ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಭಾರತದಲ್ಲಿ ಇವಿ ವಾಹನ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ಇವಿ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆ ಪ್ರವೇಶಿಸಿವೆ. ಭವಿಷ್ಯದ ವಾಹನ ಮಾದರಿಗಳಿಗಾಗಿ ವೆಸ್ಪಾ ಸ್ಕೂಟರ್ ತಯಾರಕ ಕಂಪನಿಯಾಗಿರುವ ಲೋಹಿಯಾ ಮೋಟಾರ್ಸ್ ಲಿಮಿಟೆಡ್(LML) ಕೂಡಾ ಇವಿ ವಾಹನ ಉದ್ಯಮ ಮೇಲೆ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದ್ದು, ಅನೇಕ ಸ್ಟಾರ್ಟ್ಅಪ್ ಕಂಪನಿಗಳು ತಮ್ಮ ಹೊಸ ಇವಿ ಮಾದರಿಗಳೊಂದಿಗೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಪ್ರವೇಶಿಸುತ್ತಿವೆ. ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು ಅಗ್ರಸ್ಥಾನದಲ್ಲಿದ್ದು, ಕೆಳದ ಎರಡು ವರ್ಷಗಳಲ್ಲಿ ಹಲವಾರು ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ಮಾದರಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿವೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ಹೊಸ ನೀರಿಕ್ಷೆಯೊಂದಿಗೆ ಭಾರತದಲ್ಲಿ ವೆಸ್ಪಾ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಲ್ಎಂಎಲ್ ಕಂಪನಿಯು ಕೂಡಾ ಸಹಭಾಗೀತ್ವ ಯೋಜನೆ ಅಡಿ ಇವಿ ದ್ವಿಚಕ್ರ ವಾಹನ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಹೊಸ ಯೋಜನೆ ಅಡಿಯಲ್ಲಿ ಕಂಪನಿಯು ಮುಂದಿನ ಎರಡು ವರ್ಷದೊಳಗೆಗ ಮೂರು ಹೊಸ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದು, ಇದಕ್ಕಾಗಿ ಕಂಪನಿಯು ರೂ. 350 ಕೋಟಿ ಹೂಡಿಕೆಯೊಂದಿಗೆ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಕಂಪನಿಯು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿಯೇ ಎಲೆಕ್ಟ್ರಿಕ್ ವಾಹನಗಳೊಂದಿಗೆ ಮಾರುಕಟ್ಟೆಗೆ ಮರುಪ್ರವೇಶಿಸುವ ಯೋಜನೆಯನ್ನು ಪ್ರಕಟಿಸಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ, ಸೆಪ್ಟೆಂಬರ್‌ನೊಳಗೆ ಮೂರು ಎಲೆಕ್ಟ್ರಿಕ್ ಉತ್ಪನ್ನಗಳನ್ನು ಅನಾವರಣಗೊಳಿಸುವುದಾಗಿ ಮತ್ತು ಮುಂದಿನ ವರ್ಷ ಫೆಬ್ರವರಿಯಿಂದ ಆಗಸ್ಟ್ ಒಳಗಾಗಿ ಮೊದಲ ಇವಿ ಮಾದರಿಯನ್ನು ಹೊರತರುವಾಗಿ ಹೇಳಿಕೊಂಡಿತ್ತು.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಇದೀಗ ಕಂಪನಿಯು ಅಂತಿಮವಾಗಿ ಇವಿ ವಾಹನ ಉತ್ಪಾದನಾ ಯೋಜನೆಯನ್ನು ಬಹಿರಂಗಪಡಿಸಿದ್ದು, ಎಲ್ಎಂಎಲ್ ಕಂಪನಿಯು ತನ್ನ ಮಾತೃಸಂಸ್ಥೆಯಾದ ಎಸ್‌ಜೆ ಕಾರ್ಪೊರೇಟ್ ಮೊಬಿಲಿಟಿಯೊಂದಿಗೆ ಹಾರ್ಲೆ-ಡೇವಿಡ್‌ಸನ್‌ನ ಮಾಜಿ ಉತ್ಪಾದನಾ ಪಾಲುದಾರ ಕಂಪನಿಯಾದ ಸೈರಾ ಎಲೆಕ್ಟ್ರಿಕ್ ಆಟೋ ಜೊತೆಗೆ ಇವಿ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಹರಿಯಾಣ ಮೂಲದ ಸೈರಾ ಎಲೆಕ್ಟ್ರಿಕ್ ಆಟೋ ಸಹಯೋಗದಲ್ಲಿ ಎಲ್ಎಂಎಲ್ ಕಂಪನಿಯು ಇವಿ ವಾಹನಗಳನ್ನು ಉತ್ಪಾದಿಸಲಿದ್ದು, ಹರಿಯಾಣದ ಬವಾಲ್‌ನಲ್ಲಿರುವ ಈ ಸ್ಥಾವರದಲ್ಲಿ ತಿಂಗಳಿಗೆ 18,000 ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಎಲ್ಎಂಎಲ್ ಕಂಪನಿಯು ಭಾರತದಲ್ಲಿ ಹೀರೋ ಎಲೆಕ್ಟ್ರಿಕ್, ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ ಮತ್ತು ಓಕಿನಾವಾ ಮುಂತಾದ ಪ್ರಮುಖ ಇವಿ ವಾಹನ ತಯಾರಕರೊಂದಿಗೆ ಸ್ಪರ್ಧಿಸಲಿದ್ದು, ಇದು ತನ್ನ ಹೊಸ ಎಲೆಕ್ಟ್ರಿಕ್ ವಾಹನಗಳನ್ನು ವಿನ್ಯಾಸಗೊಳಿಸಲು ಜಪಾನ್ ಮತ್ತು ಯುರೋಪ್‌ನಲ್ಲಿರುವ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆಗಳೊಂದಿಗೆ ಸಹಭಾಗೀತ್ವ ಯೋಜನೆ ಅಡಿ ಹೊಸ ವಾಹನಗಳನ್ನು ಅಭಿವೃದ್ದಿಪಡಿಸಲಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಕಂಪನಿಯ ಯೋಜನೆಯ ಪ್ರಕಾರ ಸೈರಾ ಕಂಪನಿಯ ಉತ್ಪಾದನಾ ಘಟಕವನ್ನು ಮುಂದಿನ ಒಂದು ವರ್ಷದೊಳಾಗಿ ಉತ್ಪಾದನಾ ಕಾರ್ಯಾಚರಣೆ ಆರಂಭಿಸುವ ಯೋಜನೆಯಲ್ಲಿದ್ದು, ಎಲ್ಎಂಎಲ್ ಕಂಪನಿಯು ಸೈರಾ ಕಂಪನಿಯ ಜೊತೆ ಮಾತ್ರವಲ್ಲದೆ ಇದು ಇರಾಕಿಟ್ ಎಜೆ ಕಂಪನಿಯ ಸಹಯೋಗದಲ್ಲೂ ಭಾರತದಲ್ಲಿ ಎಲೆಕ್ಟ್ರಿಕ್ ಹೈಪರ್‌ಬೈಕ್ ಅನ್ನು ಉತ್ಪಾದಿಸಲಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಜರ್ಮನಿ ಮೂಲದ ಇ ರಾಕಿಟ್ ಎಜೆ ವಿಶೇಷ ರೀತಿಯ ಎಲೆಕ್ಟ್ರಿಕ್ ಹೈಪರ್ ಬೈಕ್‌ಗಳನ್ನು ತಯಾರಿಸಲಿದ್ದು, ಹೊಸ ಹೈಪರ್ ಬೈಕ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಪೆಡಲಿಂಗ್ ಮೂಲಕವೂ ಚಾಲನೆ ಮಾಡಬಹುದಾದ ಸೌಲಭ್ಯ ಹೊಂದಿರುವ ಇ ರಾಕಿಟ್ ಎಜೆ ಬೈಕ್ ಮಾದರಿಯು ಗಂಟೆಗೆ 90 ಕಿಮೀ ವೇಗದಲ್ಲಿ ಓಡಿಸಬಹುದು. ಈ ಇ-ಬೈಕ್‌ನಲ್ಲಿ ಅಡ್ವಾನ್ಸ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಅನ್ನು ಬಳಸಲಾಗಿದ್ದು, ಇದರ ಸಹಾಯದಿಂದ ಇದು ಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಪಡೆಯುತ್ತದೆ.

