ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮ ಸ್ಕೂಟರ್‌ಗಳು...

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗಿನ ವರ್ಷಗಳಲ್ಲಿ ಸ್ಕೂಟರ್‌ಗಳ ಬೇಡಿಕೆಯು ಹೆಚ್ಚಾಗುತ್ತಿದೆ. ಸ್ಕೂಟರ್‌ಗಳ ಪ್ರಾಯೋಗಿಕತೆ ಮತ್ತು ಕಾರ್ಯಸಾಧ್ಯತೆಯಿಂದಾಗಿ, ಅವು ದೈನಂದಿನ ಪ್ರಯಾಣಿಕರ ಜೀವನದ ಅಗತ್ಯ ಭಾಗವಾಗಿದೆ. ದ್ವಿಚಕ್ರ ವಾಹನದ ಮೈಲೇಜ್ ಪರಿಗಣಿಸಬೇಕಾದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅಲ್ಲದೇ ಇಂಧನ ಬೆಲೆಯು ಹೆಚ್ಚಾಗಿರುವುದರಿಂದ ಮೈಲೇಜ್ ಒಂದು ಪ್ರಮುಖ ಅಂಶವಾಗಿದೆ,

ಗ್ರಾಹಕರು ವಾಹನ ಖರೀದಿಸುವಾಗ ಗಣನೆಗೆ ತೆಗೆದುಕೊಳ್ಳುವ ಪ್ರಮುಖ ಅಂಶವೆಂದರೆ ಅದರ ಮೈಲೇಜ್, ಹಾಗಾಗಿಯೇ ಪ್ರತಿ ವರ್ಷ ಅತಿ ಹೆಚ್ಚು ಮೈಲೇಜ್ ನೀಡುವ ವಾಹನಗಳು ಹೆಚ್ಚು ಮಾರಾಟವಾಗುತ್ತಿವೆ. ಆದರೆ ಕೆಲವರಿಗೆ ಯಾವುದು ಉತ್ತಮ ಮೈಲೇಜ್ ನೀಡುವ ಸ್ಕೂಟರ್ ಎಂಬ ವಿಷಯದಲ್ಲಿ ಗೊಂದಲವಿರುತ್ತದೆ. ನೀವು ಉತ್ತಮ ಇಂಧನ ದಕ್ಷತೆ ನೀಡುವ ಸ್ಕೂಟರ್ ಅನ್ನು ಖರೀದಿಸಲು ಯೋಜಿಸಿದರೆ ನಿಮಗೆ ಭಾರತದಲ್ಲಿನ ಅತ್ಯುತ್ತಮ ಮೈಲೇಜ್ ಸ್ಕೂಟರ್‌ಗಳ ಬಗ್ಗೆ ಹೆಚ್ಚಿನ ಇಲ್ಲಿದೆ.

ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಅತ್ಯುತ್ತಮ ಸ್ಕೂಟರ್‌ಗಳು...

ಯಮಹಾ ಫ್ಯಾಸಿನೊ ಹೈಬ್ರಿಡ್ 125
ಯಮಹಾ ಫ್ಯಾಸಿನೊ ಸ್ಕೂಟರ್ ಅದರ ಮೈಲ್ಡ್ 125cc ಎಂಜಿನ್ ನೊಂದಿಗೆ ಬರುತ್ತದೆ. ಈ ಎಂಜಿನ್ 8.2 ಬಿಹೆಚ್‍ಪಿ ಪವರ್ ಮತ್ತು 10.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಒಂದು ಸ್ಮಾರ್ಟ್ ಮೋಟಾರ್ ಜನರೇಟರ್‌ಗೆ ಸಂಯೋಜಿತವಾಗಿದೆ, ಇದು ಟಾರ್ಕ್ ಅಸಿಸ್ಟ್ ಸಿಸ್ಟಮ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ನಿಲುಗಡೆಯಿಂದ ಅಥವಾ ಟ್ರಾಫಿಕ್-ರಿಡಲ್ ರಸ್ತೆಗಳಲ್ಲಿ ಸುಗಮ ವೇಗವರ್ಧನೆಗೆ ಸಹಾಯ ಮಾಡುತ್ತದೆ. ಈ ಸ್ಕೂಟರ್ 68.75 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

ಯಮಹಾ RayZR 125
ಯಮಹಾ ಫ್ಯಾಸಿನೊದಂತೆಯೇ ಅದೇ 125cc ಮೈಲ್ಡ್-ಹೈಬ್ರಿಡ್ ಸ್ಕೂಟರ್‌ನಿಂದ ನಡೆಸಲ್ಪಡುತ್ತಿದೆ. ಸ್ಪೋರ್ಟಿಯರ್ RayZR ಸರಿಸುಮಾರು 66 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಯಮಹಾ RayZR 125 ಸ್ಕೂಟರ್ ಡ್ರಮ್, ಡಿಸ್ಕ್, ಡಿಎಲ್ಎಕ್ಸ್, ಮೋಟೋಜಿಪಿ ಮತ್ತು ಸ್ಟ್ರೀಟ್ ರ್ಯಾಲಿ ಎಂಬ ಐದು ರೂಪಾಂತರಗಳಲ್ಲಿ ಲಭ್ಯವಿದೆ. ಗ್ರಾಹಕರು ತಮಗೆ ಬೇಕಾದ ರೂಪಾಂತರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯಮಹಾ RayZR 125 ಸ್ಕೂಟರ್ ಆರಂಭಿಕ ಬೆಲೆಯು ರೂ.80,730 ಆಗಿದೆ.

