2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕೆಟಿಎಂ ಇಂಡಿಯಾ ದೇಶೀಯ ಮಾರುಕಟ್ಟೆಯಲ್ಲಿ 2021ರ ಡಿಸೆಂಬರ್ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಕೆಟಿಎಂ ಕಂಪನಿಯು ಕಳೆದ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ 3,591 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ 5,595 ಯುನಿಟ್‌ಗಳಿಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.35.82 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ. ಕೆಟಿಎಂ 200 (ಡ್ಯೂಕ್ + ಆರ್‌ಸಿ) ಮತ್ತು ಕೆಟಿಎಂ 125 (ಡ್ಯೂಕ್ + ಆರ್‌ಸಿ) 1,535 ಯುನಿಟ್‌ಗಳೊಂದಿಗೆ ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಕೆಟಿಎಂ 200 ಶೇಕಡಾ 42.75 ರಷ್ಟು ಮಾರಾಟದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಇದು ಕೇವಲ ಕೆಟಿಎಂ 250 (ಡ್ಯೂಕ್ + ಅಡ್ವೆಂಚರ್) ಮಾತ್ರ 909 ಯುನಿಟ್‌ಗಳ ಮಾರಾಟವನ್ನು ಕಂಡಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಇನ್ನು ಕಟಿಎಂ ಕಳೆದ ತಿಂಗಳು 7,614 ಯೂನಿಟ್‌ಗಳನ್ನು ರಫ್ತು ಮಾಡಿದೆ. ಆದರೆ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಕೆಟಿಎಂ ಇಂಡಿಯಾ ಕಂಪನಿಯು 8,011 ಯೂನಿಟ್‌ಗಳನ್ನ ರಫ್ತು ಮಾಡಿದೆ. ಇದನ್ನು ಕಳೆದ ತಿಂಗಳ ರಫ್ತಿಗೆ ಹೋಲಿಸಿದರೆ ಶೇ.4.96 ರಷ್ಟು ಕುಸಿತವನ್ನು ಕಂಡಿದೆ. ಕಟಿಎಂ ಬೈಕ್ ಗಳ ರಫ್ತಿನಲ್ಲಿ ಕೆಟಿಎಂ 90 ಮತ್ತು 125 ಹೆಚ್ಚಿದ ಬೇಡಿಕೆಯನ್ನು ಕಂಡಿತು.