ಹೊಸ ಇವಿ ವಾಹನ ಉತ್ಪಾದನಾ ಯೋಜನೆಗಾಗಿ ರೂ. 350 ಕೋಟಿ ಹೂಡಿಕೆಗೆ ಸಿದ್ದವಾದ ಎಲ್‌ಎಂಎಲ್

ಎಲ್‌ಎಂಎಲ್ ಕಂಪನಿಯು ಇ ರಾಕಿಟ್ ಎಜೆ ಬೈಕ್ ಮಾದರಿಯನ್ನ ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪ್ರಾರಂಭಿಸುವುದಾಗಿ ಈಗಾಗಲೇ ಘೋಷಿಸಿದ್ದು, ಸೈರಾ ಕಂಪನಿಯೊಂದಿಗೆ ಇವಿ ವಾಹನ ಉತ್ಪಾದನೆಯನ್ನು ಮುಂದಿನ ವರ್ಷ ಆಗಸ್ಟ್ ಅಥವಾ ಸೆಪ್ಟೆಂಬರ್ ಹೊತ್ತಿಗೆ ಆರಂಭಿಸಲಿದೆ.

Most Read Articles

Kannada
English summary
Lml to launch new electric vehicles soon to invest rs 350 cr details
Story first published: Tuesday, May 24, 2022, 21:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X