ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಪ್ರೀಮಿಯಂ ಸ್ಕೂಟರ್ ತಯಾರಕ ಕಂಪನಿಯಾದಗಿರುವ ಎಲ್ಎಂಎಲ್ ಹೊಸ ತಲೆಮಾರಿನ ಗ್ರಾಹಕರಿಗಾಗಿ ಇವಿ ವಾಹನಗಳೊಂದಿಗೆ ಮಾರುಕಟ್ಟೆಗೆ ಪುನರಾಗಮನವಾಗಿದ್ದು, ಕಂಪನಿಯು ಒಟ್ಟು ಮೂರು ಹೊಸ ಇವಿ ಮಾದರಿಗಳನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಬೇಡಿಕೆ ಆಧರಿಸಿ ಕಂಪನಿಯು ಎಲ್ಎಂಎಲ್ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಎಲ್ಎಂಎಲ್ ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಮತ್ತು ಎಲ್ಎಂಎಲ್ ಓರಿಯನ್ ಎಲೆಕ್ಟ್ರಿಕ್ ಸೈಕಲ್ ಮಾದರಿಗಳನ್ನು ಪ್ರದರ್ಶನಗೊಳಿಸಿದೆ.

ಆಧುನಿಕ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಮತ್ತು ಓರಿಯನ್ ಎಲೆಕ್ಟ್ರಿಕ್ ಸೈಕಲ್ ಮಾದರಿಗಳು ಆಕರ್ಷಕ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಹೊಸದಾಗಿ ಅನಾವರಣಗೊಳಿಸಲಾದ ಎಲೆಕ್ಟ್ರಿಕ್ ವಾಹನಗಳಲ್ಲಿ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಭಾರತದಲ್ಲಿ ಬಿಡುಗಡೆಯಾಗಲಿದ್ದರೆ ಓರಿಯನ್ ಎಲೆಕ್ಟ್ರಿಕ್ ಸೈಕಲ್ ಮಾದರಿಯು ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಗಳಿಗೆ ಲಗ್ಗೆಯಿಡಲಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಹೊಸ ಇವಿ ವಾಹನಗಳನ್ನು ಕಂಪನಿಯು ಸಂಪೂರ್ಣವಾಗಿ ಭಾರತದಲ್ಲಿಯೇ ಸ್ಥಳೀಯ ಬಿಡಿಭಾಗಗಳೊಂದಿಗೆ ಉತ್ಪಾದನೆ ಕೈಗೊಳ್ಳಲಿದ್ದು, ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಮಾದರಿಯು 2023ರ ಮಧ್ಯಂತರದಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ.

ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್, ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಅನಾವರಣದ ಹೊರತಾಗಿ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಹೊಸ ಮಾದರಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಹೊಸ ಸ್ಟಾರ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಕಂಪನಿಯು ತನ್ನ ಹಳೆಯ ಸ್ಟಾರ್ ಪೆಟ್ರೋಲ್ ಮಾದರಿಯ ಹೆಸರನ್ನು ಇದೀಗ ಇವಿ ಸ್ಕೂಟರ್ ಮಾದರಿಗಾಗಿ ಬಳಕೆ ಮಾಡುತ್ತಿದ್ದು, ಮ್ಯಾಕ್ಸಿ ವೈಶಿಷ್ಟ್ಯತೆ ಹೊಂದಿರುವ ಹೊಸ ಮಾದರಿಯು ಸ್ಪೋರ್ಟಿ ಎಡ್ಜ್ ಜೊತೆಗೆ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಹೊಂದಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಇವಿ ಸ್ಕೂಟರ್‌ನಲ್ಲಿ ಕಂಪನಿಯು ಅಪ್ ಫ್ರಂಟ್, ಸ್ಪೋರ್ಟಿಯಾಗಿರುವ ಡಿಸ್‌ಪ್ಲೇ ಪ್ಯಾನೆಲ್, ಆಸನ, ಹೆಚ್ಚಿನ ಸ್ಥಳಾವಕಾಶ ಹೊಂದಿರುವ ಫ್ಲೋರ್‌ಬೋರ್ಡ್ ಮತ್ತು ರೆಡ್ ಆಕ್ಸೆಂಟ್ ಹೊಂದಿರುವ ಗಾರ್ಬ್ ರೈಲ್ ಸೌಲಭ್ಯವನ್ನು ನೀಡಲಾಗಿದ್ದು, ಬ್ಯಾಟರಿ ಪ್ಯಾಕ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಕುರಿತಾಗಿ ಯಾವುದೇ ಮಾಹಿತಿಗಳಿಲ್ಲ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಒಟ್ಟಾರೆಯಾಗಿ ಈ ಸ್ಕೂಟರ್ ಅನ್ನು ಸ್ಪೋರ್ಟಿ ಶೈಲಿಯಲ್ಲಿ ಪರಿಚಯಿಸಲಾಗುತ್ತಿರುವ ಕಂಪನಿಯು ಹೊಸ ಸ್ಕೂಟರ್‌ ಮೂಲಕ ಯುವ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದು, 2023ರ ಜೂನ್ ವೇಳೆಗೆ ಬಿಡುಗಡೆ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಸ್ಟಾರ್ ಇವಿ ಸ್ಕೂಟರ್ ನಂತರ ಮೂನ್‌ಶಾಟ್ ಎಲೆಕ್ಟ್ರಿಕ್ ಬೈಕ್ ಕೂಡಾ ಸಾಕಷ್ಟು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಡರ್ಟ್ ಬೈಕ್ ಶೈಲಿಯನ್ನು ಅಧರಿಸಿ ನಿರ್ಮಾಣಗೊಳ್ಳುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಸಾಂಪ್ರದಾಯಿಕ ಡರ್ಟ್ ಬೈಕ್‌ನಂತೆ ಕಾಣಲು ಕಂಪನಿಯು ಬೇರ್ ಫ್ರೇಮ್ ವಿನ್ಯಾಸದೊಂದಿಗೆ ಉದ್ದವಾದ ಸ್ಯಾಡಲ್ ಕೊಕ್ಕಿನಂತಹ ಮುಂಭಾಗದ ತುದಿ, ಮ್ ಮತ್ತು ಹೈ ಸೆಟ್ ಫಾಕ್ಸ್ ಟ್ಯಾಂಕ್ ಜೋಡಿಸಿದ್ದು, ಅಪ್‌ಸೈಡ್ ಡೌನ್ ಫ್ರಂಟ್ ಸಸ್ಷೆಷನ್‌ನೊಂದಿಗೆ ಟ್ರೆಲ್ಲಿಸ್ ಸೆಟಪ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಷೆಷನ್ ಪಡೆದುಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಹಾಗೆಯೇ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿ ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್‌ಗಳು, ಮಿಶ್ರಲೋಹದ ಚಕ್ರಗಳು, ಪೋರ್ಟಬಲ್ ಬ್ಯಾಟರಿ ಪ್ಯಾಕ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳು ಮತ್ತು ಫ್ಲೈ-ಬೈ-ವೈರ್ ಥ್ರೊಟಲ್ ಸೌಲಭ್ಯಗಳಿದ್ದು, ಗಂಟೆಗೆ 70 ಕಿಮೀ ವೇಗದಲ್ಲಿ ಚಲಿಸುತ್ತದೆ.

ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ಸೈಕಲ್ ಕಾನ್ಸೆಪ್ಟ್ ಮಾದರಿಗಳನ್ನು ಅನಾವರಣಗೊಳಿಸಿದ ಎಲ್ಎಂಎಲ್

ಇದರಲ್ಲಿ ಪೆಡಲ್ ಅಸಿಸ್ಟ್ ಸಿಸ್ಟಮ್‌ ಇರುವುದರಿಂದ ಬ್ಯಾಟರಿ ಮುಗಿದ ನಂತರ ಪೆಡಲ್ ಮಾಡಬಹುದಾಗಿದ್ದು, ಹಲವಾರು ಹೊಸ ಫೀಚರ್ಸ್‌ಗಳು ಉತ್ಪಾದನಾ ಮಾದರಿಯಲ್ಲಿ ಖಚಿತಗೊಳ್ಳಲಿವೆ.

ಇನ್ನು ಎಲ್ಎಂಎಲ್ ಕಂಪನಿಯು ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಿಗಾಗಿ ಓರಿಯನ್ ಸೈಕಲ್ ಪರಿಚಯಿಸುತ್ತಿದ್ದು, ಇದು ಹೈಡ್ರೋಫಾರ್ಮ್ಡ್ 606 ಮಿಶ್ರಲೋಹದ ಚೌಕಟ್ಟನ್ನು ಬಳಸುತ್ತದೆ. ಇದರಲ್ಲಿ IP67 ಮಾನದಂಡ ಹೊಂದಿರುವ ಬ್ಯಾಟರಿ ಮತ್ತು ಮಾರ್ಗ ಸೂಚಕ ಸಂವೇದಕದೊಂದಿಗೆ ಜಿಪಿಎಸ್ ಸೌಲಭ್ಯವನ್ನು ಅಳವಡಿಸಲಾಗಿದೆ.

Most Read Articles

Kannada
English summary
Lml star scooter moonshot bike and orion cycle unveiled
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X