ಕೆಟಿಎಂ ಕಂಪನಿಯು 2021ರ ಡಿಸೆಂಬರ್ ತಿಂಗಳಿನಲ್ಲಿ 11,205 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇನ್ನು 2020ರ ಡಿಸೆಂಬರ್ ತಿಂಗಳಿನಲ್ಲಿ ಕೆಟಿಎಂ ಕಂಪನಿಯು 13,606 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.17.65 ರಷ್ಟು ಬೆಳವಣಿಗೆಯನ್ನು ಹೊಂದಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕೆಟಿಎಂ 390 ಅಡ್ವೆಂಚರ್ ಮಾದರಿಯು ಜನಪ್ರಿಯ ಅಡ್ವೆಂಚರ್ ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡ್ವೆಂಚರ್ ಟೂರರ್ ಬೈಕ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಅದರಂತೆ ಕೆಟಿಎಂ 390 ಅಡ್ವೆಂಚರ್ ಬೈಕ್ ಕೂಡ ಉತ್ತಮವಾಗಿ ಮಾರಾಟವಾಗುತ್ತಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಈ ಬೈಕ್ ನಗರದಲ್ಲಿ ದೈನಂದಿನ ಬಳಕೆಗೂ ಕೂಡ ಉತ್ತಮವಾಗಿದೆ. ಕೆಟಿಎಂ 390 ಅಡ್ವೆಂಚರ್‌ನ 1000 ಯುನಿಟ್‌ಗಳನ್ನು ಮಾರಾಟ ಮಾಡಿದ ಭಾರತದ ಮೊದಲ ನಗರ ಎಂಬ ಹೆಗ್ಗಳಿಕೆಗೆ ನಮ್ಮ ಬೆಂಗಳೂರು ಪಾತ್ರವಾಗಿದೆ. ಇದು ಸಂಸ್ಥೆಯ ಬಹುದೊಡ್ಡ ಸಾಧನೆಯಾಗಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕೆಟಿಎಂ 390 ಅಡ್ವೆಂಚರ್ ಬೈಕ್ ಬಗ್ಗೆ ಹೇಳುವುದಾದರೆ, ಇದು ಆಫ್ ರೋಡ್ ಟೂರರ್ ಆಗಿದ್ದು, ಈ ಬೈಕ್ 390 ಡ್ಯೂಕ್ ಸ್ಟ್ರೀಟ್ ಫೈಟರ್ ಅನ್ನು ಆಧರಿಸಿದೆ. ಈ ಬೈಕ್ ಕೆಟಿಎಂ 790 ಅಡ್ವೆಂಚರ್ ಮಾದರಿಯಿಂದ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದಿದೆ. ಈ ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ 200 ಗ್ರೌಂಡ್ ಕ್ಲಿಯರೆನ್ಸ್ ಎಂಎಂ ಮತ್ತು 855 ಸೀಟ್ ಎತ್ತರವನ್ನು ಹೊಂದಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಇದರಲ್ಲಿ ಡ್ಯೂಕ್ 390 ಬೈಕಿನಲ್ಲಿರುವಂತಹ 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 43 ಬಿಹೆಚ್‍ಪಿ ಪವರ್ ಹಾಗೂ 37 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಕೆಟಿಎಂ 390 ಅಡ್ವೆಂಚರ್ ಬೈಕಿನಲ್ಲಿ ಎಡಿವಿ ಸ್ಪೋರ್ಟ್ಸ್ ಸ್ಪ್ಲಿಟ್ ಎಲ್‍ಇಡಿ ಹೆಡ್‍‍ಲ್ಯಾಂಪ್‍, ಎಲ್‍ಇಡಿ ಟರ್ನ್‍ ಇಂಡಿಕೇಟರ್‍‍‍ಗಳು ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರುವ ಬಣ್ಣದಿಂದ ಕೂಡಿದ ಆಕರ್ಷಕ ಟಿಎಫ್‍‍ಟಿ ಡಿಸ್‍‍ಪ್ಲೇ ಅನ್ನು ಒಳಗೊಂಡಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಆಸ್ಟ್ರೀಯಾದ ಬೈಕ್ ತಯಾರಕ ಕಂಪನಿಯಾಗಿರುವ ಕೆಟಿಎಂ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ಬೈಕ್ ಮಾದರಿಗಳ 2022ರ ಆವೃತ್ತಿಗಳ ನವೀಕರಣಕ್ಕೆ ಚಾಲನೆ ನೀಡಿದೆ. ಕಂಪನಿಯು ಮೊದಲ ಹಂತದಲ್ಲಿ ತನ್ನ ಜನಪ್ರಿಯ 250 ಅಡ್ವೆಂಚರ್‌ ಆವೃತ್ತಿಯ ನವೀಕೃತ ಮಾದರಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಈ ಹೊಸ ಬೈಕ್ ಮಾದರಿಯು ಕಳೆದ ವರ್ಷದ ಮಾದರಿಯಲ್ಲಿ ಎಂಜಿನ್ ಆಯ್ಕೆಯನ್ನೇ ಹೊಂದಿದ್ದರೂ ಹೊಸ ಮಾದರಿಗೆ ಕೆಟಿಎಂ ಕಂಪನಿಯು ಆಕರ್ಷಕ ಗ್ರಾಫಿಕ್ಸ್ ಮತ್ತು ಎರಡು ಹೊಸ ಬಣ್ಣಗಳ ಆಯ್ಕೆ ನೀಡಿದೆ. ಹೊಸ 250 ಅಡ್ವೆಂಚರ್ ಬೈಕ್ ಖರೀದಿದಾಗಿ ವಿಶೇಷ ಹಣಕಾಸು ಸೌಲಭ್ಯವನ್ನು ಸಹ ಒದಗಿಸಲಾಗುತ್ತಿದ್ದು, ಗರಿಷ್ಠ ಸಾಲ ಸೌಲಭ್ಯದೊಂದಿಗೆ ಹೊಸ ಬೈಕ್ ಖರೀದಿಗಾಗಿ ಪ್ರತಿ ತಿಂಗಳು ರೂ. 6,300 ಇಎಂಐ ಆಯ್ಕೆ ನೀಡಿದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಈ ಹೊಸ ಬೈಕ್ ಗ್ರಾಹಕರ ಆಕರ್ಷಣೆಗಾಗಿ ಮೇಲೆ ಹೇಳಿದಂತೆ ಸ್ಪೋರ್ಟಿ ಗ್ರಾಫಿಕ್ಸ್‌ನೊಂದಿಗೆ ಎರಡು ಹೊಸ ಬಣ್ಣಗಳ ಆಯ್ಕೆ ನೀಡಲಾಗಿದ್ದು, ಗ್ರಾಹಕರು ಎಲೆಕ್ಟ್ರಾನಿಕ್ ಆರೇಂಜ್ ಮತ್ತು ಫ್ಯಾಕ್ಟರಿ ರೇಸಿಂಗ್ ಬ್ಲ್ಯೂ ಬಣ್ಣದ ಆಯ್ಕೆ ನೀಡಿದೆ. 2022ರ ಮಾದರಿಯಾಗಿ ಗುರುತಿಸಲು ಬಣ್ಣದ ಆಯ್ಕೆಯಲ್ಲಿ ಹೊಸ ಗ್ರಾಫಿಕ್ಸ್ ವಿನ್ಯಾಸವನ್ನು ನೀಡಲಾಗಿದ್ದು, ಕಂಪನಿಯ ಎಂಟ್ರಿ ಲೆವಲ್ ಅಡ್ವೆಂಚರ್ ಮಾದರಿಯಾಗಿರುವ 250 ಎವಿಡಿ ಮಾದರಿಯಲ್ಲಿ 248 ಸಿಸಿ ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಎಂಜಿನ್ ನೀಡಲಾಗಿದೆ. ಹೊಸ ಎಮಿಷನ್‌ಗೆ ಅನುಗುಣವಾಗಿ ಅಭಿವೃದ್ದಿಗೊಂಡಿರುವ 248 ಸಿಸಿ ಎಂಜಿನ್ ಮಾದರಿಯು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಆರು ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆ ಹೊಂದಿದ್ದು, ಇದು 29.6 ಬಿಎಚ್‌ಪಿ ಮತ್ತು 24 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