ಸುಜುಕಿ ಆಕ್ಸೆಸ್
ಈ ಸುಜುಕಿಯ ಆಕ್ಸೆಸ್ 125 ಸ್ಕೂಟರ್ ನಲ್ಲಿ 124cc, ಇಂಧನ-ಇಂಜೆಕ್ಟೆಡ್ ಎಂಜಿನ್ ಅನ್ನು ಹೊಂದಿದೆ. ಇದು 64 ಕಿಮೀ ಮೈಲೇಜ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದು 5-ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ. ಫುಲ್ ಟ್ಯಾಂಕ್ ಮಾಡಿದರೆ ಸ್ಕೂಟರ್ 300 ಕಿಲೋಮೀಟರ್ ಗಳಿಗಿಂತ ಹೆಚ್ಚು ದೂರ ಸಂಚರಿಸಬಹುದು. ಪ್ರಸ್ತುತ, ಸುಜುಕಿ ಆಕ್ಸೆಸ್ 125 ಅನ್ನು ಮೂರು ರೂಪಾಂತರಗಳಲ್ಲಿ ನೀಡುತ್ತದೆ. ಇದು ಸ್ಟ್ಯಾಂಡರ್ಡ್, ಸ್ಪೆಷಲ್ ಎಡಿಷನ್ ಮತ್ತು ರೈಡ್ ಕನೆಕ್ಟೆಡ್ ಎಡಿಷನ್ ಆಗಿದೆ,

ಟಿವಿಎಸ್ ಜೂಪಿಟರ್
ಈ ಟಿವಿಎಸ್ ಜೂಪಿಟರ್ ಸ್ಕೂಟರ್ 110cc ಎಂಜಿನ್ ಅನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಇಂಟೆಲಿಗೋ ಐಡಲ್ ಸ್ಟಾರ್ಟ್/ಸ್ಟಾಪ್ ಫಂಕ್ಷನ್‌ ನಂತರಹ ಅತ್ಯಾಧುನಿಕ ತಂತ್ರಜ್ಙಾನವನ್ನು ಹೊಂದಿದೆ. ಈ ಸ್ಕೂಟರ್ ನಲ್ಲಿ ಐಡಲಿಂಗ್ ಸಮಯದಲ್ಲಿ ಅನಗತ್ಯ ಇಂಧನ ಬಳಕೆ ತಡೆಯುತ್ತದೆ, ಹೀಗಾಗಿ, ಈ ಟಿವಿಎಸ್ ಜೂಪಿಟರ್ ಸ್ಕೂಟರ್ ಪ್ರತಿ ಲೀಟರ್‌ಗೆ 62 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಟಿವಿಎಸ್ ಜೂಪಿಟರ್ ಭಾರತೀಯ ಮಾರುಕಟ್ತೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ.

ಹೋಂಡಾ ಆಕ್ಟಿವಾ 6ಜಿ
ಭಾರತದಲ್ಲಿ ನೂರಾರು ಸಾವಿರ ಹೋಂಡಾ ಆಕ್ಟಿವಾಗಳಿವೆ, ಇದು ಹಲವು ಕುಟುಂಬಗಳಿಗೆ ಅತ್ಯಂತ ವಿಶ್ವಾಸಾರ್ಹ ದ್ವಿಚಕ್ರ ವಾಹನವಾಗಿದೆ. ದೇಶದಲ್ಲಿ ಮಾರಾಟವಾಗುವ ಪ್ರತಿ ಎರಡನೇ ಸ್ಕೂಟರ್ ಮತ್ತು ಪ್ರತಿ ಮೂರನೇ ದ್ವಿಚಕ್ರ ವಾಹನವು ಆಕ್ಟಿವಾ ಆಗಿರುತ್ತದೆ ಮತ್ತು ಮಾರಾಟದ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಈ ಹೋಂಡಾ ಆಕ್ಟಿವಾ 6ಜಿ ಸ್ಕೂಟರಿನಲ್ಲಿ 109 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7.79 ಬಿಹೆಚ್‍ಪಿ ಪವರ್ ಮತ್ತು 8.79 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಕೂಟರ್ ಕಂಪನಿಯ ಪಿಜಿಎಂ-ಫೈ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದರಿಂದಾಗಿ ಈ ಬಿಎಸ್-6 ಹೋಂಡಾ ಆಕ್ಟಿವಾ 6ಜಿ ಸ್ಕೂಟರಿಗೆ ಉತ್ತಮ ಕಾರ್ಯಕ್ಷಮತೆ ಮತ್ತು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಕ್ಟಿವಾ 6ಜಿ ಸ್ಕೂಟರನ್ನು ಹೊಸ ಫೀಚರ್ ಗಳು ಮತ್ತು ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಉದ್ದವಾದ ವೀಲ್‌ಬೇಸ್‌ ಅನ್ನು ಒಳಗೊಂಡಿದೆ. ಈ ಹೋಂಡಾ ಆಕ್ಟಿವಾ 6ಜಿ ಡಿಲಕ್ಸ್ ರೂಪಾಂತರದಲ್ಲಿ ಎಸಿಜಿ ಸ್ಟಾರ್ಟರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ.

Most Read Articles

Kannada
English summary
List of best fuel efficient scooters in indian market details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X