most Read Articles

Kannada
Read more on ಕೊಮಾಕಿ komaki
English summary
Komaki venice eco high speed scooter launched at rs 79 000 details
Story first published: Monday, October 3, 2022, 21:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X