2021ರ ಡಿಸೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕುಸಿತ ಕಂಡ ಕೆಟಿಎಂ ಇಂಡಿಯಾ

ಕೆಟಿಎಂ ಕಂಪನಿಯು 250 ಅಡ್ವೆಂಚರ್ ಮೋಟಾರ್‌ಸೈಕಲ್ ಮಾದರಿಯನ್ನು ಸ್ಟೀಲ್-ಟ್ರೆಲ್ಲಿಸ್ ಫ್ರೇಮ್ ಮೂಲಕ ಅಭಿವೃದ್ದಿಪಡಿಸಿದ್ದು, ಇದು ಸಬ್‌ಫ್ರೇಮ್ ಮತ್ತು ಮಿಶ್ರಲೋಹದ ಚಕ್ರಗಳನ್ನು 390 ಅಡ್ವೆಂಚರ್ ಮಾದರಿಯಿಂದ ಎರವಲು ಪಡೆದಿದ್ದು, ಕಂಪನಿಯ ಪ್ರಕಾರ 250 ಎವಿಡಿ ಮತ್ತು 390 ಎವಿಡಿಯ ಫ್ರೇಮ್‌ಗಳು 450 ಡಕಾರ್ ರ‍್ಯಾಲಿ ಬೈಕ್‌ಗಳಿಂದ ಸ್ಫೂರ್ತಿ ಪಡೆದುಕೊಂಡಿವೆ. ಇನ್ನು ನವೀಕರಿಸಿದ ಹೊಸ ಮಾದರಿಗಳೊಂದಿಗೆ ಕೆಟಿಎಂ ಮಾರಾಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.

Most Read Articles

Kannada
Read more on ಕೆಟಿಎಂ ktm
English summary
Ktm india sales 2021 december 11205 units find here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X